ಸತ್ಯಂಪೇಟೆ
ಕೆಲವು ಸಲ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಆದರೂ ಕೆಲವು ಸಲ ಸತ್ಯವಾದ ಮಾತುಗಳನ್ನು ಕೇಳಬೇಕಾಗುತ್ತದೆ. ಸಿಂಧನೂರಿನ ಬಸವ ತತ್ವ ಪ್ರಚಾರಕ ಶ್ರೀ ವೀರಭದ್ರಪ್ಪ ಕುರಕುಂದಿ ನಮ್ಮಿಂದ ದೈಹಿಕವಾಗಿ ಇಲ್ಲವಾಗಿದ್ದಾರೆ.
ಬಸವತತ್ವ ಪ್ರಚಾರಕ್ಕಾಗಿ ವೀರಭದ್ರಪ್ಪನವರು ಸದಾ ಸಿದ್ದವಾಗಿದ್ದರು. ಆರಂಭದಲ್ಲಿ ದೇವಿ ಪಾರಾಯಣ ಮಾಡಿದವರು ಸತ್ಯ ಅರ್ಥವಾಗುತ್ತಲೆ ಬಸವಣ್ಣನವರನ್ನು ಅಪ್ಪಿಕೊಂಡರು. ಸುಖ ದುಃಖ ಯಾವುದನ್ನೂ ಗಮನಿಸದೆ ಏಕವಾಗಿ ತತ್ವ ಪ್ರಸಾರಗೈದರು.
ಸಿಂಧನೂರಿನಲ್ಲಿ ಬಸವ ಕೇಂದ್ರ ಸ್ಥಾಪಿಸಿಕೊಂಡು ವಿದಾಯಕ ಕಾರ್ಯ ಮಾಡಿದ್ದಾರೆ. ನೂರಾರು ಜನ ಬಾಲಕಿಯರ ವಸತಿ ನಿಲಯ ಸ್ಥಾಪಿಸಿ ಮಧ್ಯಮ ವರ್ಗದ ಜನಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಕೆಲವು ಸಲ ಮನುಷ್ಯ ಸತ್ಯ ಗೊತ್ತಿದ್ದರೂ ಮುಲಾಜಿಗೆ ಒಳಗಾಗುತ್ತಾನೆ, ಬಹುಶಃ ಇಂಥ ಅನಿವಾರ್ಯತೆಗೆ ವೀರಭದ್ರಪ್ಪನವರು ಒಳಗಾಗಿದ್ದರು. ದುರುಳ ಸ್ವಾಮೀಜಿಯ ಜೊತೆ ನಂಟು ಇಟ್ಟುಕೊಂಡಿದ್ದರು. ಇದೆಲ್ಲದರ ನಡುವೆಯೂ ಬಸವ ತತ್ವದ ಕಲ್ಯಾಣ ಮಹೋತ್ಸವ, ತೊಟ್ಟಿಲು ಕಾರಣ ಇತ್ಯಾದಿ ಕೌಟುಂಬಿಕ ಸಮಾರಂಭಗಳಲ್ಲಿ ಭಾಗವಹಿಸಿ ಬಸವ ತತ್ವದ ಸರಳತೆ ಪ್ರತಿಪಾದಿಸುತ್ತಿದ್ದರು.
ಶ್ರಾವಣ ಮಾಸದ ಕೊನೆಯ ದಿನದ ಕಾರ್ಯಕ್ರಮಕ್ಕೆ ನನ್ನಿಂದ ಉಪನ್ಯಾಸ ಏರ್ಪಡಿಸಿ, ಖುಷಿಯಿಂದ ನನ್ನ ಮಾತು ಕೇಳಿ ಹರ್ಷಗೊಂಡಿದ್ದರು. ಶಹಾಪುರದ ನಮ್ಮ ತಿಂಗಳ ಬಸವ ಬೆಳಕು ಕಾರ್ಯಕ್ರಮಕ್ಕೂ ಬಂದಿದ್ದರು. ಮುಂದೆಯೂ ಬರುವವರಿದ್ದರು.
ಆದರೆ ಕಾಲನ ಕರೆಗೆ ಓಗೊಟ್ಟು ನಡೆದು ಬಿಟ್ಟರು. ಎಮ್ಮವರಿಗೆ ಸಾವಿಲ್ಲ. ಎಮ್ಮವರು ಸಾವನರಿಯರು. ಅರಿತವನು ಎಂತು ಸತ್ತನು?
ಶರಣತತ್ವ ಒಪ್ಪಿಕೊಂಡ ಪರಿಯನ್ನು ಚೆನ್ನಾಗಿ ವಿವರಿಸಿದ್ದೀರಿ.
ಸಾಕಾರದಿಂದ ನಿರಾಕಾರದತ್ತ ಸಾಗಿದ ಶರಣರು ವೀರಭದ್ರಪ್ಪಣ್ಣನವರು.
ಶರಣು ಶರಣಾರ್ಥಿಗಳು