ಹಾಸನ :
2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯತ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ನೀಡುವ ಕಾರ್ಯಕ್ರಮ ಈಚೆಗೆ ನಡೆಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಯುವ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ನವಿಲೆ ಪರಮೇಶಣ್ಣ ಅವರು ವಹಿಸಿದ್ದರು.

ಈ ಸಂಧರ್ಭದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾದ ಮನೋಹರ ಅಬ್ಬಿಗೆರೆ, ಸಮಾಜದ ಮುಖಂಡರಾದ ಎಸ್.ಎನ್. ಈಶ್ವರಪ್ಪ, ಜಿ.ವಿ.ಟಿ. ಬಸವರಾಜಣ್ಣ, ಗ್ರಾನೈಟ್ ರಾಜಶೇಖರಣ್ಣ, ಆಲೂರು ತಾಲ್ಲೂಕು ಅಧ್ಯಕ್ಷರಾದ ಅಜಿತಣ್ಣ, ಯು.ಎಸ್. ಬಸವರಾಜು, ಚಲನಚಿತ್ರ ನಟರಾದ ಯು.ಬಿ ಮನು, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮತಿ, ಬೇಲೂರು ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಸಂತೋಷ, ರಾಜ್ಯ ಕಾರ್ಯದರ್ಶಿ ವಿಕ್ರಮ ಕೌರಿ, ನಿರ್ದೇಶಕ ಶರತ್ ಭೂಷಣ, ಅಕ್ಷತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಹಾಗೂ ಯುವ ಘಟಕದ ಅಧ್ಯಕ್ಷರಾದ ಅವಿನಾಶ ಜಿ.ಎಸ್. ಅವರು ಉಪಸ್ಥಿತರಿದ್ದರು.

ಈ ಸಂಘಟನೆಯ ಹೆಸರು ಲಿಂಗಾಯತ ಧರ್ಮದ ಹೆಸರಲ್ಲಿ ಮಾತ್ರ ಇರಲಿ.
ಲಿಂಗಾಯತ ಧರ್ಮದ ಕೇವಲ ಒಂದು ಪಂಗಡದ ಹೆಸರನ್ನು ಮುಂದೆ ಮಾಡುವುದು ಸರಿಯಲ್ಲ.
ಜನಸಂಖ್ಯೆಯಲ್ಲಿ ಹೆಚ್ಚು ಇರುವ
ಪಂಚಮಸಾಲಿ ಲಿಂಗಾಯತ ಮಹಾಸಭೆ
ಎನ್ನುವುದು ಸರಿಯೇ?
ಹಾಗೆಯೇ ಇದು ಕೂಡ.