ಮೈಸೂರಿನಲ್ಲಿ 38 ವಿದ್ಯಾರ್ಥಿನಿಯರಿಗೆ ಇಷ್ಟಲಿಂಗ ದೀಕ್ಷೆ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ವಿದ್ಯಾರಣ್ಯಪುರಂ ಜ್ಞಾನಜ್ಯೋತಿ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯದಲ್ಲಿ ಇಷ್ಟಲಿಂಗ ಧಾರಣೆ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕ ಮತ್ತು ಜ್ಞಾನಜೋತಿ ಪ್ರತಿಷ್ಠಾನಗಳು ಕಾರ್ಯಕ್ರಮ ಆಯೋಜಿಸಿದ್ದವು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಇಮ್ಮಡಿ ಉದ್ಧಾನ ಸ್ವಾಮಿಗಳು ಶ್ರೀ ಉದ್ಧಾನೇಶ್ವರ ವಿರಕ್ತಮಠ, ಮೂಡುಗೂರ ಅವರು ನಿಲಯದ 38 ಹೆಣ್ಣುಮಕ್ಕಳಿಗೆ ಲಿಂಗದೀಕ್ಷೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸ್ವಾಮೀಜಿ ಅನುಭಾವ ನೀಡುತ್ತಾ, ಇಷ್ಟಲಿಂಗ ಏಕೆ ಧರಿಸಬೇಕು, ಅದರ ಮಹತ್ವ ಏನು ಎಂಬ ಬಗ್ಗೆ ವಚನಗಳ ಮೂಲಕ ಮನದಟ್ಟಾಗುವಂತೆ ಮಕ್ಕಳಿಗೆ ಅರಿವು ಮೂಡಿಸಿದರು.

ನಂಜನಗೂಡು ವಿಶ್ವಬಸವ ಸೇನೆ ಅಧ್ಯಕ್ಷರಾದ ಬಸವಯೋಗೇಶ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ರಾಷ್ಟ್ರೀಯ ಬಸವದಳ ಮೈಸೂರು ಘಟಕದ ಅಧ್ಯಕ್ಷರಾದ ಲೋಕೇಶ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕರಿಸಿದರು.

ಇಷ್ಟಲಿಂಗ ದೀಕ್ಷೆಗೆ ಅಗತ್ಯವಿದ್ದ ಕರಡಿಗೆ, ಇಷ್ಟಲಿಂಗ, ರುದ್ರಾಕ್ಷಿ, ವಿಭೂತಿ ಇತರೆ ಎಲ್ಲಾ ಪರಿಕರಗಳನ್ನು ಉಚಿತವಾಗಿ ನೀಡಲಾಯಿತು.

ರತ್ನಮ್ಮ ಜಯಣ್ಣ ಅವರು ವಿಶೇಷವಾಗಿ ವಚನಗಳ ಮೂಲಕ ಶರಣರ ಸಂದೇಶ ಮತ್ತು ಬದುಕಿನ ಮೌಲ್ಯಗಳ ಬಗ್ಗೆ ಅರ್ಥೈಸಿ, ಸಮಾಜದ ಸ್ವಾಸ್ಥ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಿದರು.

ನಂಜನಗೂಡಿನ ಅನುರಾಗ ಮಕ್ಕಳ ಮನೆಯ ಅಧ್ಯಕ್ಷರಾದ ಸೋಮಶೇಖರ ಅವರು ಮಾತನಾಡಿ, ಇಷ್ಟಲಿಂಗ ದೀಕ್ಷೆ ಪಡೆದ ಮಕ್ಕಳಿಗೆ ಪೂಜಾ ಪರಿಕಲ್ಪನೆಯ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಹಯೋಗತ್ವದಿಂದ ಸಹಕರಿಸಿದ ಜ್ಞಾನಜ್ಯೋತಿ ಪ್ರತಿಷ್ಠಾನದ ಕಾರ್ಯದರ್ಶಿ ನಂಜುಂಡಸ್ವಾಮಿ, ಖಜಾಂಜಿ ವಸಂತಕುಮಾರ್, ಆರ್. ಎನ್. ಎಸ್. ಪ್ರಸಾದ, ಪಿ. ಸಂಪತ್, ಅರವಿಂದಮೂರ್ತಿ, ಕಲ್ಪುರ ಮಹೇಶ, ಮುದ್ಧಹಳ್ಳಿ ಅಶೋಕ ಭಾಗಿಯಾಗಿದ್ದರು. ಆಗಮಿಸಿದ್ದ ಎಲ್ಲರೂ ಪುನೀತ ಭಾವನೆ ವ್ಯಕ್ತಪಡಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *