ಶಿವಾನಂದ ಶ್ರೀಗಳ ‘ಬಸವ ದರ್ಶನ ಪ್ರವಚನ’ದ ಕರಪತ್ರ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಡಾ. ಚನ್ನಬಸವ ಪಟ್ಟದ್ದೇವರ 27ನೆಯ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2026 ಹಾಗೂ ನಾಡೋಜ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಡೆಯಲಿದೆ.

ಉತ್ಸವದ ನಿಮಿತ್ಯ ಏಪ್ರಿಲ್ 01 ರಿಂದ 20 ರವರೆಗೆ ಪ್ರತಿದಿನ ಸಾಯಂಕಾಲ 6-00 ಗಂಟೆಗೆ ಶ್ರೀ ಸಿದ್ಧೇಶ್ವರ ಮಠ, ಹಂದಿಗುಂದದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು, ಅವರಿಂದ ಬಸವ ದರ್ಶನ ಪ್ರವಚನ ನಡೆಯಲಿದೆ.

ಪ್ರವಚನದ ಕರಪತ್ರ ಬಿಡುಗಡೆಗೊಳಿಸುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯ ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ಪೂಜ್ಯರ ಸ್ಮರಣೋತ್ಸವ ಹಾಗೂ ನಮ್ಮ ಅಮೃತ ಮಹೋತ್ಸವ ನೆಪಮಾತ್ರ. ಆದರೆ ಆ ಒಂದು ನೆಪದಲ್ಲಿ ಬಸವತತ್ವ ಪ್ರಸಾರ ಮಾಡುವುದೇ ನಮ್ಮ ಮೂಲ ಉದ್ದೇಶವಾಗಿದೆ.

ಅದಕ್ಕಾಗಿ ಈ ವರ್ಷ ಬಸವ ದರ್ಶನ ಪ್ರವಚನವನ್ನು ಏರ್ಪಡಿಸಲಾಗಿದೆ. ಅದಕ್ಕಾಗಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಾವೆಲ್ಲರೂ ಪ್ರಯತ್ನಿಸಬೇಕು. ಇಂದಿನ ದಿನಮಾನಗಳಲ್ಲಿ ಮನೆ ಮನೆಗೆ ಹೋಗಿ ಆಮಂತ್ರಣ ನೀಡುವ ಅನಿವಾರ್ಯತೆ ಉಂಟಾಗಿದೆ. ಧರ್ಮ ಕಾರ್ಯಕ್ಕಾಗಿ ದುಡಿದವರಿಗೆ ದೇವರ ಕರುಣೆ ಆಗುತ್ತದೆ.

ಬಸವಗುರುವಿನ ಕರುಣೆ ಆಗಬೇಕಾದರೆ ನಾವು ಬಸವಕಾರ್ಯಕ್ಕೆ ದುಡಿಯುವುದನ್ನು ಕಲಿಯಬೇಕು. ಬಸವತತ್ವ ಪ್ರಸಾರದ ಕಳಕಳಿ ನಮ್ಮಲ್ಲಿ ಇರಬೇಕು. ನಮ್ಮ ಕೌಟುಂಬಿಕ ಕಾರ್ಯಕ್ಕಾಗಿ ನಾವು ಎಲ್ಲರಿಗೆ ಹೇಗೆ ಪ್ರೀತಿಯಿಂದ ಆಮಂತ್ರಿಸುತ್ತೇವೆ ಅದೇ ರೀತಿ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಮಯ ನೀಡಿದರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಆಶೀರ್ವಚನ ನೀಡಿದರು.

ಕಲಬುರಗಿಯ ಹಿರಿಯ ಸಾಹಿತಿಗಳಾದ ಡಾ. ಕಲ್ಯಾಣರಾವ ಪಾಟೀಲ ಕರಪತ್ರ ಬಿಡುಗಡೆ ಮಾಡಿದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಪಂಕಜಾ ಶಿವು ಲೋಖಂಡೆ, ರೇಖಾ ಶಿವರಾಜ ಮಹಾಜನ, ರೇಖಾಬಾಯಿ ರಾಜಶೇಖರ ಅಷ್ಟೂರೆ, ನಿರ್ಮಲಾ ಚಂದ್ರಕಾಂತ ಪಾಟೀಲ, ಶಾರದಾಬಾಯಿ ಬಾಬುರಾವ ಹುಣಜೆ, ಸುನೀತಾ ಮಹಾದೇವಪ್ಪ ಮಮ್ಮಾ, ರುದ್ರಾಣಿ ವಿಲಾಸ ಬಕ್ಲಾ, ಸುವರ್ಣಾ ಓಂಕಾರ ಬಲ್ಲೂರೆ, ಪ್ರೇಮಲಾ ಶರಣಪ್ಪ ತೊಂಡಾರೆ, ವನಿತಾ ಶಿವಕುಮಾರ ಪಾಟೀಲ, ಬಸಮ್ಮತಾಯಿ, ಶಂಭುಲಿಂಗ ಕಾಮಣ್ಣ, ನಾಗಶೆಟ್ಟೆಪ್ಪ ಲಂಜವಾಡೆ, ಗುಂಡಪ್ಪ ಸಂಗಮಕರ, ಶಾಂತಯ್ಯ ಸ್ವಾಮಿ, ರಾಜು ಜುಬರೆ, ಮಲ್ಲಿಕಾರ್ಜುನ ಹುಣಜೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಲ್ಲಮ್ಮ ಆರ್. ಪಾಟೀಲ ಅವರಿಗೆ ಕರ್ನಾಟಕ ಸರಕಾರದ ಕಿತ್ತೂರು ರಾಣಿ ಪ್ರಶಸ್ತಿ ಘೋಷಣೆ ಆದ ಪ್ರಯುಕ್ತ ಅವರಿಗೆ ಪೂಜ್ಯರಿಂದ ಸನ್ಮಾನಿಸಲಾಯಿತು. ದೀಪಕ ಠಮಕೆ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *