ಲೈವ್: ಕಲಬುರಗಿಯಲ್ಲಿ ಅಭಿಯಾನದ ಎರಡನೇ ದಿನ

ಬಸವ ಮೀಡಿಯಾ
ಬಸವ ಮೀಡಿಯಾ
21Posts
Auto Updates

ಅಭಿಯಾನದ ಎರಡನೇ ದಿನದ ವರದಿಗಳು

Contents
ಜಾತಿ ಬೇಧವಿಲ್ಲದ ಸಮಾಜ ನಿರ್ಮಾಣ: ಬಿ.ಆರ್. ಪಾಟೀಲಇಷ್ಟಲಿಂಗ ಪೂಜೆಯ ಮಹತ್ವ: ಡಾ. ಗುರುದೇವಿ ಹುಲ್ಲೆಪ್ಪನವರ ಮಠಬಸವಣ್ಣನವರು ಮತ್ತೆ ಬಂದರೆ, ನಾವು ಅವರನ್ನು ಸ್ವೀಕರಿಸುತ್ತೇವೆಯೇ?ಸಾರ್ವಜನಿಕ ಸಮಾವೇಶವೇದಿಕೆ ಕಾರ್ಯಕ್ರಮ ಲೈವ್ ವಿಡಿಯೋಮಳೆ ಬರುತ್ತಿದೆ, ಮಳೆಯಲ್ಲೆ ಯಾತ್ರೆ ಸಾಗಿದೆ …ಪಾದಯಾತ್ರೆಯಲ್ಲಿ ಪೂಜ್ಯರು, ಪ್ರಮುಖರುವಚನ ಹೊತ್ತು ಸಾಗುತ್ತಿರುವ ಶರಣೆಯರುಅಭಿಯಾನ ಪಾದಯಾತ್ರೆ ‘ಸಾಮರಸ್ಯ ನಡಿಗೆ’ಧನ್ಯವಾದ, ಶರಣು ಶಿಣ್ಣೂರ್ಸಂವಾದ ಕಾರ್ಯಕ್ರಮ ಮುಕ್ತಾಯಸಂವಾದ: ದಸರಾ ದರ್ಬಾರ್ ಬಗ್ಗೆ ಭಾಲ್ಕಿ ಶ್ರೀಗಳಿಗೆ ಪ್ರಶ್ನೆಸಂವಾದ: ಲಿಂಗಾಯತ ಧರ್ಮ ಹೋರಾಟಸಂವಾದ: ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸ್ವಾಮೀಜಿಗಳಿಗೂ ಪಾಠಸಂವಾದ: ಜಾತಿವಾದಿಗಳಾಗಿರುವ ಲಿಂಗಾಯತರು‘ಬಸವ ಚಳುವಳಿ ಮನೆಯೊಳಗಿಂದಲೇ ಶುರುವಾಯಿತು’ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ?ಮಕ್ಕಳೊಂದಿಗೆ ಪೂಜ್ಯರ ಸಂವಾದದ ಚಿತ್ರಗಳುಈಗಿನ ಸಮಾಜದಲ್ಲಿ ಕಲ್ಯಾಣವನ್ನು ನೋಡಬಹುದೇ?ಸಂವಾದ ಕಾರ್ಯಕ್ರಮದ ಉದ್ಘಾಟನೆ …ಬಸವ ಸಂಸ್ಕೃತಿ ಅಭಿಯಾನ: ದಿನ 2

1 year agoSeptember 3, 2025 7:19 am

ಜಾತಿ ಬೇಧವಿಲ್ಲದ ಸಮಾಜ ನಿರ್ಮಾಣ: ಬಿ.ಆರ್. ಪಾಟೀಲ

ಆಳಂದ ಶಾಸಕರಾದ ಬಿ.ಆರ್. ಪಾಟೀಲ ಮಾತನಾಡಿ ಬೆಳೆಗಿನ ಮುಕ್ತ ಸಂವಾದ ಕಾರ್ಯಕ್ರಮದ, ಮಕ್ಕಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಶ್ಲಾಘಿಸಿದರು. ಅವರು ಜಾತಿ ಬೇಧವಿಲ್ಲದ ಸಮಾಜ ನಿರ್ಮಾಣದ ಅಗತ್ಯತೆಯನ್ನು ಒತ್ತಿಹೇಳಿ, ಲಿಂಗಧಾರಣೆ ಮಾಡುವಲ್ಲಿ ಜಾತಿಬೇಧ ಇರಬಾರದು ಎಂದು ತಿಳಿಸಿದರು.

ಈ ಧರ್ಮವನ್ನು ವೈಚಾರಿಕ ಹಾಗೂ ಸತ್ವಮಯ ಧರ್ಮವೆಂದು ವರ್ಣಿಸಿದ ಅವರು, ಇದನ್ನು ಸರಿಯಾಗಿ ಧರ್ಮವೆಂದು ಘೋಷಿಸಲು ಪ್ರತಿಯೊಬ್ಬರು ಲಿಂಗಾಯತ ಜಾತಿ ಅಲ್ಲ; ಅದು ಧರ್ಮ ಎನ್ನಬೇಕು. ಇದು ನಮ್ಮ ಮುಂದಿನ ನಡೆಗೆ ಪೂರಕವಾಗಿದೆ ಎಂದರು. “ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಹೊರಬಂದು, ಬಸವಣ್ಣನವರ ತತ್ವಗಳಿಗೆ ಬದ್ಧವಾಗಿರಬೇಕು,” ಎಂದರು.

ಅವರ ಮಾತಿನಲ್ಲಿ ಸ್ವಾಮೀಜಿಗಳು ಕೂಡ ವೈದಿಕ ಆಚರಣೆಗಳಿಂದ ದೂರವಿದ್ದು ಬಸವ ತತ್ವದ ಪ್ರಕಾರ ಬದುಕಬೇಕು ಎಂಬ ಸಲಹೆಯೂ ಸಮ್ಮಿಲಿತವಿತ್ತು. ಮಠಗಳ ವ್ಯವಸ್ಥೆ ಸ್ಥಾವರಕ್ಕೆ ತಿರುಗಿದ್ದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.
ಶರಣು ಶಿಣ್ಣೂರ್

1 year agoSeptember 3, 2025 7:18 am

ಇಷ್ಟಲಿಂಗ ಪೂಜೆಯ ಮಹತ್ವ: ಡಾ. ಗುರುದೇವಿ ಹುಲ್ಲೆಪ್ಪನವರ ಮಠ

ಬೆಳಗಾವಿ ವಿಶ್ರಾಂತ ಪ್ರಾಧ್ಯಾಪಕಿ ಡಾ. ಗುರುದೇವಿ ಹುಲ್ಲೆಪ್ಪನವರ ಮಠ ಅವರು ತಮ್ಮ ಉಪನ್ಯಾಸದಲ್ಲಿ ಶರಣರ ತತ್ತ್ವವನ್ನು ಆಳವಾಗಿ ವಿಶ್ಲೇಷಿಸಿ, ಇಷ್ಟಲಿಂಗ ಪೂಜೆಯ ಮಹತ್ವವನ್ನು ವಿವರಿಸಿದರು. ಅವರು ತಿಳಿಸಿದಂತೆ, ಇಷ್ಟಲಿಂಗ ಬಿಟ್ಟು ಬೇರೆ ದೇವರುಗಳನ್ನು ಪೂಜಿಸುವುದು ಅಮೂಲ್ಯವಾದ ಸಮಯ ಮತ್ತು ಸಂಪತ್ತಿನ ವ್ಯರ್ಥ ವ್ಯಯವಾಗುತ್ತದೆ. ಇಂಥ ಪೂಜೆಯಿಂದ ಮುಕ್ತಿ ಸಿಗಲ್ಲ ಎಂದು ಅವರು ನುಡಿದರು.

ಅವರು ಬಸವಣ್ಣನ ವಚನವನ್ನು ಉಲ್ಲೇಖಿಸಿದರು:
“ಇಷ್ಟಲಿಂಗವೇ ದೈವ, ಇಷ್ಟಲಿಂಗವೇ ಗುರು, ಇಷ್ಟಲಿಂಗವೇ ಶಿವ.”

ಲಿಂಗ ಎಂದರೆ ತನ್ನೊಳಗಿನ ಆತ್ಮತತ್ತ್ವವನ್ನು ತಿಳಿಯುವ ದಾರಿಯಾಗಿದ್ದು, ಅದರ ಪೂಜೆ ಶ್ರದ್ಧೆಯಿಂದ, ಆತ್ಮಪರಿಶುದ್ಧಿಯಿಂದ ಮಾಡಬೇಕು. ಲಿಂಗವನ್ನು ದಿನವೂ, ಸಮಯ ಮೀರಿ ಅಲ್ಲ, ಮನಸ್ಸು ಪರಿಶುದ್ಧವಾಗಿರುವಾಗ ಪೂಜಿಸಬೇಕು ಎಂದು ಅವರು ವಿವರಿಸಿದರು. ಅವರು ಹೇಳಿದರು: “ನಿನ್ನೊಳಗಿನ ಲಿಂಗ ಅರಿವಿಲ್ಲದವನು, ಹೊರಗಿನ ದೇವರ ಬೇಡಿಕೆ ಯಾಕೆ?” ಎಂಬ ವಚನದ ತಾತ್ಪರ್ಯ ಅರ್ಥಮಾಡಿಕೊಳ್ಳಬೇಕು.

ಪೂಜೆಯ ಡಾಂಭಿಕತೆ, ಆಡುಪಾಡುಗಳ ಆಚರಣೆ ಶರಣರ ಧರ್ಮವಲ್ಲ. ನಾವು ನಮ್ಮ ನಡತೆಯನ್ನು ಬದಲಾಯಿಸಿಕೊಂಡಾಗಲೇ ಪೂಜೆಗೆ ಅರ್ಥವಿದೆ. ಶುದ್ಧ-ಅಶುದ್ಧ ಎಂಬ ಮೌಢ್ಯವನ್ನು ತ್ಯಜಿಸಬೇಕು, ಎಂದರು. ಅವರು ಅಕ್ಕ ಮಹಾದೇವಿಯ ವಚನವೊಂದನ್ನು ಉದಾಹರಿಸಿದರು:
“ಸತ್ಯವೇ ಪೂಜೆ, ನಿಜವೇ ನೈವೇದ್ಯ, ಭಕ್ತಿಯೇ ಬಟ್ಟೆ!” ಎಂದು ಶರಣರ ದಾರಿಯನ್ನು ಸರಳತೆ, ಸತ್ಯ, ಹಾಗೂ ಭಾವಪೂರ್ಣ ಆಚರಣೆಯಂತೆ ವಿವರಿಸಿದರು.
ಶರಣು ಶಿಣ್ಣೂರ್

1 year agoSeptember 3, 2025 7:17 am

ಬಸವಣ್ಣನವರು ಮತ್ತೆ ಬಂದರೆ, ನಾವು ಅವರನ್ನು ಸ್ವೀಕರಿಸುತ್ತೇವೆಯೇ?

1 year agoSeptember 3, 2025 7:16 am

ಸಾರ್ವಜನಿಕ ಸಮಾವೇಶ

ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶ ಮಂಗಳವಾರ ಸಂಜೆ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ನಡೆಯಿತು.

1 year agoSeptember 2, 2025 7:01 pm

ವೇದಿಕೆ ಕಾರ್ಯಕ್ರಮ ಲೈವ್ ವಿಡಿಯೋ

1 year agoSeptember 2, 2025 5:24 pm

ಮಳೆ ಬರುತ್ತಿದೆ, ಮಳೆಯಲ್ಲೆ ಯಾತ್ರೆ ಸಾಗಿದೆ …

1 year agoSeptember 2, 2025 5:23 pm

ಪಾದಯಾತ್ರೆಯಲ್ಲಿ ಪೂಜ್ಯರು, ಪ್ರಮುಖರು

ಸಾಣೇಹಳ್ಳಿ ಶ್ರೀಗಳು, ಸಿದ್ಧರಾಮ ಶ್ರೀಗಳು, ಕೋರ್ಣೇಶ್ವರ ಶ್ರೀಗಳು, ಬಾಲ್ಕಿ ಪಟ್ಟದ್ದೇವರು, ಸೊನ್ನದ ಶಿವಾನಂದ ಶ್ರೀಗಳು, ಸುಲಫಲ ಶ್ರೀಗಳು, ಮತ್ತಿತರ ಪೂಜ್ಯರು, ಆಳಂದ ಶಾಸಕರಾದ ಬಿ. ಆರ್. ಪಾಟೀಲ, ಅಭಿಯಾನ ಸಮಿತಿ ಅಧ್ಯಕ್ಷರಾದ ಅರುಣಕುಮಾರ ಎಸ್. ಪಾಟೀಲ, ಬಸವರಾಜ ದೇಶಮುಖ್, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ, ಕಾರ್ಯದರ್ಶಿ ಆರ್. ಜಿ ಶೇಟಗಾರ, ಪದಾಧಿಕಾರಿಗಳು, ಬಸವ ಕೇಂದ್ರ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್ ಅಧ್ಯಕರು, ಪದಾಧಿಕಾರಿಗಳು, ಬಸವಪರ ಸಂಘಟನೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಾರ್ವಜನಿಕರು ಸಾಮರಸ್ಯ ನಡಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

1 year agoSeptember 2, 2025 4:53 pm

ವಚನ ಹೊತ್ತು ಸಾಗುತ್ತಿರುವ ಶರಣೆಯರು

ನೂರಾರು ಶರಣೆಯರು ವಚನಗ್ರಂಥ ತಲೆಮೇಲೆ ಹೊತ್ತು ಸಾಗುತ್ತಿದ್ದಾರೆ. ಡೊಳ್ಳು ಕುಣಿತ, ನಗಾರಿ, ಹಲಗೆ ಜಾನಪದ ಕಲಾಮೇಳಗಳು ಪಾದಯಾತ್ರೆಯ ಆಕರ್ಷಣೆಯನ್ನು ಹೆಚ್ಚಿಸಿವೆ.

1 year agoSeptember 2, 2025 4:51 pm

ಅಭಿಯಾನ ಪಾದಯಾತ್ರೆ ‘ಸಾಮರಸ್ಯ ನಡಿಗೆ’

ಅಭಿಯಾನ ಪಾದಯಾತ್ರೆಗೆ ‘ಸಾಮರಸ್ಯ ನಡಿಗೆ’ ಎಂದು ಕರೆಯಲಾಗಿದೆ. ಸಾಮರಸ್ಯ ನಡಿಗೆ ತಿಮ್ಮಾಪುರ ವೃತ್ತದಿಂದ ಶರಣಬಸಪ್ಪ ಸೆಂಟೆನರಿ ಹಾಲ್ ವರೆಗೆ ನಡೆಯಲಿದೆ.

1 year agoSeptember 2, 2025 2:09 pm

ಧನ್ಯವಾದ, ಶರಣು ಶಿಣ್ಣೂರ್

ಎರಡನೇ ದಿನದ ಅಭಿಯಾನದ ವರದಿಗಳನ್ನು ನಿರಂತರವಾಗಿ ಕಲಿಸುತ್ತಿರುವ ಶರಣು ಶಿಣ್ಣೂರ ಅವರಿಗೆ ಧನ್ಯವಾದಗಳು.

1 year agoSeptember 2, 2025 2:05 pm

ಸಂವಾದ ಕಾರ್ಯಕ್ರಮ ಮುಕ್ತಾಯ

ವಚನ ಮಂಗಲದೊಂದಿಗೆ ಸಂವಾದ ಕಾರ್ಯಕ್ರಮ ಮುಕ್ತಾಯ

1 year agoSeptember 2, 2025 2:03 pm

ಸಂವಾದ: ದಸರಾ ದರ್ಬಾರ್ ಬಗ್ಗೆ ಭಾಲ್ಕಿ ಶ್ರೀಗಳಿಗೆ ಪ್ರಶ್ನೆ

ಬಸವಕಲ್ಯಾಣದಲ್ಲಿ ದಸರಾ ದರ್ಬಾರ್ ಗೆ ಸಹಮತಿ ನೀಡಿದ್ದೀರಾ ಎಂದು ಶಿವಶರಣಪ್ಪ ದೇಗಾಂವ ಕೇಳಿದರು. ಅದಕ್ಕೆ ಭಾಲ್ಕಿ ಶ್ರೀಗಳು ಉತ್ತರಿಸುತ್ತ, ದರ್ಬಾರದಲ್ಲಿ ಬಸವಣ್ಣನವರ ಬಗ್ಗೆ ಅವರು ಅಪಪ್ರಚಾರ ಮಾಡಿದಲ್ಲಿ ನಾವು ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದರು.

1 year agoSeptember 2, 2025 2:04 pm

ಸಂವಾದ: ಲಿಂಗಾಯತ ಧರ್ಮ ಹೋರಾಟ

ಲಿಂಗಾಯತ ಧರ್ಮ ಹೋರಾಟ ಮತ್ತು ಧರ್ಮಮಾನ್ಯತೆ ಬಗ್ಗೆ ಸ್ಪಷ್ಟನೆ ಕೇಳಿದ ಆರ್.ಜಿ. ಶೇಟಕಾರ್ ಅವರಿಗೆ ಸಿದ್ದರಾಮ ಶ್ರೀಗಳು ಉತ್ತರಿಸಿದರು. ಹಿಂದಿನ ರ್ಯಾಲಿಗಳನ್ನು ಉಲ್ಲೇಖಿಸಿ, ಲಿಂಗಾಯತ ಧರ್ಮದ ಶಿಫಾರಸ್ಸಿನ ಹಂತದಲ್ಲಿದೆ. ಸ್ವಲ್ಪ ದಿನಗಳಲ್ಲಿ ಸರ್ಕಾರವು ಮಾನ್ಯತೆ ನೀಡುತ್ತೆ ಎಂದರು.

1 year agoSeptember 2, 2025 2:03 pm

ಸಂವಾದ: ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸ್ವಾಮೀಜಿಗಳಿಗೂ ಪಾಠ

ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಗೋದುತಾಯಿ ಮಹಿಳಾ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ನೀಲಾಂಬಿಕ ಪೊಲೀಸಪಾಟೀಲ ವಿದ್ಯಾರ್ಥಿಗಳ ಸಂವಾದ ಉಲ್ಲೇಖಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಜಾಗೃತಿ ನಮ್ಮಲ್ಲಿಲ್ಲ ಇಂದಿನ ಸಂವಾದದಿಂದ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಸ್ವಾಮೀಜಿಗಳಿಗೂ ಸಹ ಪಾಠವಾಗಿದೆ ಎಂದರು. ಆದ್ದರಿಂದ ಶರಣರ ವಚನಗಳನ್ನು ಅಧ್ಯಯನ ಮಾಡಿ, ಬಸವತತ್ವ ಅರಿತು ಬಾಳಿರಿ ಎಂದರು. ಮಠಗಳಿಂದ ಸಮಾಜಕ್ಕೆ ಬಹಳಷ್ಟು ಕೊಡುಗೆ ಆಗಿದೆ ಎಂದರು.

1 year agoSeptember 2, 2025 2:02 pm

ಸಂವಾದ: ಜಾತಿವಾದಿಗಳಾಗಿರುವ ಲಿಂಗಾಯತರು

ಜಾತಿವಿರೋಧಿ ಬಸವತತ್ವಕ್ಕೆ ವಿರುದ್ಧವಾಗಿ ಇಂದಿನ ಲಿಂಗಾಯತರು ಜಾತಿವಾದಿಗಳಾಗಿದ್ದಾರೆ, ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ, ಚೆನ್ನಬಸವ ಸ್ವಾಮೀಜಿಗಳು ಲಿಂಗಾಯತ ಎಂಬುದು ಜಾತಿ ಅಲ್ಲ, ಅದೊಂದು ಧರ್ಮ. ಇದರ ಬಗ್ಗೆ ಅರಿವಿರದ ಇಂದಿನ ಲಿಂಗಾಯತರಿಗೆ ಬಸವ ಸಂಸ್ಕೃತಿ ಅಭಿಯಾನದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು. ಕ್ರಮೇಣ ಈ ಬಗ್ಗೆ ಸುಧಾರಣೆ ಬರುತ್ತೆ ಎಂದರು.

1 year agoSeptember 2, 2025 1:15 pm

‘ಬಸವ ಚಳುವಳಿ ಮನೆಯೊಳಗಿಂದಲೇ ಶುರುವಾಯಿತು’



1 year agoSeptember 2, 2025 12:54 pm
1 year agoSeptember 2, 2025 12:32 pm

ಮಕ್ಕಳೊಂದಿಗೆ ಪೂಜ್ಯರ ಸಂವಾದದ ಚಿತ್ರಗಳು

1 year agoSeptember 2, 2025 12:23 pm

ಈಗಿನ ಸಮಾಜದಲ್ಲಿ ಕಲ್ಯಾಣವನ್ನು ನೋಡಬಹುದೇ?

ಸಂವಾದದಲ್ಲಿ ಇದು ಒಂದು ಮಗು ಕೇಳಿದ ಪ್ರಶ್ನೆ. ಸಾಣೇಹಳ್ಳಿ ಶ್ರೀಗಳು ಉತ್ತರಿಸಿದರು.

1 year agoSeptember 2, 2025 11:56 am

ಸಂವಾದ ಕಾರ್ಯಕ್ರಮದ ಉದ್ಘಾಟನೆ …

ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನ ಸೆಂಟರ್ ಹಾಲಿನಲ್ಲಿ ಬಸವಧ್ವಜಾರೋಹಣ ನಂತರ ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಜೊತೆ ವಚನ ಸಂವಾದ ಕಾರ್ಯಕ್ರಮ ಶುರುವಾಗಿದೆ.

1 year agoSeptember 2, 2025 11:54 am

ಬಸವ ಸಂಸ್ಕೃತಿ ಅಭಿಯಾನ: ದಿನ 2

ಕಲಬುರಗಿಯಲ್ಲಿ 2ನೇ ದಿನದ ಬಸವ ಸಂಸ್ಕೃತಿ ಅಭಿಯಾನ ಶುರುವಾಗಿದೆ. ಆರಂಭದಲ್ಲಿ ಸಾಣೇಹಳ್ಳಿ ಕಲಾತಂಡದವರಿಂದ ವಚನ ಸಂಗೀತ ಗಾಯನ.

Share This Article
1 Comment
  • ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ ಆಗಬೇಕು ವ್ಯವಸ್ಥಾಪಕರು ಶಂಕರ ಎಮ್ ಮದರಗೈ ಅನುಭವ ಮಂಟಪ ಬಸವಕಲ್ಯಾಣ

Leave a Reply

Your email address will not be published. Required fields are marked *