ರವಿ ಹಂಜ್, ಹಿಂದಿರುವ ಶಕ್ತಿಗಳ ವಿರುದ್ಧ ಜಿಲ್ಲೆಗಳಲ್ಲಿ ಪ್ರತಿಭಟಿಸಲು ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು ಸಭೆ: ಹೋರಾಟ ಸಮಿತಿ ರಚನೆ, ಸಾಮಾಜಿಕ ಜಾಲತಾಣ ಬಳಕೆ, ಎಲ್ಲಾ ಸಮುದಾಯಗಳ ಸಹಯೋಗ

ಬೆಂಗಳೂರು

ಸಾಂಸ್ಕೃತಿಕ ನಾಯಕ, ಧರ್ಮಪಿತ ಗುರು ಬಸವಣ್ಣನವರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆಗಳನ್ನು ಹರಿಬಿಟ್ಟಿರುವ ರವಿ ಹಂಜ್ ಹಾಗೂ ಅವನ ಹಿಂದಿರುವ ದುಷ್ಟಶಕ್ತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರಿನ ರಾಜಾಜಿನಗರದ ಬಸವ ಮಂಟಪದಲ್ಲಿ ಮಂಗಳವಾರ ಸಂಜೆ ಬಸವಪರ ಮತ್ತು ಲಿಂಗಾಯತಪರ ಸಂಘಟನೆಗಳ ತುರ್ತು ಸಭೆ ನಡೆಸಲಾಯಿತು.

ರಾಷ್ಟ್ರೀಯ ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಬಳಗ ಹಾಗೂ ಎಲ್ಲಾ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಸಭೆ ಸೇರಿ ಒಮ್ಮತದಿಂದ ಕೆಳಗಿನ ಪ್ರಮುಖ ನಿರ್ಣಯಗಳನ್ನು ಕೈಗೊಂಡರು.

  • ಆನ್‌ಲೈನ್ ಸೈಬರ್ ಕ್ರೈಂ ದೂರು:
    ಈ ಕೂಡಲೇ ರಾಜ್ಯಾದ್ಯಂತ ಬಸವಭಕ್ತರು ಮತ್ತು ಶರಣ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಆನ್‌ಲೈನ್ ಮೂಲಕ ಸೈಬರ್ ಕ್ರೈಂ (Cyber Crime) ವಿಭಾಗದಲ್ಲಿ ಅವನ ವಿರುದ್ಧ ದೂರು ದಾಖಲಿಸುವುದು.
  • ರಾಜ್ಯಾದ್ಯಂತ ಪೊಲೀಸ್ ದೂರು:
    ಪ್ರತಿಯೊಂದು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳ ಪೊಲೀಸ್ ಠಾಣೆಗಳಲ್ಲಿ ಅವನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ದೂರು ನೀಡುವುದು.
  • ತೀವ್ರ ಪ್ರತಿಭಟನೆ ಮತ್ತು ಮನವಿ:
    ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ದೂರು ಸಲ್ಲಿಸುವುದು ಹಾಗೂ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸುವುದು.
  • ಎಲ್ಲಾ ಸಮುದಾಯಗಳನ್ನು ಒಳಗೊಂಡ ಬೃಹತ್ ಹೋರಾಟ:
    ಬಸವಣ್ಣನವರು ಕೇವಲ ಒಂದು ವರ್ಗಕ್ಕೆ ಸೀಮಿತವಾದವರಲ್ಲ, ಇಡೀ ಕರ್ನಾಟಕದ ‘ಸಾಂಸ್ಕೃತಿಕ ನಾಯಕ’ರಾಗಿರುವುದರಿಂದ, ಅವರ ಮೇಲಿನ ಈ ಹೇಳಿಕೆಯು ಸಮಸ್ತ ಕನ್ನಡ ನಾಡಿನ ಜನತೆಗೆ ಮಾಡಿದ ಅವಮಾನವಾಗಿದೆ. ಆದ್ದರಿಂದ ನಾಡಿನ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಜೊತೆಗೂಡಿ ಈ ಹೋರಾಟವನ್ನು ಬೃಹತ್ ಮಟ್ಟದಲ್ಲಿ ರೂಪಿಸುವುದು.
  • ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಅಭಿಯಾನ:
    ನಾಡಿನ ಪ್ರಮುಖ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ವಿವಿಧ ಮಠಾಧೀಶರು ಮತ್ತು ಸ್ವಾಮೀಜಿಗಳಿಂದ ಈ ಹೇಳಿಕೆಯನ್ನು ಖಂಡಿಸುವ ವಿಡಿಯೋ ಸಂದೇಶಗಳನ್ನು (Video Bytes) ಪಡೆದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಬಿಡುಗಡೆ ಮಾಡುವುದು.
  • ಹೋರಾಟ ಸಮಿತಿ ಮತ್ತು ಕಾರ್ಯಪಡೆ ರಚನೆ:
    ಮುಂದಿನ ದಿನಗಳಲ್ಲಿ ಹೋರಾಟವನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಒಂದು ‘ಹೋರಾಟ ಸಮಿತಿ’ಯನ್ನು ರಚಿಸುವುದು. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ತಮ್ಮ ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗುವ ಬದ್ಧತೆಯುಳ್ಳ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವುದು. ಎಂದು

ಸಭೆಯಲ್ಲಿ ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್. ಲಿಂಗಾಯತ, ಪಿನಾಕಪಾಣಿ ವಚನ ಜ್ಯೋತಿ ಬಳಗ, ಶಿವಕುಮಾರ, ಪ್ರಭುಲಿಂಗ ಮಹಾಗಾಂವ್ಕರ್ ಜಾಗತಿಕ ಲಿಂಗಾಯತ ಮಹಾಸಭಾ, ಚಂದ್ರಶೇಖರ್ ಟಿ.ಎಂ. ಸಿದ್ದಗಂಗಾ ಚಾರಿಟಬಲ್ ಟ್ರಸ್ಟ್, ಜಗದೀಶ ಒಕ್ಕಲಿಗರ ಸಂಘ ಹಾಗೂ ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷರಾದ ಜಗದೀಶಕುಮಾರ, ಶ್ರೀಶೈಲ್ ಜಿ. ಮಸೂತೆ ಲಿಂಗಾಯತಧರ್ಮ ಅಧ್ಯಯನ ಕೇಂದ್ರ, ವಿಶ್ವಗುರು ಫೌಂಡೇಶನ್ ನ ಓಂಕಾರ ಚೊಂಡಿ ಮತ್ತಿತರ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
6 Comments
  • ಹೋರಾಟ ಸಮಿತಿಯಲ್ಲಿ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳಿರಲಿ. ಒಂದು ಕಾರ್ಯಕ್ರಮವಿರಲಿ, ಪ್ರತ್ಯೇಕವಾಗಿ ಮಾಡುವುದು ಬೇಡ

  • ಯಾರು ಯಾವ ಧರ್ಮವನ್ನಾದರೂ ಅನುಸರಿಸಿಕೊಳ್ಳಲಿ ಆದರೆ ಬಸವಣ್ಣನವರು ಮತ್ತು ಬಸವಾದಿ ಶರಣರ ಬಗ್ಗೆ ಸೂಕ್ತ ಅಧ್ಯಯನವಿಲ್ಲದೆ ಅವಹೇಳನಕಾರಿಯಾಗಿ ಮಾತನಾಡಿದರೆ ಬರವಣಿಗೆ ಮಾಡಿದರೆ ಅಂತಹವರ ಬಗ್ಗೆ ಹೋರಾಟ ಮಾಡಲೇಬೇಕು ಈಗಲೂ ಸಹ ಆತ ಬರೆದಿರುವ ಅಸಂಬದ್ಧ ಪುಸ್ತಕ ನಿಷೇಧವಾಗಬೇಕು ಅಲ್ಲಿಯವರೆಗೆ ವಿರಮಿಸಬಾರದು

  • ಒಳ್ಳೆಯ ವಿಚಾರ ಒಳ್ಳೆಯ ನಿರ್ಧಾರ ಜೈಬಸವ

  • ಹೋರಾಟ ನಮ್ಮ ಅಸ್ತಿತ್ವ ಉಳಿಸಿ ಲಿಂಗಾಯತ ಧರ್ಮ ರಕ್ಷಾ ದಳ ಶಿದ್ಧ ಗೊಳಿಸಿ ತಕ್ಸನ್ ದ್ರೋಹಿಗೆ ಶಿಕ್ಷೆ ಕೊಡಿ 👍🏻ಜಯ ಬಸವ 👏🏻👏🏻

  • ಇಡಿ ರಾಜ್ಯ ತುಂಬ ಒಂದೆ ದಿನ ಹೊರಾಟ ಮಾಡಬೇಕು ಆವಾಗ ಸರ್ಕಾರ ಕಣ್ಣು ತೆರೆದು ನೊಡುತ್ತೆ ಆಯಾ ಜಿಲ್ಲಾ ತಾಲುಕಾಗಳಲ್ಲಿ ಅವನ ಮೇಲೆ FIR ಆಗುವ ಹಾಗೆ ಮಾಡಬೇಕು

Leave a Reply

Your email address will not be published. Required fields are marked *