ಬೆಂಗಳೂರು ಮೇಳದಲ್ಲಿ ಕನ್ನೇರಿ ಸ್ವಾಮಿ: ಲಿಂಗಾಯತ ಸಮಾಜದಲ್ಲಿ ತೀವ್ರ ಆಕ್ರೋಶ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಇಂದು ಸಂಜೆ ಉದ್ಘಾಟನೆಯಾಗಲಿರುವ ‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ’ದಲ್ಲಿ ಭಾಗವಹಿಸಲು ಕನ್ನೇರಿ ಸ್ವಾಮಿಗೆ ಅಹ್ವಾನ ನೀಡಲಾಗಿದೆ. ಇದರ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನಾಳೆ ಮದ್ಯಾಹ್ನ 12ರಿಂದ 1 ಗಂಟೆಯವರಿಗೆ ಸಾವಯವ ಕೃಷಿಯ ಪ್ರಯೋಜನದ ಬಗ್ಗೆ ಕನ್ನೇರಿ ಸ್ವಾಮಿ ಮಾತನಾಡಲಿದ್ದಾರೆ. ಅವರ ಜೊತೆ ಹಿಂದೂ ಪತ್ರಕರ್ತ ಅಜಿತ್ ಹನುಮಕ್ಕನವರ್, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವೇದಿಕೆ ಹಂಚಿಕೊಳ್ಳಲಿದ್ದಾರೆ.

ನೆನ್ನೆಯಿಂದ ಸಮ್ಮೇಳನದ ಪ್ರಚಾರ ಕಾರ್ಯಗಳಲ್ಲಿ ಕನ್ನೇರಿ ಸ್ವಾಮಿಯ ಫೋಟೋ, ಪೋಸ್ಟರ್ ಮತ್ತು ವಿಡಿಯೋಗಳನ್ನು ಆಯೋಜಕರು ಬಳಸಲು ಶುರು ಮಾಡಿದ್ದಾರೆ.

ಬಸವ ಅನುಯಾಯಿಗಳನ್ನು ಬಸವ ತಾಲಿಬಾನ್ ಎಂದು, ಲಿಂಗಾಯತ ಸ್ವಾಮೀಜಿಗಳನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿ ಕನ್ನೇರಿ ಸ್ವಾಮಿ ಶರಣ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಅವರ ವಿರುದ್ಧ ಪ್ರತಿಭಟನೆ ನಡೆಯಲು ಶುರುವಾಗಿದ್ದರಿಂದ ಮೂರು ಜಿಲ್ಲೆಗಳಿಂದ ಅವರನ್ನು ಬಹಿಷ್ಕರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಹೈ ಕೋರ್ಟ್, ಸುಪ್ರೀಂ ಕೋರ್ಟಿಗೆ ಹೋದ ಕನ್ನೇರಿ ಸ್ವಾಮಿಗೆ ನ್ಯಾಯಾಧೀಶರು ಇದು ಸ್ವಾಮೀಜಿಗಳಿಗೆ ಯೋಗ್ಯವಾದ ನಡತೆಯಲ್ಲ ಎಂದು ಚೀಮಾರಿ ಹಾಕಿದ್ದರು.

“ಈ ಸಮಾವೇಶಕ್ಕೆ ಕನ್ನೇರಿ ಸ್ವಾಮಿಯನ್ನು ಕರೆಯುವ ಕಾರಣವೇನು? ಇವರು ಬಗ್ಗೆ ಲಿಂಗಾಯತ ಸಮಾಜದಲ್ಲಿ ಏನು ಅಭಿಪ್ರಾಯವಿದೆ ಎಂದು ILYF ಸಂಘಟಕರಿಗೆ ತಿಳಿದಿಲ್ಲವೇ? ಇತ್ತೀಚೆಗೆ ಒಕ್ಕಲಿಗರ ಒಂದು ಸಮಾವೇಶ ನಡೆಯಿತು. ಅಲ್ಲಿ ಒಕ್ಕಲಿಗ ಸಮಾಜದ, ಪೂಜ್ಯರ ವಿರುದ್ಧ ಮಾತನಾಡುವವರನ್ನು ಕರೆಯಲು ಅವಕಾಶವೇ ಇರಲಿಲ್ಲ. ಇಲ್ಲಿ ಯಾಕೆ ಹೀಗೆ?” ಎಂದು ಬೆಂಗಳೂರು ಉದ್ಯಮಿ ಶಾಂತಕುಮಾರ ಹರ್ಲಾಪುರ ಕೇಳಿದರು.

“ಇದು ಲಿಂಗಾಯತರ ಸಮಾವೇಶ. ಇದರ ಮುಖ್ಯ ಪ್ರಯೋಜಕರು ‘ಬಸವೇಶ್ವರ ಹೌಸಿಂಗ್’ ಅನ್ನುವ ಕಂಪನಿ. ಇಲ್ಲಿ ಬಸವಣ್ಣನವರ ಹೆಸರು, ಲಿಂಗಾಯತ ಸಮಾಜ ಬಳಸಿಕೊಂಡು ಲಿಂಗಾಯತರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯುತ್ತಿದೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ನಿಜಗುಣಮೂರ್ತಿ ಹೇಳಿದರು.

“ಬಸವತತ್ವ ದ್ರೋಹಿ, ಲಿಂಗಾಯತ ಧರ್ಮ ದ್ರೋಹಿ, ಅಜ್ಞಾನಿ ಮತ್ತು ಆರ್ ಎಸ್ ಎಸ್ ಗುಲಾಮನಾಗಿ ಬದುಕುವ ಈ ಸ್ವಾಮಿಯನ್ನು ಕರೆದಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ,” ಎಂದು ವಿಶ್ವ ಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೋಂಡಿ ಹೇಳಿದರು.

ವಿರೋಧದ ನಡುವೆ ಆಹ್ವಾನ?

ಕನ್ನೇರಿ ಸ್ವಾಮಿಯನ್ನು ಸಮಾವೇಶಕ್ಕೆ ಕರೆಸಿರುವುದರ ಹಿಂದೆ ಸಂಘಟನೆಯಲ್ಲಿಯೇ ವಿರೋಧವಿತ್ತು. ಆದರೆ ಈಗಿನ ಮುಖ್ಯಸ್ಥ ಸಂತೋಷ್ ಕೆಂಚಾಂಬ ಮತ್ತು ವಿಜಯ ಸಂಕೇಶ್ವರ ಅವರ ಒತ್ತಡದಿಂದ ಅವರಿಗೆ ಆಹ್ವಾನ ನೀಡಲಾಗಿದೆ, ಎಂದು ಸಂಘಟನೆಯ ಹಿರಿಯ ಸದಸ್ಯರೊಬ್ಬರು ಆರೋಪಿಸಿದರು.

ಸಂತೋಷ್ ಕೆಂಚಾಂಬ ಆರೆಸ್ಸೆಸ್ ಕಾರ್ಯಕರ್ತರೆಂದು ತಮ್ಮ ವೆಬ್ಸೈಟ್ ನಲ್ಲಿಯೇ ಹೇಳಿಕೊಂಡಿದ್ದಾರೆ. ಮತ ಪರಿವರ್ತನೆ ತಡೆಯಲು ಬದ್ದವಾಗಿರುವ ‘ಧರ್ಮ ಜಾಗರಣ್’ ಎಂಬ ಆರೆಸ್ಸೆಸ್ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದಾರೆ. ಅವರ ಫೇಸ್ಬುಕ್ ಪುಟದಲ್ಲಿ ಕನ್ನೇರಿ ಸ್ವಾಮಿಯ ಹಳೆಯ ಫೋಟೋ, ವಿಡಿಯೋಗಳನ್ನು ನೋಡಬಹುದು. ಮುಖ್ಯವಾಗಿ ಲಿಂಗಾಯತ ಧರ್ಮವನ್ನು ವಿರೋದಿಸುವ ಕನ್ನೇರಿ ಸ್ವಾಮಿಯ ಅನೇಕ ವಿಡಿಯೋಗಳನ್ನು ಸಂತೋಷ್ ಕೆಂಚಾಂಬ ಹಂಚಿಕೊಂಡಿದ್ದಾರೆ.

ವಿಜಯ ಸಂಕೇಶ್ವರರ ‘ವಿಜಯವಾಣಿ’ ಲಿಂಗಾಯತ ಪತ್ರಿಕೆ ಎಂದು ಹೇಳಿಕೊಂಡು ಮಾರಾಟವಾದರೂ ಲಿಂಗಾಯತರ ವಿರೋಧಿಸುವ ನಿಲುವು ಹೊಂದಿರುವ ಪತ್ರಿಕೆಯೆಂದು ಗುರುತಿಸಿಕೊಂಡಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
16 Comments
  • ವೀರಶೈವ ಲಿಂಗಾಯತ ಕಾರ್ಯಕರ್ಮದಲ್ಲಿ ಪ್ರತ್ಯೇಕಿ ಲಿಂಗಾಯತರಿಗೆ ಏನು ಕೆಲಸ

    • When Kanheri swami used the term Basava Taliban, when he insulted Guru Basavanna with word Taliban ,why you guys are promoting such swami , we will protest all such moves.

    • ಇದು ಲಿಂಗಾಯತರ ಕಾರ್ಯಕ್ರಮ ಇದರ ಪ್ರಾಯೋಜಕರು ಬಸವೇಶ್ವರ ಹೌಸಿಂಗ್ ಕಂಪನಿ.ಇಲ್ಲಿ ಲಿಂಗಾಯತರ ಬೆನ್ನಿಗೆ ಚೂರಿ ಹಾಕುವ ಆರ್ ಎಸ್ ಎಸ್ ಬೆಂಬಲಿತ (ವೀರಶೈವರಿಗೆ)ಎನು ಕೆಲಸ.ವೀರಶೈವವೂ ಅದು ಶೈವ ಧರ್ಮದ ಶಾಖೆ ಅಥವಾ ಪಂಥ.ಕನ್ನೇರಿ ಸ್ವಾಮಿ ಲಿಂಗಾಯತ ಧರ್ಮದ್ರೋಹಿ ಬಸವತತ್ವ ವಿರೋಧಿ ಆರ್ ಎಸ್ ಎಸ್ ಕೈಗೊಂಬೆ ಹಾಗಾಗಿ ಅವನು ಲಿಂಗಾಯತರ ಕಾರ್ಯಕ್ರಮಕ್ಕೆ ಭಾಗವಹಿಸಲಿಕ್ಕೆ ಅನರ್ಹ.

    • ವೀರಶೈವದ ಜೊತೆಗೆ ಲಿಂಗಾಯತ ಶಬ್ದ ಇಟ್ಟುಕೊಂಡಿರುವುದು ಸತ್ಯ ಅಲ್ಲವೇ?ಲಿಂಗಾಯತ ತೆಗೆದು ವೀರಶೈವ ಮಾತ್ರ ಇಟ್ಟುಕೊಂಡು ಏನೆ ಕಾರ್ಯಕ್ರಮ ಮಾಡಿದ್ದರೂ ಅಲ್ಲಿಗೆ ಲಿಂಗಾಯತರು ಬಂದು ಪ್ರಶ್ನೆ ಮಾಡುವ ಅಗತ್ಯ ಇರಲಿಲ್ಲ. ಲಿಂಗಾಯತರ ಬಿಸಿನೆಸ್ ಕಾರ್ಯಕ್ರಮದಲ್ಲಿ ಬಸವ ವಿರೋಧಿ ಕಾಣೆರಿ ಮಠದ ಅದೃಶ್ಯ ಸ್ವಾಮೀಜಿಗಳು ಏಕೆ ಬರಬೇಕು? ಆ ಬಸವ ವಿರೋಧಿ ಸ್ವಾಮೀಜಿ ಯಾವುದೇ ಲಿಂಗಾಯತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ವಿರುದ್ಧ ನಮ್ಮ ಪ್ರತಿ ಭಜನೆ ಇರುತ್ತದೆ.

  • ವಿಜಯವಾಣಿ ಪತ್ರಿಕೆ ಮತ್ತು ಕನ್ನೇರಿ ಸ್ವಾಮೀಜಿಯನ್ನು
    ಬಸವ ಲಿಂಗಾಯತರು ವಿರೋಧಿಸಿ , ಬಹಿಷ್ಕರಿಸಿ
    ಇವರನ್ನು ಬೆಂಬಲಿಸುವ ಲಿಂಗಾಯತ ರಾಜಕಾರಣಿಗಳನ್ನು
    ಮಠಾಧೀಶರನ್ನು ವಿರೋಧಿಸಿ, ಬಹಿಷ್ಕರಿಸಿ

  • ಹೀಗೆ ಒಬ್ಬರನ್ನೊಬ್ಬರು ದ್ವೇಷಿಸುತ್ತ ಹೋದರೆ ಇಬ್ಬರಿಗೂ ಉಳಿಗಾಲ ಇಲ್ಲಾ ಗಾದೆ ಮಾನಂತೆ ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ.

  • ವಿಜಯ ಸಂಕೇಶ್ವರ ಮೊದಲ ನಿಂದಲೂ ಲಿಂಗಾಯತ ಧರ್ಮ ವಿರೋಧಿಗಳು.
    ಅವರು ಲಿಂಗಾಯತ ಧರ್ಮ ದ್ರೋಹಿಗಳಿಗೆ ಇಂಬು ಕೊಡುವುದರಲ್ಲಿ ಹೊಸತು ಏನು ಇಲ್ಲ.
    ಇಂತಹ ಲಿಂಗಾಯತ ಧರ್ಮ ದ್ರೋಹಿ ಮತ್ತು ವಿರೋಧಿಗಳ ವಸ್ತು ಮತ್ತು ಸೇವೆಗಳನ್ನು ಲಿಂಗಾಯತರು ಬಹಿಷ್ಕರಿಸಬೇಕು.

    • ಅನುಮಾನ ಇತ್ತು. ಏಕೆ ಇದಕ್ಕೆ ಇನ್ನೂ ವೀರಶೈವ ವೈರಸ್ ತಾಕಿಲ್ಲ ಎಂದು?

  • ಲಿಂಗಾಯತರು ಎಲ್ಲಾ ವಿಧದ ವ್ಯವಹಾರ ಮಾಡಲಿ ಎಲ್ಲಾರೂ ಕೈಜೋಡಿಸಿ ಸಮಾಜದ ಬಂಧುಗಳು ಮುಂದುವರಿಯಲಿ.

  • ದುರಂತದ ಕಾಲಘಟ್ಟದಲ್ಲಿ ಲಿಂಗಾಯತ ಇದೆ. ಒಂದು ಕಡೆ ಲಿಂಗಾಯತರನ್ನು ಬಸವ ತತ್ವ ಒಪ್ಪಿದವರನ್ನು ಬಸವ ತಾಲಿಬಾನ್ ಗಳೆಂದು ಕರೆಯುವ ಈ ಸ್ವಾಮಿಗಳು ಒಂದು ಕಡೆ ಆದ್ರೆ ಇನ್ನೊಬ್ಬ ಸ್ವಾಮಿ ವೇದಿಕೆಯ ಮೇಲೆ ಬಸವಣ್ಣನ ಹೆಸರು ತೆಗೆದುಕೊಂಡು ಭಾಷಣವೆಲ್ಲಾ ವೈದಿಕದ ಪರವಾಗಿ ಮಾತಾಡುತ್ತಾರೆ . ಈ ಸ್ವಾಮಿಗಳಿಗೆ ಏನಾಗಿದೆ?.

    ಇನ್ನೊಬ್ಬ ಸ್ವಾಮಿ ತಮ್ಮ ಇಷ್ಟಲಿಂಗ ಪೂಜೆಯಲ್ಲಿ ಶರಣರ ಒಂದು ವಚನಗಳನ್ನು ಹಾಡದೆ ಬರಿ ಸಂಸ್ಕ್ರತದ ಶ್ಲೋಕಗಳೆ ವಿಜೃಂಭಿಸಿದವು.

    ಸಮಾಜದಲ್ಲಿ ಆರ್ಥೀಕವಾಗಿ ಸಾಮಾಜಿಕವಾಗ ಸಬಲರಾದ ಲಿಂಗಾಯತದ ಮುಖಂಡರು ಬಹುತೇಕವಾಗಿ Rss ಮತ್ತು BJP ಯ ಪರವಾಗಿಯೇ ಕೆಲಸ ಮಾಡುತ್ತಾರೆ. ಬಸವಾದಿ ಶರಣರಗಿಂತ ವೈದಿಕದ ಆಚಾರ್ಯರೆ ಇವರಿಗೆ ಮುಖ್ಯವಾಗಿದೆ. ಇಂತಹ ದ್ವಂದದ ಸಂಧರ್ಭದಲ್ಲಿ ಲಿಂಗಾಯತರನ್ನು ಒಂದಾಗಿಸುವುದು ಹೇಗೆ ? ಬಸವಾದಿ ಶರಣರ ಆಸೆಯಗಳನ್ನು ಮತ್ತೆ ಸಮುದಾಯಗಳಲ್ಲಿ ಜಾಗೃತಿಗೊಳಿಸುವುದು ಹೇಗೆ?…..ಇದಕ್ಕೆ ಪರಿಹಾರವೇನೂ?.

Leave a Reply

Your email address will not be published. Required fields are marked *