“ಆ ಸಮಾರಂಭದಲ್ಲಿ ಪಾಲ್ಗೊಂಡ ಒಬ್ಬ ವಯೋವೃದ್ಧ ಗೊರುಚನ್ನಬಸಪ್ಪ…ಅವನಿಗೆ ಧರ್ಮದ ಇತಿಹಾಸವೇ ಗೊತ್ತಿಲ್ಲ ಅನಿಸುತ್ತಿದೆ.”
ತಾಳಿಕೋಟಿ
ಇತ್ತೀಚೆಗೆ ನಡೆದ ‘ವಚನ ದರ್ಶನ ಮಿಥ್ಯ ಸತ್ಯ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೀರಶೈವ ಧರ್ಮಕ್ಕೆ ಅಪಚಾರವಾಗಿದೆ. ಲಿಂಗಾಯತ ಧರ್ಮವೇ ಅಲ್ಲ, ಆದರೂ ಬಸವಣ್ಣನವರ ಹೆಸರಿನಲ್ಲಿ ಧರ್ಮ ಒಡೆಯುವ ಕೆಲಸವಾಗುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಸೋಮವಾರ ಹೇಳಿದರು.
‘ಮಿಥ್ಯ ಸತ್ಯ’ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಬಸವ ಜಯಂತಿಗೆ ರೇಣುಕಾಚಾರ್ಯರ ಭಾವಚಿತ್ರ ಮುದ್ರಿಸಿ ಹಂಚುತ್ತೇನೆ ಎಂದು ಹೇಳಿ ದೊಡ್ಡ ವಿವಾದವೆಬ್ಬಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಗೊರು ಚನ್ನಬಸಪ್ಪ, ಗದುಗಿನ ಡಾ. ತೋಂಟದಾರ್ಯ ಸಿದ್ದರಾಮ ಶ್ರೀಗಳು, ಎಸ್ ಎಂ ಜಾಮದಾರ್ ಮುಂತಾದವರು ಲಿಂಗಾಯತದ ಒಳಗೆ ವೀರಶೈವವನ್ನು ತುರುಕುವ ಬಿದರಿಯವರ ಪ್ರಯತ್ನವನ್ನು ಖಂಡಿಸಿದ್ದರು.
ಇನ್ನು ನಾಲ್ಕು ವರ್ಷದಲ್ಲಿ ವೀರಶೈವ ಪದ ಮಾಯವಾಗುತ್ತದೆ ಎಂದು ಗೊರುಚ ಹೇಳಿದರೆ ಗದುಗಿನ ಶ್ರೀಗಳು ‘ವೀರಶೈವ’ ಬಸವಾದಿ ಶರಣರಿಗೆ ಸಂಬಂಧಿಸಿದ ಪದವಲ್ಲ, ಎಂದರು. ಸಮಾಜದ ಒಡಕಿಗೆ ನೀವು ಕಾರಣರಾಗ್ತೀರಾ ಎಂದು ಜಾಮದಾರ್ ಬಿದರಿಯವರನ್ನು ಎಚ್ಚರಿಸಿದ್ದರು.
ರಂಭಾಪುರಿ ಶ್ರೀ, ಕೇದಾರ ಶ್ರೀ ಸುದ್ದಿಗೋಷ್ಠಿ
ಸೋಮವಾರ ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರಂಭಾಪುರಿ ಶ್ರೀ ಮತ್ತು ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿದರು.
ತಮ್ಮ ಹೇಳಿಕೆಯಲ್ಲಿ ಅವರು ‘ಮಿಥ್ಯ ಸತ್ಯ’ ಕಾರ್ಯಕ್ರಮದ ಮೇಲೆ, ಅದನ್ನು ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಮೇಲೆ ಕಿಡಿಕಾರಿ, ಶಂಕರ ಬಿದರಿಯವರನ್ನು ಬೆಂಬಲಿಸಿದರು.
ಬಿದರಿಗೆ ಬೆಂಬಲ
ಬಿದರಿಯವರು ತಮ್ಮ ಭಾಷಣದಲ್ಲಿ ಶರಣರ ಮತ್ತು ರೇಣುಕಾಚಾರ್ಯರ ಭಾವಚಿತ್ರಗಳನ್ನು ಸಮುದಾಯಕ್ಕೆ ತಲುಪಿಸುವ ಮಾತನಾಡಿದರು, ಎಂದು ರಂಭಾಪುರಿ ಶ್ರೀಗಳು ಹೇಳಿದರು.
ಆದರೆ ಅಲ್ಲಿದ್ದ “ಒಂದೇ ವರ್ಗದ” ಜನ ಮೂಲ ಧರ್ಮದ ಆಚಾರ್ಯರ ಭಾವಚಿತ್ರವನ್ನು ಬಿಡುಗಡೆ ಮಾಡಲು ವಿರೋಧಿಸಿದರು. ಕೆಲವು ಮಠಾಧೀಶರು ಮತ್ತು ವ್ಯಕ್ತಿಗಳು ಸೇರಿ ಧರ್ಮದ ಪ್ರಾಚೀನ ಇತಿಹಾಸವನ್ನು ಅಣಕಿಸುವ ಮತ್ತು ಗುರು ಪರಂಪರೆಗೆ ಚ್ಯುತಿಯುಂಟು ಮಾಡುವ ದುರುದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗೊರುಚನ್ನಬಸಪ್ಪ…ಅವನಿಗೆ…
ರಂಭಾಪುರಿ ಶ್ರೀಗಳು ಹಿರಿಯ ಶರಣ ಸಾಹಿತಿ ತೊಂಬತ್ತು ನಾಲ್ಕು ವರ್ಷದ ಗೊರುಚನ್ನಬಸಪ್ಪನವರನ್ನು ಏಕವಚನದಲ್ಲಿ ಖಂಡಿಸಿದರು.
“ಆ ಸಮಾರಂಭದಲ್ಲಿ ಪಾಲ್ಗೊಂಡ ಒಬ್ಬ ವಯೋವೃದ್ಧ ಗೊರುಚನ್ನಬಸಪ್ಪ…ಅವನಿಗೆ ಧರ್ಮದ ಇತಿಹಾಸವೇ ಗೊತ್ತಿಲ್ಲ ಅನಿಸುತ್ತಿದೆ.
ಇನ್ನು ನಾಲ್ಕೈದು ವರ್ಷಕ್ಕೆ ವೀರಶೈವ ಪದ ಹೊರಟು ಹೋಗುತ್ತದೆ, ಬರಿ ಲಿಂಗಾಯತ ಅಂತ ಬಳಸಿ ಅಂತ ಹೇಳಿದ್ದು ಕೇಳಿ ಮನಸ್ಸಿಗೆ ಖೇದವಾಯಿತು. ಈ ವಯಸ್ಸಿನಲ್ಲಿ ಧರ್ಮದ ಪರಿಜ್ಞಾನವಿಲ್ಲದೆ ವರ್ತಿಸುವುದು, ಅದರ ಪರಿಣಾಮವನ್ನರಿಯದೆ ಮಾತನಾಡುವುದು ಒಳ್ಳೆಯದಲ್ಲ,” ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ
ರಂಭಾಪುರಿ ಶ್ರೀಗಳು ತಮ್ಮ ಹೇಳಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಪ್ರಶಂಸಿಸಿ, ಜಾಗತಿಕ ಲಿಂಗಾಯತ ಮಹಾಸಭೆಯನ್ನು ಖಂಡಿಸಿದರು.
ಜಾತಿಯ ಹೆಸರಿನಲ್ಲಿ ಧರ್ಮ ಒಡೆಯಬಾರದು ಎನ್ನುವ ದೂರದೃಷ್ಟಿಯಿಂದ 2017ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಗೆ ಲಿಂಗಾಯತ ಹೆಸರನ್ನೂ ಜೋಡಿಸಲಾಯಿತು.
ಆದರೆ ಜಾಗತಿಕ ಲಿಂಗಾಯತ ಮಹಾಸಭೆ ವೀರಶೈವ ಲಿಂಗಾಯತ ಎನ್ನುವ ಭೇದ ಹುಟ್ಟಿಸಲು ಹೋರಾಟಕ್ಕೆ ಇಳಿಯಿತು. ಅದಕ್ಕೆ ಹಿನ್ನಡೆಯಾದ ಮೇಲೆ ಮೌನಕ್ಕೆ ಶರಣಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಮತ್ತೆ ಧರ್ಮ ಒಡೆಯುವ ಮತ್ತು ಜನರ ಮನಸ್ಸುಗಳನ್ನು ಕಲುಷಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆಗೆ ನೂರಾರು ವರ್ಷಗಳ ಇತಿಹಾಸವಿದ್ದರೆ, ಜಾಗತಿಕ ಲಿಂಗಾಯತ ಮಹಾಸಭೆ ಇತ್ತೀಚೆಗೆ ಹುಟ್ಟಿರುವ ಸಂಸ್ಥೆ ಎನ್ನುವುದನ್ನು ಮರೆಯಬಾರದು, ಎಂದು ರಂಭಾಪುರಿ ಶ್ರೀಗಳು ಹೇಳಿದರು.
ಲಿಂಗಾಯತ ಧರ್ಮವಲ್ಲ
ತಮ್ಮ ಹೇಳಿಕೆಯಲ್ಲಿ ರಂಭಾಪುರಿ ಶ್ರೀಗಳು ಲಿಂಗಾಯತ ಒಂದು ಧರ್ಮವಲ್ಲ ಎಂದು ಹೇಳಿದರು.
ವೀರಶೈವ ಒಂದು ಸೈದ್ಧಾಂತಿಕ ಮತ್ತು ಧರ್ಮವಾಚಕ ಪದ. ವೀರಶೈವದಲ್ಲಿ ಲಿಂಗ ಪೂಜೆ ಒಂದು ಕ್ರಮ. ಲಿಂಗಾಯತ ರೂಢಿಯಿಂದ ಬಂದಿರುವ ಆಡು ಭಾಷೆಯ ಪದ ಮಾತ್ರ. ಅದು ಧರ್ಮದ ಯಾವುದೇ ಸ್ವರೂಪ ಪಡೆದುಕೊಳ್ಳಲು ಸಾಧ್ಯವಿಲ್ಲ, ಎಂದು ಅವರು ಹೇಳಿದರು.
ಬಸವ ತತ್ವಕ್ಕೂ ಅಪಚಾರ
ಬಸವಣ್ಣನವರು ಇವ ನಮ್ಮವ ಎನ್ನುತ್ತಾ ಎಲ್ಲ ಜಾತಿಗಳನ್ನು ಒಂದುಗೂಡಿಸುವ ಕೆಲಸ ಮಾಡಿದರು. ಆದರೆ ಇವರು ಬಸವಣ್ಣನವರ ಹೆಸರಿನಲ್ಲಿ ಒಂದುಗೂಡಿರುವ ಸಮಾಜವನ್ನ ಮತ್ತೆ ಛಿದ್ರಛಿದ್ರ ಮಾಡುವ ಕೆಲಸಮಾಡುತ್ತಿದ್ದಾರೆ. ಇದು ಬಸವಣ್ಣನವರ ವಿಚಾರಗಳಿಗೂ ವ್ಯತಿರಿಕ್ತ ಎಂದು ಹೇಳಿದರು.
ಕೇದಾರ ಶ್ರೀ
ಕೇದಾರ ಶ್ರೀಗಳು ಮಾತನಾಡಿ ವೀರಶೈವ ಧರ್ಮಕ್ಕೆ ಭದ್ರ ಬುನಾದಿ ಇದೆ, ಇದೊಂದು ಜಾಗತಿಕ ಧರ್ಮವಾಗಿದೆ, ಇದರ ಕುರಿತು ನಮ್ಮ ಬಳಿ ದಾಖಲೆ ಪತ್ರಗಳಿವೆ.
ಸುಧೀರ್ಘವಾದ ಗುರು ಪರಂಪರೆ ಇರುವ ಈ ಧರ್ಮದ ಕುರಿತು ಮಾತನಾಡುವಾಗ ಬಹಳ ಎಚ್ಚರ ಇರಬೇಕು, ಯಾವುದೇ ದಾಖಲೆಗಳು ಇಲ್ಲದೆ ಮಾತನಾಡುವುದು ಸರಿಯಲ್ಲ, ನಾನು ಇಂಥವರಿಗೆ ಪಂಥಾಹ್ವಾನ ನೀಡುತ್ತೇನೆ ಅವರು ಯಾವ ವಿಷಯದ ಕುರಿತು ಟೀಕೆಯನ್ನು ಮಾಡುತ್ತಿದ್ದರೋ ಅದರ ಕುರಿತು ದಾಖಲೆ ನಮಗೆ ನೀಡಬೇಕು, ಇಲ್ಲದಿದ್ದಲ್ಲಿ ನಾವು ಇದರ ಕುರಿತು ಗಂಭೀರವಾಗ ಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮನಗೂಳಿ ಹಿರೇಮಠದ ಪೂಜ್ಯ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು, ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ ಮತ್ತಿತರರು ಇದ್ದರು.
People in Karnataka know very well who is sensible and who is insensible. NAD Oi JA Go. Ru Cha. has said the truth. The talk of dividing the Dharma has become the part of history. There is only one Basava religion i.e. LINGAYATISM.All other things are untruths. Lingayatism is the only Universal Basava Religion. It is better for you all, the so called GURU ls to accept the truth about nd become Basava Bhakthas. Today Lingayatism is accepted by all including media. Media people use only Lingayatism and not Virashaiva. This is the very clear.
ಲಿಂಗಾಯತವೇ ಸತ್ಯ,
ಗೊ ರು ಚ ಅವರನ್ನು ವೃದ್ಧ ಎಂದು ಕರೆದ ರಂಭಾಪುರಿ ಮತ್ತು ಕೇದಾರದ ಬಾಲಕರು, ಸದಾ ಲಿಂಗಾಯತ ಸಮುದಾಯದ ಜೊತೆ ಹುಡುಗಾಟ ಆಡುತ್ತಲೇ ಬಂದಿದ್ದಾರೆ. ಮೖ ತುಂಬಾ ಒಡವೆ ವಸ್ತ್ರ ಅಲಂಕಾರ ಬಿಟ್ಟು ಒಂದಿಷ್ಟು ಜ್ಞಾನ ಸಂಪಾದಿಸಿಕೊಂಡಿದ್ದರೆ ಸಮಾಜದ ಋಣ ತೀರಿಸುವ ಯೋಗ್ಯತೆ ಬರುತಿತ್ತು
ಕಲ್ಲಿನಲ್ಲಿ ಹುಟ್ಟಿದ ರೇಣುಕಾಚಾರ್ಯರ ತಂದೆ ತಾಯಿಯ ಹೆಸರೇ ಗೊತ್ತಿಲ್ಲದ ಈ ರಂಭಾಪುರಿಯ ಶಾಲೆ ಪ್ರಮಾಣ ಪತ್ರದಲ್ಲಿ ಲಿಂಗಾಯತ ಅನ್ನೋದು ಮರತೇ ಹೋಗಿದ್ದಾನೆ. ಸಾವನದುರ್ಗದ ಬೆಟ್ಟದಲ್ಲಿರುವ ವೀರಭದ್ರನಿಗೆ ಜನಿವಾರ ಕರಡಿಗೆ ಎ,ಡೂ ಹಾಕಿ ನಿಲ್ಲಿಸಿದ್ದು ಮರತ ಬಿಟ್ಟಾನ. ಕೂಳು ಇಲ್ಲದೇ ವಾರಾನ್ನ ಮಾಡಕೊಂಡು ಮೂರಸಾವಿರ ಮಠದಲ್ಲಿ ಬಿದ್ದಾಗ ಬಸವಣ್ಣ ಬೇಕಿತ್ತು. ಯಾವಾಗ ಶಿವಗಂಗೆಗೆ ಶಿವಾಚಾರ್ಯ ಆದನೋ ಆವಾಗ ಕೂಳು ಹಾಖಿದ ಬಸವಣ್ಣನನ್ನು ಕಾಲೀಲೆ ಒದ್ದು ರೇಣುಕರನ್ನು ಅಪ್ಪಿಕೋಂಡ ಪಾಪಿ.
ಇದ್ದನು ಯಾರು ಬಿಡ್ ಬರ್ದು ಎಲ್ಲರೂ ಖಂಡನೆ ಮಾಡಿ
ಲಿಂಗಾಯತವೆ ಸತ್ಯ. ವೇದಿಕೆ ಸಿದ್ಧಪಡಿಸಿ ಬಸವಾನು ಯಾಯಿಗಳು ನಾವು ವೀರಶೈವರಲ್ಲ …… ಲಿಂಗಾಯತ ಸ್ವತಂತ್ರ ಧರ್ಮ ಎಂಬುದನ್ನು ಯಾವ ಯಾವ ನೆಲೆಯಲ್ಲಿ ಬೇಕೋ ಆ ನೆಲೆಯಲ್ಲಿ ಸಿದ್ಧಪಡಿಸಿ ತೋರಿಸುತ್ತೇವೆ.
ಗೋ.ರು.ಚ ರವರ ಹೇಳಿಕೆಗೆ ಎಲ್ಲಾ ಲಿಂಗಾಯತರು ಬದ್ಧರಾಗಿದ್ದೇನೆ.
ಈ ಗೊಂದಲವನ್ನು ಸಮಾಜದ ಮುಗ್ದರ ಮನಸ್ಸಿನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರೆಯಲೆಂದೇ ಶಂಕರ ಬಿದರಿ ಯವರನ್ನು “ವಚನ ದಶ೯ನ ” ಮಿಥ್ಯ ><ಸತ್ಯ ಪುಸ್ತಕ ಬಿಡುಗಡೆ ಕಾಯ೯ಕ್ರಮದಲ್ಲಿ ಭಾಗಿಯಾಗಿ ರೇಣುಕಾಚಾಯ೯ರ ವಿಚಾರ ಪ್ರಸ್ಥಾಪವಾಗುವಂತೆ ಮಾಡಲು ,ವ್ಯವಸ್ಥಿತ ತಂತ್ರವೂ ಇರಬಹುದಾ? ಯಂಬ ಅನುಮಾನ ಮೂಡುತ್ತಿದೆ ,
ಡಾ"ಜೇ ಎಸ್ ಪಾಟೀಲ್ ರು ಹೆಳುವಂತೆ ,ಲಿಂಗಾಯತ ಧಮ೯ ವಿರೋಧಿಗಳು
1, ಮೊದಲು ನೇರವಾಗಿ ವಿರೋಧಿಸುತ್ತಾರೆ.
2,ಸಮಾಜದ ಮುಗ್ದರಿಗೆ ಗೊಂದಲವಾಗುವಂತೆ ಮಾಡುತ್ತಾರೆ.
3,ಮುಖ್ಯವಾದ ವರನ್ನು ಮುಗಿಸುತ್ತಾರೆ.
4ರಾಜೀ ಸಂಧಾನಕ್ಕೆ ತಮ್ಮ ಆಪ್ತರನ್ನು ಕಳಿಸುತ್ತಾರೆ .
5, ಅವಕಾಶ ಸಿಕ್ಕರೆ ಒಪ್ಪಿಕೊಂಡಂತೆ ನಟಿಸಿ ,ಮತ್ತೇ ಕುತಂತ್ರಗಳ ಮೂಲಕ ಕೆಡಿಸುವ ಪ್ರಯತ್ನ ಮಾಡುತ್ತಾರೆ.
ಈ ಎಲ್ಲಾ ಬಗೆಯ ಘಟನೆಗಳು ಲಿಂಗಾಯತ ಧಮ೯ದ ಹೋರಾಟದ ವಿರುದ್ದ & ಹೋರಾಟಗಾರರ ವಿರುದ್ದ ನಡೆದಾಗಿದೆ.
ಗೋ ರು ಚಾ ರಂಥವರನ್ನು ಏಕ ವಚನದಲ್ಲಿ ಸಂಭೋಧಿಸಿದ ರ0ಭಾಪುರಿ ಸ್ವಾಮಿಗೆ ಅದೇ ಧಾಟಿಯಲ್ಲಿ ಏಕವಚನದಲ್ಲಿ ಉತ್ತರ ಕೊಡಲು ಎಲ್ಲರಿಗೂ ಹಕ್ಕು ಇದೆ. ಸಮಾಜದ ಮಕ್ಕಳ ಭವಿಷ ಕ್ಕೆ ಅಡ್ಡಿಯಾಗಿರುವ ಈ ಪಂಚ ಪೀಠದ ಸ್ವಾಮಿಗಳಿಗೆ ಬಹಿರಂಗ ಆಹ್ವಾನ, ಚರ್ಚೆಗೆ ಬರುವಿರಾ? ನಿಮ್ಮ ರೇಣುಕರ ಇತಿಹಾಸ ಇತರ ದಾಖಲೆ ತನ್ನಿ.
ಗುರುಗಳಾದವರಿಗೆ ಅವರಾಡುವ ಭಾಷೆಯ ಮೇಲೆ ಹಿಡಿತವಿದ್ದರೆ ಒಳ್ಳೆಯದು. ವೀರಶೈವ ಒಂದು ಸ್ವತಂತ್ರ ಧರ್ಮವಲ್ಲ ಬದಲಾಗಿ ಹಿಂದೂ ಧರ್ಮದ ಭಾಗ ಎಂದು ಹೇಳುವ ಈ ಗುರುಗಳು ಯಾವ ಧರ್ಮ ಒಡೆಯುವ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಬಸವ/ಶರಣ ತತ್ವದಲ್ಲಿ ನಂಬಿಕೆಯಿಲ್ಲದಿದ್ದರೆ ಹಿಂದೂ ಧರ್ಮದ ಭಾಗ ಎಂದು ನಂಬಿರುವ ವೀರಶೈವ ಜಾತಿಯಾಗಿರಲಿ, ಅದಕ್ಕೆ ಯಾರೂ ಆಕ್ಷೇಪಣೆ ಎತ್ತುವುದಿಲ್ಲ. ನಮಗೆ ವೀರಶೈವ ಸಿದ್ಧಾಂತದಲ್ಲಿ ; ವೇದ, ಆಗಮ, ಪುರಾಣ, ಶಾಸ್ತ್ರ, ಶ್ರುತಿ, ಸ್ಮೃತಿಗಳಲ್ಲಿ , ಬಹುದೇವತಾರಾಧನೆಗಳಲ್ಲಿ ನಂಬಿಕೆಯಿಲ್ಲ ಆದುದರಿಂದ ನಾವು ವೀರಶೈವರಲ್ಲ ಬದಲಾಗಿ ಬಸವ/ಶರಣ ತತ್ವದ ಅನುಯಾಯಿಗಳು ಆದುದರಿಂದ ಲಿಂಗಾಯತರು ಹಾಗೂ ಲಿಂಗಾಯತ ಧರ್ಮೀಯರಿಗೆ ವೀರಶೈವ ತತ್ವ ಮತ್ತು ಹಿಂದೂ ಧರ್ಮದ ತತ್ವಗಳಲ್ಲಿ ನಂಬಿಕೆಯಿಲ್ಲ. ಈ ಕಾರಣಗಳಿಂದ ಲಿಂಗಾಯತರು ನಾವು ಹಿಂದೂ ಧರ್ಮದ ಭಾಗವಾಗಿರುವ ವೀರಶೈವರಿಗಿಂತ ಭಿನ್ನ ಮತ್ತು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಅಂತ ಕೇಳಿದರೆ ಲಿಂಗಾಯತರು ಹೇಗೆ ಧರ್ಮ ಒಡೆಯುತ್ತಾರೆ. ನಿಮ್ಮ ಧರ್ಮವನ್ನು ನೀವು ಇಟ್ಟುಕೊಳ್ಳಿ ಆದರೆ ಲಿಂಗಾಯತರನ್ನು ಅವರ ಪಾಡಿಗೆ ಅವರನ್ನು ಬಿಡಿ. ಜನರನ್ನು ಮನಸ್ಸಿನಲ್ಲಿ ಗೊಂದಲಗಳನ್ನು ಸೃಷ್ಟಿಸಬೇಡಿ. ಲಿಂಗಾಯತರು ವೀರಾಶೈವರಲ್ಲ . ಬಸವ/ಶರಣ ತತ್ವದಲ್ಲಿ ನಂಬಿಕೆಯಿದ್ದಾರೆ ನಮ್ಮೊಟ್ಟಿಗೆ ಬನ್ನಿ ಇಲ್ಲವಾದಲ್ಲಿ ನಿಮ್ಮ ಧರ್ಮವನ್ನು ಪ್ರಚಾರ ಮಾಡಿಕೊಂಡು ಆಚರಣೆ ಮಾಡಿಕೊಂಡು ಧರ್ಮವನ್ನು ಇನ್ನಷ್ಟು ಬೆಳಸಿ. ಶರಣು ಶರಣಾರ್ಥಿ
ಬಹು ಸಂಖ್ಯಾತ ಲಿಂಗಾಯತರು ಇಂಡಿಯಾಗೆ ಸ್ವತಂತ್ರ ಸಿಕ್ಕದ ನಂತರ ಶಿಕ್ಷಣ ಪಡೆದು ತಮ್ಮ ಧರ್ಮದ ಸಂವಿಧಾನವಾದ ವಚನ ಸಾಹಿತ್ಯ ಓದಿ ಅರ್ಥ ಮಾಡಿಕೊಂಡು ಅರೆ ಮನುವಾದಿಗಳಾದ ನಿಮ್ಮಂತ ಪಂಚಾಚಾರ್ಯರು ಇದುವರೆಗೂ ಮುಂದುವರೆಸಿಕೊಂಡು ಬಂದಿದ್ದ ಶೋಷಣೆಯ ಬಗ್ಗೆ ಅರಿವು ಮೂಡಿಸಿಕೊಂಡು ವೀರಶೈವದಿಂದ ದೂರ ಸರಿದು ಮಹಾತ್ಮ ಬಸವಣ್ಣನವರ ಅನುಯಾಯಿಗಳಾಗಿ ಬದಲಾಗಿದ್ದಾರೆ. ನಿಮ್ಮ ಕಪಟ ನಾಟಕ ಕಂಪನಿಯ ಕುತಂತ್ರ ಇನ್ನು ಮುಂದೆ ನಡೆಯಲ್ಲ. ನಾವು ಅಪ್ಪ ಬಸವಣ್ಣ ಕರುಣಿಸಿದ ಲಿಂಗಾಯತ ಧರ್ಮದ ಬೆನ್ನ ಮೇಲೆ ಬೇತಾಳ ನಂತೆ ಮೊಂಡಿತನದಿಂದ ಹತ್ತಲು ಅವಕಾಶ ಇಲ್ಲ. ನಾಡಿನ ವಯೋವೃದ, ಸುಜ್ಞಾನಿ ನಾಡೋಜ ಗೊಂಡೇದ ಹಳ್ಳಿ ರುದ್ರಪ್ಪ .ಚನ್ನಬಸಪ್ಪ ಅವರನ್ನು ಇಡೀ ಲಿಂಗಾಯತ ಸಮಾಜ ಪೂಜ್ಯ ಭಾವನೆಯಿಂದ ನಡೆಸಿಕೊಳ್ಳುತ್ತಿದೆ.ಆದರೆ ಅಂತಹವರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಲಿಂಗಾಯತ ಧರ್ಮದ ಗಣಾಚಾರಿ ಪಡೆ ಉಗ್ರವಾಗಿ ಖಂಡಿಸುತ್ತದೆ. ನೀವು ವೀರಶೈವ ವನ್ನು ಒಂದು ಕಡೆ ಹಿಂದೂ ಧರ್ಮದ ಭಾಗ ಎಂದು ಹೇಳುತ್ತಾ ಮತ್ತೊಂದು ಕಡೆ ವೀರಶೈವ ವು ಸಹ ಧರ್ಮ ಎಂದು ಹೇಳುವುದು ನಿಮ್ಮ ಡಬಲ್ ಸ್ಟ್ಯಾಂಡರ್ಡ್ ಗೆ ಸಾಕ್ಷಿ. ನಮ್ಮ ದೃಢವಾದ ನಂಬಿಕೆ ಲಿಂಗಾಯತ ಒಂದು ಸ್ವತಂತ್ರ ಧರ್ಮ.ವೀರಶೈವ ಅದರ ಒಂದು ಭಾಗ ಎಂಬುದು. ಇದನ್ನು ಒಪ್ಪಿ ನಮ್ಮ ಜೊತೆಗೆ ಬಂದರೆ ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಅಂತ ಭಾವನೆ ಇಟ್ಟುಕೊಂಡು ಗೌರವಿಸುತ್ತೇವೆ. ಅದು ಬಿಟ್ಟು ಲಿಂಗಾಯತ ಧರ್ಮ ಮತ್ತು ಅಪ್ಪ ಬಸವಣ್ಣ ನವರ ಬಗ್ಗೆ ಸುಳ್ಳು ಸುದ್ದಿಗಳನ್ನು ಬಿತ್ತುವ ಕೆಲಸವನ್ನು ಮಾಡಲು ಹೊರಟರೆ ನಾವು ಇದುವರೆಗೂ ಇದ್ದಂತೆ ಮೌನವಾಗಿ ಕುಳಿತು ಕೊಳ್ಳುವುದಿಲ್ಲ . ಹಿರಿಯ ಚಿಂತಕ ನಾಡೋಜ ಗೊಂಡೆದ ಹಳ್ಳಿ ರುದ್ರಪ್ಪ ಚನ್ನಬಸಪ್ಪ ಅವರಲ್ಲಿ ಬೇಷರತ್ ಕ್ಷಮಾಪಣೆ ಕೇಳಿ.
ವೀರಶೈವ ಪದ ಬಿಟ್ಟರೇ ಸಾಯಿತೇವೆ ಎನ್ನುತ್ತಾರೆ ನಮ್ಮ ಊರಿನಲ್ಲಿ ಬಸವ ಜಯಂತಿಯ ಮಾಡಿದರೆ. ಎಲ್ಲಾ ಶರಣರನ್ನು ಕರೆದು ಸಂಭ್ರಮದಿಂದ ಮಾಡುತ್ತೇವೆ. ಅದೇ ರೇಣುಕಾಚಾರ್ಯರ ಜಯಂತಿ ಮಾಡಿದರೆ ಕೆವಲ ಅಯ್ಯಗಳು ಮಾತ್ರ ಸೇರಿ ಮಾಡುತ್ತಾರೆ ಇವರಿಗೆ ಜನ್ಮಕ್ಕೆ ನಾಚಿಕೆಯಾಗಬೇಕು.
ಪಂಚಪೀಠಗಳ ರಂಭಾಪುರಿ ಶ್ರೀಗಳ, ಕೇದಾರ ಶ್ರೀಗಳೇ
ಒಂದು ಪೀಠ ಪರಂಪರೆಯ ಪೂಜ್ಯ ರಾಗಿ ನಾಡಿನ
ಶ್ರೇಷ್ಟ ಸಾಹಿತಿ, ನಾಡೋಜ ಪ್ರಶಸ್ತಿ ಪಡೆದ ಜನಪ್ರಿಯ
ಚಿಂತಕ ವಯೋವ್ರೃದ್ದ ಗೋರುಚ ಅವರಿಗೆ ಮಾತನಾಡುವುದನ್ನು ನೋಡಿದರೆ ನಿಮಗೆ ಇತಿಹಾಸ
ಪ್ರಜ್ಞೆ ಇಲ್ಲ ಎಂದು ಕಂಡುಬರುತ್ತದೆ.
ನಿಮಗೆ ವೀರಶೈವ ಧರ್ಮ ಸ್ವತಂತ್ರವಾಗಿದ್ದರೆ ನಿಮ್ಮ
ಧರ್ಮ ಪ್ರಸಾರ ಮಾಡಿಕೊಳ್ಳಿ. ಅದು ಬಿಟ್ಟು ಲಿಂಗಾಯತ
ಪದ ಜೊತೆಗೆ ಏಕೆ ಇಟ್ಟು ಕೊಂಡಿದ್ದಿರಿ ಕೇವಲ ವೀರಶೈವ ಪದೇ ಇಟ್ಟುಕೊಳ್ಳಿ. ಲಿಂಗಾಯತ ಹಿಂದೂ ಧರ್ಮದ
ಭಾಗವಲ್ಲ, ವೀರಶೈವದ ಭಾಗವು ಅಲ್ಲಿ, ಅದೂಂದು
ಬಸವಾದಿ ಶರಣರ ವಚನ ಸಾಹಿತ್ಯದ ತಳಹದಿ ಮೇಲೆ
ಮೂಡಿಬಂದ ಚಳುವಳಿ, ಸ್ವತಂತ್ರ ಧರ್ಮ.
ನಿಮ್ಮ ಪಂಥ ಆಹ್ವಾನಕ್ಕೆ ಸ್ವಾಗತ ಕರೆ ಸ್ವೀಕರಿಸುತ್ತೆವೆ
ತಿಳಿಸಿ
ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು
ಇವರು ಭಗವತ್ಪಾದರಲ್ಲ ಭಯೋತ್ಪಾದಕರು
ವೀರಶೈವ ಮಹಾಸಭಾದವರೆಂದಾದರೂ ಬಸವಣ್ಣನವರ ಭಾವಚಿತ್ರ ಕೊಟ್ಟಿದಿರಾ?
ಶಿವ ಶಕ್ತಿಯ ಸಂಕೇತ ಸ್ಥಾವರಲಿಂಗ
ಸ್ತ್ರೀ -ಪುರುಷ ಸಂಯೋಗದಿಂದಲ್ಲದೆ ಹೊಸಜೀವ ಸೃಷ್ಟಿ ಯಾಗಲಾರದು ಎಂಬುದು ವಿಜ್ಞಾನ ಒಪ್ಪುತ್ತದೆ ವಿನಹ ಅದರಲ್ಲಿ ಹುಟ್ಟಿದರು ಎಂಬ ಅವೈಜ್ಞಾನಿಕ ನಂಬಿದ್ದ ತಮ್ಮಿಂದ ಸತ್ಯ ಮಾತು ಬರಲು ಸಾಧ್ಯವಿಲ್ಲ.
ಇರಲಿ
ಗೋ. ರು. ಚ. ಗೆ ಇತಿಹಾಸ ಗೊತ್ತಿಲ್ಲವೆಂಬ ನಿಮ್ಮ ಬಾಲಿಶ ಹೇಳಿಕೆ ನಿಮ್ಮ ಮೇಲಿರುವ ಗೌರವ ಹೊರಟು ಹೋಯಿತು.
ಇನ್ನು 3 -4 ವರ್ಷ ಇದೆ ಸುಳ್ಳು ಹೇಳುತ್ತಾ ನಡೆಯಿರಿ
ಈ ಪಂಚ ಪೀಠಗಳು ಲಿಂಗಾಯತರನ್ನು ಲೂಟಿ ಮಾಡಲು ಲಿಂಗಾಯತ ಧರ್ಮಕ್ಕೆ ಅಂಟಿಕೊಂಡ ಕಳಂಕ.
ನೀವು ಲಿಂಗಾಯತ ಧರ್ಮ, ನಿಮ್ಮದು ಅಲ್ಲ ಅಂದ ಮೇಲೆ, ಸರಳ ಲಿಂಗಾಯತ ಧರ್ಮ ಬಿಟ್ಟು ಬಿಡಿರಿ.
ಬಸವಾದಿ ಶರಣರಿಗೆ ಡೊಗಿ ನಮಸ್ಕಾರ ಮಾಡುವುದಾದರೆ ಇಲ್ಲಿ ಇರಿ, ಇಲ್ಲದೆ ಹೋದರೆ, ಲಿಂಗಾಯತ ಧರ್ಮ ಬಿಟ್ಟು, ವೀರಶೈವ ನೀವು ಇಟ್ಟು ಕೊಳ್ಳಿರಿ.
ಎಲ್ಲಿ ಹುಟ್ಟಬೇಕು ಅಲ್ಲಿಯೇ ಹುಟ್ಟುತ್ತಾರೆ. ಕರ್ಣ ದಲ್ಲಿ ಹುಟ್ಟಿದವರು ಇಲ್ಲ ಅನ್ನುವ ವಚನ ಓದಿಲ್ಲ, ಓದಿ ಅರ್ಥ ಮಾಡಿಕೊಳ್ಳಿರಿ. ಇನ್ನೂ ಕಲ್ಲೋಳಗೆ ಹುಟ್ಟಿದವರು ಇದ್ದಾರೆ, ಅಂದರೆ ಬಾಯಿಲೆ ನಗದೆ, ಹೇಗೆ ನಗಬೇಕು ನೋಡು.
ವೀರಶೈವ ಮಹಾಸಭೆ ಇದು ಕೂಡ 1903 ರಲ್ಲಿ ಹುಟ್ಟಿದೆ. ಲಿಂಗಾಯತ ಮಹಾಸಭೆ ಕಟ್ಟಲು, ನಮ್ಮ ಊರ ದೊರೆ ಲಿಂಗರಾಜ ದೇಸಾಯಿ ದುಡ್ಡು ಹಾನಗಲ್ ಕುಮಾರ ಸ್ವಾಮಿಗಳಿಗೆ ಕೊಟ್ಟರೆ, ಅವರು ತಮ್ಮ ಜಾತಿಯ ವೀರಶೈವ ಮಹಾಸಭೆ ಕಟ್ಟಿದ್ದಾರೆ.
ಈ ಸ್ವಾಮಿ ಪತ್ರ ಕೊಟ್ಟರೆ, ಈ ವೀರಶೈವ ಧರ್ಮದ ಜಾತಿ ಜಂಗಮರಿಗೆ SC ಜಾತಿ ಪ್ರಮಾಣ ಪತ್ರ ಕೊಡುತ್ತಾರೆ. ಇಂತಹ ನೀಚ ಕೆಲಸ ಈ ಸ್ವಾಮಿಗಳದು.
ಸತ್ಯ ಯಾವಾಗಲೂ ಸತ್ಯವೇ ಸ್ವಾಮಿಗಳೆ, ಲಿಂಗಾಯತರು ಒಂದಾದರೆ ನಿಮಗ್ಯಾಕೆ ಇಷ್ಟು ಸಿಟ್ಟು ಬರುತ್ತೆ. ಬಸವ ಎಂಬುವುದು ಬೆಂಕಿ, ಮುಟ್ಟಲು ಮುಂದಾಗದಿರಿ.
ವಿಶ್ವಧರ್ಮಕ್ಕೆ ದಾಖಲೆ ಇದ್ದರೆ ಸಾಂವಿಧಾನಿಕ ಮಾನ್ಯತೆ ತರಲಿ ತಾಕತ್ತಿದ್ದರೆ
ದಯೆವಿಲ್ಲದ ಧರ್ಮ ಯಾವುದಯ್ಯ , ದ್ವೇಷ, ಅಸೂಯೆ, ಮದ, ಮತ್ಸರ ತುಂಬಿರುವ ಧರ್ಮ ಅಲ್ಲ ಧರ್ಮ ಯಾವುದೇ ಇರಲಿ ಅವರು ಆ ಧರ್ಮ ವನ್ನು ಪಾಲನೆ ಮಾಡುತ್ತಾ ಜೀವನ ಸಾಗಿಸಲ್ಲಿ ಆದ್ದರಿಂದ ಯಾರು ಗೊಂದಲ ಸೃಷ್ಟಿ ಮಾಡಬೇಡಿ ವೀರಶೈವನೇ ಧರ್ಮ. ಅದರ ಗುರು ರೇಣುಕಾಚಾರ್ಯ ರು ಅಂದು ಕೊಂಡರೆ ತಪ್ಪೇನು . ಹಾಗೂ ಲಿಂಗಾಯತ ವೇ ಸ್ವತಂತ್ರ ಧರ್ಮ ಅದರ ಗುರು ಬಸವಣ್ಣ ಅಂದು ಕೊಂಡರೆ ತಪ್ಪೇನು ಸಧ್ಯ ನೀವಿಬ್ಬರೂ ಭಕ್ತ ರಲ್ಲಿ ಗೊಂದಲ ಸೃಷ್ಟಿ ಮಾಡುವುಧೂ ಬೇಡ . ಲಿಂಗಾಯತ ರು ಬಸಶ ಧರ್ಮ ಪಥದಲ್ಲಿ ಸಾಗಲಿ ವೀರಶೈವರು ರೇಣುಕಾಚಾರ್ಯ ಪಥದಲ್ಲಿ ಸಾಗಲಿ ನೀವಿಬ್ಬರೂ ಭಾಗ ಮಾಡಿಕೊಳ್ಳುವುದು ಒಳಿತು.
ಈ ಪಂಚಾಚಾರ್ಯರು, ಪಂಚಪೀಠದವರಿಗೆ ಧರ್ಮದ ಬಗ್ಗೆ ತಿಳುವಳಿಕೆ ಇಲ್ಲ ಬಸವಣ್ಣನವರ ಕುರಿತು ಬಸವ ದರ್ಶನ ಪುಸ್ತಕ ಪ್ರಕಟಿಸುವ ದುರದ್ದೇಶ ಏಕೆ ? ಲಿಂಗಾಯತ ಧರ್ಮವೇ ಅಲ್ಲ ಅಂದಮೇಲೆ ಬಸವಣ್ಣನವರ ಹೆಸರನ್ನು ಇಟ್ಟುಕೊಂಡು ಪುಸ್ತಕ ಪ್ರಕಟಿಸುವುದು ಎಷ್ಟು ಸರಿ..
ನಮ್ಮಲ್ಲೇ ಇರುವ ಕೆಲವು ಬುದ್ಧಿಮಾಂದ್ಯ ಲಿಂಗಾಯತರು ಈ ವೀರಶೈವರಿಗೆ ಸಹಾಯ ಮಾಡುತ್ತಿರುವುದರಿಂದ ಈ ತರಹ ಆಗುತ್ತಿದೆ ಎಂದು ಭಾಸವಾಗುತ್ತದೆ.
ಇವರನ್ನು ಹೊರುವವರು ಇಲ್ಲದಾಗುತ್ತಾರೆಂಬ ಭಯ ಕಳವಳ ಅದರಿಂದ ಮತಿಭ್ರಮಣಗೊಂಡವರ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಇವರು ದಾಖಲೆ ಸಮೇತ ಸಮಾಜದ ಮುಂದೆ ಬರಲಿ. ವಯಸ್ಸಿನ ಕಳವಳವಿರುವುದು ರಂಭಾಪುರಿಗಳಿಗೆ. ನಾಡಿನ ಹಿರಿಯ ಅನುಭಾವಿ ಹಿರಿಯರನ್ನು ಗೌರವಿಸುವ ಗುಣ ಈ ಜಗದ ಗುರುವಿಗೆ ಎಲ್ಲಿ ಹೋಯಿತು. ಸಮಾಜದ ಮುಂದೆ ಬಂದು ಸಮರ್ಥಿಸಿಕೊಳ್ಳಲಿ.
It reflects Khavidhari Swamy’s culture. He himself doesn’t understand what Dharma is. He places his foot on pregnant women’s stomachs and on people’s heads. He should first learn what Dharma truly means before preaching to others. We have no regard for such inhumane Khavidharis.
💐 *ಓಂ ಶ್ರೀ ಗುರು ಬಸವ ಲಿಂಗಾಯನಮಃ* 💐
*ಬಸವಾದಿ ಶರಣ ಗುರುಸಿದ್ಧದೇವರ ವಚನ*
“ಅಂಗದಮೇಲೆ ಲಿಂಗವ ಧರಿಸಿ,
ಶಿವಭಕ್ತರೆಂದು ಹೇಳಿ, ಶಿವಾಚಾರಮಾರ್ಗವ ಬಿಟ್ಟು,
ಭವಿಶೈವದೈವಗಳಿಗೆ ಲಿಂಗವಡಿಯಾಗಿ ಅಡ್ಡಬಿದ್ದು
ಶರಣೆಂಬ ಹೊಲೆಯರಿಗೆ ಶಿವಭಕ್ತಜನ್ಮ ತೀರಿ,
ಚಂದ್ರಸೂರ್ಯರುಳ್ಳನ್ನಕ್ಕರೆ ಇಪ್ಪತ್ತೆಂಟುಕೋಟಿ ನರಕ ತಪ್ಪದು.
ಆ ನರಕ ತೀರಿದ ಬಳಿಕ ಶ್ವಾನ ಸೂಕರಜನ್ಮ ತಪ್ಪದು.
ಆ ಜನ್ಮ ತೀರಿದ ಬಳಿಕ ರುದ್ರಪ್ರಳಯ ತಪ್ಪದೆಂದ ಕಾಣಾ
ಸಂಗನಬಸವೇಶ್ವರ.”
*ಸಮಗ್ರ ವಚನ ಸಂಪುಟ: 10 ವಚನದ ಸಂಖ್ಯೆ: 703*
💐🙏💐🙏💐🙏💐🙏
[06/03, 09:05] Veera: 💐 *ఓం శ్రీ గురు బసవ లింగాయనమః* 💐
*బసవాది శరణుడైన గురు సిద్ధేశ్వరదేవుని వచనము*
“అంగముపైన ఇష్టలింగమును ధరించి, శివభక్తులమని చెప్పి,
శివాచార మార్గమును వదిలి,
భవి శైవ దైవములను ఇష్టలింగ సమేతంగా అడ్డంగా పడి శరణుజొచ్చే దరిద్రులు శివ భక్తుని జన్మ తీరి, సూర్యచంద్రులున్నంత కాలము ఇరవైఎనిమిది నరకాలు తప్పవు. ఆ నరకాలు తీరిన పిదప శ్వాన సూకర జన్మ తప్పదు.
ఆ జన్మలు తీరిన పిదప రుద్ర ప్రళయం తప్పదు చూడుమా సంగనబసవేశ్వర.”
*సమగ్ర వచన సంపుటం: 10*
*వచనము సంఖ్య: 703*
🌷🙏💐🙏🌷🙏🌷🙏💐
——_—————-
ವಚನಗಳ ಅರಿವಿಲ್ಲದ ದಡ್ಡರು ಈ ಪಂ.ಪಿ ಗಳು.
ಇವರು ಕನ್ನಡ ಭಾಷೆಯ ಹಿರಿಮೆ ವಚನ ಸಾಹಿತ್ಯದ ತಿಳುವಳಿಕೆ ಇಲ್ಲದೇ ಇರೋ ಓದಲು ಬಂದ ಅನಕ್ಷರಸ್ಥರು.
ಇವರ ಬಗ್ಗೇ ಹೆಚ್ಚು ಮಾತಾಡಿದರೆ ಸಮಯ ವ್ಯರ್ಥ.