ಶಿವಮೊಗ್ಗ
ನಗರದಲ್ಲಿ ಮೊದಲ ಬಾರಿಗೆ ನಡೆದ ಬೃಹತ್ ಸಾಮೂಹಿಕ ವಚನ ಗಾಯನ ಕಾರ್ಯಕ್ರಮದಲ್ಲಿ
1381 ವೃತ್ತಿಪರ ಮತ್ತು ಹವ್ಯಾಸಿ ಗಾಯಕರು 38 ವಚನಗಳನ್ನು ಹಾಡಿದರು.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ನಡೆದ ಸಾವಿರದ ವಚನ ಕಾರ್ಯಕ್ರಮ ಸಾವಿರಾರು ಜನ ಶೋತೃಗಳನ್ನು ಸೆಳೆಯಿತು. ಕಾರ್ಯಕ್ರಮದಲ್ಲಿ ಸಿ.ಅಶ್ವಥ್ ಅವರು ರಾಗ ಸಂಯೋಜಿಸಿದ್ದ ವಚನಗಳನ್ನು ಹಾಡಲಾಯಿತು. ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಪ್ರತಿ ವಚನದ ಅರ್ಥ ತಿಳಿಸಿದರು.