ಸಮಸಮಾಜದ ಕನಸು ಕಂಡ ಧೀಮಂತರು, ಮಾನವತಾವಾದಿ ಮಂಜಪ್ಪನವರು
ಕಷ್ಟದಲ್ಲೂ, ಹಸಿವಿನಲ್ಲೂ,
ಊಟವಿಲ್ಲದೆಯೂ, ರಾಷ್ಟ್ರೀಯತೆಯನ್ನೇ, ಉಸಿರಾಗಿಸಿಕೊಂಡು ಬದುಕಿದವರು
ಶಿಕ್ಷಕರಾಗಿ ಮಕ್ಕಳ ಮನಗೆದ್ದು,
ಅಕ್ಷರ ಕಲಿಸಿದವರು,
ಹರ್ಡೇಕರ್ ಮಂಜಪ್ಪನವರು
ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಲು,
ಧನುರ್ದಾರಿ ಪತ್ರಿಕೆ ಹೊರತಂದು,
ಪ್ರಖ್ಯಾತರಾದವರು ಶರಣ ಮಂಜಪ್ಪನವರು
ರಾಷ್ಟ್ರವಾದಿ ಶರಣ, ಹರ್ಡೇಕರ್ ಮಂಜಪ್ಪನವರು
ಜಗತ್ತಿನಲ್ಲೇ ಮೊಟ್ಟಮೊದಲು ಬಸವ ಜಯಂತಿಯನ್ನು ಆಚರಿಸಲು ಕರೆ ಕೊಟ್ಟವರು,
ಬಸವಪ್ರಿಯ ಮಂಜಪ್ಪನವರು
ಬಸವಣ್ಣನನ್ನು ಗಾಂಧೀಜಿಗೆ,
ಗಾಂಧೀಜಿಯನ್ನು ಕರುನಾಡಿಗೆ ಪರಿಚಯಿಸಿದವರು.
ಹರ್ಡೇಕರ್ ಮಂಜಪ್ಪನವರು
ಗಾಂಧಿವಾದದ ಖಾದಿ,
ಬಸವತತ್ವದ ವಿಭೂತಿಯನ್ನು ಧರಿಸಿ,
ಶಿಸ್ತಿನ ಜೀವನ ನಡೆಸಿದವರು ಶರಣ ಮಂಜಪ್ಪನವರು
ಅಥಣಿ ಶಿವಯೋಗಿಗಳಿಂದ ಲಿಂಗ ದೀಕ್ಷೆ ಪಡೆದು,
ನಿಜಾಚರಣೆಯ ಪ್ರತಿಪಾದಿಸಿದವರು ಹರ್ಡೇಕರ್ ಮಂಜಪ್ಪನವರು
ದಾವಣಗೆರೆಯಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪಿಸಿ,
ಜನಾಂದೋಲನ ರೂಪಿಸಿದ ಹೆಮ್ಮೆಯ ಕನ್ನಡಿಗ ಮಂಜಪ್ಪನವರು.
ಸ್ತ್ರೀ ಸಮಾಜದ ಜಾಗೃತಿಗಾಗಿ
ಅಕ್ಕಮಹಾದೇವಿ ಜಯಂತಿಯನ್ನು ಆರಂಭಿಸಿದ ಮಹಾತ್ಮರು ಮಂಜಪ್ಪನವರು
ಪ್ರಥಮವಾಗಿ ಗಾಂಧೀಜಿಯ ಚರಿತ್ರೆ ರಚಿಸಿದವರು ಮಂಜಪ್ಪನವರು
ಬಂಥನಾಳ ಶಿವಯೋಗಿಗಳ ಜೊತೆಗೂಡಿ,
ಬಸವತತ್ವವನ್ನು ಹಳ್ಳಿ ಹಳ್ಳಿಗೂ,
ಗಲ್ಲಿ ಗಲ್ಲಿಗೂ, ತಲುಪಿಸಿದವರು ಹರ್ಡೇಕರ್ ಮಂಜಪ್ಪನವರು
ಕನ್ನಡದಲ್ಲಿ ಮೊಟ್ಟಮೊದಲ ಆತ್ಮಚರಿತ್ರೆ ರಚಿಸಿದ ಮಹಾತ್ಮ ಮಂಜಪ್ಪನವರು
ಜೀವನದ ಕೊನೆಯ ಕ್ಷಣದಲ್ಲೂ…
ಭಾರತೀಯತೆಯನ್ನೇ ಉಸಿರಾಗಿಸಿಕೊಂಡವರು ಶರಣ ಹರ್ಡೇಕರ್ ಮಂಜಪ್ಪನವರು
ಧೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರ ರಾಷ್ಟ್ರ
ವೀರರಾಗಿರಿ, ಎಂಬ ಸಂದೇಶವನ್ನು ಕೊಟ್ಟು,
ಬಸವ ಬಯಲಿನಲ್ಲಿ ಬಯಲಾದವರು, ಕರುನಾಡ ಗಾಂಧಿ, ಹರ್ಡೇಕರ್ ಮಂಜಪ್ಪನವರು …
