ಬಸವ ಸ್ವಯಂಸೇವಕರಿಂದ ಅನುಭವ ಮಂಟಪದ ನಿರ್ವಹಣೆಯಾಗಲಿ – ಭಾಗ 4

ಬಸವಾಭಿಮಾನಗಳು ಕಾಯಕ ಸಲ್ಲಿಸಿ ಕಟ್ಟಡದ ಸ್ವಚ್ಛತೆ, ನಿರ್ವಹಣೆಗೆ ನೆರವಾಗಬೇಕು

ಬೆಂಗಳೂರು

ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ

ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು

ಭಾಗ 3 : ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು

ನೂತನ ಅನುಭವ ಮಂಟಪವು 114 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಅದರಲ್ಲಿ ಮುಖ್ಯ ಕಟ್ಟಡಕ್ಕೆ 15 ಎಕರೆ ಜಮೀನು ಸಾಕು.

ಉಳಿದ ಜಾಗದಲ್ಲಿ ಪ್ರವಾಸಿಗಳ ಸೌಕರ್ಯಕ್ಕಾಗಿ ವಸತಿ ಕಟ್ಟಡಗಳು, ಅತಿಥಿ ಗೃಹಗಳು, ಆಡಳಿತ ಕಛೇರಿ ಇತ್ಯಾದಿಗಳನ್ನು ಕಟ್ಟಲಾಗುವುದು. ಕೆಲವು ಅಗತ್ಯವಾದ ಅಂಗಡಿ-ಮುಗ್ಗಟ್ಟುಗಳೂ ಇರುತ್ತವೆ. ವಿವಿಧ ರೀತಿಯ ಸುಂದರವಾದ ಉದ್ಯಾನಗಳೂ ಇರುತ್ತವೆ.

ಇವುಗಳ ನಿರ್ವಹಣೆ ಬಹುಮುಖ್ಯ.

ಭೌತಿಕ ಸ್ಥಾವರಗಳ ಸರಿಯಾದ ನಿರ್ಮಲವಾದ ಪರಿಸರದ ನಿರ್ವಹಣೆ ಮೊದಲು ಆದ್ಯತೆಯಾಗಬೇಕು. ಲಕ್ಷಾನುಗಟ್ಟಲೆ ಪ್ರವಾಸಿಗರು ಬರುವುದರಿಂದ ಸ್ವಚ್ಚ ಸುಂದರ ಮತ್ತು ಅಚ್ಚುಕಟ್ಟಾದ ನಿರ್ವಹಣೆ ಅಗತ್ಯ.

ಲಕ್ಷಾನುಗಟ್ಟಲೆ ಪ್ರವಾಸಿಗರು ಬರುವುದರಿಂದ ಸ್ವಚ್ಚ ಸುಂದರ ಮತ್ತು ಅಚ್ಚುಕಟ್ಟಾದ ನಿರ್ವಹಣೆ ಅಗತ್ಯ.

ಈ ಎಲ್ಲ ಭೌತಿಕ ಕಟ್ಟಡಗಳ ಮುಖ್ಯವಾಗಿ ಬಹು ದೊಡ್ಡ ಗಾತ್ರದ ಮುಖ್ಯ ಕಟ್ಟಡದ ನಿರ್ವಹಣೆಯೆ ಪ್ರಮುಖ ಅಂಶವಾಗಿದೆ.

ಸುಣ್ಣ ಬಣ್ಣ ಬಳಿಯುವುದು, ಪಕ್ಷಿಗಳು ಒಳಸೇರಿ ಗಲೀಜು ಮಾಡದಂತೆ ನೋಡಿಕೊಳ್ಳುವುದು, ಸುತ್ತಲಿನ ವಿಶಾಲ ಉದ್ಯಾನಗಳು, ಆಂತರಿಕ ಬೀದಿಗಳು, ಬೀದಿಯ ಬದಿಯ ಸುಂದರವಾದ ಗಿಡಮರಗಳು ಸರಿಯಾಗಿ ನಿರ್ವಹಣೆಯಾಗಬೇಕು.

ದಿನ ನಿತ್ಯ ನೀರು ಬಿಡುವ, ಬೀದಿ ಕಸ ಗೂಡಿಸುವ, ಕಟ್ಟಡದಲ್ಲಿ ಸ್ವಚ್ಛತೆ ಕಾಪಾಡಲು ಸಾಕಷ್ಟು ಸಿಬ್ಬಂದಿಯ ಅಗತ್ಯವಿದೆ.

ಈ ಎಲ್ಲ ರೀತಿಯ ಕಾರ್ಯಗಳಿಗೆ ಈಗ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿರುವ ಸಿಬ್ಬಂದಿ ಏತಕ್ಕೂ ಸಾಕಾಗುವುದಿಲ್ಲ. ಮಾಲಿಗಳೂ, ಅವರ ಮೇಲ್ವಿಚಾರಕರು, ನೈರ್ಮಲ್ಯ ನಿರೀಕ್ಷಕರು, ಪೌರ ಕಾರ್ಮಿಕರು, ಎಲೆಕ್ಟ್ರೀಶಿಯನ್, ಪ್ಲಂಬರ್, ಸೆಕ್ಯೂರಿಟಿ ಗಾರ್ಡಗಳು ಇವೆಲ್ಲ ಸಿಬ್ಬಂದಿ ಅಗತ್ಯ.

ಈ ರೀತಿಯ ಸಕ್ರಿಯ ನಿರ್ವಹಣೆಯನ್ನು ಸರ್ಕಾರ ಮಾಡಲಾರದು, ಒಂದು ವೇಳೆ ಮಾಡಿದರೂ ಅದು ಸರ್ಕಾರಿ ಕರ್ಮಚಾರಿಗಳಿಂದ ನಡೆಯುವ ಭಕ್ತಿಯಿಲ್ಲದ, ಮನಸ್ಸಿಲ್ಲದ, ಸಂಬಳ ಮತ್ತು ಗಿಂಬಳಕ್ಕಾಗಿ ಮಾಡುವ ತೋರಿಕೆಯ ಕಳಪೆ ಕಾರ್ಯವಾಗುವುದಂತೂ ನಿಶ್ಚಿತ. ಹಾಗಾದರೆ ಅದೊಂದು ದುರಂತವಾಗುತ್ತದೆ.

ಕೇವಲ ಸರ್ಕಾರದ ಮೇಲೆ ಭಾರ ಚೆಲ್ಲಿ “ಅಧಿಕಾರಿಗಳು ಮಾಡುತ್ತಾರೆ ಬಿಡಿ” ಎಂದರೆ ಸರ್ಕಾರಿ ಕೆಲಸಗಳ ಹಾಗೆ, ಸರ್ಕಾರಿ ಸಂಸ್ಥೆಗಳ ಹಾಗೆ ಈ ಕಟ್ಟಡವು ಪೂರ್ಣಗೊಂಡು ಉದ್ಘಾಟನೆಯ ನಂತರ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ಹೊಲಸಿನ ಆಗರವಾಗಿ, ಅವ್ಯವಸ್ಥೆಯ ಕೇಂದ್ರವಾಗಿ, ಬರುವವರಿಗೆ ವಾಕರಿಕೆ ತರುವ ಸ್ಥಳವಾಗುತ್ತದೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ.

ಸರ್ಕಾರದ ಮೇಲೆ ಭಾರ ನಿರ್ವಹಣೆ ಬಿಟ್ಟರೆ ಕಟ್ಟಡ ಕೆಲವೇ ತಿಂಗಳಲ್ಲಿ ಹೊಲಸಿನ ಆಗರವಾಗುತ್ತದೆ.

ಅದನ್ನು ಈ ಲೇಖಕನು ಕೂಡಲಸಂಗಮ, ಬಾಗೇವಾಡಿ, ಇಂಗಳೇಶ್ವರ, ತಂಗಡಗಿ, ಎಮ್ಕೆ ಹುಬ್ಬಳ್ಳಿ ಮತ್ತು ಬಸವ ಕಲ್ಯಾಣದಲ್ಲಿ ಪುನರ್ವಸತಿಗೊಂಡ ಶರಣ ಸ್ಮಾರಕಗಳ ಇತ್ತೀಚಿನ ದು:ಸ್ಥಿತಿಯಿಂದ ಕಂಡುಕೊಂಡ ವಾಸ್ತವಿಕ ಸತ್ಯ.

ಹಾಗಾಗದಂತೆ ಪೂರ್ವ ಎಚ್ಚರಿಕೆ ವಹಿಸಿ ಸೂಕ್ತ ಕಾರ್ಯಕ್ರಮ ಹಾಗೂ ಅವುಗಳ ಸೂಕ್ತ ನಿರ್ವಹಣೆಗೆ ಒಂದು ವ್ಯವಸ್ಥೆಯನ್ನು ಈಗಿಂದಲೇ ಚಿಂತಿಸಿ, ಯೋಚಿಸಿ ಪ್ರಾರಂಭಿಸುವುದು ಸಕಾಲಿಕವಾಗಿದೆ.

ಅನುಭವ ಮಂಟಪಕ್ಕೆ ಬರುವವರು ಒಂದಿಲ್ಲೊಂದು ಕಾಯಕವನ್ನು ಸಲ್ಲಿಸಿ ಕಟ್ಟಡದ ನಿರ್ವಹಣೆ, ಸ್ವಚ್ಛತೆಗೆ ನೆರವಾದರೆ ಮಾತ್ರ ಅದು ಪವಿತ್ರವಾದ ಸ್ಥಳವಾಗಿ ಉಳಿಯುತ್ತದೆ.

ಅನುಭವ ಮಂಟಪಕ್ಕೆ ಬರುವವರು ಒಂದಿಲ್ಲೊಂದು
ಕಾಯಕವನ್ನು ಸಲ್ಲಿಸಬೇಕು

ಬರುವವರಿಗೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ ಅವರಿಗೆಲ್ಲ ಸೂಕ್ತವಾದ ಕಾಯಕದ ಜವಾಬ್ದಾರಿ ನೀಡುವ ವ್ಯವಸ್ಥೆ ಈಗಿನಿಂದಲೇ ಸಿದ್ಧವಾಗಬೇಕು. ಇದು ನಾವೆಲ್ಲ ಬಸವಾದಿ ಶರಣರಿಗೆ ಸಲ್ಲಿಸುವ ಅಭಿಮಾನ, ಗೌರವ ಮತ್ತು ಸೇವೆಯಾಗುತ್ತದೆ.

ಈ ಕಾರ್ಯಕ್ಕೆ ಸಿಖ್ಖರು ಅಮೃತಸರದಲ್ಲಿರುವ ತಮ್ಮ ಸುವರ್ಣ ಮಂದಿರವನ್ನು ನೋಡಿಕೊಳ್ಳುತ್ತಿರುವ ರೀತಿ ನಮಗೆ ಉತ್ತಮ ಮಾದರಿಯಾಗುತ್ತದೆ. ಅದನ್ನು ಗಮನಿಸಿ ನಾವು ಕಲಿಯಬೇಕು.

(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
5 Comments
  • ಈ ನೂತನ ಅನುಭವ ಮಂಟಪದಲ್ಲಿ ಇಷ್ಟಲಿಂಗ ದೀಕ್ಷೆಯನ್ನ ಪಡೆದು ಅದನ್ನ ಎದೆಯಮೇಲೆ ಹಾಕಿಕೊಂಡು ಒಳಬರುವುದನ್ನ ಕಡ್ಡಾಯಗೊಳಿಸಬೇಕು
    ಒಂದು ವೇಳೆ ಇಷ್ಟಲಿಂಗ ಲಿಂಗ ದೀಕ್ಷೆಯನ್ನ ಪಡೆಯದೇ ಇರುವವರು ಬಂದರೆ ಅವರಿಗೆ ಅಲ್ಲಿಯೇ ಇಷ್ಟಲಿಂಗ ದೀಕ್ಷೆಯನ್ನ ನೀಡಿ ತದನಂತರವೇ ಒಳಗೆ ಬರಲು ಅನುವು ಮಾಡಿಕೊಡುಬೇಕು

    ಸಿಖ್ಖರ ಗುರುದ್ವಾರದಲ್ಲಿ ಪ್ರತಿಯೊಬ್ಬ ಸಿಖ್ಖರು ತಮ್ಮ ಅಂತಸ್ತಿನ ಅಹಂಕಾರದ ಪ್ರದರ್ಶನವಿಲ್ಲದೇ ಸಾಮಾನ್ಯ ಮನುಷ್ಯರಂತೆ ಸಲ್ಲಿಸವಂತಹ ಸೇವಾಕಾರ್ಯವನ್ನ ಸಲ್ಲಿಸವಂತಹ ವ್ಯವಸ್ಥೆಯನ್ನ ಕಡ್ಡಾಯಗೊಳಿಸುಬೇಕು

    • ಗುರುದ್ವಾರ ನಿರ್ವಹಣೆ ವ್ಯವಸ್ಥೆ ಸಲಹೆ ಒಪ್ಪಬಹುದು… ಆದರೆ ಇಷ್ಟಲಿಂಗಧಾರಣೆ ಕಡ್ಡಾಯ ಎಂದರೆ ಧರಿಸದ ಬಸವಾಭಿಮಾನಿಗಳಿಗೆ ಪ್ರವೇಶವಿಲ್ಲ ಎಂದಂತೆ …. ಖಂಡಿತಾ ಕಾರ್ಯಸಾಧುವಲ್ಲ!

  • ಶರಣು ಶರಣಾರ್ಅಥಿಗಳು,
    ಅತ್ಯಂತ ಅವಶ್ಯಕ ಕಾರ್ಯ ನಿರ್ವಹಿಸುತ್ತ ಸಾಗಲು ತಮ್ಮ ಚಿಂತನೆಯ ಮೂಲಕ ಲಿಂಗಾಯತ ಸ್ವಯಂ ಸೇವಕರ ಅವಶ್ಯಕತೆ ಇದೆ.
    ನಾನು ಶಿವರಾಜ ಬಿರಾದಾರ ಹಿರಿಯ ನಾಗರಿಕ ಮುಂಬಯಿಯ (ಭಾತಂಬ್ರಾ ಗಾಮ, ತಾ.ಭಾಲ್ಕಿ ಮುಲ.)
    ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯ
    ನಿವಾಸಿ ಯಾವ ರಿತಿ ಸೆವೆ ಸಲ್ಲಿಸಬಹುದು.
    ಸಂಪರ್ಕ: ೯೮೨೦೫೧೮೮೧೧ ವಾಟ್ಸ್ಯಾಪ ಮಾಡಿ.

  • ಸ್ವಛ್ಚತೆ ಮತ್ತು ಶಿಸ್ಥಿಗೆ ಹೆಚ್ಚು ಆದ್ಯತೆ ಕೊಡಬೇಕು

  • 🙏🏾🔯 ಓಂ ಶ್ರೀ ಗುರು ಬಸವಲಿಂಗಾಯ ನಮಃ🔯🙏🏾 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಾದಿ ಶರಣರು ಮಹಾಮನೆಗೆ ಯಾವ ರೀತಿ ಪ್ರವೇಶಾತಿ ವ್ಯವಸ್ಥೆಯನ್ನು ಮಾಡಿದ್ದರೋ ಅದೇ ರೀತಿ ಈ ಅನುಭವ ಮಂಟಪಕ್ಕೂ ಮಾಡಿದರೇ ಸೂಕ್ತವಾಗುತ್ತದೆ 🔯🌍🙏🏾

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ