ಎಷ್ಟೇ ಹೋರಾಟ ನಡೆಸಿದರೂ ಲಿಂಗಾಯತ ಧರ್ಮ ಅಸಾಧ್ಯ: ಜಗದೀಶ ಶೆಟ್ಟರ್

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

“ಎಷ್ಟೇ ಹೋರಾಟ ನಡೆಸಿದರೂ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರಕುವುದು ಅಸಾಧ್ಯ,” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗಾಯತ ಸ್ವತಂತ್ರ್ಯ ಧರ್ಮ ಮಾಡಿ ಹಿಂದುಳಿದ ವರ್ಗಕ್ಕೆ ಸೇರಿಸುವ ಬದಲು ಸಮಗ್ರ ವೀರಶೈವ-ಲಿಂಗಾಯತ ಧರ್ಮವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕಾರ್ಯವಾಗಬೇಕು. ಇದಕ್ಕೆಲ್ಲ ಸಮಾಜ ಬಾಂಧವರು ಹೋರಾಡಬೇಕಿದೆ.

‘ಪ್ರತ್ಯೇಕ ಧರ್ಮವಾದರೆ ಯಾವುದೋ ಒಂದು ಶಿಕ್ಷಣ ಸಂಸ್ಥೆಗೆ ಮಾತ್ರ ಅನುಕೂಲವಾಗುತ್ತದೆ. ಬದಲಿಗೆ ಇಡೀ ಸಮಾಜಕ್ಕೆ ಒಳಿತಾಗುವುದಿಲ್ಲ. ತೆಲಂಗಾಣ, ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಈಗಾಗಲೇ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿಯೂ ಅದಕ್ಕೆ ಪ್ರಯತ್ನಿಸಬೇಕು’ ಎಂದು ಹೇಳಿದರು.

ಧರ್ಮದ ಹೋರಾಟದಿಂದ ಒಡಕು

ಪ್ರತ್ಯೇಕ ಧರ್ಮದ ಹೋರಾಟದಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ವೀರಶೈವ-ಲಿಂಗಾಯತ ಸಮಾಜವು ಒಡೆದ ಮನೆಯಂತಾಗಿದೆ. ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಒಂದಾಗಿಸುವ ಪ್ರಯತ್ನಕ್ಕೆ ಕೆಲ ಹೋರಾಟಗಾರರು ಸಿದ್ಧರಿಲ್ಲ ಎಂದರು.

ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ, ಸ್ವತಂತ್ರ ಧರ್ಮ ಎಂದು ಜನರಲ್ಲಿ ಗೊಂದಲ ಸೃಷ್ಟಿಮೂಡಿಸಲಾಗುತ್ತಿದೆ. ಇದನ್ನು ತಗೆದುಹಾಕುವ ಕೆಲಸವಾಗಬೇಕಿದೆ. ಮೊದಲು ಎಲ್ಲ ಮಠಾಧೀಶರು ಒಂದಾಗಬೇಕಿದೆ. ಅವರಲ್ಲಿರುವ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಮಠಾಧೀಶರನ್ನು ಒಗ್ಗೂಡಿಸುವ ಕೆಲಸವನ್ನು ಸಮಾಜವೇ ಮಾಡಬೇಕಾಗಿದೆ.

ನನ್ನನ್ನು ಕಡೆಗಣಿಸಲಾಗುತ್ತಿದೆ

ರಾಜಕೀಯದಲ್ಲಿ ಈಗಲೂ ನನ್ನನ್ನು ಕಡೆಗಣಿಸುವ ಕಾರ್ಯ ನಡೆಯುತ್ತಿದೆ ಎಂದು ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದರು.

ಒಂದು ರಾಜಕೀಯ ಪಕ್ಷ ನನ್ನನ್ನು ಬಳಸಿಕೊಂಡು ಬೆಳೆಯಿತು. ಬಳಿಕ ನನ್ನನ್ನೇ ಕಡೆಗಣಿಸುವ ಕಾರ್ಯ ಮಾಡಿತು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತಿರುವೆ. ಸಮಾಜ ಬಾಂಧವರ ಆಶೀರ್ವಾದದಿಂದಲೇ ನಾನು ಇಂದು ಈ ಸ್ಥಾನದಲ್ಲಿರುವೆ. ನನ್ನ ರಾಜಕೀಯ ರಂಗದಲ್ಲಿ ಸಾಕಷ್ಟು ಏಳು, ಬೀಳು ಎಲ್ಲವನ್ನೂ ಅನುಭವಿಸಿದ್ದೇನೆ, ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
21 Comments
  • ಮನೋವಿಕಾತ ಹೆಚ್ಚಾಗಿದೆ ಶೆಟ್ಟರಿಗೆ. ಲಿಂಗಾಯತ ಪ್ರತ್ಯೇಕ ದರ್ಮ ಆಗುವದಿಲ್ಲಂತೆ. ಕಾರಣ ತನನ್ನು ಕಡೆಗಣಿಸಲಾಗಿದಂತೆ ಭಲೇ ಭೇಷ ಬಬ್ರುವಾಹನ ಇರಬೇಕು ನಿಮ್ಮಂತಹ ಸ್ವಾರ್ಥಿ ರಾಜಕಾರಣಿಗಳು. ಲಿಂಗಾಯತವನು ತುಳಿಯಲು ಬಂದ ಸಂಘಿಗಳ ಎಂಜಲು ಕಾಸಿನ …….

    • ಧರ್ಮದ ಪರಿಕಲ್ಪನೆ ಕೊರತೆ ಇದೆ, ಬಹುಶಹ ಅಧ್ಯಯನದ ಅಗತ್ಯ ಇದೆ ಎಂದು ಕಾಣುತ್ತದೆ ಶೆಟ್ಟರಿಗೆ. ಧರ್ಮದ ಹೋರಾಟದಲ್ಲಿ ತಾವು ಮುಂಚೂಣಿಯಲ್ಲಿ ಬಂದಾಗ ನಿಮ್ಮನ್ನು ಯಾರೂ ಕಡೆಗಣಿಸುವುದಿಲ್ಲ.

      • ಜಗದೀಶ ಶೆಟ್ಟರ್ ನಂತಹ ಅವಿವೇಕಿಗಳಿಂದ ಲಿಂಗಾಯತರಿಗೆ ಮಹಾಮೋಸ. ಇಂತಹ ವಿವೇಕ ಶೂನ್ಯರನ್ನ ಏನೇನ್ನಬೇಕು

    • ಶೆಟ್ಟರ್ ರವರು ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಯಾವ ಸಮಾಜದವರು ಎಂಬ ಅರಿವಿರಲಿ. ಲಿಂಗಾಯತ ವೀರಶೈವ ಬೇರೆಯಲ್ಲ ಲಿಂಗಾಯತ ಧರ್ಮದಲ್ಲಿ ಎಲ್ಲವೂ ಸೇರಲಿ. ನಿಮ್ಮ ಸಣ್ಣತನ ಬಿಡಿ.ವಿಶಾಲವಾಗಿ ಯೋಚಿಸಿ.

  • ಮಾನ್ಯ ಜಗದೀಶ್ ಶೆಟ್ಟರ್ ಅವರೇ. ನೀವು ಲಿಂಗಾಯಿತ ಧರ್ಮವನ್ನು ಪ್ರತ್ಯೇಕ ಆಗುವುದನ್ನು ನಿಲ್ಲಿಸಿದರೆ. ಇವಾಗ ನಿಮ್ಮನ್ನು ಒಂದು ಪಕ್ಷ ಕಡೆಗಣಿಸಿದೆ. ಮುಂದೆ ನಿಮ್ಮನ್ನು ಲಿಂಗಾಯಿತರು ಕಡೆಗಣಿಸುತ್ತಾರೆ ಎಚ್ಚರ.

  • ಶೆಟ್ಟರ್ಗೆ ದಿಕ್ಕಾರ ನಿಮ್ಮಂತ ನಾಯಕರಿಂದ ನಮಗೆ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ತಾ ಇಲ್ಲ

  • ಸ್ವಾರ್ಥ ಸಮಯಸಾಧಕ ಪ್ರವರ್ತಿ ಒಳ್ಳೆಯದಲ್ಲ ಶಟ್ರೆ, ನಿಮ್ಮ ರಾಜಕೀಯ ನೀಚಾಟದಲ್ಲಿ ಎನಾದರೂ ಮಾಡಿಕೊಂಡು ಹೋಗಿ ಆದರೆ ಶರಣರಿಗೆ ಮತ್ತು ಶರಣ ಧರ್ಮಕ್ಕೆ ಜೊತೆಗೆ ಶರಣರ ಅನುಯಾಯಿಗಳಗೆ ಕೇಡಬಯಸಿದರೆ ನಿಮಗೆ ಎಂದೂ ಒಳ್ಳಯದಾಗುವದಿಲ್ಲ. ಲಿಂಗಾಯತದಲ್ಲಿರುವ ಸ್ವತಂತ್ರತೆ ನಿಮ್ಮ ಗುಲಾಮಗಿರಿಯ ಮನಸ್ಥಿತಿಗೆ ಅರ್ಥವಾಗುವದು ಬಹಳ ಕಷ್ಟ.

  • ಒಂದು ಮಾಡುವ ಶೆಟ್ಟಿ ಹಿಂದೂ ನಾವೆಲ್ಲ ಒಂದೇ ಎನ್ನುವ ಮಾತುಗಳು. ಲಿಂಗಾಯತ ಧರ್ಮದ ಹೆಸರಲ್ಲಿ ಇವರಿಗೆ ಮತ್ತೆ ಪಟ್ಟ ಕಟ್ಟಿದರೆ ನಮ್ಮ ಗತಿ ದೇವರೇ ಬಲ್ಲ. ನಮ್ಮ ಕುಲಕ್ಕೆ ಮೂಲ ಕೊಡಲಿ ಕಾವಾಗಿ ಇರುವ ಇವನ ಹುಟ್ಟು ಅಡಗಿಸಿ

    • RSS ತನ್ನ ವಿಚಾರನ್ನು ವೀರಶೈವ ನಾಯಕನ ಬಾಯಿಂದ ಹೇಳಿಸಿದೆ

  • This case must be used for creating political awareness in the Basava Shakti Shibira. Lingayats must be made aware how their political representative talk and perform benefitting to themselves and not the entire community. However for political benefits for his personal gain he plays the victim card. He is bred in shakhas and except for his identity as Lingayat, he is an absolute outcast from Basavanna.

    • ಈ ಜಗದೀಶ ಶಟ್ಟರ ಲಿಂಗಾಯತ ಧರ್ಮದಲ್ಲಿ ಹುಟ್ಟಿ ಲಿಂಗಾಯತ ಧರ್ಮಕ್ಕೆ ದ್ರೋಹ ಬಗಿತಾ ಇದ್ದಾನೆ ಇವನಿಗೆ ಬೆಳಗಾವಿ ಜನ ಮುಂದಿನ ಸಲ ಮನೆಯಲ್ಲಿ ಕುಡಿಸಬೇಕು. ಈ ಹೇಳಿಕೆಯಿಂದ ನಾನು ಮನೆಯಲ್ಲಿ ಕುತಿದ್ದೆನೆ ಎನ್ನುವ ಅರಿವ ಇವನಿಗೆ ಬರಬೇಕು. ಧರ್ಮದ ಬಗ್ಗೆ ಒಂದಿಷ್ಟು ಜ್ಞಾನ ಇಲ್ಲ ಈ ಮನುಷ್ಯನಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕರೆ ನಮ್ಮ ಮುಂದಿನ ಮಕ್ಕಳಿಗೆ ಎಷ್ಟು ಅನುಕೂಲ ಆಗುತ್ತೆ ಎನುವ ಪರಿಜ್ಞಾನ ಇಲ್ಲ ಈ ಶಟ್ಟರಗೆ ಥೂ ನಿಮ್ಮಂಥವರು ಲಿಂಗಾಯತ ಧರ್ಮದಲ್ಲಿ ಹುಟ್ಟಬಾರದಿತ್ತು.

  • ಮೇಲಿನ ಗಿಡ ಹುಡಕ ಬೇಡಿರಿ. ಇದರ ಬೇರು ಎಲ್ಲಿದೆ ಹುಡುಕೀರಿ. ಬೇರು ಕತ್ತರಿಸಿರಿ.
    ಪಂಚ ಪೀಠಾಧೀಶರು ಹೇಳಿದಂತೆ, ಅವರ ಶಿಷ್ಯರು ಹೇಳಿದಂತೆ ಲಿಂಗಾಯತರು ಕೇಳುತ್ತಾರೆ. ಪಿಂಡಗಳ ಒಲವು ಇದ್ದ ಕಡೆ ಲಿಂಗಾಯತರು ವೋಟ್ ಹಾಕುತ್ತಾರೆ. ಅನ್ನುವುದು ಇವರ ನಿಲುವು.

    ಅದಕ್ಕೆ ಲಿಂಗಾಯತರು ಮೊದಲು ಪಂಚ ಪೀಠಗಳಿಗೆ ಹೋಗುವುದು, ಅವರ ಶಿಷ್ಯರ ಮಠಗಳಿಗೆ ಹೋಗುವುದು ದಕ್ಷಿಣೆ ಕೊಡುವುದು ನಿಲ್ಲಿಸಿರಿ.
    ಅದನ್ನು ಮಾಡದ ಹೊರತು, ಈ ಉಂಡ ಮನೆ ಗಳ ಎನಿಸುವ ಬಿಜೆಪಿ ರಾಜಕಾರಣಿಗಳು ಲಿಂಗಾಯತ ಧರ್ಮಕ್ಕೆ ಹೊಡೆತ ಕೊಡುತ್ತಲೇ ಇರುತ್ತಾರೆ.

  • ಮಾನ್ಯ ಜಗದೀಶ್ ಶೆಟ್ಟರ್ ಅವರಿಗೆ,
    ಶರಣು ಶರಣಾರ್ಥಿ
    ಶೆಟ್ಟರೇ, ಗೊಂದಲ ಇರುವದು ನಿಮ್ಮಲ್ಲಿ.
    ವೀರಶೈವ ಮತ್ತು ಲಿಂಗಾಯತ ಧರ್ಮಗಳಲ್ಲಿರುವ ವ್ಯತ್ಯಾಸ ನಿಮಗೆ ಗೊತ್ತಿಲ್ಲದೆ ಇರುವದು ವಿಷಾದಕರ ಸಂಗತಿ. ಇವು ಬೇರೆ ಬೇರೆ ಎಂಬುದಕ್ಕೆ ಅನೇಕ ಶರಣರ ವಚನಗಳೇ ಸಾಕ್ಷಿ ಆಗಿವೆ. ನೀವೊಬ್ಬ ನಮ್ಮ ಸಮಾಜದ ಪ್ರಾಮಾಣಿಕ ರಾಜಕಾರಣಿ ಎಂಬುದಾಗಿ ನಿಮ್ಮ ಹಿಂಬಾಲಕನಾಗಿದ್ದೆ. ಆದರೆ ಕಳೆದ ಚುನಾವಣೆಯಲ್ಲಿ ಲಿಂಗಾಯತದ ನಿಮ್ಮಂಥ ಧುರೀಣರೆಲ್ಲರನ್ನು ಕಡೆಗಣಿಸಿ ಬಿಜೆಪಿ ಹೇಗೆ ಮತ್ತೆ ಕೇವಲ ಇಬ್ಬರ ಕೈಯಲ್ಲಿ ಅಧಿಕಾರ ಕೊಡಬೇಕೆಂದು ಹುನ್ನಾರ ನಡೆಸಿತ್ತು ಎಂಬುದು ಗೊತ್ತಿದ್ದೂ ಅವರ ಬಾಲ ಬಡೆಯುವುದನ್ನು ನೀವು ಬಿಟ್ಟಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ.
    ಇಡೀ ಲಿಂಗಾಯತ ಸಮಾಜವನ್ನು obc ಪಟ್ಟಿಗೆ ಸೇರಿಸುವುದು ಆಗದ ಮಾತು. ಆದರೆ ಸಾಕಷ್ಟು ಸಾಕ್ಷಿ ಪುರಾವೆಗಳಿದ್ದೂ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ಕೊಡದೆ ಇರುವ ಲಿಂಗಾಯತ ದ್ರೋಹಿ ಬಿಜೆಪಿಯಲ್ಲಿ ನೀವು ಅಸ್ತಿತ್ವ ಉಳಿಸಿಕೊಳ್ಳಬೇಕೆಂದರೆ ಧರ್ಮಕ್ಕಾಗಿ ಧ್ವನಿ ಎತ್ತಿ.

  • ನಿಮಗೆಲ್ಲ ಆರ್ ಎಸ್ ಎಸ್ ನಭೂತಹಿಡಿದಿದೆ, ಇಲ್ಲ ಅದೇಭೂತವನ್ನು ನೀವು ಹಿಡಿದಿದ್ದೀರಿ. ಸಂಘಿಗಳು ನಿಮ್ಮನ್ನು ಒಂದುದಿನ ಕಸದ ಬುಟ್ಟಿಗೆ ಹಾಕಿದಾಗ ತಿಳಿಯುತ್ತೆ

  • ಅದು ಕರಿ ಟೋಪಿ ಮಹತ್ವ, ವ್ಯವಹಾರಿಕ ರಾಜಕೀಯ. ಧರ್ಮ ರಾಜಕೀಯ ಅಲ್ಲ. ಇವರಿಗೆ ಕರಿಟೋಪಿಯ ಗುಣ, ಅಂದರೆ ಲಾಭದ ಗುಣ, ನ್ಯಾಯದ,ಸತ್ಯದ ಗುಣವಿಲ್ಲ. ಅವಕಾಶವಾದಿ ಮನಸ್ಥಿತಿಯ ಉಳ್ಳವರು. ಒಬ್ಬ ವಕೀಲರು ಹಾಗಿಯೂ ಸಹ ಈ ರೀತಿ ಹೇಳುವುದು ಸರಿಇಲ್ಲ. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವುದು ಶತಸಿದ್ದ. ಅದನ್ನು ಪಡೆಯುವ ಎಲ್ಲಾ ಅರ್ಹತೆ ಲಿಂಗಾಯತ ಧರ್ಮಕ್ಕೆ ಇದೆ.

  • ಸುನೀಲ ಸಾಣಿಕೊಪ್ಪ ನ್ಯಾಯವಾದಿ ಬೆಳಗಾವಿ says:

    ಬಸವಾದಿ ಶರಣರ ಶಾಪದ ಕಾರಣ ನಿಮ್ಮನ್ನು ಕಡೆಗಣಿಸಲಾಗಿದೆ

    • ಈ ಶಾಪ ವಿಮೋಚನೆಗೆ ವಿಮೋಚನಂಜೆಗೆ ಶ್ರೀ ರಾಮನಿಂದಲೂ ಸಾಧ್ಯವಿಲ್ಲವಂತೆ :):):):)

  • MR Jagadeesh we have seen and witnessed your Another face of RSS in many occasions
    Pl stop fooling around the lingayats..
    Hope this is enough for you.

Leave a Reply

Your email address will not be published. Required fields are marked *