ಹುಬ್ಬಳ್ಳಿ:
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಸಮ್ಮೇಳನ ಪ್ರಯುಕ್ತ ಇಲ್ಲಿನ ವಿದ್ಯಾನಗರದ ಕನಕದಾಸ ಕಾಲೇಜು ಸಭಾಂಗಣದಲ್ಲಿ ಎಪ್ರೀಲ್ 18ರಂದು ಮಹಿಳೆಯರಿಗಾಗಿ ವಚನ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ.
ಕನಿಷ್ಠ ಇಬ್ಬರು, ಗರಿಷ್ಠ ಐದು ಮಂದಿಯ ತಂಡ ವಾದ್ಯಗಳನ್ನು ಬಳಸದೆ ವಚನ ಗಾಯನಕ್ಕೆ ಅವಕಾಶವಿದೆ. ಶರಣರ ವಚನಗಳನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಹಾಡಬಹುದು. ಪ್ರವೇಶ ಶುಲ್ಕ ₹100 ಇರುತ್ತದೆ.
ವಿಜೇತರಿಗೆ ನಗದು ಬಹುಮಾನ, ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು. ಹೆಸರು ನೋಂದಣಿಗೆ ಎಪ್ರೀಲ್ 6 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ 94821 81305 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
