ಬೆಂಗಳೂರು
ಇಂದಿನ ಕಾರ್ಯಕ್ರಮದ ನಂತರ ಮತ್ತೆ ಯಾರೂ ವಚನ ದರ್ಶನದಂತಹ ಪುಸ್ತಕವನ್ನು ಹೊರ ತರುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಗುರುವಾರ ಹೇಳಿದರು.
ನಗರದ ಬಸವ ಸಮಿತಿಯ ತುಂಬಿ ತುಳುಕುತ್ತಿದ್ದ ಸಭಾಂಗಣದಲ್ಲಿ ಟಿ.ಆರ್. ಚಂದ್ರಶೇಖರ್ ಮತ್ತು ಮುಕ್ತ ಕಾಗಲಿ ಸಂಪಾದಿಸಿರುವ ‘ವಚನ ದರ್ಶನ ಮಿಥ್ಯ-ಸತ್ಯ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸಂಘ ಪರಿವಾರದ ‘ವಚನ ದರ್ಶನ’ ಪುಸ್ತಕಕ್ಕೆ ಲಿಂಗಾಯತ ಸಮಾಜದಿಂದ ಬಂದಿರುವ ತೀಕ್ಷ್ಣ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು.