ಕಲಬುರ್ಗಿ
ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಭೀಮನಗೌಡ ಪರಗೊಂಡ ಅವರ ಪ್ರತಿಕ್ರಿಯೆ.
1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು?
ಲಿಂಗಾಯತರನ್ನು ಹಿಂದೂಗಳು ಎಂದು ಬಿಂಬಿಸಿ, ಹಿಂದುತ್ವದ ಕಾಲಾಳುಗಳಾಗಿಸಿ, ಗುಲಾಮರನ್ನಾಗಿ, ಮತ್ತೆ ಶೂದ್ರರನ್ನಾಗಿ ಮಾಡಿ, ಮನುವಾದದ ಛತ್ರದ ಅಡಿಯಲ್ಲಿ ತರುವ ಕುತಂತ್ರವಾಗಿದೆ.
2) ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ, ಯಾರಿಗೆ ಬರುತ್ತದೆ?
ಕೆಲವು ಬಸವ ತತ್ವ ಚಿಂತನೆ ವಿರೋಧಿಸುವ, ಬಹಿರಂಗದಲ್ಲಿ ಬಸವತತ್ವ ಮಾತನಾಡಿ, ಅಂತರಂಗದಲ್ಲಿ ಲಿಂಗಾಯತ ಧರ್ಮ ಮತ್ತು ಬಸವತತ್ವ ವಿರೋಧ ಮಾಡುವ, ಯಥಾಸ್ಥಿತಿವಾದಿ ಮಠಾಧೀಶರಿಗೆ ಆಹ್ವಾನ ನೀಡಿ, ಅದನ್ನೇ ಲಿಂಗಾಯತ ಸಮುದಾಯಕ್ಕೆ ನೀಡಿದ ಬಹುದೊಡ್ಡ ಗೌರವ ಎಂದು ತೋರಿಸುವ ಕುತಂತ್ರ ಇದರ ಮೂಲ ಉದ್ಧೇಶವಾಗಿದೆ.
3) ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?
ಲಿಂಗಾಯತ ಸಮುದಾಯದ ಗಣ್ಯರು, ಲಿಂಗಾಯತ ಸಮುದಾಯದ ಮಠಾಧೀಶರು ಅವರ ಆಹ್ವಾನವನ್ನು ಗೌರವದಿಂದ ಸ್ವೀಕರಿಸಬೇಕು ಮತ್ತು ಲಿಂಗಾಯತ, ಬಸವ ಧರ್ಮ ಹಿಂದೂ ಧರ್ಮಕ್ಕಿಂತ ವಿಭಿನ್ನ ಎಂದು ಹೇಳಬೇಕು, ಜೊತೆ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಂಬ ಧರ್ಮಗಳ ಕಾರ್ಯಕ್ರಮಗಳಲ್ಲಿ ನಾವು ನಮ್ಮತನ ಇಟ್ಟುಕೊಂಡು ಭಾಗವಹಿಸುವಂತೆ ಇಲ್ಲೂ ಭಾಗಿಯಾದರೆ ತಪ್ಪೇನಿಲ್ಲ. ಆದ್ರೆ ಅಲ್ಲಿ ಕುಂಭಮೇಳದಲ್ಲಿ ಅಲ್ಲಿನ ಪೂಜಾ ವ್ಯವಸ್ಥೆ ಬದಲಿಗೆ, ಆ ಪೂಜೆ ಮಾಡುವವರಿಗೆ ಗೌರವ ಕೊಟ್ಟು ನಂತರ ನಮ್ಮ ಇಷ್ಟಲಿಂಗ ಪೂಜೆ ಮಾಡಿಕೊಂಡು ವಿಭಿನ್ನತೆ ತೋರಿಸಬೇಕು. ಅಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಬಸವತತ್ವದ ಬೀಜ ಬಿತ್ತಬೇಕು. ಅಲ್ಲಿ ಸೇರಿದ ಜನರ ಗಮನವನ್ನು ಆಚಾರ, ವಿಚಾರ, ಕ್ರಿಯೆಯಿಂದ ಲಿಂಗಾಯತರು ವಿಭಿನ್ನ ಎಂದು ಹೇಳಿ ಪ್ರಚಾರದ ಸಾಧನವಾಗಿ ಬಳಸಿಕೊಂಡು ಎಲ್ಲರನ್ನು ನಮ್ಮತ್ತ ಸೆಳೆಯಬೇಕು.
4) ನಿಮ್ಮ ವೈಯಕ್ತಿಕ ಪ್ರತಿಕ್ರಿಯೆ, ನೀವು ಏನು ಮಾಡುತ್ತೀರಿ?
ಆಹ್ವಾನ ಬಂದರೆ ಹೋಗಬೇಕು. ಆದ್ರೆ ಅಲ್ಲಿನ ಅವರ ಪೂಜೆ, ಆಚರಣೆಗೆ ಗೌರವಿಸುತ್ತಲೇ ಮತ್ತು ನಮ್ಮ ಲಿಂಗಪೂಜೆ, ವಿಭೂತಿ ಧಾರಣೆಗೆ ಸೂಕ್ತ ಸ್ಥಳ, ಅವಕಾಶ, ಪ್ರಾತಿನಿಧ್ಯ ಸಿಕ್ಕರೆ ಖಂಡಿತ ಭಾಗಿಯಾಗಬೇಕು.
ಜೇವರ್ಗಿ ತಾಲೂಕು, ಹುಲ್ಲೂರು ಗ್ರಾಮದವರಾದ ಭೀಮನಗೌಡ ಪರಗೊಂಡ ಅವರು ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಾರರು, ವೃತ್ತಿಯಿಂದ ವಕೀಲರು.
ಬಿ.ಪರಗೊಂಡರವರು ಹೇಳಿರುವಂತೆ ರಾಷ್ಟಮಟ್ಟದಲ್ಲಿ ಹೆಚ್ಚು ಹೆಚ್ಚಉ ಇಷ್ಟಲಿಂಗ ಯೋಗದ ಪೂಜಾ ವಿಧಾನಗಳನ್ನ ಬಹಿರಂಗವಾಗಿ ಹಮ್ಮಿಕೊಳ್ಳುವ ಮುಖಾಂತರ ಜಗತ್ತಿಗೆ ಬಸವಣ್ಣನವರು ಮತ್ತು ಅವರ ಧ್ಯೇಯೋದ್ದೇಶಗಳನ್ನ ತಿಳಿಸಲು ಹಾಗು ಅರಿವು ಮೂಡಿಸಲು ಸಹಕಾರಿಯಾಗುವುದು
ಕುಂಭಮೇಳದಲ್ಲಿ ಬಾಗಿಯಾಗದೆ ಪ್ರತ್ಯೇಕವಾಗಿ ಇಷ್ಟಲಿಂಗ ಯೋಗದ ಪೂಜೆಗಳನ್ನ ರಾಷ್ಟ್ರ ಮಟ್ಟದಲ್ಲಿ ಹಮ್ಮಿಕೊಂಡಿರೆ ಉತ್ತಮ
ಮೊದಲು ನಮ್ಮ ಮನೆಯಲ್ಲಿ ನಮ್ಮ ಮಕ್ಕಳು ಮೊಮ್ಮಕ್ಕಳ ಹಣೆಗೆ ವಿಭೂತಿ ಹಚ್ಚೋದಕ್ಕೆ ಹಾಗೂ ಲಿಂಗಪೂಜೆ ಮಾಡಿಕೊಳ್ಳುವುದಕ್ಕೆ ಕಲಿಸಿರಿ. 90% ಶಹರದಲ್ಲಿರುವ ಲಿಂಗಾಯತರಿಗೆ ಹಣೆಗೆ ವಿಭೂತಿ ಮತ್ತು ಲಿಂಗಪೂಜೆ ಅಂದರೇನೇ backwsrd clsss ಅಂತಾರೆ. ಗುಗ್ಗು ಅಂತಾರೆ.
Useles fellows. My words may be harsh. But, it is reality.
ಲಿಂಗ ಪೂಜೆಗೆ ಅವಕಾಶ ಮಾಡಿಕೊಟ್ಟರೆ ಬರುತ್ತೇವೆಂದು ಖಡಕ್ಕಾಗಿ ಹೇಳಬೇಕು……. ಇಲ್ಲ ಅಂದ್ರೆ ಇಲ್ಲ.