ನಿಜಾಚರಣೆ: ಬೆಂಗಳೂರಲ್ಲಿ ನೂತನ ಮನೆಯ ಸಂಭ್ರಮದ ಗುರುಪ್ರವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಶಾಂತಿಪುರ ಮುಖ್ಯರಸ್ತೆ ಹತ್ತಿರದ ರಾಜೀವಗಾಂಧಿ ಗೃಹ ವಸತಿ ನಿರ್ಮಾಣ ಬಡಾವಣೆಯಲ್ಲಿ ಈಚೆಗೆ ಶರಣ ದಂಪತಿ ಶರಣಗೌಡ ಹಾಗೂ ಅಂಬಿಕಾ ಅವರು ನಿರ್ಮಿಸಿದ ನೂತನ ಮನೆ “ಬಸವಕೃಪಾ ನಿಲಯ”ದ ಗುರುಪ್ರವೇಶ ಕಾರ್ಯಕ್ರಮವು ಬಸವತತ್ವದ ಪ್ರಕಾರ ಸರಳ ಹಾಗೂ ಸಜ್ಜನಿಕೆಯೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಶಾಂತಿಪುರ ಮುಖ್ಯರಸ್ತೆಯ ಬಸವ ಮಂಟಪದಿಂದ ಬಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು, ವಚನಗಳನ್ನು ಹಾಡುತ್ತಾ, ಬಸವ ಜೈಕಾರಗಳೊಂದಿಗೆ ನೂತನ ಮನೆಯ ಗುರುಪ್ರವೇಶ ಮಾಡಲಾಯಿತು. ನಂತರ ಮನೆಯಲ್ಲಿ ಗುರು ಬಸವಣ್ಣನವರ ಹಾಗೂ ಶರಣರ ಸ್ಮರಣೆಯೊಂದಿಗೆ ಇಷ್ಟಲಿಂಗ ಅನುಸಂಧಾನದ ಮೂಲಕ ಪೂಜೆ ನೆರವೇರಿಸಲಾಯಿತು.

ಬಸವ ಪ್ರಸಾದದೊಂದಿಗೆ ಜ್ಞಾನಪ್ರಸಾದ ರೂಪದಲ್ಲಿ “ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ದಾನಮ್ಮ ಕಂದನ ವಚನಗಳು” ಎಂಬ ವಚನ ತಾಂಬೂಲವನ್ನು ಆಗಮಿಸಿದ ಎಲ್ಲ ಶರಣ ಬಂಧುಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಚನ ಮೂರ್ತಿಗಳಾದ ಶರಣ ಶ್ರೀಶೈಲ ಜಿ. ಮಸೂತೆ ಅವರು ಅನುಭಾವ ನುಡಿಗಳನ್ನು ನೀಡುವ ಮೂಲಕ ಗುರುಪ್ರವೇಶ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಬಂಧುಗಳು, ಮಿತ್ರರು ಉಪಸ್ಥಿತರಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *