ಜೇಡರ ದಾಸಿಮಯ್ಯನವರ ವಚನಗಳನ್ನು ಓದಿ, ಪ್ರಭಾವಿತರಾದ ಗುರುಮೂರ್ತಿ ಅಥಣಿ
ಬೆಂಗಳೂರು:
ನಗರದ ಚಂದಾಪುರ ಹತ್ತಿರದ ಸೂರ್ಯ ಸಿಟಿ ಮೊದಲ ಹಂತದ ಕೆ.ಎಚ್.ಬಿ. ಕಾಲೋನಿಯಲ್ಲಿರುವ ಗುರುಮೂರ್ತಿ ಅಥಣಿ ಸೇರಿದಂತೆ ಕುಟುಂಬದ 10 ಜನ ಸದಸ್ಯರು ವಚನಮೂರ್ತಿ ಶ್ರೀಶೈಲ ಮಸೂತೆ ಅವರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.
ಗುರು ಬಸವಣ್ಣನವರ ಮತ್ತು ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ವಚನಗಳನ್ನು ಓದಿ, ಪ್ರಭಾವಿತರಾಗಿ ಬಸವಾದಿ ಶರಣರು ಕೊಟ್ಟ ಅರಿವಿನ ಪ್ರಜ್ಞೆಯ ಕುರುಹಾದ ಇಷ್ಟಲಿಂಗ ದೀಕ್ಷೆ ಪಡೆಯಲು ಅಥಣಿ ಕುಟುಂಬದವರು ಆಸಕ್ತಿ ಹೊಂದಿದ್ದರು.
ಕಳೆದ 5 ವರ್ಷದಿಂದ ಸ್ವಿಡನ್ ದೇಶದಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಗುರುಮೂರ್ತಿ ನೇಕಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಗುರುಮೂರ್ತಿ ಮಸೂತೆ ಅವರನ್ನು ಸಂಪರ್ಕಿಸಿ ನಾವು ಭಾರತಕ್ಕೆ ಬರುತ್ತಾ ಇದ್ದೇವೆ. ನಮಗೆ ಅಂದರೆ ನಮ್ಮ ಕುಟುಂಬದ ಹತ್ತು ಜನರಿಗೆ ಇಷ್ಟಲಿಂಗ ದೀಕ್ಷೆ ದಯಪಾಲಿಸಬೇಕು ಎಂದು ಕೋರಿಕೊಂಡಿದ್ದರು.
ಅವರ ಕೋರಿಕೆಯನ್ನು ಸಂತೋಷದಿಂದ ಸ್ವೀಕರಿಸಿ ಕಳೆದ ಮಾ. 28 ರಂದು ಗುರುಮೂರ್ತಿ ಮನೆಯಲ್ಲಿ ದೀಕ್ಷಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಸೂತೆ ಅನುಭಾವ ನೀಡುತ್ತ, ಬಸವ ಗುರುವಿನ ನೆನಹು ಮಾಡಿದರು. ಬಸವಣ್ಣ ಯಾರು? ಅವರು ನಮಗೇನು ಕೊಟ್ಟು ಹೋಗಿದ್ದಾರೆ ಎಂಬುದನ್ನು ಹೇಳಿದರು.

ಬಸವಾದಿ ಶರಣರು ಕಂಡ ಶಿವ ಯಾರು? ಅವನು ಹೇಗೆ? ಮತ್ತು ಎಲ್ಲಿದ್ದಾನೆ? ಎಂಬುದನ್ನು ಹೇಳುವ ಮೂಲಕ ದೇವರ ಬಗ್ಗೆ ವಿವರಣೆ ನೀಡಿದರು.
ಭಕ್ತನ ಕಾಯವೇ ಶಿವನ ಕಾಯ, ಶಿವನ ಕಾಯವೇ ಭಕ್ತನ ಕಾಯ.
ಶಿವ ಶಿವ, ಭಕ್ತ ಬೇರೆಯೇ?
ಶಿವ ಬೇರೆಯೇ? ಒಂದೆ ಕಾಣಿರಯ್ಯಾ.
ಭಕ್ತಂಗೂ ದೇವಂಗೂ ಕಾಯವೊಂದೇ, ಪ್ರಾಣವೊಂದೇ ಎರಡೆಂಬ ಪರಿಭಾಷೆಯ ನುಡಿಯಲಾಗದು ಭಕ್ತರಾದವರು ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
ಸವಸಂ 11/918
ಶರಣರ ನಿರಾಕಾರ ಶಿವ ನೆಲದ
ಮರೆಯ ನಿಧಾನದಂತೆ, ನೊರೆ
ಹಾಲದೊಳಗೆ ತುಪ್ಪದ ಕಂಪಿಲ್ಲದಂತೆ ಇರುವಂತೆ ಅಂತರಾಮಿಯೊಳಗೆ ಶಿವನುಂಟು ಎನ್ನುವ ಶರಣರ ನಿರಾಕಾರ ಶಿವನನ್ನು ನೋಡಲು, ಅರಿಯಲು ಮತ್ತು ಅನುಭವಿಸಲು ತನ್ನ ಮೂಲ ಸ್ವರೂಪವನ್ನು ಅರಿಯಲು ಕನ್ನಡಿ ಎಂಬ ವಿಶ್ವದ ಆಕಾರದ ಇಷ್ಟಲಿಂಗ ಎಂಬ ಅರಿವಿನ ಪ್ರಜ್ಞೆಯ ಕುರುಹುನ್ನು ಬಸವಣ್ಣನವರು ಕರುಣಿಸಿ ಕೈಗಿತ್ತು ಹೀಗೆ ಹೇಳುತ್ತಾರೆ.

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೇ ಕಂಬವೆಂದು
ದೇಹವೇ ದೇಗುಲ ಶಿರವೇ ಕಳಸ ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಕೂಡಲ ಸಂಗಮದೇವಾ.
ಬಸವ ಗುರು ಕರುಣಿಸಿದ ಇಷ್ಟಲಿಂಗದ ಅರಿವು ನೀಡಿ ಇಷ್ಟಲಿಂಗವನ್ನು ಅವರ ಕರಸ್ಥಲಕ್ಕೆ ಇಟ್ಟು ಕೊರಳಲ್ಲಿ ಧರಿಸಲು ಹೇಳಿ ಸದಾ ನಿತ್ಯ ದೇಹದ ಮೇಲೆ ಧರಿಸಿ ನಿತ್ಯ ಪೂಜೆ ಮಾಡಿಕೊಳ್ಳಬೇಕು.
ದೇಹವೇ ದೇಗುಲ ಎಂದು ಅರಿತು, ಸತ್ಯಶುದ್ಧ ಕಾಯಕ ಮಾಡುತ್ತಾ ಒಕ್ಕದು ಬದುಕಿಗೆ ಇಟ್ಟುಕೊಂಡು ಮಿಕ್ಕಿದ್ದು ಇಲ್ಲದವರಿಗೆ ಹಂಚಿ ದಾಸೋಹ ತತ್ವ ಪಾಲಿಸಬೇಕು.
ಅಷ್ಟಾವರಣವೇ ಅಂಗ ಪಂಚಾಚರವೆ ಪ್ರಾಣ, ಷಟಸ್ಥಲವೇ ಆತ್ಮ ಎನ್ನುವುದು ಲಿಂಗಾಯತ ದರ್ಶನ ಮತ್ತು ದಯವೇ ಧರ್ಮದ ಮೂಲ ಎನ್ನುವ ಮೂಲಕ ತನ್ನಂತೆ ಇತರರು ಎನ್ನುವ ಅರಿವಿನ ಧರ್ಮವೇ ಲಿಂಗಾಯತ ಧರ್ಮ ಎಂದು ಹೇಳುವುದು ಬಸವಾದಿ ಶರಣರ ಅರಿವು ಎಂದು ಹೇಳಿ ಶರಣರ ಚಿಂತನೆ ಮೂಲಕ ಕುಟುಂಬದ ಹತ್ತು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು.

ತನ್ನುವ ಮರೆದು ದೇವರ
ಕಂಡೇನೆಂಬ ಕಾರಣ,
ಹರಿಸುರ ಬ್ರಹ್ಮಾದಿಗಳೆಲ್ಲರು ತಲೆ ಕೆಳಗಾಗಿ ಹೋದರು!
ಆ ದೇವರ ಮರೆದು ತನ್ನುವನರಿದುದುಂಟಾದರೆ,
ತಾನೆ ದಿಟವೆಂದನಂಬಿಗ ಚೌಡಯ್ಯಾ.
-ಸವಸಂ 6/157.

ಶರಣರಾದ ಗುರುಮೂರ್ತಿ ಅಥಣಿ ಕುಟುಂಬದವರಿಗೆ ಹಾರ್ಧಿಕ ಅಭಿನಂದನೆಗಳು ಬಸವಾದಿ ಶರಣರ ಕೃಪೆ ಸದಾ ಅವರ ಮೇಲಿರಲಿ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಸಹಕರಿಸಿದ ಸರ್ವರಿಗೂ ಶಲಣುಶಣಾರ್ಥಿಗಳು 💐💐🙏🙏
ಶರಣರಾದ ಗುರುಮೂರ್ತಿ ಅಥಣಿ ಕುಟುಂಬದವರಿಗೆ ಹೃತ್ಪೂರ್ತಿಕ ಅಭಿನಂದನೆಗಳು
ಗುರುಮೂರ್ತಿ, ಮಸೂತಿ ಅವರು ಬಸವಾದಿ ಶರಣರ ಸಂದೇಶವನ್ನು ಮನೆ ಮನೆಗೆ ಪ್ರಸಾರ ಮಾಡುತ್ತಿರುವ ಅಮೂಲ್ಯವಾದ ಕಾಯಕಕ್ಕೆ ಅನಂತ ಧನ್ಯವಾದಗಳು ಅರ್ಪಿಸುತ್ತೇನೆ.
ಅನಂತ ಶರಣು ಶರಣಾರ್ಥಿಗಳೊಂದಿಗೆ