ಬಸವ ಸಂಸ್ಕೃತಿಯ ಮೇಲೆ ದಾಳಿ ಮಾಡುವ ‘ಗಂಜಿ’ಗಳಿಗೆ ಉಗ್ರ ಪ್ರತಿಕ್ರಿಯೆ: ಎಂ ಬಿ ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

‘ರವಿ ಹಂಜ್ ಮುಖವಾಣಿಯಾದರೆ, ಅವನ ಹಿಂದಿರುವ ಮನುಷ್ಯ ವಿಶ್ವೇಶ್ವರ ಭಟ್ಟ’

ಬೆಂಗಳೂರು

“ಲಿಂಗಾಯತರ ಸೌಮ್ಯ ಪ್ರವೃತ್ತಿಯ ದುರ್ಬಳಕೆಯಾಗುತ್ತಿದೆ. ಇನ್ನು ಮುಂದೆ ಲಿಂಗಾಯತ ಸಂಸ್ಕೃತಿಯ ಮೇಲೆ ದಾಳಿ ಮಾಡುವ ಗಂಜಿಗಳಿಗೆ ಉಗ್ರ ಪ್ರತಿಕ್ರಿಯೆ ನೀಡುತ್ತೇವೆ,” ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಎಚ್ಚರಿಕೆ ನೀಡಿದರು.

ಇಂದು ಬೆಳಗ್ಗೆ ನಗರದ ಬಸವ ಸಮಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರವಿ ಹಂಜ್ ಹಿಂದೆ ವಿಶ್ವೇಶ್ವರ ಭಟ್ಟ

“ಸ್ವಯಂಘೋಷಿತ ಸಂಶೋಧಕ ರವಿ ಹಂಜ್ ಬಸವಣ್ಣನವರನ್ನು ಹೀನಾಯವಾಗಿ ನಿಂದಿಸಿದ್ದಾನೆ.

ಬಸವಣ್ಣನವರ, ಲಿಂಗಾಯತರ ಬಗ್ಗೆ ‘ಕೊಲೆಗಡುಕ’ ‘ಲೂಟಿಕೋರ’ ‘ಲಿಂಗಹತ’ರು ಅನ್ನುವ ಪದಗಳನ್ನು ಬಳಸಿದ್ದಾನೆ.

ಕರ್ನಾಟಕದ ಸಾಂಸ್ಕೃತಿಕ ನಾಯಕರಿಗೆ ಆಗಿರುವ ಅಪಮಾನದ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಚರ್ಚಿಸಿ
ಮುಂದಿನ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು,” ಎಂದು ಎಂ ಬಿ ಪಾಟೀಲ್ ಹೇಳಿದರು.

“ಅವನು ಬರೆದಿದ್ದನ್ನು ಪ್ರಕಾಶನ ಮಾಡುತ್ತಿರುವುದು ವಿಶ್ವೇಶ್ವರ ಭಟ್ಟ. ಹಂಜ್ ಮುಖವಾಣಿಯಾದರೆ, ಅವನ ಹಿಂದಿರುವ ಮನುಷ್ಯ ಭಟ್ಟ, ಎಂದರು.

ಲಿಂಗಾಯತರು ಸೌಮ್ಯವಾದಿಗಳು

“ನಾವು ಸೌಮ್ಯವಾದಿಗಳು, ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಲು ನಮಗೆ ಬಸವಣ್ಣ ಕಲಿಸಿಲ್ಲ. ಅದರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ರವಿ ಹಂಜ್ ಜೊತೆ ಇನ್ನೊಬ್ಬ ಮಠಾದೀಶನ ಕೈಲಿ ಕೆಟ್ಟ ಕೆಟ್ಟದಾಗಿ ಮಾತನಾಡಿಸುತ್ತಿದ್ದಾರೆ. This is an attack.

ಇನ್ನು ಮುಂದೆ ಬಸವಣ್ಣ, ಬಸವಾದಿ ಶರಣರ, ಬಸವ ಧರ್ಮ, ಸಂಸ್ಕೃತಿ, ವಚನಗಳ, ಮೇಲೆ ಈ ರೀತಿ ದಾಳಿ ಮಾಡಿದರೆ ಸಹಿಸುವುದಿಲ್ಲ. ಉಗ್ರವಾಗಿ ಪ್ರತಿಕ್ರಿಯೆ ನೀಡುತ್ತೇವೆ,” ಎಂದು ಹೇಳಿದರು.

“ಇದೇ ದಾಳಿ ಬೇರೆಯವರ ಮೇಲೆ ಮಾಡಿದ್ದರೆ ಇಡೀ ಕರ್ನಾಟಕದಲ್ಲಿ ಸಮಸ್ಯೆಯಾಗುತ್ತಿತ್ತು. ಮಹಾರಾಷ್ಟ್ರದ ಸಾಂಸ್ಕೃತಿಕ ನಾಯಕನ ಮೇಲೆ ದಾಳಿಯಾದರೆ ಅಲ್ಲಿಯವರು ಸುಮ್ಮನಿರುತ್ತಾರೆಯೇ

ನಿಮ್ಮ ಧರ್ಮ ನೀವು ಪ್ರಚಾರ ಮಾಡಿ. ನಿಮ್ಮ ವೇದ, ಉಪನಿಷತ್ತುಗಳನ್ನು ಟೀಕೆ ಮಾಡಲು ನಾವು ಹೋಗುವುದಿಲ್ಲ. ಬಸವ ಧರ್ಮ ನಾವು ಸ್ವತಂತ್ರವಾಗಿ ಪ್ರಚಾರ ಮಾಡುತ್ತೀವಿ,” ಎಂದರು.

ಕ್ಷಮೆ ‘ನಾಟಕ’

ಬಸವಣ್ಣನ ಬೆಳಕು ಪಸರಿಸಿದಂತೆ ಉದ್ದೇಶಪೂರ್ವಕವಾಗಿ ಅವರ ಹೆಸರು ಕೆಡಿಸಲು, ವಚನ ಸಾಹಿತ್ಯ ತಿರುಚುವ ಪ್ರಯತ್ನ ನಡೆಯುತ್ತಿದೆ, ಎಂದು ಆಳಂದ ಶಾಸಕ ಬಿ ಆರ್ ಪಾಟೀಲ್ ಹೇಳಿದರು.

“ಇದರ ಹಿಂದೆ ಯಾರ ಕೈವಾಡ, ಷಡ್ಯಂತ್ರ ಇದೆ ಎಂದು ಪತ್ತೆ ಹಚ್ಚಲು ಅರವಿಂದ ಜತ್ತಿ ಅವರ ಜೊತೆ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ನೀಡಲಾಗುವುದು,” ಎಂದರು.

ರವಿ ಹಂಜ್ ಕ್ಷಮೆ ಕೇಳಿರುವುದನ್ನು ‘ನಾಟಕ’ ಎಂದು ಬಣ್ಣಸಿದರು.

ಸಮಾಜದಲ್ಲಿ ಜಾಗೃತಿ

ಬಸವ ಸಂಸ್ಕೃತಿ ಮಠಗಳ, ಚಿಂತಕರ ಮೇಲೆ ದಾಳಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಈ ದಾಳಿಕೋರರ ಹಿಂದಿನ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ ಪ್ರತಿರೋಧಿಸಬೇಕಾಗಿದೆ, ಎಂದು ಚಿಂತಕ ಜೆ ಎಸ್ ಪಾಟೀಲ್ ಹೇಳಿದರು.

ಸಚಿವ ಶರಣಪ್ರಕಾಶ ಪಾಟೀಲ, ಬಸವ ಸಮಿತಿಯ ಅರವಿಂದ ಜತ್ತಿ, ಮಾಜಿ ಮೇಯರ್ ಗಂಗಾಂಬಿಕಾ, ನೀರಜ್ ಪಾಟೀಲ, ಲಂಡನ್, ಮಾಜಿ ಸಚಿವೆ ರಾಣಿ ಸತೀಶ್, ವೀರಶೈವ ಮಹಾಸಭಾದ ಬಸವರಾಜ ಕುಮಚಗಿ, ಪುಟ್ಟರಾಜು ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಮುಖ್ಯಮಂತ್ರಿಗಳ ಕಾರ್ಯಕ್ರಮವಿದ್ದರಿಂದ ಸಚಿವ ಬಸವರಾಜ ರಾಯರೆಡ್ಡಿ ಸುದ್ದಿಗೋಷ್ಠಿಗೆ ಬರಲಾಗಲಿಲ್ಲ.

ಪುಸ್ತಕ ದಹನ

ಬಸವ ಸಮಿತಿ ಆವರಣದಲ್ಲಿ ಬಸವಾಭಿಮಾನಿಗಳು ‘ಬಸವ ಮಂಟಪ’ ಪುಸ್ತಕವನ್ನು ದಹನ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರವಿ ಹಂಜ್, ವಿಶ್ವವಾಣಿಯ ವಿಶ್ವೇಶ್ವರ ಭಟ್ಟನ ವಾಹಿನಿ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವವಾಣಿ ಸಂದರ್ಶನದ ತುಣುಕನ್ನು ತೋರಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
2 Comments
  • ಬಸವಣ್ಣನವರನ್ನ ಅವಮಾನಿಸಿದರೆ ಕನ್ನಡಿಗರಿಗೆ, ಲಿಂಗಾಯತರಿಗೆ, ಹಿಂದುಳಿದ ಜನಕ್ಕೆ, ಸರ್ಕಾರಕ್ಕೆ ಅವಮಾನ ಅಲ್ಲವೇ?ಬಸವಣ್ಣ ಸಮಾನತೆ ಸಹೊದರತ್ವ ಕಾಯಕ ದಾಸೋಹ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲಿದ.ಜಗತ್ತಿಗೆಅನುಭವಮಂಟಪ ಎಂಬ ಸಂಸತ್ ಕೊಟ್ಟ.ಬಸವಣ್ಣನ ಅವಮಾನ ಮಾಡಿದರ ಸುಮ್ಮನಿರಲು ಸಾಧ್ಯವಿಲ್ಲ.ಎಲ್ಲರೂ ಖಂಡಿಸಿ ಬೇಕು.ಜೈಬಸವ

  • ಅವ್ರಿಗೆ ಸರಿಯಾಗಿ ಬುದ್ಧಿ ಕಲಿಸಿ ಇನ್ನು ಬೇರೆಯವರೂ ಹೀಗೆ ಮಾತಾಡದಂತೆ ಮಾಡಬೇಕು ಜಯ ಬಸವ 👏🏻👏🏻

Leave a Reply

Your email address will not be published. Required fields are marked *