ಆರ್‌ಎಸ್‌ಎಸ್‌ನವರು ಲಿಂಗಾಯತ-ಲಿಂಗಾಯತರ ನಡುವೆ ಹಚ್ಚಿ ಮಜ ನೋಡುತ್ತಿದ್ದಾರೆ
ವಿಜಯಪುರ
ನಗರದಲ್ಲಿ ದೊಡ್ಡ ಸಮಾವೇಶ ಮಾಡುವದಾಗಿ ಹೇಳಿದ್ದ ಶಾಸಕ ಬಸನ ಗೌಡ ಯತ್ನಾಳ್ ಅವರ ಸವಾಲನ್ನು ಸಚಿವ ಎಂ ಬಿ ಪಾಟೀಲ್ ಸ್ವೀಕರಿಸಿದ್ದಾರೆ.
“ನೀವು ಎಷ್ಟು ಕಾರ್ಯಕ್ರಮ ಮಾಡುತ್ತೀರಿ, ನಾನು ಎರಡು ಪಟ್ಟು ಮಾಡುವೆ. ನೀವೆಷ್ಟು ಜನರನ್ನು ಸೇರಿಸುತ್ತಿರೋ ಅದರ ಎರಡು ಪಟ್ಟು ಜಾಸ್ತಿ ಜನ ಸೇರಿಸಿ ತೋರಿಸುವೆ,” ಎಂದು ಸೋಮವಾರ ಹೇಳಿದರು.
ಭಾನುವಾರ ಮಾಧ್ಯಮಗಳ ಜೊತೆ ಮಾತನಾಡುತ್ತ ಯತ್ನಾಳ್ ವಿಜಯಪುರದಲ್ಲಿ ಕನ್ನೇರಿ ಸ್ವಾಮಿಗಳನ್ನು ಕರೆದುಕೊಂಡು ಬಂದು ದೊಡ್ಡ ಸಮಾವೇಶ ಮಾಡುವದಾಗಿ ಹೇಳಿದ್ದರು. ಅದಕ್ಕೆ ಅಡ್ಡಿ ಬರದೇ ಎಂ ಬಿ ಪಾಟೀಲ್ ಮುಖ, ತಿ** ಮುಚ್ಚಿಕೊಂಡಿರಬೇಕೆಂದು ಅಶ್ಲೀಲವಾಗಿ ಭಾಷೆಯಲ್ಲಿ ಎಚ್ಚರಿಸಿದ್ದರು.
ಅದಕ್ಕೆ ಪ್ರತಿಯಾಗಿ ನಗರದ ಗೃಹ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಎಂ ಬಿ ಪಾಟೀಲ್ ‘ನನ್ನ ವಿರುದ್ಧ ದೊಡ್ಡ ಸಮಾವೇಶ ಮಾಡುವುದಾಗಿ ಯತ್ನಾಳ ಹೇಳಿದ್ದಾರೆ. ನೀವು ಬಿಜೆಪಿ, ಆರ್‌ಎಸ್‌ಎಸ್‌ನವರನ್ನು ಸೇರಿಸಿ ಸಮಾವೇಶ ಮಾಡಬಹುದು ಅಷ್ಟೆ. ನನ್ನ ಹಿಂದೆಯೂ ಜನ ಇದ್ದಾರೆ. ನೀವು ಎಷ್ಟು ಮಾಡಿತ್ತೀರೋ ಅದರ ಎರಡುಪಟ್ಟು ನಾನು ಸಮಾವೇಶ ಮಾಡುವ ಶಕ್ತಿ ಬಸವಣ್ಣ ಕೊಟ್ಟಿದ್ದಾನೆ,” ಎಂದು ಹೇಳಿದರು.

“ನಿಮ್ಮ ಸಮಾವೇಶಕ್ಕೆ ಬರುವವರು ಬಿಜೆಪಿಯವರು. ಆದರೆ ನನ್ನ ಜೊತೆ ಬಸವ ದಳ, ಬಸವ ಸೇನೆ, ಭೀಮ್ ಆರ್ಮಿ, ಸಿದ್ದರಾಮಯ್ಯನವರ ಅಹಿಂದವಿದೆ. ಎಲ್ಲಾ ಸಮುದಾಯಗಳ ಅನುಭವಮಂಟಪವಿದೆ. ನಾನೋ, ನೀವೋ ನೋಡೇಬಿಡೋಣ,” ಎಂದು ಸವಾಲು ಹಾಕಿದರು.
“ನಿಮ್ಮ ಸಮಾವೇಶದಲ್ಲಿ ಬೈಯ್ಯುವವರು ಲಿಂಗಾಯತರು, ಬೈಸಿಕೊಳ್ಳುವವರು ಲಿಂಗಾಯತರು. ಬಿಜೆಪಿ, ಆರ್‌ಎಸ್‌ಎಸ್‌ನವರು ಲಿಂಗಾಯತ-ಲಿಂಗಾಯತರ ನಡುವೆ ಹಚ್ಚಿ, ಮಜ ನೋಡುತ್ತಿದ್ದಾರೆ. ಇಂತಹ ಷಡ್ಯಂತ್ರಗಳನ್ನು ನಾನು ಬಹಳಷ್ಟು ನೋಡಿದ್ದೇನೆ” ಎಂದರು.
“ಬರ್ರಿ ಒಂದ್ಸಲ ಆಗೇ ಬಿಡ್ಲಿ. ಒಂದ್ಸಲ ಹಚ್ಚಿದ್ರ ನಾವು ಪೂರಾ ದಂಡಿಗೆ ಹಚ್ಚಿಬಿಡ್ತೀವಿ. ನಿಮ್ದು ತಿಂಡಿ ಎಷ್ಟೈತಿ ನೋಡೇ ಬಿಡೋಣ, ನಮ್ದು ತಿಂಡಿ ಎಷ್ಟೈತಿ ನೋಡೇ ಬಿಡೋಣ, ಒಂದ್ಸಲ ಆಗಿಯೇ ಬಿಡ್ಲಿ ನಾವು ಸಜ್ಜಾಗೇ ಬಿಡ್ತೀವಿ,” ಎಂದು ವಿಜಯಪುರದ ಭಾಷೆಯಲ್ಲಿ ಖಡಕ್ ಆಗಿ ಹೇಳಿದರು.
ಧಮ್ಕಿ ನಡೆಯಲ್ಲ
“ಯತ್ನಾಳ ಮಾತು ಯಾರು ಸೀರಿಯಸ್ ಆಗಿ ತಗೋತಾರೆ? ಯತ್ನಾಳ ಎಲ್ಲರಿಗೂ ಬಾಯಿ ಬಿಟ್ಟಿದ್ದಾರೆ, ಈಗ ನನಗೂ ಬಾಯಿ ಬಿಟ್ಟಿದ್ದಾರೆ. ಯತ್ನಾಳ ನೀವು ಯಾರಿಗಾದರೂ ಧಮ್ಕಿ ಹಾಕಿ, ನನ್ನೊಟ್ಟಿಗೆ ಇದು ನಡೆಯಲ್ಲ. ಬಸನಗೌಡರ ನಿಮ್ಮ ನಾಲಿಗೆಗೆ ಲಗಾಮು ಇರಲಿ.
ಯತ್ನಾಳ ಅವರಿಗೆ ಪ್ರತಿಕ್ರಿಯೆ ಕೊಡಲು ನಾನು ದಿನಕ್ಕೆ ನಾಲ್ಕು ಪ್ರೆಸ್‌ಮೀಟ್ ಮಾಡಬೇಕಾಗುತ್ತದೆ. ಇವರ ಹಾಗೆ ನಾನು ನಿರುದ್ಯೋಗಿ ಅಲ್ಲ,” ಎಂದು ಎಂ ಬಿ ಪಾಟೀಲ್ ಹೇಳಿದರು.
ಉಚ್ಚಾಟಿತ ಹಿಂದೂ ಹುಲಿ
ಇವರು ಹಿಂದೂ ಹುಲಿ ಅಂತಾ ಹೇಳಿಕೊಳ್ಳುತ್ತಾರೆ. ಇವರ ಸತ್ಯ ವಿಜಯಪುರದ ಜನರಿಗೆ ಗೊತ್ತಿದೆ ಎಂದು ಸಚಿವರು ಕಿಡಿಕಾರಿದರು.
ಈ ಹಿಂದೆ ನನ್ನ ಜೊತೆನೇ ಇವರು ಈದ್ಗ ಮೈದಾನಕ್ಕೆ ಪ್ರಾರ್ಥನೆಗೆ ಬಂದಿದ್ದರು. ಅಂದು ಅಲ್ಲಾಹು ಅಕ್ಬರ್ ಎಂದ ಇವರು ಇಂದು ಹಿಂದೂ ಬಗ್ಗೆ ಮಾತನಾಡುತ್ತಾರೆ. ಈ ಹಿಂದೆ ರಂಜಾನ್ ಸಂದರ್ಭದಲ್ಲಿ ಇಫ್ತಾರ್ ಕೂಟ ಮಾಡಿಸಿದ್ದಾರೆ. ಟೊಪ್ಪಿ ಹಾಕಿದ್ದಾರೆ. ಮುಸ್ಲಿಮರ ವೋಟ್‌ಗಾಗಿ ಎಲ್ಲ ವೇಷಭೂಷಣ ಹಾಕಿಮುಗಿಸಿದ್ದಾರೆ, ಈಗ ಹಿಂದೂಗಳ ವೋಟಿಗಾಗಿ, ಯಾರನ್ನೋ ಮೆಚ್ಚಿಸಲು ಮುಸ್ಲಿಮರಿಗೆ ಬೈಯುತ್ತಾರೆ, ಎಂದು ಆರೋಪಿಸಿದರು.
ಇವರು ನಾಲಿಗೆ ಹರಿಬಿಟ್ಟ ಕಾರಣವೇ ಇವರನ್ನು ಬಿಜೆಪಿಯಿಂದ ಹೊರ ಹಾಕಿದ್ದಾರೆ. ಉಚ್ಚಾಟಿತ ಹಿಂದೂ ಹುಲಿ ಇದು. ಇವರ ಸಹೋದರ ಈಶ್ವರಪ್ಪ, ಇವರಿಬ್ಬರೂ ಉಚ್ಚಾಟಿತರೇ.

ಮಾತೆ ಮಹಾದೇವಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವ ಧರ್ಮ ಜಾಗತಿಕ ಮಟ್ಟದಲ್ಲಿ ಮಾತೇ ಮಹಾದೇವಿಯವರು ಮಾಡುತ್ತಿದ್ದಾರೆ ಎಂದು ಇವರೇ ಹಿಂದೆ ಹೇಳಿದ್ದಾರೆ.
ಸಿದ್ದರಾಮಯ್ಯ ಎದೆ ಸೀಳಿದರೆ ಅಲ್ಲಾ ಕಾಣುತ್ತಾನೆ ಅಂತಾರೆ. ಸಿದ್ದರಾಮಯ್ಯನವರ ಎದೆಯಲ್ಲಿ ಸಂವಿಧಾನ ಇದೆ. ಆವತ್ತು ನಿಮ್ಮ ಎದೆಯಲ್ಲಿ ಅಲ್ಲಾ ಇದ್ದನಾ? ಇವತ್ತು ಹಿಂದೂ ಬಂತು.
ಧಾರ್ಮಿಕ ಸ್ವಾತಂತ್ರ್ಯ
ಲಿಂಗಾಯತರಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲವೇ ಎಂದು ಪಾಟೀಲ್ ಪ್ರಶ್ನಿಸಿದರು.
ಹಿಂದೆ ಜೈನರಿಗೆ ಮಾನ್ಯತೆ ಕೊಟ್ಟಾಗ ಯಾರೂ ಮಾತನಾಡಲಿಲ್ಲ. ನಾವು ಹಿಂದುಗಳಲ್ಲ ಎಂದು ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದಲ್ಲಿ ರೆಜುಲ್ಯೂಶನ್ ಮಾಡಿದರು. ಎಲ್ಲರಿಗೂ ತಮ್ಮದೇ ಆದ ಧಾರ್ಮಿಕ ಸ್ವಾತಂತ್ರ್ಯವಿದೆ.

ಹಂಗಾದರೆ ಹಿಂದೂ ಧರ್ಮದ ಬಗ್ಗೆ ಪ್ರಧಾನಿ ಮೋದಿ ಅವರು ಅರ್ನಾಬ್ ಗೋಸ್ವಾಮಿ ಅವರಿಗೆ ಹಿಂದು ಒಂದು ವೇ ಆಫ್ ಲೈಫ್ ಎಂದು ಹಿಂದೆ ಹೇಳಿದ್ದಾರೆ, ಎಂದು ಎಂ ಬಿ ಪಾಟೀಲ್ ಹೇಳಿದರು.
ಸೂಳೆ ಸಂಕವ್ವ
ಕನ್ನೇರಿ ಸ್ವಾಮಿ ಎಲ್ಲ ಸ್ವಾಮಿಗಳ ತಾಯಂದಿರಿಗೆ ಅವಾಚ್ಯ ಪದ ಬಳಸಿದ್ದಾರೆ. ಬಸವಣ್ಣನವರು ಸೂಳೆ ಸಂಕವ್ವಗೆ ಬಸವ ಮಂಟಪದಲ್ಲಿ ಸ್ಥಾನ ಕೊಟ್ಟಿದ್ದರು. ಮಹಿಳೆ ದೈಹಿಕ ಸುಖಕ್ಕೆ ಹಾಗೆ ಮಾಡಿರಲ್ಲ ಅವಳು ಮಕ್ಕಳ ಪಾಲನೆ ಪೋಷಣೆಗಾಗಿ ಹಾಗೆ ಆಗಿರುತ್ತಾಳೆ.
ಸೂಳೆ ಸಂಕವ್ವಗೆ ನಾವು ಬಸವ ಧರ್ಮದಲ್ಲಿ ಸ್ಥಾನ ಕೊಟ್ಟಿದ್ದೇವೆ. ಕಣ್ಣೀರಿ ಶ್ರೀಗಳು ಬಳಸಿದ ಒಂದು ಶಬ್ದಕ್ಕೆ ಅವರು ಕ್ಷಮೆ ಕೇಳಲಿ. ಅವರ ಪಾದ ಮುಟ್ಟಿ ನಾನು ಕರೆದುಕೊಂಡು ಬರುವೆ. ರಾಮನಿಗೆ ಬೈದರೂ, ಹನುಮಂತನಿಗೆ ಬೈದರೂ ನಮ್ಮದು ವಿರೋಧವಿದೆ, ಎಂದು ಪಾಟೀಲ್ ಹೇಳಿದರು.

ನಮ್ಮ ಲಿಂಗಾಯತ ನಾಯಕನ ಮಾತು ಪಾಟೀಲರೆ ನೀವು ಮುಂದುವರಿರಿ ಗುರು ಬಸವಣ್ಣನವರ ಆಶಿರ್ವಾದ ನಿಮಗೆ ಇದೆ ಸತ್ಯಕ್ಕೆ ಜಯ ಇದೆ ಕೋಟ್ಯಾಂತರ ಬಸವ ಭಕ್ತರು ನಿಮ್ಮ ಹಿಂದೆ ಇದ್ದೆವೆ
ಎರಡು ಪಟ್ಟು ಏಕೆ. ಅಂತಹ ಸಂದರ್ಭ ಬಂದರೆ ಅಭಿಯಾನದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೆರೆದಿದ್ದ ಬಸವ ಭಕ್ತರೆಲ್ಲರೂ ಸೇರುತ್ತೇವೆ.
ನಿಮ್ಮ ಗಟ್ಟಿ ನಿಲುವಿಗೆ ಬಸವಣ್ಣನವರ ಮತ್ತು ಬಸವಾದಿ ಶರಣರ ಕರುಣೆ ಮತ್ತು ರಕ್ಷೆ ಸದಾ ನಿಮಗೆ ಇರುತ್ತೆ
ಬುದ್ದ ಬಸವ ಭೀಮ್ ದಂಡು ನಿಮ್ಮೊಂದಿಗೆ ಸದಾ ಇರುತ್ತವೆ
ನೀವು ಮುಂದೆ ಸಾಗಿ ನಾವು ನಿಮ್ಮೊಂದಿಗೆ ಸಾಗುತ್ತೆ ವೆ.
ನಮ್ಮೆಲ್ಲರ ಬಹುತ್ವ ನಾಯಕ ಸಂವಿಧಾನ ಬದ್ದ ರಾಜಕಾರಣಿ
ಸನ್ಮಾನ್ಯ ಶರಣ ಎಂ.ಬಿ. ಪಾಟೀಲ್ ಗೆ ಜಯವಾಗಲಿ
ಜೈ ಭಾರತ ಜೈ ಬುದ್ದ, ಜೈ ಬಸವ,ಜೈ ಭೀಮ್ ಜೈ ಸಂವಿಧಾನ
ಯತ್ನಾಳ್, ಈಶ್ವರಪ್ಪ, ಕನ್ಹೇರಿ ಇವರ ಬೆಂಬಲಗರೆಲ್ಲರೂ ಒಂದು ಕಡೆ ಸೇರಿದರೂ ಸಮಾವೇಶ ಮಾಡಿದರೂ ಅದು ನಗರಪಾಲಿಕೆಗಳು ಕಸ ಹಾಕಿ ಹಾಕಿ ಸ್ರಷ್ಟಿಸಿದ ಕಸದ ಗುಡ್ಡದ ತರಹ ಇರುತ್ತೆ , ಗಬ್ಬು ನಾರುತ್ತೆ , ಎತ್ತರವೇನೋ ಕಾಣುತ್ತೆ , ಎತ್ತರವಿದ್ದ ಮಾತ್ರಕ್ಕೆ ಸುಂದರ ಗುಡ್ಡ, ಪರ್ವತ ಎನ್ನಲಿಕ್ಕೆ ಬರುವುದಿಲ್ಲ. ಅಲ್ಲಿ ನಿಂತುಕೊಳ್ಳಲೂ ಆಗುವುದಿಲ್ಲ , ಹಾಗಾಗಿಯೇ ಇವರು ಉಚ್ಛಾಟಿತರು ಮತ್ತು ಪ್ರವೇಶ ನಿರ್ಭಂದಿತರು, ಇವರನ್ನು ಬೆಂಬಲಿಸುವ ಜನ ಅವರು ಮನೆಗೆ ಊರಿಗೆ ಮಿಕ್ಕಿದವರೇ ಇರುತ್ತಾರೆ. ಬೇಕಿದ್ದರೆ ಇವರ ಬೆಂಬಕಿಗರ ಲಿಸ್ಟ್ ನೋಡಿ ಓದು, ಉದ್ಯೋಗ ಇಲ್ಲದ, ಹೆಂಡತಿ ಮಕ್ಕಳನ್ನು ಸಾಕಲಾಗದ ಪುಢಾರಿಗಳೇ ಇರುತ್ತಾರೆ ,ಅಂತಹ ಕಸದ ಗುಡ್ಡಗಳು ಇವೆಲ್ಲ.
ಬಸವ ಸಂಸ್ಕ್ರತಿ ಅಭಿಯಾನದಲ್ಲಿ ಸಮಾರೋಪ ಸಮಾರಂಭದಲ್ಲಿ ಪಂಚಮಸಾಲಿ ಪೀಠದ ಜಯಮ್ರತ್ತುಂಜಯ ಸ್ವಾಮಿಗಳೂ ಭಾಗವಹಿಸಿದ್ದರು, ಈ ಕನ್ಹೇರಿ ಪಂಚಮಸಾಲಿ ಶ್ರೀಗಳ ತಾಯಿಯನ್ನೂ ಅವಮಾನಿಸಲಲಿಲ್ಕವೇ ? ಈ ಯತ್ನಾಳನಿಗೆ ಇಷ್ಟು ಭುದ್ದಿ ಬೇಡವೇ ? ಪಂಚಮಸಾಲಿ ಶ್ರೀಗಳ ಜೊತೆ ಓಡಾಡಿ ಈಗ ಅವರನ್ನು ಬೈದಾಗ , ಆ ಕನ್ಹೇರಿ ಸ್ವಾಮಿಗೆ ಎಚ್ಚರಿಕೆ ಕೊಡದಷ್ಟು ಭುದ್ದಿ ಕಳೆದುಕೊಂಡಿದ್ದಾನಾ ಯತ್ನಾಳ ? ಇವನ ಬೆಂಬಲಿಗರಿಗೆ ಭುದ್ದಿ ಇಲ್ಲ ಅಷ್ಟೇ.
ಹಾಗೇ ವಚನ ಸಾಹಿತ್ಯದಡಿಯಲ್ಲಿ ಶರಣರು, ಚಿಂತಕರು ಸ್ವಾಮೀಜಿಗಳು ಒಂದುಕಡೆ ಸೇರಿದರೆ ಅದು ಪಶ್ಚಿಮ ಘಟ್ಟಗಳ ತರಹ,ಕಪ್ಪತ್ತಗುಡ್ಡ ತರಹ , ಅದು ಜನಸಾಮಾನ್ಯರಿಗೂ ಎಲ್ಲರಿಗೂ ತಿಳಿಯುತ್ತೆ ಇಷ್ಟವಾಗುತ್ತೆ. ಅಲ್ಲಿ ಓದಿದವರು, ಸಂಸ್ಕಾರವಂತರು, ಭುದ್ದಿವಂತರ ಸಮಾಗಮವಾಗಿರುತ್ತೆ. ಎಂ.ಬಿ ಪಾಟೀಲರ ಮಾತು ಸವಾಲು ಇಷ್ಟವಾಯಿತು, ೪೦೦ ಜನ ಲಿಂಗಾಯತ ಸ್ವಾಮೀಜಿಗಳ ಜೊತೆ ಬಿಜಾಪುರಕ್ಕೆ ಶರಣ ಮೇಳಕ್ಜೆ ಹೋಗಲು ಸಿಧ್ದ.
ವಿಜಯಪುರ ಚಲೋ, ಇನ್ನೆಂದು ಚಡ್ಡಿಗಳು ನಮ್ಮ ಸವಾಸಕ್ಕೆ ಬರಬಾರದು
ಸೈದ್ಧಾಂತಿಕವಾಗಿ ಗಟ್ಟಿಯಾಗಿರುವ ನಾಯಕರು ಬೇಕು. ಪಾಟೀಲರು ಹೀಗೆ ಮುಂದುವರೆದರೆ ಯಡಿಯೂರಪ್ಪನವರಿಗಿಂತ ವೇಗವಾಗಿ ಬೆಳೆಯುತ್ತಾರೆ.
ಸ್ವಾಭಿಮಾನಿ ಲಿಂಗಾಯತರ ನಾಯಕ ಎಮ್ ಬಿ ಪಾಟೀಲ್ ಸರ್, ಇಸ್ಟುದಿನ ಸಮಾಜದ ಸ್ವಾಸ್ತ್ಯ ಹಾಳಾಗದಿರಲಿ ಯಂದು ಇಂಥಹ ಕಚಡಾಗಳ ವಿರುದ್ದ ಬೀದಿಗಿಳಿಯದೆ ಇದ್ದುದು ಎಮ್ ಬಿ ಪಾಟೀಲ್ ರ ದೌರ್ಬಲ್ಯ ಯಂದು ಭಾವಿಸಿದವರಿಗೆ ಉತ್ತರ ಕೊಡಲು ಸಜ್ಜಾಗಿದ್ದು ಬಸವಭಕ್ತರಿಗೆ ಶಕ್ತಿಬಂದಂತಾಗಿದೆ, ಇವರಜೊತೆ ಭಸವಭಕ್ತರ ಪಡೆಯಿದೆ, ನಿವು ಕರೆಕೊಡಿಸರ್ ಲಿಂಗಾಯತ ಧರ್ಮಕ್ಕಾಗಿ ಪ್ರಾಣತ್ಯಾಗಮಾಡುವ ಒಂದು ತಂಡವೇಯಿದೆ, ಈ ಹೋರಾಟ ಸ್ವಾರ್ಥಕ್ಕಾಗಿ ಅಲ್ಲಾ. ಲಿಂಗಾಯತರ ಅಸ್ಮಿತೆಗಾಗಿ ಯತ್ನಾಳನಂಥ ಪರಮನಿಚರಿಗೆ ಉತ್ತರಿಸುವ ಕಾಲವಿದು.
ಈಯತ್ನಾಳನಿಗೆ ಅವನು ತಿಳಿದಿರುವಹಾಗೆ ಆರ್ ಎಸ್ ಎಸ್ ಇವನಿಗೆ ಛೂಬಿಟ್ಟು ತಮಾಶೆನೋಡುತ್ತಿದೆ. ಈ ಬುದ್ದಿಹೀನನಿಗೆ ಅದು ಅರ್ಥವಾಗದು. ನಮ್ಮ ನಮ್ಮ ನಡುವೆ ಜಗಳಹಚ್ಚಿ ತಮಾಷೆನೋಡಲು ಹೊರಟಿದೆ. ಈ ಬುದ್ದಿಗೇಡಿಗೆ ಇದು ತಿಳಿಯಲಾರದು. ನಾವು ಈ ಆರ್ ಎಸ್ ಎಸ್ ಸಂಘಪರಿವಾರಿಗಳನ್ನು ತೀಕ್ಷ್ಣವಾಗಿ ಎಚ್ಚರಿಕೆ ನೀಡಬೇಕಾಗಿದೆ. ಬಿ ಎಲ. ಸಂತೋಷ ಎನ್ನುವ ಈ ಕುತ್ಸಿತ ಬುದ್ದಿಯ ನರಿಬೋಲಿ ಕೆಲಸ ಮಾಡುತ್ತಿದೆ. ನಾವು ಜಾಣರಾಗಿ ಇರಬೇಕು.
ನಿಮ್ಮ ಹಿಂದೆ ಅಸಂಖ್ಯಾತ ಬಸವಾಭಿಗಳಿದ್ದಾರೆ. ಹಿಂಜರಿಯಬೇಡಿ. ನಾವು ಬರುತ್ತೇವೆ.ನಿಮ್ಮೊಂದಿಗಿರುತ್ತೇವೆ. ಜೈ ಬಸವ. ಜೈ MB ಪಾಟೀಲ್. ಕೈ ಲಿಂಗಾಯತ
ಸರ್ ತಾವು ಸರಿ ದಾರಿಯಲ್ಲಿ ಇದ್ದೀರಿ. ಅಖಂಡ ಲಿಂಗಾಯತರೂ ನಿಮ್ಮೊಂದಿಗೆ ಯಾವಾಗಲು ಇರುತ್ತೇವೆ. ಈಗಾಗಲೇ ನಮ್ಮ ಲಿಂಗಾಯತ ಜನ ಒಗ್ಗಟ್ಟಾಗಿದ್ದಾರೆ. ಈ ಒಗ್ಗಟ್ಟಿನಿಂದ ನಮ್ಮವರೆ ಆಗಿರುವ ಬಿಜೆಪಿ ಲಿಂಗಾಯತ ನಾಯಕರಿಗೆ ಪಾಠ ಕಲಿಸಬೇಕು.
ಒಂದೊಂದ್ ಮನೆಯಿಂದ ಇಬ್ಬಿಬ್ರು ಲಿಂಗಾಯ್ತ್ರು ಬಂದ್ರೆ ಸಾಕು, ಈ ನನ್ ಮಕ್ಳು ಓಡಿಹೋಗ್ತಾರೆ
ಏನ್ ಇವರಿಗೆ ಹೇಳೋರಿಲ್ಲ ಕೇಳೋರಿಲ್ಲ, ಇವರು ಆಡಿದ್ದೇ ಆಟ
ಧರ್ಮದ ವಿಷಯದಲ್ಲಿ ರಾಜಕೀಯ ಬೆರೆತರೆ ಏನೆಲ್ಲ ಆಗುತ್ತದೆ ಎಂಬುದಕ್ಕೆ ಈಗ ನಡೆಯುತ್ತಿರುವ ಆಧ್ವಾನವೇ ಸಾಕ್ಷಿ.
ಈಗಿನ ಲಿಂಗಾಯತರನ್ನು ಗಮನದಲ್ಲಿಟ್ಟು ಹೇಳುವುದಾದರೆ ಬಹುತೇಕರು ಶುದ್ಧ ಲಿಂಗಾಯತರಲ್ಲ. ಸನಾತನಿಗಳ ಹಾಗೂ ಈ ವೀರಶೈವರ ದೀರ್ಘ ಕಾಲೀನ ಕುಪ್ರಭಾವದ ಪರಿಣಾಮವಾಗಿ ಅವರು ಆದರ್ಶ ಹಾಗೂ ತತ್ವ ಬದ್ಧ ಲಿಂಗಾಯತಕ್ಕೆ ಮರಳಲಿಕ್ಕೆ ಸಾಕಷ್ಟು ಸಮಯ ಬೇಕು ಕ್ರಾಂತಿಯ ಸಂದರ್ಭದಲ್ಲಿ ಇದ್ದಂತಹ ಶುದ್ಧತೆ, ತೇಜಸ್ಸು ಈಗಿನ ಲಿಂಗಾಯತ ಸಮಾಜದಲ್ಲಿ ಇಲ್ಲವಾದ ಕಾರಣ ಇಂತಹ ಬಹುತೇಕ ಲಿಂಗಾಯತರ ವಿರೋಧ ಕಟ್ಟಿಕೊಳ್ಳದೆ ಉಪಾಯವಾಗಿ ಹಾಗೂ ಬಹು ಜಾಣ್ಮೆಯಿಂದ ಎಲ್ಲವನ್ನೂ ಒಮ್ಮೆಲೆ ಮೈಮೇಲೆ ಎಳೆದುಕೊಳ್ಳದೆ ನಿಭಾಯಿಸಬೇಕಾಗಿದೆ. ವಚನಗಳನ್ನು ಓದದ, ಅವುಗಳನ್ನು ಸರಿಯಾಗಿ ಅರ್ಥೈಸದ ಲಿಂಗಾಯತರ ವಿರೋಧ ಕಟ್ಟಿಕೊಳ್ಳದೇ ಸ್ವತಂತ್ರ ಧರ್ಮದ ಹೋರಾಟವನ್ನು ಮುನ್ನಡೆಸುವುದು ಅತ್ಯಂತ ಸೂಕ್ತ ಅನ್ನುವದು ನನ್ನ ಅಭಿಪ್ರಾಯ.
ಇದನ್ನು ಸ್ವಾಮಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ವೇದಿಕೆ ಹಾಗೂ ಬಸವ ಸೇನೆಯ ಧುರೀಣರು ಗಮನಿಸಬೇಕೆಂದು ನನ್ನ ಮನವಿ.
ಶರಣು ಶರಣಾರ್ಥಿ