ಶಸಾಪಗೆ ಸಿ. ಜಿ. ನಾಗರಾಳ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ :

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಶರಣರಾದ  ಚಂದ್ರಶೇಖರ ನಾಗರಾಳ ಅವರು ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಶ್ರೀಯುತರು ನಿವೃತ್ತ ಶಿಕ್ಷಕರಾಗಿದ್ದು, ಕಳೆದ ಒಂದು ದಶಕದಿಂದ ಮುದ್ದೇಬಿಹಾಳ ಬಸವ ಮಹಾಮನೆ ಬಳಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಮೊದಲು ಅಧ್ಯಕ್ಷರಾಗಿದ್ದ ಬಸವರಾಜ ನಾಲತ್ವಾಡ ಅವರು ನಾಗರಾಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ನಾಗರಾಳ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಜಂಬುನಾಥ ಕಂಚ್ಯಾಣಿ, ವಿ.ಸಿ. ನಾಗಠಾಣ, ಮ. ಗು. ಯಾದವಾಡ ಹಾಗೂ ಮುದ್ದೇಬಿಹಾಳ ಬಸವ ಮಹಾಮನೆಯ ಸಂಚಾಲಕರಾದ ಬಸವರಾಜ ಕೋರಿ, ಚಂದ್ರಶೇಖರ ಇಟಗಿ, ರುದ್ರೇಶ ಕಿತ್ತೂರು, ಅಶೋಕ ಮಣಿ, ಎಂ. ಬಿ. ಪಾಟೀಲ, ಎಂ. ಎಸ್. ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *