ಬೈಲಹೊಂಗಲ:
ತಾಲೂಕಿನ ನೇಗಿನಾಳ ಗ್ರಾಮದಲ್ಲಿ ಮಹಾಶಿವರಾತ್ರಿ ಹಾಗೂ ಸರ್ವಶರಣರ ದಿನಾಚರಣೆಯ ನಿಮಿತ್ತ ಚಿನ್ಮಯಜ್ಞಾನಿ ಶ್ರೀ ಚನ್ನಬಸವಣ್ಣನವರ ಜೀವನ ದರ್ಶನ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಫೆಬ್ರುವರಿ 7 ರಿಂದ 15 ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ 7.30 ರವರೆಗೆ ನಡೆಯಲಿರುವ ಪ್ರವಚನವನ್ನು ಧಾರವಾಡ ಮಮ್ಮಿಗಟ್ಟಿಯ ಪೂಜ್ಯ ಡಾ. ಬಸವಾನಂದ ಮಹಾಸ್ವಾಮಿಗಳು ನಡೆಸಿಕೊಡುವರು.

ಶ್ರೀ ಚನ್ನಬಸವಣ್ಣನವರ ಜ್ಞಾನ ಮಂಟಪದಲ್ಲಿ ನಡೆಯುವ ಪ್ರವಚನದಲ್ಲಿ ವಚನ ಭಜನೆ, ವಚನ ಪ್ರಾರ್ಥನೆ ಇರುತ್ತದೆ. ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಪೂಜ್ಯರು, ಗಣ್ಯರು, ಬಸವಪರ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸುವರು.
