ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಲಿಂಗಾಯತ ಪೂಜ್ಯರನ್ನು ಅಶ್ಲೀಲ ಪದಗಳಿಂದ ನಿಂದಿಸಿರುವ ಕನ್ನೇರಿ ಸ್ವಾಮಿಯ ವಿರುದ್ಧ ಬರುತ್ತಿರುವ ಬಸವಭಕ್ತರ ಪ್ರತಿಕ್ರಿಯೆ.
ಹೋದಡೆಯೆಲ್ಲ ಉಗ್ರ ಪ್ರತಿಭಟನೆ: ಕನ್ನೇರಿ ಶ್ರೀಗೆ ರಾಷ್ಟ್ರೀಯ ಬಸವದಳದ ಎಚ್ಚರಿಕೆ
ಬಸವಭಕ್ತರು ಸಿಡಿದೇಳುವ ಮುನ್ನ ಸರ್ಕಾರ ಉಗ್ರಕ್ರಮ ಜರುಗಿಸಲಿ: ಸಾಣೇಹಳ್ಳಿ ಶ್ರೀ
ಸಂಘ ಪರಿವಾರ ಬಿಸ್ಕೆಟ್ ಹಾಕಿ ಸಾಕಿದ ನಾಯಿಗಳನ್ನು ಚೂ ಬಿಟ್ಟಿದೆ
ಜನರಿಂದಲೇ ಕನ್ನೇರಿ ಶ್ರೀಗೆ ಪಾಠ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹೇಳಿಕೆ
ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?
ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು
ಅಶ್ಲೀಲ ಮಾತು ಶೋಭೆಯಲ್ಲ: ರಾಜು ಕುಂಬಾರ
ಸುರಪುರ
ಕನ್ನೇರಿ ಮಠದ ಸ್ವಾಮಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ ಅಷ್ಟೂ ಜನ ಸ್ವಾಮೀಜಿಗಳ ವಿರುದ್ಧ ದ್ವೇಷ ಕಾರುವ ಭರದಲ್ಲಿ ಅತ್ಯಂತ ಅಶ್ಲೀಲವಾಗಿ ಆಡಿರುವ ಮಾತು ನಿಜಕ್ಕೂ ಅವರ ಸ್ವಾಮಿತ್ವದ ಕುರಿತು ಅನುಮಾನ ಮತ್ತು ಪ್ರಶ್ನೆ ಮೂಡಿಸುತ್ತದೆ.
ಜಗತ್ತಿನಲ್ಲಿ ಸಾವಿರ ಸಾವಿರ ವಿಚಾರ ಭೇದಗಳಿವೆ, ಅದರಂತೆ ಕನ್ನೇರಿ ಮಠದ ಸ್ವಾಮೀಜಿಗಳು ಬಸವ ಸಂಸ್ಕೃತಿ ಅಭಿಯಾನ ಮತ್ತದರ ಸ್ವಾಮೀಜಿಗಳ ವಿಚಾರ ಒಪ್ಪದಿರುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನಬಹುದು. ಆದರೆ ಬೇರೆಯವರನ್ನು ಅತ್ಯಂತ ಕೀಳು ಪದಗಳಿಂದ ನಿಂದಿಸುವ ಹಕ್ಕು ಅವರಿಗೆ ಇಲ್ಲವೇ ಇಲ್ಲ.
ಸ್ವಾಮೀಜಿಗಳಾದವರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆ ವಿನಃ ಸಮಾಜದಲ್ಲಿ ಗಲಭೆ ಪ್ರಚೋದಿಸುವ ರೀತಿಯಲ್ಲಿ ಮಾತನಾಡುವುದು ಶೋಭೆಯಲ್ಲ.
ಸನ್ಯಾಸಿಯ ಯಾವುದೇ ಲಕ್ಷಣವಿಲ್ಲ: ಬಸವರಾಜ ರೊಟ್ಟಿ
ಬೆಳಗಾವಿ
ಕನ್ನೇರಿ ಮಠದ ಸ್ವಾಮಿಗಳು ಮುಖ್ಯಮಂತ್ರಿಗಳ ಕೃಪಾಪೋಷಿತ ಕಲಾವಿದರು ಬಸವ ಸಂಸ್ಕೃತಿ ಅಭಿಯಾನ ಎನ್ನುವ ನಾಟಕವನ್ನು ತೆಗೆದುಕೊಂಡು ಕರ್ನಾಟಕದಾದ್ಯಂತ ತಿರುಗಾಡಿದರು ಎಂದು ಹೇಳಿಕೆಯನ್ನು ನೀಡಿದ್ದಾರೆ.
ಮುಂದುವರೆದು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮಠಾಧಿಪತಿಗಳಿಗೆ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಭಾಷೆಯನ್ನು ಬಳಸಿ ಅವರಿಗೆ ಅಪಮಾನವಾಗುವ ಹಾಗೆ ಹೇಳಿಕೆಯನ್ನು ನೀಡಿದ್ದಾರೆ.
ಒಬ್ಬ ಸನ್ಯಾಸಿಯಾಗಿ, ಒಬ್ಬ ಮಠಾಧಿಪತಿಯಾಗಿ ಅವರ ಬಾಯಿಂದ ಈ ತರದ ಅಶ್ಲೀಲ, ಅವಾಚ್ಯ, ಅಸಂವಿಧಾನಿಕ ಶಬ್ದಗಳು ಬರಬಾರದು. ಒಬ್ಬ ಮಠಾಧಿಪತಿಗೆ, ಒಬ್ಬ ಸನ್ಯಾಸಿಗೆ ಇರುವ ಲಕ್ಷಣ ಇದಲ್ಲ.
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕಂಡು ಹೊಟ್ಟೆ ಉರಿಯಿಂದ ಯಾರನ್ನೋ ಮೆಚ್ಚಿಸಲು ಕನ್ನೇರಿ ಮಠದ ಸ್ವಾಮಿಗಳು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.