ಸಿಡಿ ಹಗರಣದ ಬಳಿಕ ವಿಜಯೇಂದ್ರ ಮೇಲೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಟ್ಟಾಗಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ನಗರದಲ್ಲಿ ವಿಜಯೇಂದ್ರವರನ್ನು ರಾಜಾಧ್ಯಕ್ಷರನ್ನಾಗಿ ಒಪ್ಪುವುದಿಲ್ಲ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
”ಸಿಡಿ ಬಿಡುಗಡೆಯ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದ್ದಾರೆ ಎಂಬ ಸಿಟ್ಟು ರಮೇಶ ಜಾರಕಿಹೊಳಿ ಅವರಿಗಿದೆ,” ಎಂದು ಕಳೆದ ಶನಿವಾರ ಹೇಳಿದರು.
ಸಿಡಿ ವಿಷಯದಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಬಹಳ ದೊಡ್ಡ ಅಪಮಾನವಾಗಿದೆ. ಮಹಿಳೆ ಅದು ಸಮ್ಮತಿಯಿಂದಲೇ ಆಗಿದ್ದು ಎಂದು ಹೇಳಿದ್ದಾಳೆ. ಆದರೆ ಇವರು ಅವರಿಂದ ಅತ್ಯಾಚಾರವಾಗಿದೆ ಎಂದು ಸಾಬೀತು ಮಾಡಲು ಹೋದರು. ಈ ಘಟನೆಯಿಂದ ರಮೇಶ್ ಜಾರಕಿಹೋಳಿ ಸಿಟ್ಟು ಕಡಿಮೆಯಾಗಿಲ್ಲ, ಎಂದರು.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ಬಣಗಳ ನಡುವೆ ನಡೆದ ಸಭೆಯಲ್ಲಿ ಸಂಧಾನವಾಗಿಲ್ಲ ಎಂದು ಹೇಳಿದರು.
”ಸಿಡಿ ಬಿಡುಗಡೆಯಿಂದ ರಮೇಶ ಜಾರಕಿಹೊಳಿ ಅವರಿಗೆ ದೊಡ್ಡ ಅಪಮಾನವಾಗಿದೆ. ಇದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದ್ದಾರೆ ಎಂಬ ಸಿಟ್ಟು ರಮೇಶ ಜಾರಕಿಹೊಳಿ ಅವರಿಗಿದೆ. ಅವರ ಸಿಟ್ಟು ಕಡಿಮೆಯಾಗಿಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ” ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಶನಿವಾರ(ಸೆ21) ಹೇಳಿಕೆ ನೀಡಿದ್ದಾರೆ.
”ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಸಂಧಾನವಾಗಿಲ್ಲ. ಅಲ್ಲಿ ನಮ್ಮ ಭಾವನೆಗಳನ್ನು ಹೇಳಿದ್ದೇವೆ. ಈ ಹಿಂದೆ ರಮೇಶ್ ಜಾರಕಿಹೊಳಿ ಮೇಲೆ ದೊಡ್ಡ ಷಡ್ಯಂತ್ರ ನಡೆದಿದೆ. ಅವರಿಂದ ಅತ್ಯಾಚಾರವಾಗಿದೆ ಎಂದು ಸಾಬೀತು ಮಾಡಲು ಹೋದರು. ಆದರೆ, ಮಹಿಳೆ ಅದು ಸಮ್ಮತಿಯಿಂದಲೇ ಆಗಿದ್ದು ಎಂದು ಹೇಳಿಕೆ ಕೊಟ್ಟಿದ್ದಾಳೆ. ಆದರೆ, ಈ ಘಟನೆಯಿಂದ ರಮೇಶ್ ಜಾರಕಿಹೋಳಿ ಅವರಿಗೆ ಬಹಳ ದೊಡ್ಡ ಅಪಮಾನವಾಗಿದೆ. ಅವರ ಸಿಟ್ಟು ಕಡಿಮೆಯಾಗಿಲ್ಲ” ಎಂದರು.