ಬಸವ ಜ್ಞಾನ ಕೇಂದ್ರದಿಂದ ಉಚಿತ ಶಿಕ್ಷಣ ಸಲಕರಣೆ ವಿತರಣೆ

ಬೆಳಗಾವಿ :

ಸ್ಥಳೀಯ ಲಿಂಗಾಯತ ಸಂಘಟನೆ ಆಶ್ರಯದಲ್ಲಿ ಬಸವ ಜ್ಞಾನ ಕೇಂದ್ರದ ವತಿಯಿಂದ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ರವಿವಾರ ಸರಕಾರಿ ಶಾಲಾ ಬಡ ವಿದ್ಯಾರ್ಥಿಗಳಿಗೆ ಬೆಳಗಾವಿ ಉತ್ತರ ಶಾಸಕರಾದ ಆಸೀಫ್ ಸೇಠ್‌ ಅವರಿಂದ ಶಿಕ್ಷಣ ಸಲಕರಣೆಗಳಾದ ಸ್ಕೂಲ್ ಬ್ಯಾಗ್, ಪುಸ್ತಕ, ಪೆನ್ನು ಇವುಗಳನ್ನು ಉಚಿತವಾಗಿ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಶಾಸಕರಾದ ಸೇಠ್ ಅವರು ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿ, ಕಳೆದ 15 ವರ್ಷಗಳಿಂದ ಸರಕಾರಿ ಶಾಲೆಗಳ 10 ನೇ ತರಗತಿಗೆ ಹೋಗುವ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ನೀಡುವುದರ ಜೊತೆಗೆ, ಉತ್ತಮ ಶಿಕ್ಷಕರಿಂದ ಗುರು ಬಸವ ಜ್ಞಾನ ಕೆಂದ್ರದಿಂದ ಉಚಿತ ಶಿಕ್ಷಣ ಕೊಡುತ್ತಾ ಬoದಿರುವುದು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನೀಡಿದ ಕೊಡುಗೆ ಎಂದರು.

ಶಶಿಭೂಷಣ ಪಾಟೀಲ ಅವರು ಬಸವ ಜ್ಞಾನ ಕೆಂದ್ರ ನಡೆದು ಬಂದ ದಾರಿ ಮತ್ತು ಉತ್ತಮ ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಂಡ ಬಗ್ಗೆ ಪ್ರಾಸ್ತಾವಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಈರಣ್ಣ ದೇಯಣ್ಣವರ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಶಂಕರ ಕುಂದ್ರಾಳ, ಪ್ರವೀಣ ಹುಲಜಿ, ವಿದ್ಯಾ ಹುಂಡೇಕಾರ, ಸುರೇಶ ಖಿರಾಯಿ, ಪ್ರಸಾದ ಹಿರೇಮಠ, ವೀಣಾ ನಾಗಮೋತಿ, ಜ್ಯೋತಿ ಬದಾಮಿ, ರಾಜು ಪಾಟೀಲ ಇದ್ದರು.

ಕಾರ್ಯಕ್ರಮದಲ್ಲಿ ಸುರೇಶ ನರಗುoದ, ಸoಗಮೇಶ ಅರಳಿ, ಲಕ್ಷ್ಮಿಕಾಂತ ಗುರವ, ಶಿವಕುಮಾರ ಪಾಟೀಲ, ಮಹದೇವ ಕೆಂಪಿಗೌಡರ, ಮಹಾಂತೇಶ ಮೆಣಸಿನಕಾಯಿ, ಸುಧೀರ ರಘಶೆಟ್ಟಿ, ವಿರೂಪಾಕ್ಷಿ ದೊಡ್ಡಮನಿ, ವಿ. ಕೆ. ಪಾಟೀಲ, ಗುರುಸಿದ್ದಪ್ಪ ರೇವಣ್ಣವರ, ಶಂಕರ ರಾವಳ ಮತ್ತಿತರರು ಉಪಸ್ಥಿತರಿದ್ದರು.

ಮಹಾದೇವಿ ಅರಳಿ ಅವರು ವಚನ ಪ್ರಾಥ೯ನೆ ನಡೆಸಿಕೂಟ್ಟರು. ಆನಂದ ಕರ್ಕಿ ನಿರೂಪಿಸಿದರು. ಬಸವರಾಜ ಬಿಜ್ಜರಗಿ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *