ಹಂಪಿ
ವಚನ ಚಳವಳಿ: ಸಮಕಾಲೀನ ಸಂದರ್ಭದ ಜೊತೆ ಮುಖಾಮುಖಿ ವಿಷಯ ಮೇಲಿನ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಗುರುವಾರ ಉದ್ಘಾಟಿಸಿದರು. ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ, ಡಾ.ಎಂ.ಪ್ರಭುಗೌಡ, ಮಲ್ಲಿಕಾರ್ಜುನ ಮೇಟಿ ಇತರರು ಭಾಗವಹಿಸಿದ್ದರು.
ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠವು ವಿಜಯನಗರ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತ “ವಚನ ಚಳವಳಿ ೧೨ನೇ ಶತಮಾನದಲ್ಲಿ ಜನಸಂಸ್ಕೃತಿಯನ್ನು ಕನ್ನಡದಲ್ಲಿ ಅನಾವರಣಗೊಳಿಸಿದ ಬಹುದೊಡ್ಡ ಸಾಂಸ್ಕೃತಿಕ ಚಳವಳಿ” ಎಂದು ಪರಮಶಿವಮೂರ್ತಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಕ್ರಿ.ಪೂ.೬ನೇ ಶತಮಾನದ ಬುದ್ಧ ಪ್ರತಿಪಾದನೆ ಮಾಡಿದ ಆಶಯಗಳು, ೧೨ನೇ ಶತಮಾನದಲ್ಲಿ ಬಸವ ಹಾಗೂ ಬಸವಾದಿ ಶರಣ ಶರಣೆಯರು ಪ್ರತಿಪಾದನೆ ಮಾಡಿದ ಆಶಯಗಳೇ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲ ಆಶಯಗಳೇ ಆಗಿವೆ ಎಂದರು.
ವಚನ ಚಳವಳಿ, ವಚನ ಸಾಹಿತ್ಯ, ಅನುಭವ ಮಂಟಪದ ಮೂಲಕ ಸಂಘಟನಾ ರೂಪವೇ ಸ್ವತಂತ್ರ ಭಾರತ ಕರ್ನಾಟಕದಲ್ಲಿ ಸಂಭವಿಸಿದ ದಲಿತ ಸಾಹಿತ್ಯ, ದಲಿತ ಚಳವಳಿ, ದಲಿತ ಸಂಘಟನೆಗಳಾಗಿ ರೂಪುಗೊಂಡವು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಿಜಯನಗರ ಮಹಾವಿದ್ಯಾಲಯದ ಮಲ್ಲಿಕಾರ್ಜುನ ಮೇಟಿ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಪ್ರಾಂಶುಪಾಲರಾದ ಡಾ.ಎಂ.ಪ್ರಭುಗೌಡ, ಸಂಸ್ಥೆಯ ಅಜೀವ ಸದಸ್ಯರಾದ ಡಾ.ಮಹಾಬಲೇಶ್ವರ ರೆಡ್ಡಿ, ಬಸವರಾಜ ಮಾವಿನಹಳ್ಳಿ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದ ವಿವರ
ಗೋಷ್ಠಿ 1
ಬಸವ ಹಾಗೂ ಬಸವಾದಿ ಶರಣರ ಸಿದ್ದಾಂತಗಳು: ಸಂವಿಧಾನ ಆಶಯಗಳೊಂದಿಗೆ ಮುಖಾಮುಖಿ (ಅಕ್ಕಿ ಮಲ್ಲಿಕಾರ್ಜುನ)
ಶರಣೆಯರ ವಚನಗಳು : ಸಮಕಾಲೀನ ಸಂದರ್ಭದ ಮುಖಾಮುಖಿ (ಭೀಮಬಾಯಿ ಸಂ.ಮಾಳಶೆಟ್ಟಿ)
ಗೋಷ್ಠಿ 2
ವಚನ ಚಳವಳಿ:ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ಮಿತೆ ವಿಷಯ ಕುರಿತು (ಬಡಿಗೇರ್ ಮೌನೇಶ)
ವಚನ ಚಳವಳಿ: ೭೦ರ ದಶಕದ ದಲಿತ ಚಳವಳಿಗೆ ಪ್ರೇರಣೆ (ಡಾ.ನರಸಿಂಹರಾಜು ಹೆಚ್.ಸಿ)
ಗೋಷ್ಠಿ 3
ಸಮಕಾಲೀನ ಚಿಂತಕರ ವಾದಗಳು : ವಚನ ಚಳವಳಿ ಹೇಗೆ ಪೂರಕ (ಡಾ.ಮಣಿಕಂಠ ಹಂಗಳ)
ಸಮಕಾಲೀನ ಸಂದರ್ಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಅವಶ್ಯಕತೆ (ಡಾ.ಸಾವಿತ್ರಿ)
ವಿಜಯ ನಗರ ಕಾಲೇಜಿನ ಸುವರ್ಣ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಬಸವರಾಜ ಮೇಟಿ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.
ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜೈ ಬುದ್ದ ಬಸವ ಅಂಬೇಡ್ಕರ 🙏🙏