ತೇರದಾಳ
ಹನ್ನೆರಡನೇ ಶತಮಾನದ ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶ್ವರ, ತೇರದಾಳ ಪಟ್ಟಣದ ಆರಾಧ್ಯದೈವ, ಅಲ್ಲಮಪ್ರಭು ದೇವರ ನೂತನ ದೇವಸ್ಥಾನದ ಲೋಕಾರ್ಪಣೆ ನವೆಂಬರ್ 11ರಂದು ನಡೆಯಲಿದೆ.
ಬರುತ್ತಿರುವ ಸಹಸ್ರಾರು ಭಕ್ತರಿಗೆ ಪ್ರತಿದಿನ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಾಲುಗ್ಗಿ, ಸಜ್ಜಕ, ಮಾದಲಿ, ಬೂಂದಿ, ಬಾಸುಂದೆ, ಬಾದುಷಾ, ಹೂರಣದ ಹೋಳಿಗೆ, ಜಿಲೇಬಿ, ಚಪಾತಿ, ರೊಟ್ಟಿ, ವಿವಿಧ ತೆರನಾದ ಪಲ್ಲೆ ಅನ್ನ-ಸಾರನ್ನು ಈಗಾಗಲೇ ಭಕ್ತರು ಸವಿದಿದ್ದಾರೆ.
ಸೋಮವಾರ ಅಕ್ಟೋಬರ್ 28ರಂದು ಪಟ್ಟಣದ ಎಲ್ಲ ಭಾಗದ ಮಹಿಳೆಯರು ಶೇಂಗಾ ಹೋಳಿಗೆ ಮನೆಗಳಲ್ಲಿ ತಯಾರಿಸಿ, ಬುಟ್ಟಿಗಳಲ್ಲಿ ತುಂಬಿಕೊಂಡು, ಬುಟ್ಟಿಗಳನ್ನು ತಮ್ಮ ತಲೆ ಮೇಲೆ ಹೊತ್ತವರು ಸಾವಿರಾರು ತಾಯಂದಿರು, ಅದರ ಜೊತೆಗೆ ವಚನ ಸಾಹಿತ್ಯವನ್ನು ತಲೆಮೇಲೆ ಹೊತ್ತವರು ಸಾವಿರಾರು ಶರಣೆಯರು. ಹೀಗೆ ಎರಡು ಕಿ.ಮೀ ನಡೆಯುತ್ತ, ಶ್ರೀ ಗುರುಬಸವ ಲಿಂಗಾಯ ನಮಃ ಓಂ ಎಂಬ ಮಂತ್ರ ಹೇಳುತ್ತ, ದೇವಸ್ಥಾನ ಸಮಿತಿಗೆ ಒಂದು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ಸಲ್ಲಿಸುವ ಮೂಲಕ ಇತಿಹಾಸ ಬರೆದರು.