ಲೈವ್: ಬೆಂಗಳೂರಿನಲ್ಲಿ ಅಭಿಯಾನ ಸಮಾರೋಪಕ್ಕೆ ಸಕಲ ಸಿದ್ಧತೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

Contents
ಸಮಾರೋಪಕ್ಕೆ ಹೋಗುತ್ತಿರುವ ಬಸವಭಕ್ತರಿಗೆ ಪೊಲೀಸ್ ಸೂಚನೆಅಭಿಯಾನಕ್ಕೆ ಬೀದರನಿಂದ ಬೆಂಗಳೂರಿಗೆ ಹೊರಟ ವಿಶೇಷ ರೈಲುಫೋಟೋಗಳಲ್ಲಿ ಬೈಕ್ ರ‍್ಯಾಲಿವಿಡಿಯೋಗಳಲ್ಲಿ ಬೈಕ್ ರ‍್ಯಾಲಿಬೆಂಗಳೂರಿನಲ್ಲಿ ಬಸವಭಕ್ತರ ಸಂಭ್ರಮದ ಬೈಕ್ ರ‍್ಯಾಲಿಅಕ್ಟೊಬರ್ 5 ಅರಮನೆ ಮೈದಾನಕ್ಕೆ ಪ್ರವೇಶದ ವಿವರರಾಜಧಾನಿಯಲ್ಲಿ ಬಸವ ಭಕ್ತರ ಬೈಕ್ ರ‍್ಯಾಲಿಸಂಜೆ 4 ಗಂಟೆಗೆ ಸ್ವಯಂಸೇವಕರ ಸಭೆಅಕ್ಟೊಬರ್ 4ರ ಪತ್ರಿಕೆಗಳಲ್ಲಿ ಜಾಹಿರಾತುಬೈಕ್ ರ‍್ಯಾಲಿಗೆ ಹೋಗುವವರಿಗೆ ಆಯೋಜಕರಿಂದ ಟೀ-ಶರ್ಟ್, ಸೂಚನೆಗಳುಭರದಿಂದ ಸಾಗುತ್ತಿರುವ ಪ್ರಚಾರ ಕಾರ್ಯಬೃಹತ್ ವೆದಿಕೆ ನಿರ್ಮಾಣಗೊಳ್ಳುತ್ತಿದೆಸಮಾರೋಪ ಸಮಾರಂಭಕ್ಕೆ ಸಿದ್ಧತೆಬೆಂಗಳೂರಿಗೆ ಬರುತ್ತಿರುವ ಬಸವಭಕ್ತರಿಗೆ 12 ಕಡೆ ವಸತಿ ಸೌಲಭ್ಯಅಭಿಯಾನ: ಬೆಂಗಳೂರಿನಲ್ಲಿ ಬಸವ ರಥದ ಜೊತೆ ಬೈಕ್ ರ‍್ಯಾಲಿ ಸಾಗುವ ಮಾರ್ಗಸಮಾರೋಪ ದಾಸೋಹಕ್ಕೆ ಮನವಿಅಕ್ಟೊಬರ್ ನಾಲ್ಕು ಬೈಕ್ ರ‍್ಯಾಲಿಬೀದರನಿಂದ ವಿಶೇಷ ರೈಲುಪೋಸ್ಟರ್ ಅಂಟಿಸುವ ಕಾರ್ಯಸಮಾರೋಪ ಸಮಾರಂಭಕ್ಕೆ ಲಕ್ಷ ಸಂಖ್ಯೆಯಲ್ಲಿ ಬರಲು ಕರೆ
3 days 14 hr agoOctober 4, 2025 7:26 pm

ಸಮಾರೋಪಕ್ಕೆ ಹೋಗುತ್ತಿರುವ ಬಸವಭಕ್ತರಿಗೆ ಪೊಲೀಸ್ ಸೂಚನೆ


3 days 14 hr agoOctober 4, 2025 7:25 pm

ಅಭಿಯಾನಕ್ಕೆ ಬೀದರನಿಂದ ಬೆಂಗಳೂರಿಗೆ ಹೊರಟ ವಿಶೇಷ ರೈಲು



3 days 17 hr agoOctober 4, 2025 3:58 pm

ಫೋಟೋಗಳಲ್ಲಿ ಬೈಕ್ ರ‍್ಯಾಲಿ

3 days 17 hr agoOctober 4, 2025 3:55 pm

ವಿಡಿಯೋಗಳಲ್ಲಿ ಬೈಕ್ ರ‍್ಯಾಲಿ

3 days 18 hr agoOctober 4, 2025 3:54 pm

ಬೆಂಗಳೂರಿನಲ್ಲಿ ಬಸವಭಕ್ತರ ಸಂಭ್ರಮದ ಬೈಕ್ ರ‍್ಯಾಲಿ

3 days 23 hr agoOctober 4, 2025 10:22 am

ಅಕ್ಟೊಬರ್ 5 ಅರಮನೆ ಮೈದಾನಕ್ಕೆ ಪ್ರವೇಶದ ವಿವರ

ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಬೆಳಿಗ್ಗೆ 10 ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ (ಗೇಟ್ ನಂಬರ್ 2) ಶುರುವಾಗಲಿದೆ.

ವಿಶೇಷ ಸೂಚನೆಗಳು

1) ಪ್ರವೇಶ

a) ಗೇಟ್ ನಂಬರ್ 3 ರಲ್ಲಿ – ದ್ವಿಚಕ್ರ ವಾಹನಗಳು ಮತ್ತು ಕಾರುಗಳು

b) ಗೇಟ್ ನಂಬರ್ 4 ರಲ್ಲಿ ಮಠಾಧೀಶರು, ವಿಶೇಷ ಆಹ್ವಾನಿತರಿಗೆ ಮಾತ್ರ (ಇತರೆ ವಾಹನಗಳಿಗೆ ಅವಕಾಶವಿರುವುದಿಲ್ಲ)

c) ಗೇಟ್ ನಂಬರ್ 5 ರಲ್ಲಿ – ಬಸ್‌ಗಳಿಗೆ ಮಾತ್ರ

2) ಪ್ರಸಾದ ಸ್ಥಳ –

a) ನೀಲಾಂಬಿಕೆ ತಾಯಿಯವರ ಪ್ರಸಾದ ನಿಲಯ (ಶರಣೆಯರಿಗೆ ಮಾತ್ರ)

b) ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮಿಗಳ ಪ್ರಸಾದ ನಿಲಯ

c) ದೇವನೂರು ಗುರುಮಲ್ಲೇಶ್ವರ ಪ್ರಸಾದ ನಿಲಯ

d) ತೋಂಟದ ಸಿದ್ಧಲಿಂಗೇಶ್ವರ ಶ್ರೀಗಳ ಪ್ರಸಾದ ನಿಲಯ

ಬೆಳಗಿನ ಉಪಹಾರ – ಬೆಳಿಗ್ಗೆ 7-30 ರಿಂದ ಪ್ರಾರಂಭ.

ಮಧ್ಯಾಹ್ನದ ಪ್ರಸಾದ – ಮಧ್ಯಾಹ್ನ 1:30ರ ನಂತರ.

3) ಧೂಮಪಾನ ಹಾಗೂ ಸಭಾಂಗಣದಲ್ಲಿ ಮೊಬೈಲ್ ಬಳಕೆ ನಿಷೇಧಿಸಿದೆ.

4) ಸ್ವಚ್ಛತೆಗೆ ಆದ್ಯತೆ, ಸಹಕರಿಸಿ.

5) ಅಭಿಯಾನದಲ್ಲಿ ಭಾಗವಹಿಸುವವರೆಲ್ಲರೂ ಸ್ವಯಂಸೇವಕರೇ.

6) ನಿಮ್ಮ ವಸ್ತುಗಳು ಮತ್ತು ಮಕ್ಕಳಿಗೆ ತಾವೇ ಜವಾಬ್ದಾರಿ.

7) ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

8) ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಬಹುಮುಖ್ಯ.

ಸರ್ವರೂ ಸಹಕರಿಸಲು ಸಂಘಟನೆಯ ಮುಖಂಡರಾದ ಕೃಪಾಶಂಕರ ಅವರು ಮನವಿ ಮಾಡಿಕೊಂಡಿದ್ದಾರೆ.

3 days 23 hr agoOctober 4, 2025 10:07 am

ರಾಜಧಾನಿಯಲ್ಲಿ ಬಸವ ಭಕ್ತರ ಬೈಕ್ ರ‍್ಯಾಲಿ

3 days 23 hr agoOctober 4, 2025 10:06 am

ಸಂಜೆ 4 ಗಂಟೆಗೆ ಸ್ವಯಂಸೇವಕರ ಸಭೆ

ದಿನಾಂಕ 5.10.25 ರ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ತಾಗಿ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ನಡೆಯಲಿದೆ.

ಈ ಸಮಾರಂಭವನ್ನು ಯಶಸ್ವಿಯಾಗಿಸಲು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಛೆ ಇರುವ ಬಸವಾಭಿಮಾನಿಗಳು ಇಂದು ಸಂಜೆ 4 ಗಂಟೆಗೆ (4.10.25) ಸರಿಯಾಗಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹಾಜರಿರಬೇಕೆಂದು ವಿನಂತಿ.

ಸಭೆಯಲ್ಲಿ ನಿರ್ದಿಷ್ಟ ಕಾರ್ಯಗಳ ಜವಾಬ್ದಾರಿ ವಹಿಸಲಾಗುವುದು. ಇಂದು ಬರಲು ಸಾಧ್ಯವೇ ಇಲ್ಲದ ಸ್ವಯಂಸೇವಕರು ನಾಳೆ ಬೆಳಿಗ್ಗೆ 8.30 ಗಂಟೆಗೆ ಸರಿಯಾಗಿ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಹಾಜರಿರಬೇಕೆಂದು ವಿನಂತಿ.

-ಪ್ರೊ.ವೀರಭದ್ರಯ್ಯ, ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲೆ.

3 days 23 hr agoOctober 4, 2025 10:03 am

ಅಕ್ಟೊಬರ್ 4ರ ಪತ್ರಿಕೆಗಳಲ್ಲಿ ಜಾಹಿರಾತು

ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಬಸವ ಪರ ಸಂಘಟನೆಗಳಿಂದ ಸಮಾರೋಪಕ್ಕೆ ನಾಡಿನ ಜನತೆಗೆ ಅಹ್ವಾನ.

3 days 3 hr agoOctober 4, 2025 6:12 am

ಬೈಕ್ ರ‍್ಯಾಲಿಗೆ ಹೋಗುವವರಿಗೆ ಆಯೋಜಕರಿಂದ ಟೀ-ಶರ್ಟ್, ಸೂಚನೆಗಳು

4 days 21 hr agoOctober 3, 2025 12:42 pm

ಭರದಿಂದ ಸಾಗುತ್ತಿರುವ ಪ್ರಚಾರ ಕಾರ್ಯ

ಮಹಾನಗರದ ಹಲವಾರು ಬಡಾವಣೆಗಳಲ್ಲಿ ವಾಲ್ ಪೋಸ್ಟರ್ ಹಚ್ಚಲಾಗಿದೆ. ಈ ಕಾರ್ಯ ಮುಂದುವರೆದಿದೆ.

ಲಿಂಗಾಯತ ವಸತಿ ನಿಲಯಗಳಿಗೆ ಭೇಟಿಕೊಟ್ಟು ಅಭಿಯಾನಕ್ಕೆ ಸಹಕರಿಸಲು ಮನವಿ ಪತ್ರ ನೀಡಲಾಗಿದೆ.

ಕರಪತ್ರಗಳನ್ನು ಹಂಚಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲು ವಿನಂತಿಸಲಾಗಿದೆ. ಪ್ರಚಾರ ಕಾರ್ಯಕ್ಕೆ ಒತ್ತು ಕೊಡಲಾಗಿದೆ.

ಅ.ಭಾ. ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕಗಳಿಂದ ಸಹಕಾರ ಸಿಕ್ಕಿದೆ. ಅವರೆಲ್ಲ ಕಾರ್ಯತತ್ಪರರಾಗಿದ್ದಾರೆ.

ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚು ಜನರು ಬರಲು ಅನುಕೂಲವಾಗಲೆಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಬಸ್ಸುಗಳನ್ನು ಬಿಡಲಾಗುತ್ತಿದೆ.

4 days 21 hr agoOctober 3, 2025 12:39 pm

ಬೃಹತ್ ವೆದಿಕೆ ನಿರ್ಮಾಣಗೊಳ್ಳುತ್ತಿದೆ

ವೇದಿಕೆ ಕಾರ್ಯಕ್ರಮ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದವರಿಂದ ಪೂರ್ಣ ನಿರ್ವಹಣೆ. ನಾಲ್ಕುನೂರಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಲಿದ್ದಾರೆ.

ಮಠಾಧೀಶರನ್ನು ಬಿಟ್ಟು ವೇದಿಕೆ ಮೇಲೆ ಯಾರಿಗೂ ಅವಕಾಶವಿಲ್ಲ. ನಿಗದಿತ ಸಮಯಕ್ಕೆ ಹಾಜರಾಗಲು ಮಠಾಧೀಶರಿಗೆ ಸೂಚಿಸಲಾಗಿದೆ.

4 days 21 hr agoOctober 3, 2025 12:38 pm

ಸಮಾರೋಪ ಸಮಾರಂಭಕ್ಕೆ ಸಿದ್ಧತೆ

ಪ್ರಚಾರ, ದಾಸೋಹ, ಹಣಕಾಸು, ವೇದಿಕೆ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರಸಾದ: ಬೆಳಗ್ಗೆ 7:30 ರಿಂದಲೇ ಉಪಹಾರ ವ್ಯವಸ್ಥೆ.
ಮಧ್ಯಾಹ್ನದಿಂದ ಸಂಜೆಯವರೆಗೂ ನಿರಂತರ ಪ್ರಸಾದ ವ್ಯವಸ್ಥೆ.

ನಾಲ್ಕು ದಾಸೋಹ ಮನೆಗಳು, ಮಹಿಳೆಯರಿಗೆ ಪ್ರತ್ಯೇಕ, ಸ್ವಾಮೀಜಿಗಳಿಗೆ ಪ್ರತ್ಯೇಕ.

ಪಾರ್ಕಿಂಗ್: ಟು ವ್ಹೀಲರ್, ಕಾರು, ಬಸ್ಸುಗಳಿಗೆ ಪ್ರತ್ಯೇಕ ವ್ಯವಸ್ಥೆ.

ಅರಮನೆ ಮೈದಾನದ ಗೇಟ್ ನಂಬರ್ 4ರಲ್ಲಿ ವಿಐಪಿ ಹಾಗೂ ಸ್ವಾಮೀಜಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಮಾಹಿತಿ ಕೇಂದ್ರ, ತುರ್ತುಚಿಕಿತ್ಸಾ ಕೇಂದ್ರ, ವೈದ್ಯರ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆ ಇರುತ್ತದೆ.

ಸ್ವಚ್ಛತೆಗೆ ಆದ್ಯತೆ: ಪ್ರತಿಯೊಬ್ಬರೂ ಸ್ವಯಂಸೇವಕರು.

4 days 2 hr agoOctober 3, 2025 7:27 am

ಬೆಂಗಳೂರಿಗೆ ಬರುತ್ತಿರುವ ಬಸವಭಕ್ತರಿಗೆ 12 ಕಡೆ ವಸತಿ ಸೌಲಭ್ಯ


5 days 4 hr agoOctober 2, 2025 5:37 am

ಅಭಿಯಾನ: ಬೆಂಗಳೂರಿನಲ್ಲಿ ಬಸವ ರಥದ ಜೊತೆ ಬೈಕ್ ರ‍್ಯಾಲಿ ಸಾಗುವ ಮಾರ್ಗ

6 days 21 hr agoOctober 1, 2025 12:29 pm

ಸಮಾರೋಪ ದಾಸೋಹಕ್ಕೆ ಮನವಿ

ಚಿತ್ರದಲ್ಲಿನ ಸ್ಕ್ಯಾನರ್ ಬಳಸಿ ಹಣ ಪಾವತಿ ಮಾಡಲು ವಿನಂತಿ. Screenshot ಶೇರ್ ಮಾಡಿದರೆ ರಸೀತಿ ಕೊಡಲಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಶಿವಕುಮಾರ ಸ್ವಾಮಿ ಹೇಳಿದ್ದಾರೆ

6 days 21 hr agoOctober 1, 2025 12:24 pm

ಅಕ್ಟೊಬರ್ ನಾಲ್ಕು ಬೈಕ್ ರ‍್ಯಾಲಿ

ರ‍್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವವರು Google form ತುಂಬಲು ಮನವಿ

https://forms.gle/2gFBcLw8YZmwP1gr8

6 days 21 hr agoOctober 1, 2025 12:18 pm

ಬೀದರನಿಂದ ವಿಶೇಷ ರೈಲು

ಬೆಂಗಳೂರಿನ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭಕ್ಕೆ ಬೀದರನಿಂದ ತೆರಳಲು ವಿಶೇಷ ರೈಲು ವ್ಯವಸ್ಥೆಯಾಗಿದೆ. ವಿಶೇಷ ರೈಲು ವ್ಯವಸ್ಥೆ ಮಾಡಿಕೊಟ್ಟ ಕೇಂದ್ರದ ರಾಜ್ಯ ರೈಲ್ವೆ ಸಚಿವರು ವಿ.ಸೋಮಣ್ಣನವರಿಗೆ ಹಾಗು ಬೀದರನ ಸಂಸದರಾದ ಸಾಗರ ಈಶ್ವರ ಖಂಡ್ರೆಯವರಿಗೆ ಕೃತಜ್ಞತೆಗಳು.

6 days 21 hr agoOctober 1, 2025 12:11 pm

ಪೋಸ್ಟರ್ ಅಂಟಿಸುವ ಕಾರ್ಯ

ನೆಲಮಂಗಲದಿಂದ ರಾಜಾಜಿನಗರದ ತನಕ ಅಭಿಯಾನದ ಪೋಸ್ಟರ್ ಅಂಟಿಸುವ ಕಾರ್ಯ ಮುಗಿದಿದೆ. ದಯಾ ತರೀಕೆರೆ ಮತ್ತು ತಂಡದಿಂದ.

6 days 21 hr agoOctober 1, 2025 12:11 pm

ಸಮಾರೋಪ ಸಮಾರಂಭಕ್ಕೆ ಲಕ್ಷ ಸಂಖ್ಯೆಯಲ್ಲಿ ಬರಲು ಕರೆ

Share This Article
Leave a comment

Leave a Reply

Your email address will not be published. Required fields are marked *