‘ಯತ್ನಾಳ ಬೆಂಬಲಿಸಿರುವ ಸಂಶೋಧಕ ಮುಕ್ಕುಂದಿಮಠ ಬಹಿರಂಗ ಚರ್ಚೆಗೆ ಬರಲಿ’

“ಲಿಂಗಾಯತ ಧರ್ಮ ಹಾಗೂ ದಾರ್ಶನಿಕರ ನಿಂದನೆ ಸಹಿಸುವುದಿಲ್ಲ, ಕೂಡಲೇ ಹೇಳಿಕೆ ವಾಪಸ್ ಪಡೆಯಬೇಕು.”

ಸಿಂಧನೂರು

ವಿಶ್ವಗುರು ಬಸವಣ್ಣನವರ ವಿರುದ್ಧ ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸಮರ್ಥನೆ ಮಾಡಿಕೊಂಡಿರುವ ನಿವೃತ್ತ ಪ್ರಾಂಶುಪಾಲ, ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಬಸವ ಕೇಂದ್ರದ ಮುಖಂಡ ವೀರಭದ್ರಗೌಡ ಅಮರಾಪುರ ಮುಕ್ತ ಆಹ್ವಾನ ನೀಡಿದರು.

ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಲ್ಲ ಜಾತಿ, ಜನಾಂಗದವರನ್ನು ಒಗ್ಗೂಡಿಸಿ ಅನುಭವ ಮಂಟಪ ಕಟ್ಟಿ ವಚನ ಕ್ರಾಂತಿ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರನ್ನು ಅವಹೇಳನ ಮಾಡಿದ ಯತ್ನಾಳರ ಹೇಳಿಕೆಯನ್ನು ಇಡೀ ರಾಜ್ಯವೇ ಖಂಡಿಸಿದೆ. ಆದರೆ ಸಿಂಧನೂರಿನ ಸ್ವಯಂಘೋಷಿತ ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಬಸವಣ್ಣನವರು ಜಲೈಕ್ಯರಾದರೆಂಬ ಕುರಿತು ವಾಙ್ಮಯಗಳ ಉಲ್ಲೇಖವಿದೆ ಎಂದು ಪರೋಕ್ಷವಾಗಿ ಯತ್ನಾಳರ ಹೇಳಿಕೆಯನ್ನು ಸಮರ್ಥಿಸಿಕೊಂಡು ಬಸವಣ್ಣನವರ ವಿರೋಧಿತನ ಪ್ರದರ್ಶಿಸಿದ್ದಾರೆ. ಕಪೋಕಲ್ಪಿತ ದುಷ್ಟ ಮನಸ್ಸುಗಳು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಕ್ಕುಂದಿಮಠ ಅವರಿಗೆ ಶರಣರ ಹಾಗೂ ವಚನಗಳು ಅವುಗಳ ಸಾರದ ಬಗ್ಗೆ ಏನು ಗೊತ್ತಿಲ್ಲ. ಏನು ಸಂಶೋಧನೆ ಮಾಡಿದ್ದಾರೆ, ಅವರೇಗೆ ಸಂಶೋಧಕರಾಗಿದ್ದಾರೆಂದು ತಿಳಿಯುತ್ತಿಲ್ಲ. ನಿವೃತ್ತ ಪ್ರಾಂಶುಪಾಲರಾಗಿ ಇಲ್ಲಸಲ್ಲದ ಹೇಳಿಕೆ ನೀಡುವುದು ಅವರ ಘನತೆಗೆ ಶೋಭೆಯಲ್ಲ. ಪ್ರಚಾರದ ಗೀಳಿಗಾಗಿ ಈ ರೀತಿ ಮಾತನಾಡಬಾರದು. ಲಿಂಗಾಯತ ಧರ್ಮ ಹಾಗೂ ದಾರ್ಶನಿಕರ ನಿಂದನೆ ಸಹಿಸುವುದಿಲ್ಲ. ಕೂಡಲೇ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬಹಿರಂಗ ಚರ್ಚೆಗೆ ಬರಬೇಕು ಎಂದವರು ಸವಾಲು ಹಾಕಿದರು.

ಬಸವಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷ ಕರೇಗೌಡ ಕುರಕುಂದಾ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಪ್ಪ ಪಗಡದಿನ್ನಿ, ಮುಖಂಡ ಬಿ. ಬಸವರಾಜ ಕುರುಕುಂದಾ ಉಪಸ್ಥಿತರಿದ್ದರು.

289
"ಬಸವಣ್ಣನವರಂತೆ ಹೊಳ್ಯಾಗ ಜಿಗೀರಿ" ಎಂದಿರುವ ಯತ್ನಾಳ್:

Share This Article
Leave a comment

Leave a Reply

Your email address will not be published. Required fields are marked *