ಬೆಂಗಳೂರು
ಭಾಗ 1: ಅನುಭವ ಮಂಟಪ ಸ್ಥಾವರವಾಗದೆ, ಜಂಗಮವಾಗಲಿ
ಭಾಗ 2: ಅನುಭವ ಮಂಟಪ: ಸಾಮಾನ್ಯ ಪ್ರವಾಸಿ ಸ್ಥಳವಾಗಬಾರದು
ಭಾಗ 3 : ಅನುಭವ ಮಂಟಪದಲ್ಲಿ ಮಾಡಬೇಕಾದ ಕಾರ್ಯಕ್ರಮಗಳು
ಭಾಗ 4: ಬಸವ ಸ್ವಯಂಸೇವಕರಿಂದ ಅನುಭವ ಮಂಟಪದ ನಿರ್ವಹಣೆಯಾಗಲಿ
ಭಾಗ 5 – ಸಿಖ್ಖರ ಸುವರ್ಣ ಮಂದಿರದಂತೆ ಅನುಭವ ಮಂಟಪ ನಿರ್ವಹಣೆಯಾಗಲಿ
ಭಾಗ 6: ಅನುಭವ ಮಂಟಪದ ಮೇಲೆ ಬಸವ ವಿರೋಧಿಗಳ ಕೆಂಗಣ್ಣಿದೆ
ಅನುಭವ ಮಂಟಪದ ಮೂಲ ಕಲ್ಪನೆಯಂತೆ ಬಸವ ಕಲ್ಯಾಣದಲ್ಲಿ ಈಗ ನಿರ್ಮಾಣವಾಗುತ್ತಿರುವ ಭವ್ಯ ಕಟ್ಟಡ ಕಾರ್ಯನಿರ್ವಹಿಸಿದರೆ ಅದು ರಾಜ್ಯಕ್ಕೆ, ರಾಷ್ಟ್ರಕ್ಕೆ, ಇಡೀ ವಿಶ್ವಕ್ಕೆ ಬೆಳಕು ತೋರುವ ದೀಪಸ್ತಂಭವಾಗುತ್ತದೆ.
ಈ ಮಹತ್ವಾಕಾಂಶೆಯ ಯೋಜನೆ ಸಫಲವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಮುಖ್ಯವಾಗಿ ವಿರಕ್ತ ಮಠಗಳ ಮೇಲಿದೆ. ಸಮಸ್ತ ವಿರಕ್ತ ಮಠಗಳು ಒಂದುಗೂಡಿ ಅನುಭವ ಮಂಟಪದ ಮುಂದಿರುವ ಎಲ್ಲಾ ಸವಾಲುಗಳನ್ನು ಕೂಲಂಕಷವಾಗಿ ಚರ್ಚಿಸಲು ಒಂದೆರಡು ದಿನಗಳ ಕಾರ್ಯಾಗಾರ ಮಾದರಿಯ ಸಭೆ ಸೇರಿಸಬೇಕು.
ಆ ಸಭೆಯಲ್ಲಿ ಕೆಲವು ಸೂಕ್ತ ಉಪಸಮಿತಿಗಳನ್ನು ರಚಿಸಿ, ಅವುಗಳ ಕಾರ್ಯಗಳನ್ನು ಸರ್ಕಾರದ ಸಹಭಾಗಿತ್ವದಲ್ಲಿ ಯಾವ ರೀತಿಯಲ್ಲಿ ನಿರ್ವಹಿಸಬೇಕು ಎನ್ನುವುದನ್ನು ನಿರ್ಧರಿಸಬೇಕು.
ಇಂತಹ ಕೆಲವು ಉಪಸಮಿತಿಗಳ ಜವಾಬ್ದಾರಿಗಳನ್ನು ಕೆಳಗೆ ಸೂಚಿಸಲಾಗಿದೆ:
1) ಸಾಹಿತ್ಯ ಸಮಿತಿ
ವಚನಶಾಸ್ತ್ರದ ಸಂಕ್ಷಿಪ್ತ ಪರಿಚಯ, ಅವುಗಳ ಇತಿಹಾಸ, ಶರಣ ಚಳುವಳಿಯ ಗುರಿಗಳು, ಇಂದಿನ ಪ್ರಸ್ತುತತೆ ಮುಂತಾದ ವಿಷಯಗಳ ಬಗ್ಗೆ ಕಿರುಪುಸ್ತಕ, ಕರ ಪತ್ರಗಳನ್ನು ಪ್ರಕಟಿಸಿ ದಿನನಿತ್ಯ ಅಲ್ಲಿಗೆ ಬರುವ ಪ್ರವಾಸಿಗರಿಗೆ ಉಚಿತವಾಗಿ ಇಲ್ಲವೆ ಅತಿಕಡಿಮೆ ಬೆಲೆಗೆ ಮಾರುವ ಸೂಕ್ತ ವ್ಯವಸ್ಥೆ ಮಾಡುವುದು.
2) ದಾಸೋಹ ಸಮಿತಿ
ದಿನ ನಿತ್ಯ ನಾಲ್ಕಾರು ಸಾವಿರ ಜನರು ಅಲ್ಲಿಗೆ ಬರುತ್ತಾರೆ. ಅವರಿಗೆ ನಮ್ಮ ಬಹುತೇಕ ಮಠಗಳಲ್ಲಿ ಇರುವಂತೆ ಪ್ರಸಾದ ವ್ಯವಸ್ಥೆ ಮಾಡುವುದು.
ಅದಕ್ಕೆ ಸೂಕ್ತ ಸಿಬ್ಬಂದಿ, ಹಣಕಾಸು ಮುಂತಾದವುಗಳನ್ನು ಚರ್ಚಿಸಿ ಯೋಜನೆ ಹಾಕಿಕೊಳ್ಳುವುದು. ಈ ಕಾರ್ಯಗಳನ್ನು ಯಾವ ಯಾವ ಮಠಗಳಿಗೆ ವಹಿಸಬೇಕು ಅಥವಾ ಒಂದೊಂದು ತಿಂಗಳು ಒಂದೊಂದು ಮಠಕ್ಕೆ ಅಥವಾ ಎರಡು ಮೂರು ಮಠಗಳಿಗೆ ವಹಿಸಬಹುದೇ? ಇಂತಹ ವಿಷಯಗಳನ್ನು ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು.
3) ಕಾರ್ಯಕ್ರಮಗಳ ಉಸ್ತುವಾರಿ ಉಪಸಮಿತಿ
ಅ) ಪ್ರಾರ್ಥನೆ, ವಚನ ಗಾಯನ, ಭಜನೆ ಮುಂತಾದ ನಿತ್ಯ ಕಾರ್ಯಕ್ರಮಗಳನ್ನು ನಡೆಸುವುದು. ರಾಜ್ಯದ ಮೂಲೆ ಮೂಲೆಗಳಲ್ಲಿರುವ ಕಲಾವಿದರನ್ನು, ಗಾಯನ, ನೃತ್ಯ ತಂಡಗಳನ್ನು ಗುರುತಿಸಿ ಆಹ್ವಾನಿಸಬೇಕು.
ಆ) ಕರಡಿ ಮಜಲುಗಳು, ಡೊಳ್ಳಿನ ಕುಣಿತ, ನಂದಿಕೋಲು ಇತ್ಯಾದಿ ತಂಡಗಳನ್ನು ಗುರುತಿಸಿಟ್ಟುಕೊಂಡು ಅವರನ್ನು ಆಗಾಗ ನಡೆಯುವ ಅನುಭವ ಮಂಟಪದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಬೇಕು.
ಇ) ಆಯ್ದ ವಿಷಯಗಳ ತಜ್ಞರನ್ನು ಕರೆಸಿ ಪ್ರವಚನ, ಚಿಂತನ ಗೋಷ್ಠಿಗಳನ್ನು ಏರ್ಪಡಿಸುವುದು.
4) ಸಮಸ್ತ ಕಾರ್ಯಗಳ ಸಂಯೋಜನಾ ಸಮಿತಿ
ಈ ಸಮಿತಿಯಲ್ಲಿ ರಾಜ್ಯದ ಮತ್ತು ಇತರ ರಾಜ್ಯಗಳ ಪ್ರಮುಖ ಮಠಾಧೀಶರನ್ನು ಸೇರಿಸಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ವಹಿಸಿಕೊಟ್ಟಿರುವ ಕೆಲವು ಕಾರ್ಯಗಳನ್ನು ನಿರ್ವಹಿಸಲು ನೆರವಾಗಬೇಕು. ಉದ್ಯಾನ, ಕಟ್ಟಡ, ರಸ್ತೆಗಳ ನಿರ್ವಹಣೆ, ನೀರು ಮತ್ತು ವಿದ್ಯುತ್ ಪೂರೈಕೆ, ನೈರ್ಮಲ್ಯ ರಕ್ಷಣೆ, ರಿಪೇರಿ ಮಾಡಿಸುವುದು, ಸೆಕ್ಯುರಿಟಿ ನೇಮಿಸುವುದು – ಇದರ ಕಾರ್ಯವ್ಯಾಪ್ತಿಗೆ ಕೆಲವು ಉದಾಹರಣೆಗಳು.
ಇದರ ಜೊತೆ ಮೇಲೆ ವಿವರಿಸಿದ ಎಲ್ಲ ಕಾರ್ಯಗಳನ್ನು ಸಂಯೋಜನೆ ಮಾಡುವ ಹೊಣೆಯನ್ನು ಈ ಸಮಿತಿ ನಿರ್ವಹಿಸಬಹುದು. ಈ ಸಮಿತಿಯಲ್ಲಿ ಪ್ರಭಾವಿ, ಹಿರಿಯ ಹಾಗೂ ಸಶಕ್ತ ಮಠಗಳ ಸ್ವಾಮಿಗಳಿದ್ದರೆ ಸೂಕ್ತವೆನಿಸುತ್ತದೆ.
ಈ ಸಮಿತಿಯು ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿನ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಲಿಂಗಾಯತ ವ್ಯಾಪಾರಿಗಳನ್ನು , ಉದ್ಯಮಿಗಳನ್ನು ಮತ್ತು ಇತರ ದಾಸೋಹಿಗಳನ್ನು ಸಂಪರ್ಕಿಸಿ ಅವರ ನೆರವಿನಿಂದ ಅನುಭವ ಮಂಟಪ ನಿರ್ವಹಿಸಬಹುದು.
ಮುಂದಿನ ಹೆಜ್ಜೆಗಳು
1) ಲಿಂಗಾಯತ ಮಠಾಧೀಶರ ಒಕ್ಕೂಟವು ಒಂದು ವಿಶೇಷ ಸಭೆಯನ್ನು ಏರ್ಪಡಿಸಿ ಬಸವಪರ ಮಠಾಧೀಶರನ್ನು ಆಮಂತ್ರಿಸಬಹುದು. ಅದರಲ್ಲಿ ಈ ವಿಷಯದ ಬಗ್ಗೆ ಮುಕ್ತ ಚಿಂತನೆ ಮಾಡಲು ಪ್ರಾರಂಭಿಸಬೇಕು.
2) ತದನಂತರ ನೂರಾರು ಸಣ್ಣ ದೊಡ್ಡ ಲಿಂಗಾಯತ ಶಿಕ್ಷಣ ಸಂಸ್ಥೆಗಳ ಪ್ರಮುಖರನ್ನೂ ಸೇರಿಸಿ ಮತ್ತೊಂದು ಸಮಾಲೋಚನಾ ಸಭೆಯನ್ನು ನಡೆಸಿ ಅವರ ಸಹಾಯ, ಸಲಹೆಗಳನ್ನು ಪಡೆಯಬಹುದು.
3) ಆನಂತರ ದೊಡ್ಡ ದೊಡ್ಡ ಉದ್ಯಮಿಗಳನ್ನು, ವ್ಯಾಪಾರಸ್ಥರನ್ನು, ಉದಾರ ದಾಸೋಹಿಗಳನ್ನು ಸಂಪರ್ಕಿಸಿ ಅವರನ್ನೂ ಈ ಬೃಹತ್ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.
4) ಕೊನೆಗೆ ಸರ್ಕಾರದೊಂದಿಗೆ ಸಮಾಲೋಚನೆ ಮಾಡಬಹುದು. ಆಗ ಇದಕ್ಕೆ ಒಂದು ಸೂಕ್ತವಾದ ಸ್ಪಷ್ಟ ರೂಪ ಬರುತ್ತದೆ.
(ಈ ಸರಣಿ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಹಾಗೂ ಅನುಭವ ಮಂಟಪವನ್ನು ಜಂಗಮವಾಗಿಸುವ ಬಗ್ಗೆ ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇವೆ. ನಿಮ್ಮ ಫೋನ್ ನಂಬರ್ ಸಹಿತ ನಿಮ್ಮ ಆಲೋಚನೆಗಳನ್ನು ನಮಗೆ ಇಮೇಲ್ ಅಥವಾ ವಾಟ್ಸ್ ಆಪ್ ಮಾಡಬಹುದು. ಇಮೇಲ್ ವಿಳಾಸ -
basavamedia1@gmail.com)

ಸಮಯೋಚಿತವಾದ ಚಿಂತನೆ, ಎಲ್ಲರೂ ಜವಾಬ್ದಾರಿಯನ್ನು ಲೇಖಕರು ನೆನಪು ಮಾಡಿಕೊಟ್ಟಿದ್ದಾರೆ
ಈ ಲೇಖನಗಳನ್ನು ಕಿರು ಪುಸ್ತಕವಾಗಿ ಬಸವ ಮೀಡಿಯಾ ಪ್ರಕಟಿಸಿ ಸಾವಿರಾರು ಪ್ರತಿಗಳನ್ನು ಹಂಚಲಿ
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಮ್ ಜಾಮದಾರ ಅವರು ಭಾಗ 1 ರಿಂದ ಭಾಗ 6
ವರೆಗೆ ಹೇಳಿದ ಎಲ್ಲಾ ವಿಷಯಗಳನ್ನು ಜಾರಿಗೆ
ತರಲು ಲಿಂಗಾಯತ ಸಮಾಜದ ಪ್ರಾತಿನಿಧಿಕ ಸಂಸ್ಥೆ ಜಾಗತಿಕ ಲಿಂಗಾಯತ ಮಹಾಸಭಾ ಹಾಗು ಬಸವ ಚಿಂತಕರ,ಬಸವ ಪರ ಸಂಘಟನೆಗಳ ಒಕ್ಕೂಟ ಒಂದು ಮತ್ತು
ವಿರಕ್ತ ಮಠಾಧೀಶರ ಲಿಂಗಾಯತ ಮಠಾಧೀಶರ ಒಕ್ಕೂಟದ ಇವುಗಳೆರಡಕ್ಕೂ
ಕೊಂಡಿಯಾಗಲು ಮಾರ್ಗದರ್ಶನ ಮಾಡಲು
ಬಸವಾದಿ ಶರಣರ ಗಣ ಪರಿಷತ್ ರಚನೆ
ಮಾಡಿ ಕಾರ್ಯಪಡೆ ರಚನೆ ಆಗಲಿ ಆದಷ್ಟು ಬೇಗ ಈ ಕಾರ್ಯ ಜಾರಿಗೆ ಬರಲಿ
ಜಾಮದಾರ್ ರವರ ಅನಿಸಿಕೆ, ಸಲಹೆ,ಸೂಚನೆ ಸೂಕ್ತವಾಗಿದೆ. ಕಾಲಾಹರಣ ಮಾಡದೆ ವಿರಕ್ತ ಮಠಾಧೀಶರು ಈ ಬಗ್ಗೆ ಕಾರ್ಯಕ್ರಮ ರಚಿಸಿ ಮುನ್ನಡೆಯ ಬೇಕು. ಇಲ್ಲವಾದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಎಲ್ಲ ಲಿಂಗಾಯತ ಸಂಘಟನೆಗಳ ಸಭೆಸೇರಿಸಿ ಮುಂದಿನ ನಡೆ ತೀರ್ಮಾನಿಸ ಬೇಕು
ವಿದೇಶಿ ಪ್ರವಾಸಿಗರಿಗೆ ಮತ್ತು ಶರಣ ಚಿಂತನೆಗಳ ಆಸಕ್ತರಿಗೆ ವಚನಕಾರರ ಚಿಂತನೆಗಳನ್ನು ತಿಳಿಸುವ ಒಂದು ವಿಶೇಷ ಸೆಲ್ಲನ್ನು ಸ್ಥಾಪಿಸುವುದು ಸೂಕ್ತ. ಆಡಿಯೋ ಮತ್ತು ವಿಡಿಯೋ ಅಲ್ಲದೆ ಪ್ರಾರಂಭಿಕವಾಗಿ ಇಂಗ್ಲಿಷ್ ಭಾಷೆಯಲ್ಲಿ ವಚನಗಳು ಮತ್ತು ಅವುಗಳ ಸಮರ್ಥ ಇಂಗ್ಲಿಷ್ ಭಾಷಾಂತರ ಸಿಗುವಂತೆ ಮಾಡುವುದು ಅತಿ ಮುಖ್ಯ. ಗ್ರೀಕ್ ತತ್ವಜ್ಞಾನಿಗಳ ಚಿಂತನೆ ಮತ್ತು ಅನುಭವ ಮಂಟಪದಲ್ಲಿ ನಡೆದ ಶರಣರ ಚಿಂತನೆ ಗಳನ್ನು ಸಂವಾದಿಯಾಗಿ ತಿಳಿಸುವ ಪ್ರಯತ್ನ ನಡೆಯಬೇಕು. ಆ ಮೂಲಕ ಜಗತ್ ಮಾನ್ಯ ಚಿಂತನೆಗಳು ಕನ್ನಡ ಭಾಷೆಯಲ್ಲಿ ಮೂಡಿಬಂದಿವೆ ಎನ್ನುವ ಅರಿವು ವಿದೇಶಿಗರಿಗೆ ತಿಳಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಆಯ್ದ ಚಿಂತಕರ ಗುಂಪನ್ನು ರಚಿಸಿ ಕಾರ್ಯ ಪ್ರವೃತ್ತರಾಗುವಂತೆ ಪ್ರೇರೇಪಿಸಬೇಕು. ಇದಕ್ಕಾಗಿ ಬೇರೆಯದೆ ಆದ ನಿಧಿಯನ್ನು ಸ್ಥಾಪಿಸುವುದು ಉತ್ತಮ. ಇದಕ್ಕಾಗಿ ಬಸವ/ಅನುಭವ ಮಂಟಪ ಇಂಟರ್ನ್ಯಾಷನಲ್ ಅಂಡರ್ಸ್ಟ್ಯಾಂಡಿಂಗ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಬಹುದಾಗಿದೆ.
ಮಾನ್ಯ ಶಿವಾನಂದ ಜಾಮದಾರರು ನೀಡಿರುವ ಸಲಹೆಗಳು ಸೂಕ್ತವಾಗಿವೆ. ನಮ್ಮ ಮಠಾಧೀಶರುಳು ಈ ನಿಟ್ಟಿನಲ್ಲಿ ಮುಂದಿನ ಯೋಜನೆಗಳಿಗೆ ತಮ್ಮ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಂದನೆಗಳೊಂದಿಗೆ.
ಡಾ.ಎಸ್.ಎಂ. ಜಾಮ್ ದಾರ್ ಸರ್ ರವರು ಲಿಂಗಾಯತ ಧರ್ಮದ ಹಿತಾಸಕ್ತಿಯ ಕಾಪಾಡುವ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರ ಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಮ್ಮ ಗುರಿ ಮುಟ್ಟೂಣ.
ರಾಜಕೀಯವೆಂಬುದು ಬಿಸಿ ತುಪ್ಪ ಇದ್ದಂತೆ. ಕೆಲವೊಂದು ವಿಷಯಕ್ಕೆ ಅವರ ಬೆಂಬಲ ಬೇಕೇಬೇಕು. ಆದರೆ ಕೆಲವೊಂದು ವಿಷಯಗಳಲ್ಲಿ ಅದು ದೂರ ಇದ್ದಷ್ಟೂ ಒಳ್ಳೆಯದು.
ಈ ವಿಷಯದಲ್ಲಿ ಅಂದರೆ ಅನುಭವ ಮಂಟಪದ ಬಳಕೆಯ ಬಗ್ಗೆ ಹೇಳುವುದಾದರೆ ವಿರಕ್ತ ಮಠದ ಸ್ವಾಮೀಜಿಗಳಿಗಲ್ಲದೆ ಅನುಭಾವಿ ಶರಣರ ನೇತೃತ್ವವು ಬೇಕು.
ರಾಜಕೀಯ ಬೆರಸದ ರಾಜಕಾರಣಿಗಳು ಕೂಡ ನೇತೃತ್ವ ವಹಿಸಬಹುದು.
ಓಂಶ್ರೀಗುರುಬಸವಲಿಂಗಾಯನಮಃ
ಶ್ರೀ. ಮ. ನಿ. ಪ್ರ. ಸ್ವ.ಜ. ಮುರುಘರಾಜೇಂದ್ರಕೋರಣೇಶ್ವರಮಹಾಸ್ವಾಮಿಗಳು. ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅರಹಟ್ಟಿ ಅಸೂಟಿ ಹೊಸಕೇರಿ ಮೆಣಸಗಿ ಖಜೂರಿ
ಅಸೂಟಿ ಶ್ರೀ ಫಲಹಾರಶಿವಯೋಗಿಗಳವರ ಜೀವನಚರಿತ್ರೆ
ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಜ್ಞಾನದಾಸೋಹಿ ಮಾನ ಸನ್ಮಾನ ಅಭಿವ್ಯಕ್ತಿ ಸ್ವಾತಂತ್ರ ಗೌರವ ಸನ್ಮಾನ ಜಗದ ಜನರ ಅಜ್ಞಾನ ಕಳೆಯಲು ಶಿವನೆ ಜಂಗಮರೂಪದಿಂದ ಧರೆಯ ಪಾವನಮಾಡಲು ಭೂಮಿಗೆ ಅವತಾರ ಎತ್ತಿ ವಿಶ್ವಗುರು ಬಸವಣ್ಣನವರ ವಚನಸಾಹಿತ್ಯ ಸಕಲ ಜೀವಾವಳಿಗೆ ಲೇಸಬಯಸಲು ಚರಜಂಗಮರಾಗಿಅಸೂಟಿಶ್ರೀಫಲಹಾರಶಿವಯೋಗಿಗಳು ಅಲ್ಲಮಪ್ರಭುವಾಗಿ ಇಂದಿನ ಸಮಾಜ ಜಾಗೃತಿ ಮಾಡಲು ಹುಟ್ಟಿದರೇಂದು ಭಕ್ತರಿಗೆ ತಿಳಿಸಿ ವಚನ ಅನುಭವ ವಿವರಣೆ ಆರಂಬಿಸಿದರು,
ತನ್ನ ವಿಚಾರಿಸಲೊಲ್ಲದು; ಇದಿರ ವಿಚಾರಿಸಹೋಹುದೀ ಮನವು!
ಏನು ಮಾಡುವೆನೀ ಮನವನು? ಎಂತು ಮಾಡುವೆನೀ ಮನವನು
ಕೂಡಲ ಸಂಗಮದೇವನ ಶರಣರ
ನಚ್ಚದ, ಮೆಚ್ಚದೆ, ಬೆಂದ ಮನವನು?
ಏಕಾಗ್ರತೆ ಜಾಗರವಾಗಿ ಎಚ್ಚರ ಇರಲು ಮನಸು ಚಂಚಲವಾಗುವದು ವಿಶ್ವಗುರು ಬಸವಣ್ಣನವರು ಸಂಸ್ಕಾರ ಸುಟ್ಟ ಗಡಿಗೆ ಮಾಡಲು ಪ್ರಾರ್ಥನೆ ಮಾಡುವರು,
ಕಾಲುಗಳೆರಡು ಗಾಲಿ ಕಂಡಯ್ಯಾ
ಒಡಲೆಂಬುದು ತುಂಬಿದ ಬಂಡಿ ಕಂಡಯ್ಯಾ.
ಬಂಡಿಯ ಹೊಡೆವರೈವರು ಮಾನಿಸರು,
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅವರಿಚ್ಛೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.
ಒಡಲು, ಕಾಮ ಕ್ರೋದ ಕೋಪ ಲೋಬ ಮೋಹ ಮದಗಳಿಂದ ತುಂಬಿರುವದು ನೋಟ ಕೂಟ ಮಾಟ ನಡೆನುಡಿ ಒಂದು ಮಾಡಲು ಆಹಾರವೇ ಔಷದಿ ಸತ್ವ ತಮ ಸಾತ್ವಿಕ ಕ್ರಿಯೆ ಮುಖ್ಯ
ಹಸಿವಿನ ಹಂಗಿಗೆ ಭವಿಪಾಕಕ್ಕಿಚ್ಛೆಯ ಮಾಡುವರು.
ಮಥನದ ಹಂಗಿಗೆ ಭವಿಯ ಸಂಗಕ್ಕಿಚ್ಛೆಯ ಮಾಡುವರು.
ಶ್ರೋತ್ರ ನೇತ್ರ ಘ್ರಾಣ ಸುಖವ ಭುಂಜಿಸುವನ್ನಕ್ಕ
ಭಕ್ತನೆಂತೆಂಬೆ? ಲಿಂಗೈಕ್ಯನೆಂತೆಂಬೆ?
ಕೂಡಲಚೆನ್ನಸಂಗಯ್ಯಾ,
ಅವರು ಸಮಯಾಚಾರಕ್ಕೆ ದೂರ ನೋಡಯ್ಯಾ.
ಮೋಹದ ಬಲೆಯಲ್ಲಿ ಕಣ್ಣು ಕಿವಿ ಮೂಗು ಬಾಯಿ ನೋಟದಲ್ಲಿ ಕಂಡು ಮನಸ್ಸಿನ ಇಚ್ಛೆ ಆಪೇಕ್ಷೆ ಬಯಸುವದು,
ಅಜಾತನೆಂದೆನಬೇಡ, ಜಾತನೆಂದೆನಬೇಡ.
ಹದಿನೆಂಟುಜಾತವಾದರಾವುದು ?
ಒಂದೇ ಗುರುವಿನ ವೇಷವಿದ್ದವರಿಗೆ
ದಾಸೋಹವ ಮಾಡುವುದೆ ಶಿವಾಚಾರ.
ಅದಲ್ಲದೆ ಗುರುಕೊಟ್ಟ ಮುರುಹು ಮುದ್ರೆ ಲಾಂಛನವ ಹೊತ್ತು
ಮರಳಿ ವೇಷವಳಿದು ಬಂದವರಿಗೆದಾಸೋಹವ ಮಾಡುವದು,
ಶಿವಾಚಾರಕ್ಕೆ ಹೇಸಿಕೆ ಕಾಣಾ ಕಲಿದೇವರದೇವ.
ಲಾಂಛನ ಇರುವವರು ದಾಸೋಹ ಪ್ರಸಾದ ಕಾಯ ಮಾಡುವದು ಅಸೂಟಿ ಶ್ರೀ ಫಲಹಾರಶಿವಯೋಗಿಗಳಿಗೆ ಅನುಭವಪ್ರಮಾಣ ವಚನಗಳು ಮನಸ್ಸಿನ ಮೇಲೆ ಪರಿಣಾಮ, ಮಾಡಲಗೇರಿಯ ಶ್ರೀ ಚನ್ನಬಸವಯ್ಯನವರು. ನೇರವಾಗಿ ಅನುಭವಪ್ರಮಾಣ ವಚನಗಳ ಅಧ್ಯಯನ ಆರಂಭ ಸಂತೋಷ ಸಂಭ್ರಮ ಆನಂದ ರೂಪಿಸಲು, ಪ್ರಥಮ ಪ್ರಯತ್ನ
ಅಂಗೈಯೊಳಗಣ ಲಿಂಗವ ಪೂಜಿಸುತ್ತ,
ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ.
ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ
ತೆರಹಿಲ್ಲದಿರ್ದೆ ನೋಡಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.
ಸಮುದ್ರದಲ್ಲಿ ಕಪ್ಪೆ ಚಿಪ್ಪು ಸ್ವಾತಿ ಮಳೆ ಹನಿಗಾಗಿ ಕಾಯುವಂತೆ ಸ್ವಾತಿಮಳೆ ಹನಿ ಬಿದ್ದ ಕಪ್ಪೆ ಚಿಪ್ಪು ಮುತ್ತು ಆಯಿತು
ಹಿಮ ಕರಗಿ ನೀರು ಆಯಿತು ಉಪ್ಪು ನೀರಿನಲ್ಲಿ ಹುಟ್ಟಿ ಮರಳಿ ನೀರು ಆಗುವದು
ಆದರೆ ಮರಳಿ ಸ್ವಾತಿಮಳೆ ಹನಿ ಮರಳಿ ನೀರು ಆಗಲಾರದು.
ಅಯ್ಯಾ, ಗುರುವೆಂಬ ಮಹಾಜ್ವಾಲೆಯಲ್ಲಿ ದಹನವಾದೆ
ಬಸವಾಕ್ಷರವೆಂಬ ಮರುಜೇವಣಿಯಲ್ಲಿ ಭವಿಸಿದೆ
ಉಂಡೆ ನಾನು ಶಿಶುವಾಗಿ ಶುದ್ಧಸಿದ್ಧಪ್ರಸಿದ್ಧವೆಂಬ ಪ್ರಸಾದತ್ರಯ
ಏಕೀಭವಿಸಿ ಕೊಂಡೆ ಎನಗಿನ್ನರಿದಿಲ್ಲ.
ನೀನೊಟ್ಟಿತ್ತೆ ಮಾರಿದ ಮಾರಿಂಗೆ ಸಂದೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
ನಿಜ ಸ್ವರೂಪ ಬಸವನಾಮ ಜೀವ ಜೀವಾಳವಾಯಿತು,
ಅಸೂಟಿಶ್ರೀಫಲಹಾರಶಿವಯೋಗಿಗಳು ಅನುಭವಮಂಥನ ಮಾಡಲಗೇರಿಯ ಶ್ರೀ ಚನ್ನಬಸವಯ್ಯನವರು ಬಸವಾದಿ ಪ್ರಮಥರ ವಚನಗಳು ಸರಳ ಸುಂದರ ಪದಗಳು
ಆಚಾರಗುರು, ಸಮಯಗುರು, ಜ್ಞಾನಗುರು.
ಆಚಾರಗುರು ಬ್ರಹ್ಮಕಲ್ಪವ ತೊಡೆಯಬೇಕು.
ಸಮಯಗುರು ವಿಷ್ಣುವಿನ ಸ್ಥಿತಿಯ ಹರಿಯಬೇಕು.
ಜ್ಞಾನಗುರು ಉತ್ಪತ್ಯಸ್ಥಿತಿಲಯ ಮೂರನೂ ಕಳೆಯಬೇಕು.
ಇಂತೀ ತ್ರಿವಿಧಗುರು ಏಕವಾದಲ್ಲಿ,
ಸದ್ಗುರು ಮದ್ಗುರು ಮಹಾಗುರವೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ.
ಸೃಷ್ಟಿ ಸ್ಥಿತಿ ಲಯ ಅರಿಯಲು ವಚನಗಳ ಅಭ್ಯಾಸ
ಗುರುಗಳು ಅಪ್ಪಣೆ ಪಾಲಿಸುವ ರೀತಿ
ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ
ತಮ್ಮ ತಮ್ಮ ಭಾವದ ಶೀಲ.
ಗಂಗೆವಾಳುಕ ಸಮಾರುದ್ರರೆಲ್ಲಕ್ಕೂ
ತಮ್ಮ ತಮ್ಮ ಮನಕ್ಕೆ ಸಂದ ಸಂದ ನೇಮ.
ಮರ್ತ್ಯಕ್ಕೆ ಬಂದ ಪ್ರಮಥರೆಲ್ಲರೂ ತಾವು ಬಂದುದನರಿದು
ಮುಂದಿನ ಪಯಣಕ್ಕೆ ಎಂದೆಂಬುದ ಕಂಡು,
ಬಸವಣ್ಣನ ಮಣಿಹ ಎಂದಿಂಗೆ ಸಲೆ ಸಂದು
ನಿಂದಿಹ ವೇಳೆಯನರಿವನ್ನಕ್ಕ
ತಾವು ಕೊಂಡ ವ್ರತದಲ್ಲಿ ಭಯ ಭಂಗವಿಲ್ಲದೆ ನಿಂದಿರಬೇಕು,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗಹನ್ನಕ್ಕ.
ವಿಶ್ವಗುರುಬಸವಣ್ಣನವರ ಆದೇಶದಂತೆ ನಡೆಯಲು ಅಂದಿನ ಅನುಭವ ಮಂಟಪ ನಡೆ ನುಡಿಗಳು
ಶ್ರೀ. ಮ. ನಿ. ಪ್ರ. ಸ್ವ. ಜ. ಮುರುಘರಾಜೇಂದ್ರಕೋರಣೇಶ್ವರಮಹಾಸ್ವಾಮಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರವಿರಕ್ತಮಠ ಅರಹಟ್ಟಿ ಅಸೂಟಿ ಹೊಸಕೇರಿ ಮೆಣಸಗಿ ಖಜೂರಿ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಅರಹಟ್ಟಿ
Shri Shivaraj Naganoor Mumbai, his suggestion seems correct. Better to bring above said suggestions be printed in a small book and distribute during meeting of all Virakta math swamiji. I also feel that all virakt math swamiji together lead activities of Kalyan mantap construction and improvement in all respects which have been explained in kannada as above.