ಬಸವಕಲ್ಯಾಣದಲ್ಲಿ ಅರ್ಥಪೂರ್ಣವಾಗಿ ನಡೆದ ತಾಯಂದಿರ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ನಗರದ ಕೇತಕಿ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಈಚೆಗೆ ಅರ್ಥಪೂರ್ಣವಾಗಿ ವಿಶ್ವ ತಾಯಂದಿರ ದಿನಾಚರಣೆಯನ್ನು ಕಲ್ಯಾಣ ನಾಡು ಗ್ರಾಮೀಣ ಜನಪದ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ವೀರಶೆಟ್ಟಿ ಮಲಶೆಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಿಗಿಂತ ದೊಡ್ಡ ದೇವರಿಲ್ಲ, ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಅದು ತಾಯಿ. ತನಗಾಗಿ ಏನನ್ನು ಬಯಸದವಳು, ಕೂಡಿಡದವಳು, ತನಗಿಲ್ಲವೆಂದು ಕೊರಗದವಳು. ನಾವು ಸೋತಾಗ ಸದಾ ನಮ್ಮ ಜೊತೆಗೆ ನಿಂತವಳು. ನಮ್ಮ ನಗುವಲೇ ತನ್ನ ಖುಷಿ ಕಂಡವಳು ನಮ್ಮಗಾಗಿಯೇ ಇಡೀ ಜೀವನ ಮೀಸಲಿಟ್ಟವಳೇ ತಾಯಿ ಎಂದು ತಾಯಂದಿರ ಬಗ್ಗೆ ಶುಭಹಾರೈಸಿ ಮಾತನಾಡಿದರು.

ನೇತೃತ್ವ ವಹಿಸಿದ್ದ ಬಂದವರ ಓಣಿಯ ಕಲ್ಯಾಣಮ್ಮ ತಾಯಿಯವರ ನೇತೃತ್ವದಲ್ಲಿ ತಾಯಂದಿರ ಪಾದ ಪೂಜೆ ನೆರವೇರಿತು. ತಾಯಂದಿರ ಮೂಲಕ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೋತಿ ಉದ್ಘಾಟಿಸಲಾಯಿತು.

ಇದೇ ಸಂದರ್ಭದಲ್ಲಿ ಐದು ಮಂದಿ ತಾಯಂದಿರರಾದ ಸಿದ್ದಮ್ಮ ವೈಜಿನಾಥ ಮಲಶೆಟ್ಟೆ, ಸರಸ್ಪತಿ ಗದಿಗೆಪ್ಪ ಬಿರಾದಾರ, ನಿರ್ಮಲಾ ಶಿವರಾಜ ಪಾರ, ಲಕ್ಷ್ಮಿ ಶಂಕರ ತೋಂಟೆ, ಪಾರ್ವತಿ ವೀರಶೆಟ್ಟಿ ಬಿರಾದಾರ ಇವರೆಲ್ಲರ ಪಾದಪೂಜೆ ಮಾಡುತ್ತ ಬಸವ ಸ್ತೋತ್ರದ ಜೈ ಘೋಷದೊಂದಿಗೆ ವಚನ ಹಾಡುತ್ತ, ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ನಂತರ ಕಾರ್ಯಕ್ರಮದ ಕುರಿತು ಮಾತಾಜಿ ಮಾತನಾಡಿ, ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಾಗೂ ಪೋಷಿಸುವ ತಾಯಿಗೆ ಸಮಾನವಾದ ಮತ್ತೊಬ್ಬ ವ್ಯಕ್ತಿ ಜಗತ್ತಿನಲ್ಲಿ ಯಾರು ಇಲ್ಲ. ಹಾಗೂ ಉಪ್ಪಿಗಿoತ ರುಚಯಿಲ್ಲ ತಾಯಿಗಿಂತ ಬಂದು ಇಲ್ಲ. ಆದ್ದರಿಂದ ಜಗತ್ತಿನಲ್ಲಿ ತಾಯಿಗೆ ದೊಡ್ಡ ಸ್ಥಾನ ಇದೆ. ವಿಶ್ವದಲ್ಲಿ ಈ ಹಿಂದೆ ಮಹಾನ್ ವ್ಯಕ್ತಿಗಳಿಗೆ ಬೆನ್ನೆಲುಬಾಗಿ ನಿಂತಿದ್ದವರು ಅವರವರ ತಾಯಂದಿರು.

ಛತ್ರಪತಿ ಶಿವಾಜಿ, ಭಗತಸಿಂಗ್, ರಾಜಗುರು, ಸುಖದೇವ ಅವರಂತಹವರ ಯಶಸ್ಸಿಗೆ ಶೂರ-ವೀರರ ಅವರ ತಾಯಂದಿರ ಕೊಡುಗೆಯೇ ಮುಖ್ಯವಾಗಿದೆ ಎಂದರು.

ಇದಕ್ಕೂ ಮುಂಚೆ ಕಲ್ಯಾಣ ನಾಡು ಗ್ರಾಮೀಣ ಜನಪದ ಸಂಘದ ಅಧ್ಯಕ್ಷ ದಿಲೀಪ ದೇಸಾಯಿ, ಆಕಾಶವಾಣಿ ತಬಲಾವಾದಕ ಶರಣಪ್ಪ ಜಮಾದಾರ, ಹಾಗೂ ಖ್ಯಾತ ಸಂಗೀತಗಾರ ಸುರೇಕಾಂತ ಬಿರಾದಾರ ಇವರು ತಾಯಂದಿರ ಕುರಿತು ಗಾಯನ ಹಾಡಿದರು.

ಶಿವರಾಜ ಪಾರಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *