ಸಿಖ್ಖರ ಸುವರ್ಣ ಮಂದಿರದಂತೆ ಅನುಭವ ಮಂಟಪ ನಿರ್ವಹಣೆಯಾಗಲಿ – ಭಾಗ 5

ಸಿಖ್ಖರ ಗುರುದ್ವಾರಗಳಲ್ಲಿ ಎಲ್ಲಾ ಕೆಲಸಗಳನ್ನು ಸ್ವಯಂಸೇವಕರೇ ಮನಸಾಕ್ಷಿಯಾಗಿ ಮಾಡುತ್ತಾರೆ.

ಬೆಂಗಳೂರು

ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ

ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು

ಭಾಗ 3 : ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು

ಭಾಗ 4: ಬಸವ ಸ್ವಯಂಸೇವಕರಿಂದ ಅನುಭವ ಮಂಟಪದ ನಿರ್ವಹಣೆಯಾಗಲಿ

ಈಗ ನಿರ್ಮಾಣವಾಗುತ್ತಿರುವ ಬೃಹತ್ ಅನುಭವ ಮಂಟಪದ ಕಟ್ಟಡ ನಿರ್ವಹಣೆಯನ್ನು ಸರ್ಕಾರದ ಮೇಲೆ ಬಿಟ್ಟರೆ ಅದೊಂದು ಅವ್ಯವಸ್ಥೆಯ ಆಗರವಾಗುತ್ತದೆ. ಇಷ್ಟೊಂದು ಮಹತ್ವದ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಲು ಸರ್ಕಾರ ಅಸಮರ್ಥವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಅನುಭವ ಮಂಟಪಕ್ಕೆ ಬರುವವರು ಒಂದಿಲ್ಲೊಂದು ಕಾಯಕವನ್ನು ಸಲ್ಲಿಸಿ ಕಟ್ಟಡದ ನಿರ್ವಹಣೆ, ಸ್ವಚ್ಛತೆಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಬಸವಾಭಿಮಾನಿಗಳಿಗೆ ಸಿಖ್ಖರು ಸುವರ್ಣ ಮಂದಿರವನ್ನು ನಿರ್ವಹಣೆ ಮಾಡುತ್ತಿರುವ ರೀತಿ ಮಾದರಿಯಾಗಲಿ.

ಅನುಭವ ಮಂಟಪಕ್ಕೆ ಬರುವವರು ಒಂದಿಲ್ಲೊಂದು
ಕಾಯಕವನ್ನು ಸಲ್ಲಿಸಿ ಕಟ್ಟಡದ ನಿರ್ವಹಣೆ, ಸ್ವಚ್ಛತೆಗೆ ನೆರವಾಗಬೇಕು.

ಅಲ್ಲಿನ ಲಂಗರಗಳಲ್ಲಿ ಅಡುಗೆ ಮಾಡುವುದು, ಪಾತ್ರೆ ಪಗಡಗಳನ್ನು ತೊಳೆದು ಸ್ವಚ್ಛಗೊಳಿಸುವುದು, ಬರುವ ಯಾತ್ರಿಕರಿಗೆ ಅನ್ನ ಸಂತರ್ಪಣೆ ಮಾಡುವುದು, ಮಾರುಕಟ್ಟೆಯಿಂದ ದಿನಸಿ ತರುವುದು, ಆಗುಂತಕರನ್ನು ಸ್ವಾಗತಿಸುವುದು, ಸುತ್ತಲಿನ ಉದ್ಯಾನ ಹಾಗೂ ಇತರ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಸಸ್ಯಗಳಿಗೆ ನೀರು ಬಿಡುವುದು, ಸಸಿ ನೆಡುವುದು, ಕಳೆ ತೆಗೆಯುವುದು, ನರ್ಸರಿ ನೋಡಿಕೊಳ್ಳುವುದು, ಪೂಜಾ, ಪ್ರಾರ್ಥನೆ ಹಾಗೂ ಕೀರ್ತನೆ ಪ್ರವಚನಗಳ ವ್ಯವಸ್ಥೆಯಲ್ಲಿ ಸಹಾಯ ಮಾಡುವುದು ಇತ್ಯಾದಿ ಎಲ್ಲ ಕೆಲಸಗಳನ್ನು ಸ್ವಯಂಸೇವಕರೇ ಮನಸಾಕ್ಷಿಯಾಗಿ ಮಾಡುತ್ತಾರೆ.

ಸುವರ್ಣ ಮಂದಿರ ಮಾತ್ರವಲ್ಲ ಎಲ್ಲಾ ಗುರುದ್ವಾರಗಳೂ ಸಾಮಾನ್ಯ ಸಿಖ್ಖರ ಕಾಯಕದಿಂದಲೇ ನಡೆಯುತ್ತವೆ. ಹೀಗಾಗಿ ಆ ಸ್ಥಳಗಳು ಸ್ವಚ್ಛವಾಗಿ, ಅಚ್ಚುಕಟ್ಟಾಗಿ, ಸುಂದರವಾಗಿ ಇಡಲ್ಪಟ್ಟಿರುತ್ತವೆ.

ಅಂತಹದೇ ವ್ಯವಸ್ಥೆಯನ್ನು ಅನುಭವ ಮಂಟಪದ ನಿರ್ವಹಣೆಯಲ್ಲಿ ಅಳವಡಿಸಿಕೊಳ್ಳಬಹುದು. ಈ ಬಗ್ಗೆ ಈಗಿನಿಂದಲೇ ವಿಚಾರ ಮಂಥನ, ಯೋಜನೆ ತಯಾರಾಗಬೇಕು. ಅನುಭವ ಮಂಟಪಕ್ಕೆ ಬರುವವರಿಗೆ ಒಂದಿಲ್ಲೊಂದು ಕಾಯಕವನ್ನು ಒದಗಿಸುವ ವ್ಯವಸ್ಥೆ ರೂಪಿಸಬೇಕು.

ಇದೇ ರೀತಿಯ ವ್ಯವಸ್ಥೆಗಳನ್ನು ಸಾಯಿ ಮಂದಿರಗಳಲ್ಲಿ, ಅಕ್ಷರಧಾಮಗಳಲ್ಲಿ, ಬ್ರಹ್ಮಕುಮಾರಿಯವರ ಕೇಂದ್ರಗಳಲ್ಲಿ ಕಾಣುತ್ತೇವೆ.

ಅನುಭವ ಮಂಟಪಕ್ಕೆ ಬರುವವರಿಗೆ ಒಂದಿಲ್ಲೊಂದು
ಕಾಯಕವನ್ನು ಒದಗಿಸುವ ವ್ಯವಸ್ಥೆ ರೂಪಿಸಬೇಕು.

ವಿಚಿತ್ರವೆಂದರೆ ಸಾಯಿ ಮಂದಿರಗಳಲ್ಲಿ, ಬ್ರಹ್ಮಕುಮಾರಿ ಆಶ್ರಮಗಳಲ್ಲಿ, ಯೋಗ ಕೇಂದ್ರಗಳಲ್ಲಿ, ಆರೆಸ್ಸಸ್ ಶಿಬಿರಗಳಲ್ಲಿ ಲಿಂಗಾಯತರು ಶ್ರಮದಾನ ಮಾಡುವುದನ್ನು ಕಾಣಬಹುದು. ಈ ವ್ಯವಸ್ಥೆಯನ್ನು ಅನುಭವ ಮಂಟಪದಲ್ಲಿಯೂ ರೂಢಿಸಿಕೊಳ್ಳುವುದು ಸಾಧ್ಯ ಎಂದು ಇದು ತೋರಿಸುತ್ತದೆ.

ಇದರ ಜೊತೆ ಹಣಕಾಸಿನ ಬಗ್ಗೆಯೂ ಚಿಂತನೆಯಾಗಬೇಕು. ಅನುಭವ ಮಂಟಪದ ನಿರ್ವಹಣೆಗೆ ಪ್ರತಿ ವರ್ಷ ನಾಲ್ಕೈದು ಕೋಟಿ ರೂಪಾಯಿ ಅಗತ್ಯವಿರುತ್ತದೆ. ಅದಕ್ಕೆ ಕಾರ್ಪಸ್ ಫಂಡ್ ಕೂಡಿಸಿ ಅದರ ಬಡ್ಡಿಯಿಂದ ಈ ಖರ್ಚನ್ನು ನಿರ್ವಹಿಸಬಹುದು. ಶರಣ ಸಮಾಜದಲ್ಲಿ ಈ ಸಾಮರ್ಥ್ಯವಿದೆ. ಎಲ್ಲರೂ ಒಮ್ಮನಸಿನಿಂದ ಕೈ ಜೋಡಿಸಿದರೆ ಇದು ಸಾಧ್ಯ.

(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
1 Comment
  • ಅನುಭವ ಮಂಟಪದಲ್ಲಿ ನಿತ್ಯ ವಚನ ಗಳ ಪಠಣ ಅರ್ಥ ವಿವರಣೆ ಯೊಂದಿಗೆ ಆಗಬೇಕು.
    ಸುಶ್ರಾವ್ಯ ಸಂಗೀತದ ಮೂಲಕ ವಚನ ಗಾಯನ ಆಗಬೇಕು.
    ಗ್ರಾಮೀಣ ಜನರ ಭಜನಾ ಮಂಡಳಿಗಳಿಗೆ ವಚನಗಳನ್ನು ಭಜನೆಯಲ್ಲಿ ಅಳವಡಿಸಿ, ಶರಣರ ಇತಿಹಾಸ, ಲಿಂಗಾಯತ ಧರ್ಮದ ಇತಿಹಾಸ ಭಜನೆಯಲ್ಲಿ ಅಳವಡಿಸಿ ಭಜನೆ ಮಾಡಲು ಅವಕಾಶ ಕೊಡಬೇಕು.
    ಇದೆ ವಿಷಯದಲ್ಲಿ ಜಾನಪದ ಗೀತೆಗಳನ್ನು ಹಾಡಲು ಅನುಕೂಲ ಮಾಡಿ ಕೊಡಬೇಕು.

    ಶಿರಡಿಯಲ್ಲಿ ಇರುವಂತೆ ಜನರಿಗೆ ಉಚಿತ ಊಟ, ತಿನಿಸು, ಚಹಾ, ವ್ಯವಸ್ಥೆ ಇರಬೇಕು. ಯಾರಿಗೂ ವಿಶೇಷ VIP (ಮಂತ್ರಿ, ಶಾಸಕ) ಉಪಚಾರ ಇಡಬಾರದು. ಲಿಂಗಾಯತ ಧರ್ಮ ತತ್ವದಂತೆ ಸಮಾನತೆ ಕಾಯದು ಕೊಳ್ಳಬೇಕು.
    ಉಚಿತ ಬಸ್ ವ್ಯವಸ್ಥೆ ಮಾಡಬೇಕು. 3 ದಿನದ ಉಚಿತ ವಸತಿ ವ್ಯವಸ್ಥೆ ಮಾಡಿಕೊಡಬೇಕು.
    ಕಡಿಮೆ ವೆಚ್ಚದಲ್ಲಿ A/c ರೂಮು, ಇಲ್ಲದ ರೂಮು, ಉಚಿತ ಸಾಮೂಹಿಕ ಕೊಠಡಿ, ಉಚಿತ ಶೇಡ್, ವ್ಯವಸ್ಥೆ ಇರಬೇಕು.
    ಉಳವಿ ಗೆ ಜನರು ಉಂಡುಟ್ಟು ಉರುಳಾಡಿ ಬರಲು ಹೋಗಬೇಕು ಅನ್ನುತ್ತಾರೆ. ಹಾಗೆ ಇರಬೇಕು. ಅಲ್ಲಿ ನಿತ್ಯ ದೇವಸ್ಥಾನದ ವತಿಯಿಂದ ಚಹಾ, ತಿನಿಸು, ಊಟ, ವ್ಯವಸ್ಥೆ ಬೆಳಗಿನ 8 ರಿಂದ ರಾತ್ರಿ 8 ವರೆಗೆ ಇರುತ್ತದೆ.

    ಇಷ್ಟೆಲ್ಲಾ ಉಚಿತ ಸೇವೆ ಕೊಡಲು ಸಾಧ್ಯವೇ? ಹಣದ ಕ್ರೋಢೀಕರಣ ಹೇಗೆ? ಇದು ದೊಡ್ಡ ಸಮಸ್ಯೆ, ಪುಟಾಣಿ ತಿಂದಷ್ಟು ಸುಲಭ ಪರಿಹಾರ ಇದೆ.
    ಅಡುಗೆ ಮನೆಯಲ್ಲಿ ಸ್ವಯಂ ಸೇವಕರಿಗೆ ಅವಕಾಶ ಕೊಡಬೇಕು. ಅವರಿಗೆ ಕೆಲವೇ ಕೆಲವು ಖಾಯಂ ನೌಕರರು ಸಹಾಯ ಮಾಡಬೇಕು
    ಈ ಖಾಯಂ ನೌಕರರು, ಗಟ್ಟಿ ಮುಟ್ಟಾದ, ಕಾಯಕ ಮಾಡಿ ಬದಕಲು ಬಯಸುವ ಅನಾಥ ರಾಗಿದ್ದರೆ, ಒಳ್ಳೆಯದು.

    ಸರಕಾರಿ ಬಿಸಿಯೂಟದ ಗುತ್ತಿಗೆ ಪಡೆದರೆ ಒಂದಿಷ್ಟು ಹಣ ಮತ್ತು ಹೆಸರು ಬರುತ್ತದೆ .

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ