ಆಗ ಪಂಚಾಚಾರ್ಯರಿಗೆ ಬೇಡವಾಗಿದ್ದ ವಿಶ್ವಗುರು ಬಸವಣ್ಣ ಈಗ ಯಾಕೆ ಬೇಕಾಗಿದ್ದಾರೆ
ಶಹಾಪುರ
ಅಣ್ಣ ಲಿಂಗಣ್ಣ ಸತ್ಯಂಪೇಟೆ ಅವರಿಗೆ ಯರಮರಸ ಟೀಚರ್ ಟ್ರೈನಿಂಗಿನಲ್ಲಿ, ಗೆಳೆಯನೊಬ್ಬನ ಸ್ನೇಹ ಬೆಳಯಿತು. ಅವರ ಮನೆಗೆ ಹೋಗಿ ಬರುವುದು ನಿತ್ಯದ ಕಾಯಕ. ಒಂದು ದಿನ ಅವರ ಗೆಳೆಯ ಕರೆದು “ನಾಳೆ ನಮ್ಮ ಮನೆಗೆ ರಂಭಾಪುರಿ ಜಗದ್ಗುರುಗಳು ಬರುವರು, ಪೂಜೆ ಪ್ರಸಾದದ ವ್ಯವಸ್ಥೆಯಿದೆ, ನೀವೆಲ್ಲ ಬರಬೇಕು.”
ನಾಲ್ಕಾರು ಗೆಳೆಯರು ಬೆಳಿಗ್ಗೆ ಧಾವಿಸಿದರು ಆಗಿನ್ನೂ ಜಗದ್ಗುರುಗಳು ಬಂದಿರಲಿಲ್ಲ ಬಸವ ಪ್ರೇಮಿಗಳಾಗಿದ್ದ ಆ ಮನೆಯ ಯಜಮಾನರು, ಮನೆಯಲ್ಲಿ ಬಸವಣ್ಣನ ದೊಡ್ಡ ಫೋಟೊ ಹಾಕಿದರು. ಆದರೆ ಅಣ್ಣ ಲಿಂಗಣ್ಣನವರು ತಂದ ಇನ್ನೊಂದು ಬಸವಣ್ಣನ ಭಾವಚಿತ್ರವನ್ನು, ಮನೆಯ ಮುಖ್ಯದ್ವಾರದ ಮೇಲೆ ಕಟ್ಟಿದರು. ಸ್ವಲ್ಪ ಹೊತ್ತಿನ ನಂತರ ಜಗದ್ಗುರುಗಳ ಆಗಮನವಾಯಿತು, ಹಿಂಬಾಲಕರ ದಂಡು ಜಯಘೋಷ ಮೊಳಗಿಸಿತು. “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ರಂಭಾಪುರಿ ಶ್ರೀಗಳಿಗೆ ಜಯವಾಗಲಿ!” ಎಂದು ಕೂಗಿದರು.
ಕಾರಿನಿಂದಿಳಿದ ಗುರುಗಳ ಪಾದನ್ನು ತೊಳೆದು ಹಾರ ಹಾಕುವಷ್ಟರಲ್ಲಿ, ತಲಬಾಗಿಲ ಮೇಲಿನ ಬಸವಣ್ಣನ ಫೋಟೊ ಕಂಡು ಕೋಪಗೊಂಡರು. “ಏನಿದು ಅವಿವೇಕ? ತಲಬಾಗಲಿಗೆ ಬಸವಣ್ಣನವರ ಫೋಟೊ ಕಟ್ಟಿದ್ದು! ಬಿಚ್ಚಿ ಹಾಕಿ ಕೂಡಲೇ, ಇಲ್ಲವಾದರೆ ಬರುವುದಿಲ್ಲ ಒಳಗೆ” ಎಂದು ಹಠ ಹಿಡಿದು, ಮನೆಯವರೆಲ್ಲ ಮುಜುಗರದಿಂದ ಫೋಟೊ ತೆಗೆದಾಗ, ಒಳಗೆ ಬಂದು ಆಸನದಲ್ಲಿ ಕುಳಿತರು. ಆದರೆ ಅವರ ತಲೆಯ ಮೇಲಿದ್ದ ಚಿತ್ರಗಳ ಬಸವಣ್ಣನವರ ಫೋಟೋ ಗಮನಿಸಿದ ಶಿಷ್ಯನೊಬ್ಬ ಜಗದ್ಗುರುಗಳಿಗೆ ಎಚ್ಚರಿಸಿದಾಗ ಮತ್ತೆ ಜಗದ್ಗುರುಗಳು ಮನೆಯವರ ಮೇಲೆ ಕೊಪಗೊಂಡು “ತಲೆಯ ಮೇಲಿನ ಬಸವಣ್ಣನ ಫೋಟೊ ತೆಗೆಯಿರಿ ತಕ್ಷಣ! ಎಂದರು.
ನಾವು ಜಗದ್ಗುರುಗಳು, ಬಸವ ನಮ್ಮ ಶಿಷ್ಯ, ನಮಗಿಂತ ಮೇಲೆ ಅವನು ಹೇಗಿರಲು ಸಾಧ್ಯ?” ಎಂದು ಕೆರಳಿದರು. ಅಲ್ಲೆ ಗಾಂಧಿ, ಅಂಬೇಡ್ಕರ್, ಇಂದಿರಾಗಾಂದಿ, ನೆಹರು ಅವರ ಫೋಟೋಗಳು ಇದ್ದವು, ಅದನ್ನು ಗಮನಿಸಲಿಲ್ಲ. ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ಮಾಡಿದ ನಂತರ “ನಿಮಗೇನಾದರೂ ಸಂಶಯವಿದ್ದರೆ ಪ್ರಶ್ನೆ ಕೇಳಿ” ಎಂದರು.
ಆಗ ಅಣ್ಣ ಲಿಂಗಣ್ಣನವರು ಗುರುಗಳೆ, ತಾವು ಮನೆಯ ಒಳಗಡೆ ಬರುವಾಗ ತಲಬಾಗಿಲ ಮೇಲಿದ್ದ ಬಸವಣ್ಣನವರ ಫೋಟೋವನ್ನು ತೆಗಿಸಿದ್ದೀರಿ ಯಾಕೆ? ಎಂದು ಕೇಳಿದಾಗ, ನಾವು ಗುರುಗಳು ಬಸವಣ್ಣ ನಮ್ಮ ಶಿಷ್ಯ, ಆತನ ಫೋಟೊ ನಮ್ಮ ತಲೆಯ ಮೇಲೆ ಇರಬೇಕೆ ಅದಕ್ಕಾಗಿ ತೆಗೆಸಿದ್ದೇವೆ.
ಆಗ ಲಿಂಗಣ್ಣನವರು ಗುರುಗಳೆ ನಿಮ್ಮ ತಲೆಯ ಮೇಲೆ ಗಾಂಧಿ, ಅಂಬೇಡ್ಕರ್, ನೆಹರು, ಮತ್ತೊಂದು ಮಗ್ಗಲಿಗೆ ನಟ ನಟಿಯರ ಚಿತ್ರಗಳು ಇದ್ದವು, ಅವರ ಚಿತ್ರ ಬಿಚ್ಚದೆ ಬರಿ ಬಸವಣ್ಣನ ಚಿತ್ರ ತೆಗೆದದ್ದೇಕೆ, ಬಸವಣ್ಣ ಬೇಡವೆಂದರೆ ಇವರೆಲ್ಲ ನಿಮಗೇನು ಆಗಬೇಕು, ಗುರುಗಳಾಗಬೇಕೆ? ಎಂದು ಕೇಳಿದಾಗ ಕೆಂಡಾ ಮಂಡಲವಾದ ಜಗದ್ಗುರುಗಳು “ಅವಿವೇಕಿಗಳೆ ನಮಗೆ ಪ್ರಶ್ನೆ ಮಾಡುತ್ತೀರಾ! ಕಣ್ಣು ತೆರೆದರೆ ಸುಟ್ಟು ಹೋಗುವಿರಿ, ಶಾಪ ಕೊಟ್ಟರೆ ನಾಶವಾಗುತ್ತಿರಿ! ಹೀಗೆಲ್ಲ ಹಾರಾಡಿ ಕೊನೆಗೆ ಉತ್ತರ ಕೊಡದೆ ದಕ್ಷಿಣೆ ಪಡೆದು ಹೋದರು”. ಶಾಪವ ಕೊಡಲಿಲ್ಲ, ವರವಂತು ಮೊದಲೇ ಇರಲಿಲ್ಲ, ಇಂತಹ ಗುರುಗಳ ಮಾತಿಗೆ ಮರುಳಾಗುವ ನಾವು ಎಂತಾ ಮರುಳುಗಳು! ನೀವೇ ವಿಚಾರ ಮಾಡಿ ತಿಳಿಯಿರಿ.
ಅಂದು ಬಸವಣ್ಣನವರ ಭಾವಚಿತ್ರವನ್ನು ತೆಗೆಯಿಸಿ ಮನೆಯ ಒಳಗೆ ಹೋದ ಜಗದ್ಗುರುಗಳ ಪರಂಪರೆಯ ಇಂದಿನ ಜಗದ್ಗುರುಗಳು ಬಸವ ಜಯಂತಿಯ ಸಂದರ್ಭದಲ್ಲಿ ತಮ್ಮ ಗುರುಗಳಾದ ರೇಣುಕಾಚಾರ್ಯರ ಫೋಟೋ ಇಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬದಲಾದ ನಿಲುವಿಗೆ ಕಾರಣವೇನು, ಈಗ ಇವರು ಬಸವಣ್ಣನವರ ಸಮಾನತೆಯನ್ನು ಒಪ್ಪಿಕೊಂಡಿದ್ದಾರೆಂದು ತಿಳಿಯಬಹುದೇ!
ಬಸವಣ್ಣವರ ವಿಚಾರ ಮತ್ತು ಪಂಚಾಚಾರ್ಯರ ವಿಚಾರ ಅದು ಎಣ್ಣೆ ನೀರಿನ ಸಂಬಂಧ ವಿದ್ದಂತೆ ಎಂದು ಲಿಂಗೈಕ್ಯ ತೋಂಟದಾರ್ಯ ಜಗದ್ಗುರು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಮಾತನ್ನು ಲಿಂಗಾಯಿತರಾದ ನಾವುಗಳು ಅರ್ಥಮಾಡಿಕೊಳ್ಳ ಬೇಕಾಗಿದೆ.
ಒಂದು ದಿನ ಬಂದೆ ಬರುತ್ತೆ ಬಸವಣ್ಣನವರೆ ನಮ್ಮ ಗುರು ಅಂತ ಹೇಳುವ ಕಾಲ ಬಂದೆ ಬರುತ್ತೆ ಏಕೆಂದರೆ ಇವರ ಹತ್ತಿರ ನಾಲ್ಕು ಶಿಷ್ಯೆಂದಿರು ಇರಲ್ಲ
ಭ್ರಮೆಯಲ್ಲಿ ಭದುಕಬೇಡಿ
ಮೊದಲು ಕರ್ನಾಟಕ ದಲ್ಲಿರುವ ಲಿಂಗಾಯತ ವಿರೋಧಿ ಮಠಗಳನ್ನು ನಾಶ ಮಾಡಿ .
ಜಾತಿ ಪ್ರಮಾಣ ಪತ್ರದಲ್ಲಿ ಕೇವಲ ಲಿಂಗಾಯತ ಪದ ಬರುವಂತೆ ಮಾಡಿ
ಈ ಕಾರಣಗಳಿಂದಲೇ ಜ್ಞಾನಿಗಳು ಈ ಭ್ರಷ್ಟ ಸಮಾಜವನ್ನು ತಿದ್ದುವ ಯಾವ ಕೆಲಸಕ್ಕೂ ಕೈ ಹಾಕುವುದಿಲ್ಲ.
ಎಲ್ಲಾ ಮಹಾನುಭಾವಿಗಳು ತಮ್ಮನ್ನು ತಿದ್ದಿಕೊಂಡು, ಮೌನದಿಂದ ಇರುತ್ತಾರೆ.
ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲ.
“ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ” ಎಂದು ವಿಶ್ವಕ್ಕೆ ಸಾರಿ ಜಗತ್ತಿನ ಜನರ ಅಂತರಂಗ ಬಹಿರಂಗದಲ್ಲಿ ದಿವ್ಯಜ್ಯೋತಿ ಬೆಳಗಿಸಿ ಸಮಸಮಾಜ ಕಟ್ಟಿ ಜಗಜ್ಯೋತಿಬಸವಣ್ಣನವರ ಸಮನಾದ ಮಾನವತಾವಾದಿ ಯಾರೂ ಇಲ್ಲ. ಅವರ ಭಾವಚಿತ್ರ ತೆಗೆದು ಹಾಕಿದವರ ಸಣ್ಣತನ ತಿಳಿಸುತ್ತದೆ ಇಂತಹ ಸಣ್ಳ ಮನಸ್ಸಿನ ಗುರುಗಳು ಸಮಾಜಕ್ಕೆ ಏನು ತಾನೆ ಕೊಡಬಲ್ಲರು? ಅಂತವರು ಜಗದ್ಗುರುಗಳಾಗಲು ಅರ್ಹರೇ ಸರಿ . ಕಾಲವೇ ಉತ್ತರಿಸುತ್ತದೆ.
ಬಸವಣ್ಣ ವೃಷಭ ನಂದಿಯ ಅನುಗ್ರಹ ದಿಂದ ಜನಿಸಿದ ವಿಷಯ ಪುರಾಣಗಳಲ್ಲಿ ಬಂದಿದೆ, ಅವರ ತಂದೆ ತಾಯಿಯರಿಗೆ ಆ ವ್ರತವನ್ನು ಮಾಡಲು ಹೇಳಿದವರು ಸಂಗಮೇಶ್ವರರು, ಹುಟ್ಟಿದ ಹೆಸರು ಆವರ ಗೋತ್ರದ ಋಷಿ ಹೆಸರಾದ ಕಶ್ಯಪಯ್ಯ ಕಸಪಯ್ಯನೆಂದು ಕರೆದಾಗ ಅಳತಿದ್ದ ಮಗುವಿಗೆ ಗುರು ಸಲಹೆ ಯಂತೆ ನಂದಿ ಬಸವಣ್ಣ,
ಪಂಚಾಚಾರ್ಯರ ಶಿವತತ್ವದ ವೀರಭದ್ರ ನಂದಿನಾಥ ಭೃಂಗಿನಾಥ ವೃಷಭನಾಥರ ಪಂಚ ಕಲಶಗಳಲ್ಲಿ ನಂದಿ ಕಲಶವೂ ಒಂದು, ಆದರಿಂದ ನಂದಿಯ ಅವತಾರವೆಂದು ಭಾವಿಸಿಯೇ ಪಂಚಾಚಾರ್ಯರು ಗೌರವ ಕೊಟ್ಟಿದ್ದು,, ಅನಾದಿ ವೀರಶೈವ ಸಂಗ್ರಹ ದಲ್ಲಿ ಈ ವಿಷಯ ಬಂದಿದೆ,
ಈ ವಿಷಯವನ್ನು ಓದಿ ಅರಿತವರು ಸುಮ್ಮನೆ ಇರುತ್ತಾರೆ, ಏನೂ ತಿಳಿಯದವರು ಬಸವಣ್ಣ ಬೇರೆ ಪಂಚಾಚಾರ್ಯರು ಬೇರೆ ಎಂದು ಭೇದ ಸಂಸ್ಕೃತಿ ಸಂಪ್ರದಾಯ ಹುಟ್ಟಿಸುತ್ತಾರೆ,
ಬಸವಣ್ಣ ಎತ್ತಲ್ಲ, ನಂದಿಯಲ್ಲ, ಬಸವಣ್ಣ ವಿಶ್ವಗುರು, ಸಾಂಸ್ಕೃತಿಕ ನಾಯಕ , ಲಿಂಗಾಯತ ಬೇರೆ, ವೀರಶೈವ ಬೇರೆ, ಹಾಗೆ ಹೀಗೆ ಹೊಗಳಿ ಕೊಳ್ಳುತ್ತಾರೆ
ಅಂಥವರಿಗೆ ಬಸವಣ್ಣ ಪಂಚಾಚಾರ್ಯರ ಸನಾತನ ವೀರಶೈವ ಧರ್ಮದ ಇತಿಹಾಸಕಿಂತ ಮೊದಲಿಗನಲ್ಲ, ಯಾವುದೂ ಅಲ್ಲ , ಒಬ್ಬ ಶರಣ, ಬಿಜ್ಜಳನ ಮಂತ್ರಿ ಅಷ್ಟೇ ಎನ್ನಬೇಕು, ಇಲ್ಲ ವೇ ಸುಮ್ಮನೆ ಹೊಂದಿಕೊಂಡು ಹೋಗಬೇಕು,
ಹಾಗೆ ಅಂದಿದ್ದಕ್ಕೆ ಸ್ಪಷ್ಟ ಪುರಾವೆ ನಿಮ್ಮಲ್ಲಿ ಇವೆಯೇ?. ಅರ್ಥಾತ್ ಆಗಿನ ಕಾಲದ ಸುದ್ದಿ ಸಮಾಚಾರ ಪತ್ರಿಕೆ. ಯಲ್ಲಿ ಬಂದಿದಿಯ?.
ಮೊದಲು ಬಸವೇಶ್ವರ ಹೇಳಿದ ಸಮಾನತೆಯನ್ನು ಎಲ್ಲಾ ಲಿಂಗಾಯಿತರು ಅಳವಡಿಸಿಕೊಳ್ಳಬೇಕು ಅಂತರ್ಜಾತಿಯ ವಿವಾಹ ಮಾಡಿಕೊಳ್ಳಬೇಕು ತಮ್ಮಲ್ಲಿರುವ ಒಳಪಂಗಡಗಳನ್ನು ತೆಗೆದುಹಾಕಬೇಕು ವಿಶೇಷವಾಗಿ ಪಂಚಾಚಾರ್ಯರ ಅನುವಾಯಿಗಳು ಲಿಂಗಾಯತರ ಜೊತೆ ಸೇರಿದರು ಒಂದೇ ಸೇರಿದೆ ಇದ್ರೂ ಒಂದೇ. ಅವರು ವಿಚಾರವನ್ನು ಬಿಟ್ಟುಬಿಡಿ ಮೊದಲು ಲಿಂಗಾಯತರು ಬಸವ ಪ್ರೇಮಿಗಳು ಬಸವ ಧರ್ಮೀಯರು ಅನ್ನಿಸಿಕೊಂಡಿರತಕ್ಕಂತ ನೀವುಗಳು ಬಸವದಿ ಪರಮತರ ತತ್ವಗಳನ್ನು ನಿಜವಾಗಿಯೂ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೀರಾ ಎಂಬುದನ್ನು ಪರಾಮರ್ಶೆಗೆ ಒಳಪಡಿಸಿ. ಬಸವಣ್ಣನ ಹೆಸರಿ ಹೇಳಿಕೊಂಡು ಸಾಕಷ್ಟು ಮಠಗಳು ವಾಣಿಜ್ಯ ಕರಣಗೊಂಡು ಮಠಗಳ ಆಸ್ತಿಗಾಗಿ ಹೊಡೆದಾಡುವ ಪರಿಸ್ಥಿತಿ ಬಂದಿದ್ದು ಬಸವಣ್ಣ ಹಿಂತಾಮಠಗಳಿಗೆ ದುಡ್ಡು ಗಳಿಸುವ ಒಂದು ರೀತಿಯ ಸಂಪನ್ಮೂಲವಾಗಿದ್ದಾನೆ. ಹಿಂದೊಮ್ಮೆ ಸಾಹಿತಿಗಳಾದ ಬಂಜೆಗೆರೆ ಜಯಪ್ರಕಾಶ್ ಅವರು ಬರೆದ ಪುಸ್ತಕದಲ್ಲಿ ಬಸವಣ್ಣ ದಲಿತ ಜಾತಿಗೆ ಸೇರಿದ್ದಿರಬಹುದು ಎನ್ನುವ ವಿಷಯವನ್ನು ಅರಿತ ಬಸವದಳ, ಬಸವ ಧರ್ಮೀಯರು ಬಸವ ಅನುಯಾಯಿಗಳು ಹಾದಿ ಬೀದಿಯಲ್ಲಿ ರಂಪ ಮಾಡಿ ಪ್ರತಿಭಟನೆ ಮಾಡಿದರು. ಇವರಿಂದ ಬಸವಣ್ಣ ದಲಿತ ಜಾತಿಗೆ ಸೇರಿದವನು ಇರಬಹುದು ಅನ್ನೋದನ್ನು ಸಹಿಸಿಕೊಳ್ಳಲಿಕ್ಕೆ ಆಗಲಿಲ್ಲ, ಇನ್ನು ಈ ಡೋಂಗಿ ಬಸವ ಅಭಿಮಾನಿಗಳು ನಿಜವಾದ ಶರಣರ ಮತ್ತು ಬಸವಣ್ಣನವರ ಜಾತ್ಯಾತೀತ ಸಮಾಜ ನಿರ್ಮಾಣ ಮೇಲು-ಕೀಳು ಇಲ್ಲದ ಸಮಾಜ ನಿರ್ಮಾಣ ಮಾಡುತ್ತಾರೆ ಖಂಡಿತವಾಗಿಯೂ ಇಲ್ಲ. ಹಣೆಯ ಮೇಲೆ ವಿಭೂತಿ ಧರಿಸಿ ಕೇಸರಿ ಟವೆಲ್ ಹಾಕಿಕೊಂಡಿರುವ ಇವರು ನಕಲಿ ಬಸವ ಅಭಿಮಾನಿಗಳು, ಇವರನ್ನು ಮೊದಲು ಕೇಳ್ರಿ, ಬಸವಣ್ಣನವರು ಹೇಳಿದಾಗೆ ತಮ್ಮ ಮಕ್ಕಳನ್ನು ದಲಿತರ ಮನೆಗೆ ಮದುವೆ ಮಾಡಿ ಕೊಡೋ ಎಷ್ಟು ಜನ ಇದ್ದಾರೆ ಅಂತ. ಪಂಚಾಚಾರ್ಯರ ಹಾಗೂ ವೀರಶೈವರನ್ನು ಬಿಟ್ಟುಬಿಡಿ ಅವರು ತಮ್ಮದೇ ಆದ ವೇದ ಆಗಮಗಳನ್ನು ಹಿಡ್ಕೊಂಡು ಹೋಗ್ತಾ ಇದ್ದಾರೆ. ನೀವು ನೋಡಿಕೊಳ್ಳಿ ನೀವು ಹೇಳೋದೊಂದು ಮಾಡೋದೊಂದು. ಇವತ್ತು ಬಸವ ತತ್ವಅನುಸರಿಸುವ ಕರ್ನಾಟಕದ ದೊಡ್ಡ ದೊಡ್ಡ ಮಠ ಗಳು ಯಾವ ದಲಿತರನ್ನ ಮಠಕ್ಕೆಸ್ವಾಮೀಜಿಗಳನ್ನಾಗಿ ಮಾಡಿದ್ದಾರೆ ಎನ್ನುವುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಿ . ಬೇಕಾದರೆ ಜಾತಿಗೊಂದು ಮಠ ನಿರ್ಮಾಣ ಮಾಡಿ ಅವರಿಗೆ ಬೇರೆ ವ್ಯವಸ್ಥೆ ಮಾಡಿಕೊಡುತ್ತಾರೆ ಹೊರತು ತಮ್ಮದೇ ಪೀಠವನ್ನು ಬಿಟ್ಟು ಕೊಡಲಿ ಇವರು ಸಿದ್ದರಿಲ್ಲ ಬಾಯಲ್ಲಿ ಬಸವ ತತ್ವ ಆದರೆ ಮಾಡೋದು ಮಾತ್ರ ನೀವು ಯೋಚನೆ ಮಾಡಿ.
ಶಿವುಕುಮಾರ ಮಠ ಅವರಿಗೆ ನಮಸ್ಕಾರ ತಾವುಗಳು ಸಾಹಿತಿ ಬಂಜಗೆರೆ ಜಯಪ್ರಕಾಶ ಬಸವಣ್ಣ ದಲಿತ ಜಾತಿಗೆ ಸೇರಿದವ ಎಂದು ಹೇಳಿದರು ಅಂದಾಗ ಬಸವ ಅಭಿಮಾನಿಗಳು ರಂಪ ಮಾಡಿದರು ಅಂತಾ ಹೇಳಿದಿರಿ ಅವರು ನಿಜವಾದ ಸಾಹಿತಿ ಆಗಿದ್ದರೆ ದಲಿತರನ್ನು ಮುಖ್ಯವಾಹಿನಿಯಲ್ಲಿ ತಂದರು ಎಂದು ಹೇಳಿದರು ಎಂದರೆ ನಿಜವಾದ ಸಾಹಿತಿ ಅಗುತ್ತಿದ್ದರು ಅದು ಸತ್ಯವೂ ಹೌದು ಅದನ್ನು ಬಿಟ್ಟು ಸುಳ್ಳನ್ನು ಹೇಳಿ ಜನರನ್ನ ರಂಜಿಸುವುದು ಇರಲಿ ಅವರೇ ಪಂಚ ಪೀಠಾಧಿಪತಿಗಳು ದಲಿತವರ್ಗಕ್ಕೆ ಸೇರಿದವರು ಅಂದರೆ ತಾವು ಕುಣಿದು ಕುಪ್ಪಳಿಸಿ ಆನಂದ ಪಡುತ್ತಿರೇನು ?
ಬಸವ ಜಯಂತಿಗೆ ರೇಣುಕಾಚಾರ್ಯನ ಜಯಂತಿಯನ್ನು ಆಚರಿಸಲುವೀರಶೖವ ಮಹಾಸಭೆ ಅಂದಾಗ ಟುಂಮ್ಮೆಂದು ಧಡೀರ ಹೇಳಿಕೆಕೊಟ್ಟ ಇವರಿಗೆ ಹಿಂದಿನ ಘಟನೆಗಳು ಮರೆತುಬಿಟ್ರಾ.