ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬುದ್ದ, ಬಸವ, ಅಂಬೇಡ್ಕರ್ ಸಂದೇಶಗಳು

ಆಳಂದ :

ನಾಳೆ ದಿನಾಂಕ 28ರಂದು ಕಲ್ಬುರ್ಗಿಯಲ್ಲಿ ರಾಜೇಶ್ ಮತ್ತು ದೀಪ ವಿಶಿಷ್ಟ ರೀತಿಯಲ್ಲಿ ಮದುವೆಯಾಗಲಿದ್ದಾರೆ.

ಅವರು ಬುದ್ದ ಬಸವ ಅಂಬೇಡ್ಕರ್ ಹಾಗೂ ಇನ್ನೂ ಅನೇಕ ಮೂಲನಿವಾಸಿ ಮಹಾಪುರುಷರ ಸಂದೇಶ ಸಾರುವ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ನೇಹಿತರಿಗೆ ಬಂಧು-ಬಳಗಕ್ಕೆ ವಿತರಿಸಿದ್ದಾರೆ.

ಬಹುಜನ ಮೂಲನಿವಾಸಿ ವಿಚಾರವಾದಿಯಾದ ರಾಜೇಶ್ ತಮ್ಮ ವಿಚಾರಗಳನ್ನು ಮದುವೆಯಾಗಲಿರುವ ಯುವತಿಗೆ ತಿಳಿಸಿದಾಗ ಅವರು ಸಹ ಸಂತೋಷದಿಂದ ಒಪ್ಪಿಗೆಯನ್ನು ನೀಡಿದ್ದಾರೆ.

ಕುಟುಂಬದವರೊಂದಿಗೆ ಸಾಕಷ್ಟು ವಾದ ವಿವಾದ ನಡೆದು ವಿರೋಧದ ನಡುವೆಯೂ ವೈದಿಕ ಮಧ್ಯಸ್ಥಿಕೆ ಇಲ್ಲದೆಯೇ ಸರಳವಾಗಿ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ನಮ್ಮ ಭಾರತೀಯ ಸಂಸ್ಕೃತಿ ಅಳಿದು ಹೋಗುತ್ತಿರುವ ಇಂಥ ಒಂದು ಸಮಯದಲ್ಲಿ ಯುವಕರಿಗೆ ಈ ದಂಪತಿಗಳು ಮಾದರಿಯಾಗಿದ್ದಾರೆ. ಇವರ ಈ ಹೊಸ ಪ್ರಯತ್ನವನ್ನು ಜನರು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದಾರೆ.

ಈ ವಿವಾಹವನ್ನು ಬಸವಾದಿ ಶರಣರ ವಚನಗಳ ಪಠಣ, ಪ್ರಾರ್ಥನೆ ಹಾಗೂ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇಂಥ ಆಡಂಬರವಿಲ್ಲದ ಸರಳವಾದ ಮದುವೆಗಳು ಇನ್ನು ಹೆಚ್ಚು ಹೆಚ್ಚು ನಡೆಯಬೇಕೆಂದು ಮದುಮಗ ರಾಜೇಶ್ ತಮ್ಮ ಅಭಿಪ್ರಾಯವನ್ನು ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *