ವೀರಶೈವ ಪದಕ್ಕೆ ಶಕ್ತಿ ಎನ್ನುವುದು ಹಾಸ್ಯಾಸ್ಪದ ಹೇಳಿಕೆ

ಗಂಗಾವತಿ

ಗಂಗಾವತಿಯಲ್ಲಿ ನಡೆದ ಪ್ರವಚನದಲ್ಲಿ ಮುಂಡರಗಿಯ ಅನ್ನದಾನ ಶ್ರೀಗಳು
ವೀರಶೈವಕ್ಕಿರುವ ಶಕ್ತಿ ಲಿಂಗಾಯತ ಪದಕಿಲ್ಲ ಎಂದಿದ್ದಾರೆ.

ಈ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಶ್ರೀಗಳು ವಚನ ಸಾಹಿತ್ಯ ಓದಿದ್ದರೆ ಲಿಂಗಾಯತ ಪದದ ಶಕ್ತಿ ಗೊತ್ತಾಗುತಿತ್ತು. ಅವರು ಓದಿದ್ದು ಆಗಮ ವೇದಗಳು ಹಂಗಾಗಿ ಅವರಿಗೆ ಲಿಂಗಾಯತ ಪದ ಶಕ್ತಿ ಮತ್ತು ಅರ್ಥನೆ ಗೊತ್ತಿಲ್ಲ ಅನಿಸುತ್ತೆ.

ವೀರಶೈವ ಒಂದು ವೃತ. ಅಂದಿನ ಶೈವದ ವೀರಶೈವರು ಲಿಂಗಾಯತರಾಗಿ ಪರಿವರ್ತಿತರಾದರೆಂದರೆ ಲಿಂಗಾಯತದ ಶಕ್ತಿ ಎಷ್ಟಿತ್ತು ಎಂದು ಶ್ರೀಗಳು ಅರಿಯಬೇಕಿತ್ತು.

ಪಂಚಾಚಾರ್ಯ ರಂಭಾಪುರಿಯವರ ಸರ್ಟೀಫಿಕೇಟ್ ನೋಡಿ ಅಲ್ಲಿ ವೀರಶೈವ ಇಲ್ಲ ಲಿಂಗಾಯತ ಇದೆ. ಇಂತವರು ತಮ್ಮ ತಮ್ಮ ಸರ್ಟೀಫಿಕೇಟ್ ನೋಡಿದರೆ ಗೊತ್ತಾಗುತ್ತೆ ಲಿಂಗಾಯತದ ಶಕ್ತಿ.

ಶ್ರೀಗಳಿಗೆ ಒಂದಿಷ್ಟು ಸವಾಲುಗಳು:

  • ಒಂದು ವೇಳೆ ವೀರಶೈವ ಪದಕ್ಕೆ ಅಷ್ಟು ಶಕ್ತಿಯಿದ್ದರೆ ಎಲ್ಲಾ ಲಿಂಗಾಯತರನ್ನು ವೀರಶೈವರನ್ನಾಗಿಸಿ ಬಿಡಿ.
  • ಅಂತಹ ಲಿಂಗಾಯತರ ಜೊತೆ ಕೊಡುಕೊಳ್ಳುವುದು ಮಾಡಿ ಬಿಡಿ.
  • ಅಂತಹ ಲಿಂಗಾಯತರನ್ನು ನಿಮ್ಮ ನಿಮ್ಮ ಮಠಕ್ಕೆ ಪೀಠಾಧೀಶರನ್ನಾಗಿಸಿ ನೇಮಿಸಿಕೊಳ್ಳಿ.
  • ವೀರಶೈವರು ಸತ್ತಾಗ ಅಂತಹ ಲಿಂಗಾಯತರ ಕಾಲುಗಳನ್ನು ತಲೆಯ ಮೇಲೆ ಇರಿಸಿಕೊಳ್ಳಿ.

*ವೀರಶೈವರಾದ ಲಿಂಗಾಯತರಿಗೂ ಅಡ್ಡಪಲ್ಲಕ್ಕಿಯಲ್ಲಿ ಮೆರೆಯುವ ಅವಕಾಶ ಕೊಡಿ.

ಇಷ್ಟೆಲ್ಲಾ ನಿಮ್ಮಿಂದ ಸಾಧ್ಯವಾದರೆ ಮಾತ್ರ ನಿಮ್ಮ ವೀರಶೈವದ ಶಕ್ತಿಯನ್ನು ನಾವು ಒಪ್ಪುತ್ತೆವೆ. ಲಿಂಗಾಯತರಿಲ್ಲದೆ ವೀರಶೈವಕ್ಕೆ ಯಾವುದೆ ಅಸ್ಥಿತ್ವವಿಲ್ಲ ಎನ್ನುವ ಸತ್ಯವನ್ನು ಮರೆಮಾಚಿಸುವುದಕ್ಕೆ ತಮ್ಮ ಈ ಹೇಳಿಕೆ ಬಂದಿದೆ.

ಆ ಕಾರ್ಯಕ್ರಮದಲ್ಲಿದ್ದ ಲಿಂಗಾಯತರಿಗೆ ತಮ್ಮ ಲಿಂಗಾಯತ ಪದದ ಶಕ್ತಿ ಅರ್ಥವಾಗಿಲ್ಲ. ಇದು ಆ ಲಿಂಗಾಯತರ ದುರಂತವಲ್ಲದೆ ಮತ್ತೇನೂ ಇಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
2 Comments
  • ವಯವೃದ್ಧ swamiyoo, ಲಿಂಗಾಯತ ಬಗ್ಗೆ ಏನು ಅರಿಯದ ಶಿವಯೋಗಮಂಡಿರದ ಕುರಿ ಮಾರಿಯೋ ಇದು.ಬಹುಶಃ ಕುರಿ mariye ಇರಬೇಕು. ಕತ್ತೆಗೆ ಏನು ಗೊತ್ತು ಕಸ್ತೂರಿಯ ಪರಿಮಳ ಎಂಬ ನಾನುಡಿ ಇಂತವರನ್ನೇ ಕುರಿತು ಹೇಳಿದ್ದಾಗಿರಬೇಕು

Leave a Reply

Your email address will not be published. Required fields are marked *