ರಾಯಚೂರು:
ನಗರದ ಬಸವ ಕೇಂದ್ರದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ಅಂಗವಾಗಿ ರವಿವಾರ ರಾಯಚೂರು ಸರ್ವದ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘ, ಸಂಸ್ಥಾಪಕರಾದ ರತ್ನಾಕರ್ ಮತ್ತು ಸಂಗಡಿಗರು ವಚನ ಗಾಯನ ಹಾಗೂ ಸುಗಮ ಸಂಗೀತವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ವ್ಹಿ. ಎ. ಮಾಲಿಪಾಟೀಲ, ವಿಜಯಕುಮಾರ ಸಜ್ಜನ, ಚನ್ನಬಸವ ಇಂಜಿನಿಯರ್, ಸಿ. ಬಿ. ಪಾಟೀಲ ಹಾಗೂ ರತ್ನಾಕರ್ ಉಪಸ್ಥಿತರಿದ್ದರು.

ಬಸವ ಕೇಂದ್ರದ ಸಕ್ರಿಯ ಕಾರ್ಯಕರ್ತರು, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಚೇತನ ಐ. ಬಸವರಾಜಪ್ಪ ಅವರು ಇಂದು ಲಿಂಗೈಕ್ಯರಾದ ವಿಷಯ ಸಭೆಯಲ್ಲಿ ತಿಳಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ವಿರುಪಾಕ್ಷಪ್ಪ, ಹರವಿ ಅನ್ನಪೂರ್ಣ, ಜಗದೇವಿ ಚನ್ನಬಸವ, ಮುಕ್ತಾ ನರಕಲದಿನ್ನಿ, ನಾಗೇಶ್ವರಪ್ಪ, ವೆಂಕಣ್ಣ, ಪಿ. ಸೋಮಶೇಖರ ಮುಂತಾದವರು ಉಪಸ್ಥಿತರಿದ್ದರು.

ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು. ಶರಣ ಶರಣೆಯರು ಭಾಗಿಗಳಾಗಿದ್ದರು
