30 ವರ್ಷಗಳ ಸುದೀರ್ಘ ಹೋರಾಟದ ಫಲ
ಸಾಣೇಹಳ್ಳಿ:
ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳಿಗೆ ಇಂದು ಅಧಿಕೃತವಾಗಿ ಹರಿದುಬಂದಿದೆ.
ಈ ಐತಿಹಾಸಿಕ ಹಾಗೂ ಹರ್ಷದ ಕ್ಷಣಕ್ಕೆ ಸಾಕ್ಷಿಯಾದ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹರಿದು ಬಂದ ನೀರನ್ನು ಸಾರ್ವಜನಿಕರೊಂದಿಗೆ ವೀಕ್ಷಿಸಿ, ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಭದ್ರಾ ಮೇಲ್ದಂಡೆ ನೀರಿಗಾಗಿ ಸುಮಾರು 30 ವರ್ಷಗಳ ಕಾಲ ಸತತ ಹೋರಾಟ ನಡೆಸಲಾಗಿದೆ. ಯೋಜನೆ ಜಾರಿಗೆ ತರೀಕೆರೆ, ಅಜ್ಜಂಪುರ, ಅಜ್ಜಿನಹಳ್ಳಿ ಸೇರಿದಂತೆ ಹಲವೆಡೆ ಅಂತರ್ಜಲ ಬತ್ತಿಹೋಗುವ ಭಯದಿಂದ ಸ್ಥಳೀಯರ ತೀವ್ರ ವಿರೋಧ ಹಾಗೂ ವಿಘ್ನಗಳು ಎದುರಾಗಿದ್ದವು.
ಸಭೆಗಳ ಮೂಲಕ ಹಾಗೂ ಸಾಣೇಹಳ್ಳಿಗೆ ಸಾರ್ವಜನಿಕರನ್ನು ಕರೆಸಿ ಮನವರಿಕೆ ಮಾಡಿ ಜಾಗೃತಿ ಮೂಡಿಸಲಾಯಿತು.
ಅನೇಕರ ಪರಿಶ್ರಮದಿಂದ ನೀರು ಇಂದು ಈ ಭಾಗಕ್ಕೆ ತಲುಪಿದೆ. ಸರ್ಕಾರಗಳು ರೈತರ ವಿಷಯದಲ್ಲಿ ನಿಧಾನಗತಿ ಧೋರಣೆ ತಳೆಯದೆ, ಸಮಯಕ್ಕೆ ಸರಿಯಾಗಿ ನೀರು ಮತ್ತು ವಿದ್ಯುತ್ ನೀಡಿದರೆ ರೈತರೇ ಸರ್ಕಾರಕ್ಕೆ ಸಾಲ ಕೊಡುವಷ್ಟು ಸಕ್ಷಮರಾಗುತ್ತಾರೆ.
ಈ ನೀರಿನ ಹರಿವು ಕೇವಲ ಸಾಂಕೇತಿಕವಾಗಿರಬಾರದು ಅಥವಾ ಮಧ್ಯದಲ್ಲಿ ನಿಲ್ಲಬಾರದು. ಹೊಸದುರ್ಗ ಮಾತ್ರವಲ್ಲದೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೆರೆಗಳಿಗೂ ಈ ನೀರು ತಲುಪಬೇಕು ಹಾಗೂ ಕೊನೆ ಹಂತದವರೆಗೂ ತಲುಪುವಂತೆ ಸರ್ಕಾರ ಕ್ರಮವಹಿಸಬೇಕು.
ನೀರಿಗಾಗಿ ದಾವಣಗೆರೆ ಭಾಗದ ಕೆಲವರು ಅನಗತ್ಯವಾಗಿ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ, ಬದಲಾಗಿ ನಮ್ಮ ಹಕ್ಕಿನ ಸೌಲಭ್ಯವನ್ನು ಕೇಳುತ್ತಿದ್ದೇವೆ.

ಸಾರ್ವಜನಿಕರು ಸರ್ಕಾರದ ವಿರುದ್ಧ ಹೋರಾಡಬೇಕೇ ಹೊರತು, ಹಗುರವಾಗಿ ಮಾತನಾಡುವುದು ಸರಿಯಲ್ಲ.
ಹರಿದುಬರುವ ಗಂಗೆಯಂತ ಪವಿತ್ರ ನೀರಿಗೆ ಬಾಟಲಿ, ಚರಂಡಿ ತ್ಯಾಜ್ಯ ಹಾಗೂ ಕೊಳೆಯನ್ನು ಎಸೆದು ಕಲುಷಿತಗೊಳಿಸಬಾರದು. ಜನರು ಈ ನೀರಿನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು.
ಸ್ಥಳೀಯರು ನಿನ್ನೆ ರಾತ್ರಿಯಿಂದಲೇ ನೀರಿಗಾಗಿ ಕಾತುರದಿಂದ ಕಾಯುತ್ತಿದ್ದರು. ಶ್ರೀಗಳು ಸಹ ತಮ್ಮ ಪೂರ್ವನಿಗದಿತ ಮಹತ್ವದ ಕಾರ್ಯಕ್ರಮಗಳನ್ನು ಮುಂದೂಡಿ ಬಾಗಿನ ಅರ್ಪಿಸಿ ನಾಡಿನ ಸಮೃದ್ಧಿಗಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

ಒಳ್ಳೆಯ ಕೆಲಸ ಮಾಡಿದರೆ. ಜೈ ಬಸವ
Great help to formers to irrigate their lands.formers can grow at least two crops in year. This should have done 20 years back .it is late , however completed this project.