ಬಸವ ಜಯಂತಿ: ದಾವಣಗೆರೆಯಲ್ಲಿ ಯಶಸ್ವಿ ‘ವಚನ ವೈಭವ’ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ :

ಚೇತನ ಫೌಂಡೇಶನ ವತಿಯಿಂದ ನಗರದ ಸ್ಥಳೀಯ ರೋಟರಿ ಭವನದಲ್ಲಿ ಭಾನುವಾರ “ವಚನ ವೈಭವ” ಕಾರ್ಯಕ್ರಮ ನೆರವೇರಿತು.

ಬಸವ ಜಯಂತಿ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ವಚನ ಸಾಹಿತ್ಯದ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶ ಹೊಂದಿತ್ತು.

ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ. ಬಿ. ಪರಮೇಶ್ವರಪ್ಪ ಅವರು ಉದ್ಘಾಟಿಸಿ, ವಚನಗಳ ಮೂಲಕ ಸಮಾಜದಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳಿದರು.

ಅಧ್ಯಕ್ಷತೆಯನ್ನು ಪರಮೇಶ್ವರಪ್ಪ ಎಂ. ಸಿರಿಗೆರೆ ವಹಿಸಿ ಕೊಂಡಿದ್ದರು. ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಮಾತನಾಡಿ, ವಚನಗಳ ಸಂದೇಶವನ್ನು ತಲುಪಿಸುವ ಕಾರ್ಯ ಅತ್ಯಂತ ಮುಖ್ಯವೆಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಶಿಕ್ಷಕರು, ಸಮಾಜಸೇವಕರು ಬಿ. ರಂಗ ಸ್ವಾಮಿ ಅವರು, ಬಸವಣ್ಣನವರ ವಚನಗಳನ್ನು ಮತ್ತು 12ನೇ ಶತಮಾನದ ಶಿವಶರಣರ ವಚನಗಳ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಶರಣ ಶರಣೆಯರ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು.

ಬಸವಣ್ಣನ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಅವು ಸಮಾಜದ ಅಭಿವೃದ್ಧಿಗೆ ದಿಕ್ಕು ತೋರಿಸುತ್ತವೆ ಎಂದು ಹೇಳಿದರು. ಇದೇ ವೇಳೆ ಎಸ್. ಎಂ. ರವಿಕುಮಾರ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ, ಕಲೆ, ನಾಡು, ನುಡಿ, ಜಲ, ನೆಲ, ಭಾಷೆಯ ಅಭಿಮಾನ ಹೊಂದಿರಬೇಕು. ಉನ್ನತ ವಿದ್ಯಾಭ್ಯಾಸ ಮಾಡಬೇಕು. ಉನ್ನತ ಹುದ್ದೆಗಳಿಗೆ ತಲುಪಬೇಕು ಎಂದು ನುಡಿದರು.

ಯಾಸ್ಮಿನ್ ಬಾನು ಬಿ. ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮದಲ್ಲಿ ವಚನ ಗಾಯನ, ವಚನ ವಾಚನ, ಉಪನ್ಯಾಸಗಳು ನಡೆದವು. ಕುಮಾರಿ ಅಕ್ಷರ ರೆಡ್ಡಿ 12ನೇ ಶತಮಾನದ ಶರಣೆ ಅಕ್ಕಮಹಾದೇವಿ ಪ್ರದರ್ಶಿಸಿದ ರೂಪಕ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದ ಸ್ವಾಗತ ರಾಜೇಂದ್ರಕುಮಾರ ಮಠ ಧಾರವಾಡ, ನಿರೂಪಣೆ ವೀರೇಶ್ ಕೆ.ಎಸ್, ಪ್ರಸನ್ನ ನಾಡಿಗೇರ, ಬಾವುಟ ಬಸವರಾಜ ಸೇರಿದಂತೆ ಇತರೆ ಕನ್ನಡ ಮನಸುಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *