“ಅವ್ವಾಸ್ ಬಸವ ಆಯಿಲ್ಸ್”ನಲ್ಲಿ ಅಕ್ಕಮಹಾದೇವಿ, ಶಿವಕುಮಾರ ಸ್ವಾಮೀಜಿ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು :

ಬಸವೇಶ್ವರ ನಗರದ ಬಸವೇಶ್ವರ ರಸ್ತೆಯಲ್ಲಿನ “ಅವ್ವಾಸ್ ಬಸವ ಆಯಿಲ್ಸ್”ನಲ್ಲಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಪುಷ್ಪಾರ್ಚನೆ, ವಚನಗಾಯನ ಹಾಗೂ ಪ್ರವಚನಗಳ ಮೂಲಕ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಹಿರಿಯ ಶರಣರಾದ ಕಾ.ಸು. ನಂಜಪ್ಪನವರು ಮಾತನಾಡಿ, ಮಹಾತ್ಮರ ಜಯಂತಿಗಳನ್ನು ಆಚರಿಸುವುದರಿಂದ ಸಮಾಜದಲ್ಲಿ ಸತ್ಯ ಸಂಸ್ಕಾರಗಳು ಮತ್ತು ಧಾರ್ಮಿಕ ಮೌಲ್ಯಗಳು ಬೆಳೆಯುತ್ತವೆ ಎಂದು ಹೇಳಿದರು.

ವಿಶ್ವ ಬಸವಸೇನೆಯ ಅಧ್ಯಕ್ಷರಾದ ಬಸವಯೋಗೇಶ, ಎಲ್ಲಾ ಬಸವಾದಿ ಶರಣರ ಜಯಂತಿಯನ್ನು ಆಚರಿಸಲು ಕರೆ ನೀಡಿದರು. ಅನುರಾಗ ಮಕ್ಕಳ ಮನೆಯ ಸೋಮಶೇಖರ ಮತ್ತು ಜ್ಯೊತಿ ಸುರೇಶ ಕಾರ್ಯಕ್ರಮ ಮಹತ್ವದ ಬಗ್ಗೆ ತಿಳಿಸಿದರು.

ಅಕ್ಕಮಹಾದೇವಿ ವಿದ್ಯಾರ್ಥಿನಿಲಯದ ಚೆನ್ನಪ್ಪ, ಆಯರಹಳ್ಳಿ ಪ್ರಭುಸ್ವಾಮಿ, ಹಂಗಳಪುರ ಸುರೇಶ, ಮಧು ಶಂಕರ, ಕವಿತಾ ರವಿ, ನಂದೀಶ್ವರ ಮಾಸ್ಟರ್, ಮುದ್ದಹಳ್ಳಿ ಅಶೋಕ, ಬಸವ ಆಯಿಲ್ಸ್ ನ ಮಂಜುನಾಥ, ಕೊಂಗಳ್ಳಿ ಜ್ಯೊತಿ, ಸ್ಥಳೀಯ ಭಕ್ತರು, ಗಣ್ಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಆಯೋಜಕಿ ರೂಪ ಮಂಜುನಾಥ ಎಲ್ಲರಿಗೂ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *