ಲೈವ್: ರಾಜ್ಯದಲ್ಲಿ ಎಲ್ಲೆಡೆ ಬಸವ ಜಯಂತಿಗೆ ಸಂಭ್ರಮದ ಸಿದ್ಧತೆ

ಬಸವ ಮೀಡಿಯಾ
ಬಸವ ಮೀಡಿಯಾ
39Posts
Auto Updates
Contents
ಬಸವ ಜಯಂತಿ ಆರಂಭಿಸಿದ ಕರ್ನಾಟಕದ ಗಾಂಧಿಬಸವ ಜಯಂತಿ: ದಾವಣಗೆರೆಯಲ್ಲಿ 110ನೇ ವರ್ಷದ ಬಸವ ಪ್ರಭಾತ್ ಪೇರಿಬಸವನಬಾಗೇವಾಡಿ: ಏಪ್ರೀಲ್ 18 ವಚನ ಕಂಠಪಾಠ, ವಚನ ಗಾಯನ ಸ್ಪರ್ಧೆಬಸವ ಜಯಂತಿ : ಮೂರು ದಿನ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವಬಸವ ಜಯಂತಿ: ಬಸವನ ಬಾಗೇವಾಡಿಯಿಂದ 50 ಕಿ.ಮೀ ಪಾದಯಾತ್ರೆ, ವಿಶೇಷ ಓಟಬ್ರಹ್ಮಕುಮಾರಿ ಬಸವ ಜಯಂತಿಯಲ್ಲಿ ಕರ್ಮ ಸಿದ್ದಾಂತದ ಬಗ್ಗೆ ಭಾಷಣ ಸ್ಪರ್ಧೆಸೇಡಂ: ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಪ್ರಚಾರ ಕರಪತ್ರ ಬಿಡುಗಡೆಬೆಳಗಾವಿ ವಚನ ಕಂಠಪಾಠ ಸ್ಪರ್ಧೆ: ಖುಷಿ, ಲಕ್ಷ್ಮೀ, ಸಂಕೇತ ವಿಜೇತರುಬಸವ ಜಯಂತಿ: ಬೆಳಗಾವಿ ಪೂರ್ವಭಾವಿ ಸಭೆಗೆ ಪಕ್ಷಾತೀತವಾಗಿ ಬಂದ ನಾಯಕರುಬಸವ ಜಯಂತಿ: ಏಪ್ರಿಲ್ 17 ಕಲಬುರಗಿಯಲ್ಲಿ ರಸಪ್ರಶ್ನೆ ಸ್ಪರ್ಧೆಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿ ಬಸವ ಜಯಂತಿ ಕಡ್ಡಾಯವಾಗಿ ಆಚರಿಸಲು ಆಗ್ರಹಕನಕಗಿರಿಯಲ್ಲಿ ಅರ್ಥಪೂರ್ಣ ಬಸವ ಜಯಂತಿಸಿಂಧನೂರು ಬಸವ ಜಯಂತಿ ಕವಿಗೋಷ್ಠಿಗೆ ಆಹ್ವಾನಧಾರವಾಡ ಏಪ್ರಿಲ್ 15ರಿಂದ ರಂಗೋಲಿ ಸ್ಪರ್ಧೆಬಾದಾಮಿ ಬಸವ ಜಯಂತಿಗೆ ಎಲ್ಲ ಸಮಾಜದವರಿಗೆ ಆಹ್ವಾನಮಳವಳ್ಳಿಯಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆಗೆ ನಿರ್ಧಾರಚಿಟಗುಪ್ಪದಲ್ಲಿ ಬಸವ ಜಯಂತಿ ಪದಾಧಿಕಾರಿಗಳ ನೇಮಕಬಸವ ಜಯಂತಿ: ಪ್ರಬಂಧ ಕಳಿಸಲು ದಿನಾಂಕ ವಿಸ್ತರಣೆಬಸವ ಜಯಂತಿಯಂದು ಸಿಂಧನೂರು ಅನುಭವ ಮಂಟಪದ ಭೂಮಿ ಪೂಜೆಹರಪನಹಳ್ಳಿ ಕಾಲೇಜಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಶೇಷ ಉಪನ್ಯಾಸಶಿವಮೊಗ್ಗದಲ್ಲಿ ‘ಬಸವ ಕಪ್ – 2026’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆತಿ.ನರಸೀಪುರದಲ್ಲಿ ಬಸವತತ್ವದ ಮೇಲೆ ಉಪನ್ಯಾಸಕೊಪ್ಪಳದಲ್ಲಿ ಬಸವ ಜಯಂತಿ ಕಾರ್ಯಕ್ರಮಗಳುರಾಯಚೂರಿನಲ್ಲಿ ಏಪ್ರಿಲ್ 20 ಸಂಭ್ರಮದ ಬಸವ ಜಯಂತಿಬೀದರ್: ಬಸವ ಜಯಂತಿ ಸಮಿತಿಯ ಪದಾಧಿಕಾರಿಗಳ ಆಯ್ಕೆಗದಗದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳುಚಾಮರಾಜನಗರದಲ್ಲಿ ವೈಚಾರಿಕ, ಅದ್ದೂರಿ ಬಸವ ಜಯಂತಿಕಲಬುರಗಿಯಲ್ಲಿ ಐದು ದಿನಗಳ ಬಸವ ಜಯಂತಿಮೈಸೂರಿನಲ್ಲಿ ಬಸವಣ್ಣನವರ ತತ್ವ ಜನರಿಗೆ ತಲುಪಿಸಲು ಸೂಚನೆಬಸವ ಜಯಂತಿಯಂದು ಚಿತ್ತಾಪುರದಲ್ಲಿ ಬಸವ ಭವನ, ವಿದ್ಯಾರ್ಥಿನಿ ವಸತಿ ನಿಲಯಕ್ಕೆ ಅಡಿಗಲ್ಲುಓಲೆ ಮಠದಲ್ಲಿ ಎಪ್ರೀಲ್ 15ರಿಂದ ಬಸವ ಜಯಂತಿ, ಜಾತ್ರಾ ಮಹೋತ್ಸವಚಿತ್ರದುರ್ಗದಲ್ಲಿ ಬಸವ ಜಯಂತಿಯ ಅಂಗವಾಗಿ ಪ್ರಬಂಧ ಸ್ಪರ್ಧೆಕಲಬುರ್ಗಿಯಲ್ಲಿ ಉತ್ಸವ ಸಮಿತಿ ಆಯ್ಕೆ, ಅತ್ತಿವೇರಿ ಮಾತಾಜಿ ಪ್ರವಚನಬೆಳಗಾವಿಯಲ್ಲಿ ವಿಜೃಂಭಣೆಯಿಂದ ಬಸವ ಜಯಂತಿ ಆಚರಿಸಲು ನಿರ್ಧಾರಏಪ್ರಿಲ್ 29 ದಾವಣಗೆರೆಯಲ್ಲಿ ಬಸವ ಜಯಂತಿ ಪೂರ್ವಸಿದ್ಧತಾ ಸಭೆಎರಡು ಸಾವಿರ ಶರಣ, ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆಕಲಬುರಗಿ: ಚಂದಾ ಎತ್ತದೆ, ಡಿಜೆ ಬಳಸದೆ ಬಸವ ಜಯಂತಿ ಆಚರಿಸಲು ನಿರ್ಧಾರಬೆಂಗಳೂರಲ್ಲಿ ಬಸವ ಜಯಂತಿಗೆ ಸಾವಿರಾರು ಜನ ಸೇರಿಸಲು ಸಂಘಟನೆಗಳ ಸಭೆರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸಲು ಒಕ್ಕೂಟದ ಕರೆ

ಬೆಂಗಳೂರು

ವಿವಿಧ ಜಿಲ್ಲೆಗಳಲ್ಲಿ ಉತ್ಸವ ಸಮಿತಿಗಳ, ಬಸವ ಸಂಘಟನೆಗಳ ಹಾಗೂ ಸರಕಾರದ ಸಹಯೋಗದಲ್ಲಿ ಬಸವ ಜಯಂತಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ.

1 month agoApril 17, 2026 5:27 pm

ಬಸವ ಜಯಂತಿ ಆರಂಭಿಸಿದ ಕರ್ನಾಟಕದ ಗಾಂಧಿ

1 month agoApril 17, 2026 5:26 pm

ಬಸವ ಜಯಂತಿ: ದಾವಣಗೆರೆಯಲ್ಲಿ 110ನೇ ವರ್ಷದ ಬಸವ ಪ್ರಭಾತ್ ಪೇರಿ

1 month agoApril 17, 2026 5:25 pm

ಬಸವನಬಾಗೇವಾಡಿ: ಏಪ್ರೀಲ್ 18 ವಚನ ಕಂಠಪಾಠ, ವಚನ ಗಾಯನ ಸ್ಪರ್ಧೆ

1 month agoApril 17, 2026 5:25 pm

ಬಸವ ಜಯಂತಿ : ಮೂರು ದಿನ ಪತ್ರಿ ಬಸವೇಶ್ವರ ಶರಣ ಸಂಸ್ಕೃತಿ ಉತ್ಸವ

1 month agoApril 17, 2026 5:24 pm

ಬಸವ ಜಯಂತಿ: ಬಸವನ ಬಾಗೇವಾಡಿಯಿಂದ 50 ಕಿ.ಮೀ ಪಾದಯಾತ್ರೆ, ವಿಶೇಷ ಓಟ

1 month agoApril 17, 2026 5:24 pm

ಬ್ರಹ್ಮಕುಮಾರಿ ಬಸವ ಜಯಂತಿಯಲ್ಲಿ ಕರ್ಮ ಸಿದ್ದಾಂತದ ಬಗ್ಗೆ ಭಾಷಣ ಸ್ಪರ್ಧೆ

1 month agoApril 17, 2026 5:23 pm

ಸೇಡಂ: ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಪ್ರಚಾರ ಕರಪತ್ರ ಬಿಡುಗಡೆ

1 month agoApril 17, 2026 5:23 pm

ಬೆಳಗಾವಿ ವಚನ ಕಂಠಪಾಠ ಸ್ಪರ್ಧೆ: ಖುಷಿ, ಲಕ್ಷ್ಮೀ, ಸಂಕೇತ ವಿಜೇತರು

1 month agoApril 17, 2026 5:22 pm

ಬಸವ ಜಯಂತಿ: ಬೆಳಗಾವಿ ಪೂರ್ವಭಾವಿ ಸಭೆಗೆ ಪಕ್ಷಾತೀತವಾಗಿ ಬಂದ ನಾಯಕರು



1 month agoApril 17, 2026 5:22 pm

ಬಸವ ಜಯಂತಿ: ಏಪ್ರಿಲ್ 17 ಕಲಬುರಗಿಯಲ್ಲಿ ರಸಪ್ರಶ್ನೆ ಸ್ಪರ್ಧೆ

1 month agoApril 17, 2026 5:21 pm

ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲಿ ಬಸವ ಜಯಂತಿ ಕಡ್ಡಾಯವಾಗಿ ಆಚರಿಸಲು ಆಗ್ರಹ

1 month agoApril 13, 2026 11:15 am

ಕನಕಗಿರಿಯಲ್ಲಿ ಅರ್ಥಪೂರ್ಣ ಬಸವ ಜಯಂತಿ

ಕನಕಗಿರಿ

‘ವಿಶ್ವಗುರು ಬಸವೇಶ್ವರರ ಜಯಂತಿ ನಿಮಿತ್ತ ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಚನ್ನಮಲ್ಲ ಸ್ವಾಮೀಜಿ ಹಾಗೂ ಇತರೆ ಮಠಾಧೀಶರ ನೇತೃತ್ವದಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ, ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ ತಿಳಿಸಿದರು.

ಪಟ್ಟಣದ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಬಸವೇಶ್ವರರ ಜಯಂತಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ತಿಂಗಳ ಕಾಲ ಪರಿಪೂರ್ಣದೆಡೆಗೆ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ’ ಎಂದರು.

ಏ‌.20ರಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ಸುವರ್ಣಗಿರಿ ವೈಭವ, ಸುವರ್ಣಗಿರಿ ಪ್ರಶಸ್ತಿ ಪ್ರದಾನ ಹಾಗೂ ಪರಿಪೂರ್ಣದೆಡೆಗೆ ಆಧ್ಯಾತ್ಮಿಕ ಪ್ರವಚನ ಸಮಾರೋಪ ವಿರಕ್ತಮಠದ ಆವರಣದಲ್ಲಿ ನಡೆಯಲಿದೆ. ಸುವರ್ಣಗಿರಿ ಪ್ರಶಸ್ತಿಗೆ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹50 ಸಾವಿರ ನಗದು ಒಳಗೊಂಡಿದೆ ಎಂದು‌‌ ವಿವರಿಸಿದರು.

ಸಂಘದ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ರ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪ್ರಭುಶೆಟ್ಟರ್, ಸದಸ್ಯರಾದ ಮುನಿಯಪ್ಪ ಪ್ರಭುಶೆಟ್ಟರ್, ಶ್ರೀರುದ್ರಸ್ವಾಮಿ ಉಚಿತ ಪ್ರಸಾದ ನಿಲಯದ ಪ್ರಧಾನ ಕಾರ್ಯದರ್ಶಿ ವಾಗೇಶ್ ಹೀರೆಮಠ, ಸದಸ್ಯ ಮೃತ್ಯುಂಜಯಸ್ವಾಮಿ ಭುಸನೂರಮಠ ಇದ್ದರು.

1 month agoApril 13, 2026 11:15 am

ಸಿಂಧನೂರು ಬಸವ ಜಯಂತಿ ಕವಿಗೋಷ್ಠಿಗೆ ಆಹ್ವಾನ

‌ಸಿಂಧನೂರು

ಬಸವ ಜಯಂತಿ ಉತ್ಸವ ಸಮಿತಿ ಹಾಗೂ ತಾಲ್ಲೂಕು ಆಡಳಿತದ ಸಹಕಾರದೊಂದಿಗೆ ಏ.20ರಂದು ನಗರದ ಆರ್.ಜಿ.ಎಂ ಶಾಲಾ ಮೈದಾನದಲ್ಲಿ ಜರುಗಲಿರುವ 893ನೇ ಬಸವ ಜಯಂತಿ ಪ್ರಯುಕ್ತ ಏ.16ರಂದು ಸಂಜೆ 4 ಗಂಟೆಗೆ ‘ಕವಿಗಳು ಕಂಡಂತೆ ಬಸವಣ್ಣ’ ಮುಕ್ತ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಸದಸ್ಯ ಹಾಗೂ ಕವಿಗೋಷ್ಠಿಯ ಸಂಚಾಲಕ ಬೀರಪ್ಪ ಶಂಭೋಜಿ ತಿಳಿಸಿದ್ದಾರೆ.

ಶುಕ್ರವಾರ ಹೇಳಿಕೆ ನೀಡಿರುವ ಅವರು,‘ಭಾಗವಹಿಸುವ ಕವಿಗಳು ಬಸವಣ್ಣನವರ ಕುರಿತು 25 ಸಾಲುಗಳಿಗೆ ಮೀರದಂತೆ ಸ್ವರಚಿತ ಕವನವನ್ನು ಏ.15 ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಫ್.ಮಸ್ಕಿ (8867794508), ಎಲ್.ಬಿ.ಕೆ ಕಾಲೇಜಿನ ಪ್ರಾಚಾರ್ಯ ಪರಶುರಾಮ ಮಲ್ಲಾಪುರ (9916758739) ವಾಟ್ಸ್‌ ಆ್ಯಪ್‌ಗೆ ಕಳುಹಿಸಿಕೊಡಬೇಕು.

1 month agoApril 13, 2026 11:15 am

ಧಾರವಾಡ ಏಪ್ರಿಲ್ 15ರಿಂದ ರಂಗೋಲಿ ಸ್ಪರ್ಧೆ

ಧಾರವಾಡ

ಬಸವ ಜಯಂತಿ ಅಂಗವಾಗಿ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಏಪ್ರಿಲ್ 15 ರಿಂದ 17 ರವರೆಗೆ ಮಹಿಳೆಯರಿಗೆ ರಂಗೋಲಿ, ಶರಣರ ಛದ್ಮವೇಷ ಹಾಗೂ ವಚನ ಗಾಯನ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಪ್ರಥಮ ₹ 3 ಸಾವಿರ, ದ್ವಿತೀಯ ₹ 2 ಸಾವಿರ, ಹಾಗೂ ತೃತೀಯ ₹ 1 ಸಾವಿರ ಬಹುಮಾನ ನೀಡಲಾಗುವುದು.

ನೋಂದಣಿ ಹಾಗೂ ಮಾಹಿತಿಗಾಗಿ: ಮೊ:9035627808 ಸಂಪರ್ಕಿಸಬಹುದು.

1 month agoApril 13, 2026 11:14 am

ಬಾದಾಮಿ ಬಸವ ಜಯಂತಿಗೆ ಎಲ್ಲ ಸಮಾಜದವರಿಗೆ ಆಹ್ವಾನ

ಬಾದಾಮಿ
ಬಸವ ಜಯಂತಿ ಸಮಿತಿ ಆಶ್ರಯದಲ್ಲಿ ಶಾಖಾ ಶಿವಯೋಗ ಮಂದಿರ ಮಠದ ಆವರಣದಲ್ಲಿ ಬಸವ ಜಯಂತಿ ಆಚರಣೆ ಕುರಿತು ಗುರುವಾರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಏ.20ರಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯ ಬಸವೇಶ್ವರ ವೃತ್ತದಿಂದ ಶಿವಯೋಗಮಂದಿರ ಶಾಖಾ ಮಠದ ಆವರಣದವರೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುವುದನ್ನು ಸಭೆಯಲ್ಲಿ ನಿರ್ಣಯಿಸಲಾಯಿತು.

‘ಎಲ್ಲ ಸಮಾಜದ ಮುಖಂಡರು, ಯುವಕರು ಮತ್ತು ಮಹಿಳೆಯರು ಪಾಲ್ಗೊಳ್ಳಬೇಕು’ ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಿವು ಹಿರೇಮಠ, ಅಂಜುಮನ್ ಅಧ್ಯಕ್ಷ ಯುಸೂಫ್ ಪೀರಜಾದೆ, ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಹೊಸಮನಿ, ಅವಿನಾಶ ಮಮದಾಪೂರ, ಅಡಿವೆಪ್ಪ ಅರಬೂತನವರ, ಮುತ್ತಪ್ಪ ವಾಲಿಕಾರ, ಎಸ್.ಎಸ್. ಕಿತ್ತಲಿ, ಅನೀಲ ಚಪ್ಪಲಗಾವ, ಶಾಮಣ್ಣ ಕಲಾಲ, ಇಷ್ಟಲಿಂಗ ಶಿರಸಿ, ನಿಂಗಪ್ಪ ರೆಡ್ಡಿ, ಸಿ.ವಿ. ಚನ್ನವೀರಗೌಡರ, ಸೋಮಣ್ಣ ವಡ್ಡರ, ಮುತ್ತಣ್ಣ ಚಿನಿವಾಲರ, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

1 month agoApril 13, 2026 11:13 am

ಮಳವಳ್ಳಿಯಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆಗೆ ನಿರ್ಧಾರ

ಮಳವಳ್ಳಿ

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏಪ್ರಿಲ್‌ 20ರಂದು ಬಸವ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಎಸ್.ವಿ.ಲೋಕೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ತಹಶೀಲ್ದಾರ್ ಎಸ್.ವಿ.ಲೋಕೇಶ್ ಮಾತನಾಡಿ, ‘ಏ.20ರಂದು ತಾ.ಪಂ.ಕಚೇರಿ ಆವರಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಬಸವಣ್ಣ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಎಲ್ಲರ ಸಹಕಾರ ಇರಲಿ’ ಎಂದು ಹೇಳಿದರು.

ಸಭೆಯಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕೆ.ಎಸ್.ಪ್ರಕಾಶ್ ಮಾತನಾಡಿ, ‘ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಮಾತನಾಡಿ, ‘ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಎಲ್ಲ ಸಮುದಾಯ ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಸ್.ದಯಾಶಂಕರ್, ಮುಖಂಡ ಬಬ್ರುವಾಹನ ಮಾತನಾಡಿ, ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು. ತಾ.ಪಂ.ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ಪೂರ್ವಾಭಾವಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

1 month agoApril 13, 2026 11:13 am

ಚಿಟಗುಪ್ಪದಲ್ಲಿ ಬಸವ ಜಯಂತಿ ಪದಾಧಿಕಾರಿಗಳ ನೇಮಕ

ಚಿಟಗುಪ್ಪ (ಹುಮನಾಬಾದ್ )

ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಭಾನುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.

ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವೀರೇಶ್ ತುಂಗಾವ, ಉಪಾಧ್ಯಕ್ಷ ಪ್ರಶಾಂತ್ ಮೈನಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಮಠಪತಿ, ಖಜಾಂಚಿಯಾಗಿ ಶ್ರೀಕಾಂತ ಮಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಏಪ್ರಿಲ್ 20 ರಂದು ಪಟ್ಟಣದಲ್ಲಿ ಬಸವ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು. ಬಸವ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಬಸವ ಪರ ಸಂಘಟನೆಗಳ ಪದಾಧಿಕಾರಿಗಳು, ಬಸವ‌ ಅನುಯಾಯಿಗಳು ಹಾಗೂ ಸಾರ್ವಜನಿಕರು ಸಲಹೆ ನೀಡಿದರು.

ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ರವೀಚಂದ್ರ ಶಿವಪೂಜಿ, ರೇವಣಪ್ಪ ಹೂಗಾರ, ರಾಜಶೇಖರ ಚಿಟ್ಟನ್ನಳ್ಳಿ, ರಾಜಶೇಖರ ಉಪ್ಪಿನ, ಅಮೀತ ಹೊಸದೋಡ್ಡಿ, ಪ್ರವೀಣ ರಾಜಾಪುರ, ದೀಪಕ್ ಕುದುರಿ, ಶಿವಕುಮಾರ್ ಚನ್ನುರ ಸೇರಿದಂತೆ ಇತರರಿದ್ದರು.

1 month agoApril 13, 2026 10:56 am

ಬಸವ ಜಯಂತಿ: ಪ್ರಬಂಧ ಕಳಿಸಲು ದಿನಾಂಕ ವಿಸ್ತರಣೆ

1 month agoApril 13, 2026 10:56 am

ಬಸವ ಜಯಂತಿಯಂದು ಸಿಂಧನೂರು ಅನುಭವ ಮಂಟಪದ ಭೂಮಿ ಪೂಜೆ

1 month agoApril 13, 2026 10:56 am

ಹರಪನಹಳ್ಳಿ ಕಾಲೇಜಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಶೇಷ ಉಪನ್ಯಾಸ

1 month agoApril 13, 2026 10:55 am

ಶಿವಮೊಗ್ಗದಲ್ಲಿ ‘ಬಸವ ಕಪ್ – 2026’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

2 months agoApril 11, 2026 11:39 am

ತಿ.ನರಸೀಪುರದಲ್ಲಿ ಬಸವತತ್ವದ ಮೇಲೆ ಉಪನ್ಯಾಸ

ವೀರಶೈವ ಲಿಂಗಾಯತ ಮಹಾಸಭಾದ ಹಾಗೂ ತಾಲೂಕು ಆಡಳಿತದ ವತಿಯಿಂದ ಬಸವ ಜಯಂತಿಯನ್ನು ಆಚರಿಸಲು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಏ.20 ರಂದು ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬಸವತತ್ವ ವಿಚಾರವನ್ನು ಮಂಡಿಸುವ ವಾಗ್ಮಿಯೊಬ್ಬರನ್ನು ಆಹ್ವಾನಿಸಿ, ಐವರು ಸಾಧಕರನ್ನು ಸನ್ಮಾನಿಸುವ ಮೂಲಕ ಶಿಷ್ಟಾಚಾರದಂತೆ ನಾಡಿನ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಜಯಂತಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ರಾಜ್ಯ ಸರ್ಕಾರ ತಾಲೂಕು ಮಟ್ಟದ ಜಯಂತಿ ಆಚರಣೆಗೆ ಯಾವುದೇ ಅನುದಾನ ನೀಡದಿರುವುದಕ್ಕೆ ಸಭೆಯ ಆರಂಭದಲ್ಲಿ ಹಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಕೆ ಇ ಬಿ ಗುತ್ತಿಗೆದಾರ ಸೋಮು, ಬಜ್ಜಿ ನಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

2 months agoApril 11, 2026 11:39 am

ಕೊಪ್ಪಳದಲ್ಲಿ ಬಸವ ಜಯಂತಿ ಕಾರ್ಯಕ್ರಮಗಳು

ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದ್ದಾರೆ.

ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಏ. 20ರ ಬಸವ ಜಯಂತಿಯಂದು ಬೆಳಿಗ್ಗೆ 8 ಗಂಟೆಗೆ ಅಂಬಿಗರ ಚೌಡಯ್ಯ ಉದ್ಯಾನದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲೆ ಸಮರ್ಪಿಸಿ ಗಂಜ್ ಸರ್ಕಲ್‌ನಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಲಾಗುತ್ತದೆ.

ಸಂಜೆ 4 ಗಂಟೆಗೆ ಗಡಿಯಾರ ಕಂಬದ ಬಳಿ ಇರುವ ಮಹೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಗವಿಮಠದ ತೇರು ಮೈದಾನದಲ್ಲಿ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಆಹಾರ ಇಲಾಖೆಯ ಉಪನಿರ್ದೇಶಕ ವಿಶ್ವನಾಥಗೌಡ ಎಂ.ಎನ್., ಡಿಸಿಎಫ್ ಕಚೇರಿಯ ಮಲ್ಲಿಕಾರ್ಜುನ ಗೌಡರ, ಎಎಸ್‌ಐ ವೀರಭದ್ರಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಬಸವ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ, ಈಶ್ವರಪ್ಪ ತೋಟಪ್ಪ ದಿನ್ನಿ ಪಾಲ್ಗೊಂಡಿದ್ದರು.

2 months agoApril 10, 2026 12:26 pm

ರಾಯಚೂರಿನಲ್ಲಿ ಏಪ್ರಿಲ್ 20 ಸಂಭ್ರಮದ ಬಸವ ಜಯಂತಿ

ಜಿಲ್ಲಾಡಳಿತದಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಏಪ್ರಿಲ್ 20ರಂದು ಸಂಭ್ರಮದಿಂದ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಅವರು ತಿಳಿಸಿದ್ದಾರೆ.

ಎ.9ರ ಗುರುವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಸವಣ್ಣ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ನಡೆಯಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

2 months agoApril 10, 2026 12:12 pm

ಬೀದರ್: ಬಸವ ಜಯಂತಿ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಬಸವ ಜಯಂತಿಯ ಉತ್ಸವ ಸಮಿತಿಯ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ.ರಜನೀಶ ವಾಲಿ ಹಾಗೂ ಬೀದರ್‌ ಮಹಾನಗರ ಪಾಲಿಕೆಯ ಸದಸ್ಯ ಶಶಿಧರ ಹೊಸಳ್ಳಿ ಅವರನ್ನು ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ ಮಾಡಲಾಗಿದೆ.

ಕೋಶಾಧ್ಯಕ್ಷರಾಗಿ ಸಿದ್ರಾಮಯ್ಯ ಸ್ವಾಮಿ, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಧನರಾಜ ಹಂಗರಗಿ, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಮ ಮುದಾಳೆ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಡಾ. ದೇವಕಿ ಅಶೋಕ ನಾಗೋರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಡಾ.ರಜನೀಶ ವಾಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಕೂಡ ಬಸವ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

2 months agoApril 10, 2026 12:11 pm

ಗದಗದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ವಚನ ಪಾಠಶಾಲೆ, ಜಗದ್ಗುರು ತೋಂಟದಾರ್ಯಮಠದ ವತಿಯಿಂದ ಬಸವ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ವಚನಾಧಾರಿತ ಚಿತ್ರರಚನೆ, ಪ್ರಬಂಧ ಹಾಗೂ ವಚನ ಸಮೂಹ ನೃತ್ಯ ಸ್ಪರ್ಧೆಗಳನ್ನು ತೋಂಟದಾರ್ಯ ಮಠದಲ್ಲಿ ಆಯೋಜಿಸಲಾಗಿದೆ.

ಏ.19ರಂದು ಮಧ್ಯಾಹ್ನ 3ಕ್ಕೆ ವಚನ ಕಂಠಪಾಠ ಸ್ಪರ್ಧೆ 1ರಿಂದ 4ನೇ ತರಗತಿ ಹಾಗೂ 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ನಡೆಯಲಿದೆ. ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ವಿಶ್ವಗುರು ಬಸವಣ್ಣ: ಕರ್ನಾಟಕದ ಸಾಂಸ್ಕೃತಿಕ ನಾಯಕ’ ಈ ವಿಷಯವಾಗಿ ಪ್ರಬಂಧ ಸ್ಪರ್ಧೆ ಜರುಗಲಿದೆ.

ಏ.20ರಂದು ಮಧ್ಯಾಹ್ನ 3ಕ್ಕೆ ವಚನಾಧಾರಿತ ಚಿತ್ರರಚನಾ ಸ್ಪರ್ಧೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ನಡೆಯಲಿದೆ. ವಚನ ಸಮೂಹ ನೃತ್ಯ ಸ್ಪರ್ಧೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜರುಗಲಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.

ಭಾಗವಹಿಸಲಿಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಸ್ಪರ್ಧೆಯ ನಿಯಮ ಹಾಗೂ ನೋಂದಣಿಗಾಗಿ 94499 72988, 92415 85423ಈ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.

2 months agoApril 10, 2026 11:45 am

ಚಾಮರಾಜನಗರದಲ್ಲಿ ವೈಚಾರಿಕ, ಅದ್ದೂರಿ ಬಸವ ಜಯಂತಿ

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸವ ಜಯಂತಿ ಆಚರಣೆ ಸಂಬಂಧ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಸಮುದಾಯದ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು.

ಜಿಲ್ಲಾಡಳಿತ, ಸಮುದಾಯಗಳ ಸಹಕಾರದೊಂದಿಗೆ ಏ.20ರಂದು ವಿಚಾರ ಸಂಕಿರಣ ಆಯೋಜಿಸುವ ಮೂಲಕ ಸಾಂಕೇತಿಕವಾಗಿ ಬಸವ ಜಯಂತಿ ಆಚರಣೆ ಮಾಡಲಾಗುವುದು. ನಂತರ ಅದ್ದೂರಿಯಾಗಿ ‌ಬಸವಜಯಂತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

‘ಏ.20ರಂದು ಬಸವೇಶ್ವರರ ವಿಚಾರಧಾರೆಗಳನ್ನು ತಲುಪಿಸಲು ವಿಚಾರ ಸಂಕಿರಣ, ವಚನ ಗಾಯನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶೀಘ್ರ ಮತ್ತೊಂದು ದಿನಾಂಕ ನಿಗದಿಪಡಿಸಿ ಅದ್ಧೂರಿಯಾಗಿ ಬಸವ ಜಯಂತಿ ಆಚರಣೆ ಮಾಡಬೇಕು’ ಎಂದು ಮುಖಂಡರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.‌

ಎಲ್ಲ ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಬಸವ ಜಯಂತಿ ಆಚರಣೆ ಆಗಬೇಕು. ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಬೇಕು. ಸರ್ಕಾರದ ಆದೇಶದಂತೆ ಎಲ್ಲ ‌ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಬೇಕು. ಮಹಾನ್ ನಾಯಕರ ಜಯಂತಿಗಳ ಆಚರಣೆ ಮಾಡುವಂತೆ ಬಸವೇಶ್ವರರ ಜಯಂತಿಯೂ ನಡೆಯಬೇಕು ಎಂದು ಮುಖಂಡರು ಸಲಹೆ ನೀಡಿದರು.

ಬಸವ ಜಯಂತಿ ಕಾರ್ಯಕ್ರಮದ ದಿನ ಬಸವೇಶ್ವರರ ಕುರಿತು ಪ್ರಕಟವಾಗಿರುವ ಪುಸ್ತಕ ಮಳಿಗೆ ತೆರೆಯಬೇಕು. ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಷ್ಠಾಪಿಸಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

2 months agoApril 10, 2026 11:44 am
2 months agoApril 11, 2026 11:46 am

ಮೈಸೂರಿನಲ್ಲಿ ಬಸವಣ್ಣನವರ ತತ್ವ ಜನರಿಗೆ ತಲುಪಿಸಲು ಸೂಚನೆ

ನಗರದಲ್ಲಿ ಏ.20ರಂದು ರಾಜ್ಯಮಟ್ಟದ ಬಸವ ಜಯಂತಿಯನ್ನು ಆಚರಿಸಲು ಅಧಿಕಾರಿಗಳು ವಿನೂತನವಾದ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬಸವ ಜಯಂತಿ ಆಚರಣೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.

‘ಜಿಲ್ಲಾಡಳಿತದಿಂದ ಪ್ರತಿಮೆಗೆ ಮಾಲಾರ್ಪಣೆ, ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಬಾರಿ ಹೊಸತನದಿಂದ ಹಾಗೂ ಬಸವಣ್ಣನವರ ತತ್ವ–ಆದರ್ಶ ಹೆಚ್ಚಿನ ಜನರಿಗೆ ತಲುಪುವಂತೆ ಜಯಂತಿ ನಡೆಸಲು ಯೋಜನೆ ರೂಪಿಸಿ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರಿಗೆ ಸೂಚಿಸಿದರು.

‘ಯಾವುದೇ ಲೋಪದೋಷ ಉಂಟಾಗದಂತೆ ಶಿಷ್ಟಾಚಾರದ ಪ್ರಕಾರ ನಡೆಯಬೇಕು. ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗುವುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಮಾತನಾಡಿ, ‘ಜಯಂತಿ ಆಚರಣೆಗೆ ಸಂಘ–ಸಂಸ್ಥೆಗಳ ಸಹಯೋಗ ಮುಖ್ಯವಾಗಿದೆ. ಬಸವ ಬಳಗದ ಒಕ್ಕೂಟ ಸೇರಿದಂತೆ ವಿವಿಧ ಸಂಸ್ಥೆಗಳವರ ಸಲಹೆಯಂತೆ ಸಂಘ–ಸಂಸ್ಥೆಗಳ ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು,’ ಎಂದು ತಿಳಿಸಿದರು.

ಬಸವ ಬಳಗ ಒಕ್ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ‘ಒಕ್ಕೂಟದಿಂದ ಏ.19ರಂದು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಲಾಮಂದಿರದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಪ್ರದರ್ಶನ ಹಾಗೂ ಏ.20ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಬಸವ ಬಳಗ ಒಕ್ಕೂಟದ ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ವಿ. ಮಲ್ಲೇಶ್, ‘ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಬಸವ ಜಯಂತಿಯಂದು ಶಂಕುಸ್ಥಾಪನೆ ನೆರವೇರಿಸುವುದು ಉತ್ತಮ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಯತ್ನಿಸಲಿ’ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್‌ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್‌್, ಎಎಸ್‌ಪಿ ಮಲ್ಲಿಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್‌ ಮತ್ತು ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ‌

2 months agoApril 11, 2026 11:52 am

ಬಸವ ಜಯಂತಿಯಂದು ಚಿತ್ತಾಪುರದಲ್ಲಿ ಬಸವ ಭವನ, ವಿದ್ಯಾರ್ಥಿನಿ ವಸತಿ ನಿಲಯಕ್ಕೆ ಅಡಿಗಲ್ಲು


2 months agoApril 11, 2026 11:53 am

ಓಲೆ ಮಠದಲ್ಲಿ ಎಪ್ರೀಲ್ 15ರಿಂದ ಬಸವ ಜಯಂತಿ, ಜಾತ್ರಾ ಮಹೋತ್ಸವ

2 months agoApril 11, 2026 11:53 am

ಚಿತ್ರದುರ್ಗದಲ್ಲಿ ಬಸವ ಜಯಂತಿಯ ಅಂಗವಾಗಿ ಪ್ರಬಂಧ ಸ್ಪರ್ಧೆ

2 months agoApril 11, 2026 11:54 am

ಕಲಬುರ್ಗಿಯಲ್ಲಿ ಉತ್ಸವ ಸಮಿತಿ ಆಯ್ಕೆ, ಅತ್ತಿವೇರಿ ಮಾತಾಜಿ ಪ್ರವಚನ

2 months agoApril 11, 2026 11:54 am

ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಬಸವ ಜಯಂತಿ ಆಚರಿಸಲು ನಿರ್ಧಾರ

2 months agoApril 11, 2026 11:55 am

ಏಪ್ರಿಲ್ 29 ದಾವಣಗೆರೆಯಲ್ಲಿ ಬಸವ ಜಯಂತಿ ಪೂರ್ವಸಿದ್ಧತಾ ಸಭೆ

2 months agoApril 11, 2026 11:56 am

ಎರಡು ಸಾವಿರ ಶರಣ, ಶರಣೆಯರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ

2 months agoApril 11, 2026 11:56 am

ಕಲಬುರಗಿ: ಚಂದಾ ಎತ್ತದೆ, ಡಿಜೆ ಬಳಸದೆ ಬಸವ ಜಯಂತಿ ಆಚರಿಸಲು ನಿರ್ಧಾರ

2 months agoApril 11, 2026 11:57 am

ಬೆಂಗಳೂರಲ್ಲಿ ಬಸವ ಜಯಂತಿಗೆ ಸಾವಿರಾರು ಜನ ಸೇರಿಸಲು ಸಂಘಟನೆಗಳ ಸಭೆ

2 months agoApril 11, 2026 11:58 am

ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸಲು ಒಕ್ಕೂಟದ ಕರೆ

Share This Article
Leave a comment

Leave a Reply

Your email address will not be published. Required fields are marked *