ಇಂತವರು ನಮ್ಮ ಸಮಾಜದಲ್ಲಿರುವುದು ದುರಂತ: ಎಂ ಬಿ ಪಾಟೀಲ್
ಬೆಂಗಳೂರು
“ಬಸವ ನಿಂದನೆ ಮಾಡಿರುವ ರವಿ ಹಂಜಿನ ‘ಬಸವ ಮಂಟಪ’ ಪುಸ್ತಕದ ಬಿಡುಗಡೆಗೆ ಹೋಗಿ ಬೆಂಬಲ ನೀಡಿದ ಶಂಕರ ಬಿದರಿ ಹಾಗೂ ಮನು ಬಳಿಗಾರ್ 21ನೇ ಶತಮಾನದ ಕೊಂಡಿ ಮಂಚಣ್ಣಗಳು,” ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
“ನಿವೃತ ಡಿಜಿಪಿ ಶಂಕರ ಬಿದರಿ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ. ಇವರು ವಿಶ್ವವಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಪ್ಪಾಳೆ ಹೊಡೀತಾರೆ, ಭಾಷಣ ಮಾಡ್ತಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮನು ಬಳಿಗಾರ್ ಅವರ ಪ್ರಕಾರ ರವಿ ಹಂಜ್ ಸಾಂಸ್ಕೃತಿಕ ರಾಯಭಾರಿಯಂತೆ, ಅವನಿಗೆ ನೋಬಲ್ ಬಹುಮಾನ ಕೊಡಬೇಕಂತೆ. 21ನೇ ಶತಮಾನದ ಕೊಂಡಿ ಮಂಚಣ್ಣಗಳು ಇವರಿಬ್ಬರು,” ಎಂದು ಪಾಟೀಲ್ ಆಕ್ರೋಶ ವ್ಯಕ್ತ ಪಡಿಸಿದರು.
“ರವಿ ಹಂಜ್ ವಿಡಿಯೋ ಸಂದರ್ಶನದ ಎರಡು ದಿನದ ನಂತರ ಇವರಿಬ್ಬರು ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಇಂತವರು ನಮ್ಮ ಸಮಾಜದಲ್ಲಿರುವುದು ದುರಂತ,” ಎಂದರು.
ಬಸವಣ್ಣ ಲಿಂಗಾಯತರ ಐಡೆಂಟಿಟಿ, ತಾಯಿ, ತಂದೆ ಇದ್ದಂತೆ. ನಮ್ಮಲ್ಲಿ ಏನೇ ಬಿನ್ನಾಭಿಪ್ರಾಯ ಇದ್ದರೂ ಬಸವಣ್ಣನವರ ವಿಷಯದಲ್ಲಿ ಲಿಂಗಾಯತರು, ವೀರಶೈವರು, ಒಂದೇ. No compromise, ಎಂದರು.
ವೀರಶೈವ ಮಹಾಸಭಾದ ಮುಖ್ಯಸ್ಥರೇ ರವಿ ಹಂಜ್ ಕಾರ್ಯಕ್ರಮಕ್ಕೆ ಹೋದರು, ಅದಕ್ಕೇನು ಮಾಡುತ್ತೀರಿ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು.

“ನಾನು ಅವರನ್ನು ಕೊಂಡಿ ಮಂಚಣ್ಣ ಎಂದು ಆಗಲೇ ಖಂಡಿಸಿದ್ದೇನೆ. ಇನ್ನು ಆ ವಿಷಯ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷರಿಗೆ, ಇತರ ಪದಾಧಿಕಾರಿಗಳು ಬಿಟ್ಟಿದ್ದು, ಅವರು ನಿರ್ಧಾರ ತೆಗೆದುಕೊಳ್ಳಬೇಕು, ಎಂದು ಪಾಟೀಲ್ ಹೇಳಿದರು.

ಹೌದು ಬಸವಧರ್ಮ ವಿಚಾರ ಬಂದಾಗ ನಾವೆಲ್ಲರೂ ಲಿಂಗಾಯತರು ಮತ್ತು ವೀರಶೈವರು ಒಂದಾಗಿ ಪ್ರತಿಭಟಸಲೇಬೇಕು.
🙏🙏🙏👌👏👍💐
ಮನು ಬಳಿಗಾರ್ ಮಾಜಿ ಕಸಾಪ ಅಧ್ಯಕ್ಷರು, ಅದೇನು ತಲೆ ಕೆಟ್ಟು ಹೋಗಿ ಈ ಹಂಜನ ಪುಸ್ತಕ ಬಿಡುಗಡೆಗೆ ಹೋಗಿ ಅವನನ್ನು ಹೊಗಳಿದ್ದಾರೆ, ತಲೇಲಿ ಅದೇನು ತುಂಬಿಕೊoಡಿದೆಯೋ, ಇಂತಹವರನ್ನೆಲ್ಲ ಲಿಂಗಾಯತ ಸಮಾಜ ದವರು ತಲೆ ಮೇಲೆ ಇಟ್ಟು ಪ್ರಚಾರ ಮಾಡಿದ್ದು ದುರಂತ, ಆ ಹಂಜ್ ಜೈಲಿಗೆ ಹೋಗದಿದ್ದರೆ ಮುಖಕ್ಕೆ ಮಸಿ ಮತ್ತು ಚಪ್ಪಲಿ ಏಟು ಬೀಳುವದು ಗ್ಯಾರಂಟಿ
ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ವಾಕ್ಯಕ್ಕೆ ಎಂ ಬಿ ಪಾಟೀಲ್ ಒಬ್ಬರೇ ( ರಾಜಕಾರಣದಲ್ಲಿ ) ದೃಸ್ಟಾಂತ ..ಇವರೇ ಲಿಂಗಾಯಕ್ಕೊಂದು ಶಕ್ತಿ. ಈ ಮೀಟರ್ ಪ್ರತಿಯೊಬ್ಬ ಲಿಂಗಾಯತ ರಾಜಕಾರಣಿಗಳಿಗೆ ಬರಬೇಕು