1904-1940: ಲಿಂಗಾಯತ ಇತಿಹಾಸ ಬದಲಿಸಿದ ಆ ಮೂವತ್ತಾರು ವರ್ಷಗಳು
ಬೆಂಗಳೂರು
ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆಯಾಯಿತು. ಮೊದಲ ಅಧಿವೇಶನ ಧಾರವಾಡದಲ್ಲಿ ನಡೆಯಿತು.
ಕೆಲವು ಮೂಲಗಳು ಮೊದಲ ಅಧಿವೇಶನ 1903ರಲ್ಲಿ ನಡೆಯಿತೆನ್ನುತ್ತವೆ, ಇನ್ನು ಕೆಲವು 1904 ಎನ್ನುತ್ತವೆ.
ಒಂದು ವರ್ಷದ ಈ ವ್ಯತ್ಯಾಸ ನನ್ನ ವಾದಕ್ಕೆ ಮುಖ್ಯವಲ್ಲ. ಮುಖ್ಯವಾದದ್ದು ಅಲ್ಲಿ ಕೈಗೊಂಡ ನಿರ್ಣಯಗಳು.
ಆ ಮೊದಲ ಅಧಿವೇಶನದಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಒಂದು, ವೀರಶೈವರು ವೇದ, ಉಪನಿಷತ್ತು, ಶಾಸ್ತ್ರ, ಪುರಾಣ ಮತ್ತು ಆಗಮಗಳನ್ನು ಒಪ್ಪುತ್ತಾರೆ.
ಎರಡು, ವೀರಶೈವರು ಹಿಂದೂಗಳು.
ಮೂರು, ಲಿಂಗಾಯತ ಮಠಗಳಿಗೆ ಜಂಗಮ ಜಾತಿಯವರನ್ನೇ ಸ್ವಾಮಿಗಳಾಗಿ ನೇಮಿಸಬೇಕು.
ಜೊತೆಗೆ ಆ ಸಭೆ ಇನ್ನೊಂದು ಮಾತನ್ನೂ ದಾಖಲಿಸಿತು. ವೀರಶೈವ ಮತವು ನಿಗಮಾಗಮೋಪನಿಷತ್ ಪ್ರತಿಪಾದಿತ ತತ್ವದಿಂದ ಅನಾದಿ ಸಂಸಿದ್ಧವಾದದ್ದು; ಬಸವೇಶ್ವರರು ಈ ಮತವನ್ನು ಪ್ರಚಾರ ಮಾಡಿದವರೇ ಹೊರತು ಸ್ಥಾಪಕರಲ್ಲ ಎಂದು.
ಜೊತೆಗೆ, ‘ವೀರಶೈವ ಮತವು ನಿಗಮಾಗಮೋಪನಿಷತ್ ಪ್ರತಿಪಾದಿತ ತತ್ವದಿಂದ ಅನಾದಿ ಸಂಸಿದ್ಧವಾದದ್ದು, ಬಸವೇಶ್ವರರು ಈ ಮತವನ್ನು ಪ್ರಚಾರ ಮಾಡಿದವರೇ ಹೊರತು ಸ್ಥಾಪಕರಲ್ಲ,’ ಎಂಬ ಅಭಿಪ್ರಾಯವನ್ನೂ ಆ ಸಭೆ ದಾಖಲಿಸಿತು.
ಬಸವೇಶ್ವರರು ವೀರಶೈವ ಮತವನ್ನು ಪ್ರಚಾರ ಮಾಡಿದವರೇ ಹೊರತು ಸ್ಥಾಪಕರಲ್ಲ
ಈಗ ಈ ನಾಲ್ಕೂ ನಿಲುವುಗಳನ್ನು ಒಟ್ಟಿಗೆ ಇಟ್ಟು ನೋಡಿ.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ಆಗಮದ ಮೂಗ ಕೊಯ್ಯುವೆ ಎಂದವರು ಬಸವಣ್ಣನವರು. ಆದರೆ ಅವರ ಸಮಾಜದ ಪ್ರಮುಖ ಪ್ರಾತಿನಿಧಿಕ ಸಂಸ್ಥೆ ತನ್ನ ಮೊದಲ ಸಭೆಯಲ್ಲೇ ವೇದ ಆಗಮಗಳನ್ನು ಒಪ್ಪಿಕೊಂಡಿತು.
ಜಾತಿಯನ್ನು ನಿರಾಕರಿಸಿದ ಧರ್ಮದ ಸಂಸ್ಥೆಯು ಮಠಾಧಿಪತಿಯ ಸ್ಥಾನಕ್ಕೆ ಜಾತಿಯ ಅರ್ಹತೆಯನ್ನು ವಿಧಿಸಿತು. ಧರ್ಮವನ್ನು ಸ್ಥಾಪಿಸಿದವರನ್ನು ಪ್ರಚಾರಕರ ಸ್ಥಾನಕ್ಕೆ ಇಳಿಸಿತು.
ಇವು ಯಾವುವೂ ನನ್ನ ಆರೋಪಗಳಲ್ಲ, ನಿರ್ಣಯಗಳು.
ಪೂಜ್ಯ ಮಾತೆ ಮಹಾದೇವಿಯವರು ಈ ನಿರ್ಣಯಗಳ ಹಿಂದಿನ ಮನಃಸ್ಥಿತಿಯನ್ನು ಒಂದು ಚಿತ್ರದಲ್ಲಿ ಹಿಡಿದಿಟ್ಟಿದ್ದಾರೆ.
‘ಕತ್ತಲಲ್ಲಿ ಕೈಗೆ ಸಿಕ್ಕಿದ್ದನ್ನು ಹಿಡಿದುಕೊಳ್ಳುವಂತೆ, ಪ್ರವಾಹದಲ್ಲಿ ಕೊಚ್ಚಿಹೋಗುವವನು ಹುಲ್ಲುಕಡ್ಡಿಯನ್ನಾದರೂ ಹಿಡಿಯುವಂತೆ, ಶೂದ್ರತ್ವದ ಪ್ರವಾಹದಿಂದ ತಪ್ಪಿಸಿಕೊಳ್ಳಲು ನಿಗಮಾಗಮಗಳ ಆಸರೆಯನ್ನು ಹಿಡಿಯುವ ಪ್ರಯತ್ನ ಅದಾಗಿತ್ತು,’ ಎಂದು ಅವರು ಹೇಳಿದ್ದರು.
ಈ ವಿವರಣೆ ನನಗೆ ಒಪ್ಪಿಗೆ. ವೀರಶೈವ ಮಹಾಸಭಾ ಮಾಡಿದ್ದು ದ್ರೋಹವಲ್ಲ. ಅದು ತೋರಿಸಿದ್ದು ಗಾಬರಿ.
ಆದರೆ ಗಾಬರಿಯ ಕ್ಷಣದಲ್ಲಿ ಆಸರೆಯೆಂದು ಹಿಡಿದ ಅದೇ ಹುಲ್ಲುಕಡ್ಡಿ, ಮುಂದೆ ಬೇರುಬಿಟ್ಟು ಮರದಂತೆ ಗಟ್ಟಿಯಾಗಿ ನಿಂತರೆ? ಆಗ ಏನು ಮಾಡಬೇಕು? ಅದೇ ಈ ಲೇಖನದ ವಿಷಯ.
ಈ ನಿರ್ಣಯಗಳಾದಾಗ ವಚನ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ
ಒಂದು ಪ್ರಮುಖ ಸಂಗತಿಯನ್ನೂ ಇಲ್ಲಿ ಸೇರಿಸಬೇಕು. ಈ ನಿರ್ಣಯಗಳಾದಾಗ ವಚನ ಸಾಹಿತ್ಯ ಇನ್ನೂ ಬೆಳಕಿಗೆ ಬಂದಿರಲಿಲ್ಲ. ಹಳಕಟ್ಟಿಯವರ ಸಂಶೋಧನೆ ಆಮೇಲೆ ಬಂದದ್ದು. ಅಂದರೆ 10904ರಲ್ಲಿ ನಿರ್ಣಯ ಕೈಗೊಂಡವರ ಬಳಿ, ಇಂದು ನಮ್ಮ ಬಳಿ ಇರುವ ಆಧಾರ ಇರಲಿಲ್ಲ. ಇದನ್ನು ಒಪ್ಪದೆ ಅವರನ್ನು ದೂಷಿಸುವುದು ಅನ್ಯಾಯ.
ಅದೇ ಕಾರಣಕ್ಕಾಗಿ, ಇಂದು ಆಧಾರ ದೊರೆತ ಮೇಲೂ ಆ ನಿರ್ಣಯಗಳನ್ನು ಸಮರ್ಥಿಸುವುದು ಕೂಡ ಅನ್ಯಾಯವೇ.
ಪರಳಿ ವೈಜನಾಥದ ವ್ಯಾಜ್ಯ

ಈ ಪ್ರಸಂಗವೇ ಇಡೀ ಚರ್ಚೆಯ ಕೇಂದ್ರಬಿಂದು. ಇದನ್ನು ವಿವರವಾಗಿ ನೋಡೋಣ. ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದ ಪರಳಿ ವೈಜನಾಥ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದವರು ಬ್ರಾಹ್ಮಣರು. ಆ ಸ್ಥಾನಗಳಿಗೆ ಲಿಂಗಾಯತರನ್ನು ನೇಮಿಸಬೇಕೆಂಬ ವಿವಾದ ನಿಜಾಮನ ಹೈಕೋರ್ಟಿನ ಮಟ್ಟವನ್ನು ತಲುಪಿತು.
ಆ ಪ್ರಕರಣದಲ್ಲಿ ನಮ್ಮ ಕಡೆಯಿಂದ ಮಂಡಿಸಲಾದ ಕೇಂದ್ರ ವಾದ ಯಾವುದು ಎಂಬುದನ್ನು ಈಗ ನೋಡೋಣ: “ಲಿಂಗಾಯತರು ಲಿಂಗೀ ಬ್ರಾಹ್ಮಣರು. ಆದ್ದರಿಂದ ವೈಜನಾಥನ ಪೂಜೆ ಮಾಡುವ ಅಧಿಕಾರವನ್ನು ಲಿಂಗಾಯತರಿಗೆ ಕೊಡಬೇಕು.”
ಈ ವ್ಯಾಜ್ಯದ ಹಿಂದಿನ ನಾಯಕರಲ್ಲಿ ಹಾನಗಲ್ ಕುಮಾರಸ್ವಾಮಿಗಳೂ ಒಬ್ಬರು.
ಅವರ ಕೋರಿಕೆಯಂತೆ, ಇಂದೋರಿನಲ್ಲಿ ಸಂಸ್ಕೃತ ಶಾಲೆಯ ಪ್ರಾಚಾರ್ಯರಾಗಿದ್ದ ವಿರೂಪಾಕ್ಷ ಒಡೆಯರ್ ಅವರು ತಜ್ಞ ಸಾಕ್ಷಿಯಾಗಿ ಬಂದರು. ಲಿಂಗಾಯತರು ಲಿಂಗೀ ಬ್ರಾಹ್ಮಣರೆಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ವ್ಯಾಜ್ಯವನ್ನು ಗೆದ್ದೆವು. ಪೂಜಾರಿಕೆ ದೊರೆಯಿತು.
ಆ ಕಾಲದಲ್ಲಿ ಈ ವ್ಯಾಜ್ಯ ಅನಿವಾರ್ಯವಾಗಿತ್ತು, ಶೂದ್ರ ಎಂಬ ಕಳಂಕದಿಂದ ಹೊರಬರಲು ಇದು ಬೇಕಿತ್ತು ಎಂದು ಹೇಳಬಹುದು. ಸರಿ. ಆದರೆ ಒಂದು ಲೆಕ್ಕ ಹಾಕೋಣ.
ಆ ಗೆಲುವಿನಿಂದ ನಮಗೆ ದೊರೆತದ್ದು ಒಂದು ದೇವಸ್ಥಾನದ ಪೂಜಾ ಹಕ್ಕು. ಆ ಗೆಲುವಿಗಾಗಿ ನಾವು ತೆತ್ತದ್ದೇನು? ನ್ಯಾಯಾಲಯದ ದಾಖಲೆಯಲ್ಲಿ, ಶಾಶ್ವತವಾಗಿ, ನಾವು ಬ್ರಾಹ್ಮಣರೆಂಬ ಹೇಳಿಕೆ. ಅಂದರೆ ಬ್ರಾಹ್ಮಣ್ಯವೇ ಶ್ರೇಷ್ಠ ಎಂಬ ಮೂಲ ತತ್ವವನ್ನು ನಾವು ಒಪ್ಪಿಕೊಂಡೆವು. ಆ ಏಣಿ ಸರಿಯೆಂದು ಒಪ್ಪಿ, ಅದರಲ್ಲಿ ನಮಗೆ ಮೇಲಿನ ಮೆಟ್ಟಿಲನ್ನು ಕೇಳಿದೆವು.
ಎಲ್ಲಿಯ ಬಸವಣ್ಣ, ಎಲ್ಲಿಯ ಲಿಂಗೀ ಬ್ರಾಹ್ಮಣರು ಎಂದು ಡಾ. ಜಾಮದಾರರು ಈ ಪ್ರಸಂಗದ ಕುರಿತು ಬರೆಯುತ್ತಾರೆ:
ದೇವರು ಮತ್ತು ಭಕ್ತನ ನಡುವೆ ದಲ್ಲಾಳಿ ಬೇಡವೆಂದು ಹೇಳಿ ಪ್ರತಿಯೊಬ್ಬರ ಕೊರಳಿಗೂ ಇಷ್ಟಲಿಂಗವನ್ನು ಕಟ್ಟಿದ ಧರ್ಮವು, ಗುಡಿಯ ದಲ್ಲಾಳಿಯ ಹುದ್ದೆಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಏರಿತು.
ಈ ವಾಕ್ಯ ಕಟುವಾಗಿದೆ ಎಂದು ಯಾರಾದರೂ ಹೇಳಬಹುದು. ಆದರೆ ಇದರಲ್ಲಿ ಸುಳ್ಳು ಯಾವುದೆಂದು ಮಾತ್ರ ಇನ್ನೂ ಯಾರೂ ತೋರಿಸಿಲ್ಲ.

ನಿಮ್ಮ ಹಿರಿಯರು ಬಹಳ ತಪ್ಪು ಮಾಡಿದ್ದಾರೆ.ಈಗ ನಾವು ತಿದ್ದಿ ಕೊಳ್ಳಬೇಕು. ಜೈ ಬಸವ
ಏನಾದ್ರೂ ಮಾಡಿ ಎಲ್ಲಾ ಸಮಾಜಗಳನ್ನು ಒಂದೂ ಮಾಡಿ.. ಪ್ರಪಂಚ dandantyya… ಲಿಂಗಾಯತ ಅಂಡ್ ಬಸವಣ್ಣಾ ಹೆಸರು ಉಳಿಬೇಕು ಅಷ್ಟು ಮಾಡಿ…
ಶಾಹು ಮಹಾರಾಜ್ ಕುರುಬ ಸಮುದಾಯದ ರಾಜ ಆಗಿನಿಂದಲೂ ಕುರುಬ ಸಮುದಾಯ ಒಂದಲ್ಲ ಒಂದು ರೀತಿಯಲ್ಲಿ ಬೇರೆ ಸಮಾಜಕ್ಕೆ ಸಹಾಯ ಮಾಡುತ್ತ ಬಂದಿದೆ ಮೀಸಲಾತಿಯ ಹರಿಕಾರ ಶಾಹು ಮಹಾರಾಜ್ ಅಂಬೇಡ್ಕರ್ ಓದಿಗೆ ಸಹಾಯ ಮಾಡಿ ಸಂವಿಧಾನ ರಚನೆಗೆ ಮೂಲ ಕಾರಣರಾದರು ಲಿಂಗಾಯತರಿಗೆ ಮಠ ಮಾನ್ಯ ಸ್ಥಾಪಿಸಲು ಹಣದ ಸಹಾಯ ಮಾಡಿದ ದಾನವಂತರಾದವರು
ಜಗತ್ತಿನ ಮೂಲ ಪುರುಷ ಶಿವ ಶಕ್ತಿಯರ ಸಂತಾನರೇ ಮಾನವ ಸಂಕುಲ, ಗರುಡನ ಸಂತಾನರೇ ಪಕ್ಷಿ ಸಂಕುಲ, ವೃಷಭನ/ನಂದಿ ಸಂಕುಲವೇ ಪ್ರಾಣ ಕುಲ. ಸರ್ಪ, ಮತ್ಸೆವೆ ಜಲ ಸಂಕುಲ. ಕಾಲುಗಳ, ಬೀಜವಾಗಿ ಬೆಳೆದದ್ದೇ ಸಸ್ಯ ಸಂಕುಲ. ಇದನ್ನೇ ಕೃಷ್ಣನು: anandaja, ಉದ್ಬಿಜ, ಸ್ವೈದಾಜ, ಜಾರಾಜ ಎಂದು ನಾಲ್ಕು ಜನನ ಆಧಾರಿತ ಜಾತಿಗಳನ್ನೂ ಮಾಡಿದರು. ಇಡೀ ಜಗತ್ತು ಅಂಢದಿಂದ ಉತ್ಪತಿಯಾಗಿದೆ. ಗುಣ ಕರ್ಮ ಎಂದರೆ, ITI, BE, MBBS, ಬ್ರ್ಯಾಂಚ್ ಗಳಂತೆ. ಗ್ಯಾನ್, ತರಬೇತಿ, ವೃತ್ತಿ ಇತ್ಯಾದಿಗಳ ವರ್ಗ. ಆದರೆ ಅದಕ್ಕೆ ಜಾತಿ ಭೇದ, ವರ್ಗ ಭೇದ, ವರ್ಣ ಭೇದ, ಕುಲ ಭೇದ ಮಾಡುವ ದಿಶೆಯಲ್ಲಿ ಜನರನ್ನು ಆಳುವ ಮತ್ತು ಗುಲಾಮು ಸಂಸ್ಕೃತಿ ಬೆಳೆಸಿದರು. ಜನರ ಆದಾಯದಿಂದ ಮೇಲಿನ ವರ್ಗ ಆನಂದವಾಗಿ ಇರಲು ದಾರಿಮಾಡಿಕೊಂಡರು. ಅವರಿಗೆ ಎಲ್ಲ ಸೌಲಭ್ಯಗಳಿಂದ ವಂಚನೆಮಾಡಿ, ಅರಮನೆ, ಗುರುಮನೆ, ಪುರೋಹಿತ ವರ್ಗದವರು ಮಾತ್ರ ಆನಂದ ಪಡುತ್ತಿದ್ದರು. ಉಳಿದವರು ಅವರ ಸರ್ವೆಯಲ್ಲಿ ಕಾಲ ಕಳೆಯುತ್ತಿದ್ದರು. ಗುಡಿಗಳು ರಾಜರ ಕಾಲದ ತೆರಿಗೆ ಕೇಂದ್ರಗಳಾಗಿದ್ದವು. ಗುಡಿಗಳಲ್ಲಿ ೫-೧೦ ಸಾವಿರ ಭಕ್ತರು, ರಾಜನ ಅರಮನೆಯಲ್ಲಿ ೫-೧೦ ಸಾವಿರ ಸೇವಕರು, ಲಕ್ಷಗಟ್ಟಲೆ ಶೈನಿಕರು ಇರುತ್ತಿದ್ದರು. ಅವರ ಕುಟುಂಬದವರಿಗೆ ಎಲ್ಲ ತರಹದ ಸೇವೆಮಾಡಲು, ನೇಕಾರರ ವರ್ಗ, ದರ್ಜಿಗಳ ವರ್ಗ, ಹೂಗಾರರ ವರ್ಗ, ಕಮ್ಮಾರರ ವರ್ಗ, ಬಡಿಗೇರ ವರ್ಗ, ಕುಂಬಾರರ ವರ್ಗ, ಹಾಲು, ಹಣ್ಣು, ಕಾಳು ಕಡ್ಡಿಗಳನ್ನು ತರಲು, ಕೃಷಿಕರ ವರ್ಗ ಒತ್ತಾಯಪೂರ್ವಕವಾಗಿ ಸೃಷ್ಟಿಸಿದರು . ಈ ಎಲ್ಲ ತರಹದ ವೃತ್ತಿಗಳನ್ನು ಜಾತಿಯಾಗಿ ಮಾಡಿ ಎಲ್ಲ ಸೌಲಭ್ಯಗಳನ್ನು ವಂಚನೆ ಮಾಡಿದರು. ಅಂದರೆ, ಪೂಜಾರಿ ಮಗ ಪೂಜಾರಿ, ಬಡಿಗನ್ ಮಗ ಬಡಿಗ, ಕುಂಬಾರನ ಮಗ ಕುಂಬಾರ, ದರ್ಜಿಯ ಮಗ ದರ್ಜಿ, ಕುಲ ವೃತ್ತಿಗಳನ್ನು ಹೇರು, ಶಿಕ್ಷಣದಿಂದ ವಂಚನೆನಾಡಿದರು. ಆದರೆ ಅಪ್ಪ ಬಸವಣ್ಣನವರ ಕೃಪೆಯಿಂದ ಈಗ ಎಲ್ಲ ವರ್ಗದ ಜನರು ಶಿಕ್ಷಣ ಪಡೆದು, ಎಲ್ಲ ಹುದ್ದೆಗಳಲ್ಲಿ ವಿರಾಜಮನರಾಗಿದ್ದರೆ. ಇದಕ್ಕೆ ಇಂಗ್ಲಿಷರ ಕೃಪೆಯು ಸಿಕ್ಕಿತು. ಅಂಬೇಡ್ಕರ ಅವರ ಸಹಾಯ ಹಸ್ತ ಚಾಚಿದರು. ಈಗಲಾದರೂ ವೃತ್ತಿಗಳನ್ನು ಜಾತಿಯಾಗಿ ಮಾಡುವದು ನಿಲ್ಲಿಸಿ. ಎಲ್ಲರಿಗೂ ಶಿವ ಶಕ್ತಿಯರ ಸಂತಾನರಿಯಂದು ಒಪ್ಪಿಕೊಳ್ಳಬೇಕು. ಸಮಾನ ನಾಗರಿಕ ಸಂಹಿತೆ ಜಾರಿ ಮಾಡಲು ಕೋರಿಕೆ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ, ಶರಣು ಶರಣಾರ್ಥಿ.
ಇದಕ್ಕೆ ನಮ್ಮ ಸಹಮತ ಇದೆ ಅಂತರಂಗ ಶುದ್ದಿ ಆದರೆ ಮುಂದಿನ ಜೀವನದಲ್ಲಿ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ
ಬ್ರಾಹ್ಮಣರು ಯಾವ ದೇವರ ಗುಡಿಗೆ ಪೂಜೆ ಹರಕೆ ಸಲ್ಲಿಸಲು ಹೋಗುವುದಿಲ್ಲ, ಆದರೆ ಅವರು ಹುಟ್ಟು ಹಾಕಿದ ಮೌಢ್ಯದ ದೇವತಾರಾಧನೆಯನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ.
ಇಂದು ಕೂಡ ಬ್ರಾಹ್ಮಣ್ಯದ ಸಂಪ್ರದಾಯಗಳ ಹುಚ್ಚು ನಮ್ಮನ್ನು ಬಿಟ್ಟು ಹೋಗಿಲ್ಲವೆಂಬುದೇ ನಮ್ಮ ದುರಂತ..
ವಾಸ್ತವದ ಅರಿವು ಮೂಡಿಸುತ್ತಿರುವ ಶರಣ ವಿನಯ ಅವರಿಗೆ ಶರಣು ಶರಣಾರ್ಥಿಗಳು.
ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏
ಈ ಗುಡಿ ಸಂಸ್ಕೃತಿಯನ್ನು ಬಿಟ್ಟು
ಮೊದಲು ಅಪ್ಪ ಬಸವಣ್ಣನವರು ವಚನ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು
ಶರಣು ಶರಣಾರ್ಥಿಗಳು🙏🙏🙏
ಅರ್ಥಪೂರ್ಣ ಲೇಖನ… 💐
ಅರ್ಥ ಪೂರ್ಣ ಲೇಖನ.
ಇತಿಹಾಸದಿಂದ ಸತ್ಯ ತಿಳಿಸುವ ತಮ್ಮ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ಆಶಿಸುವ ತಮ್ಮ ಹಿತೈಷಿ….
ಸಮಾಜದೊಳಗೇ, ಒಡೆದು ಆಳುವ ನೀತಿ ತುರುಕಿ, ತಾವು ಶ್ರೇಷ್ಠ ರು ಎಂದು ನಾವು ಹೊರಿಸಿಕೊಳ್ಳುವವರು, ನೀವು ಹೊರುವವರು ಎಂದು ಹುಳಿ ಹಿಂಡಿದವರ ಇತಿಹಾಸ ಹೊರಬರಬೇಕು..ಸಮಾಜ ಕ್ಕೆ ಕಪಟನಾಟಕ ಗೊತ್ತಾಗಲಿ.
ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಣಯಕ್ಕೆ ಬರುವವರು ಜಾಮದಾರ ಸರ್. ಅವರು ನಮ್ಮ ಬೆನ್ನಿಗೆ ಕುಂಬಳಕಾಯಂತೆ. ಇದರಲ್ಲಿ ಒಂದು ಏನೆಂದರೆ ಭಾಲ್ಕಿ ಪೂಜ್ಯರು ಅಪವಾದಕ್ಕೆ ಬಸವತತ್ವ ನಿಷ್ಠರು ಎಂದರು. ಅದು ಸರಿ.ಅವರು ಪೂಜ್ಯ ಲಿಂಗಾನಂದ ಅಪ್ಪಾಜಿ ಸಂಪರ್ಕದಿಂದ ಮತ್ತಷ್ಟು ಬದಲಾವಣೆ ಆದರು.
ಎಂದು ಹೇಳಬಯಸುವೆ. ನಮ್ಮ ಜನ ವಚನ ಓದಬೇಕು.