ಗದಗ
ಶನಿವಾರದ ವಿಶ್ವವಾಣಿ ದಿನಪತ್ರಿಕೆಯಲ್ಲಿ (೨೩-೦೫-೨೦೨೬) ರವಿ ಹಂಜ್ ಎನ್ನುವವರು “ಜಾತಿಗಳ ಅಸ್ಮಿತೆಗೆ ಐಕಾನುಗಳು ಅವಶ್ಯವೇ?” ಎಂಬ ಲೇಖನ ಬರೆದು ನಮ್ಮನ್ನೂ ಒಳಗೊಂಡಂತೆ ಹಲವರ ಬಗ್ಗೆ ವೈಯಕ್ತಿಕ ನಿಂದನೆ ಮಾಡಿರುವುದು ದುರ್ದೈವದ ಸಂಗತಿ.
“ದಿನಪತ್ರಿಕೆಗಳು ಸಮಾಜದ ಕನ್ನಡಿ” ಎಂದು ಹೇಳಲಾಗುತ್ತದೆ. ಧರ್ಮ ಮತ್ತು ಸಮಾಜವನ್ನು ಮುನ್ನಡೆಸುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಅವುಗಳನ್ನು ತಾತ್ವಿಕ ನೆಲೆಯಲ್ಲಿ ವಿರೋಧಿಸಬೇಕೇ ಹೊರತು ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಅವಕಾಶ ಕಲ್ಪಿಸಿಕೊಡಬಾರದೆಂದು ಡಂಬಳ-ಗದಗ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು, ೨೦-೦೧-೨೦೧೮ರಂದು ನಮ್ಮ ಪ್ರಕಾಶನ ಸಂಸ್ಥೆಯ ಕಾರ್ಯದರ್ಶಿ ಶಿವನಗೌಡ ಎಂಬುವವರು ಬಿಜ್ಜರಗಿ ಎಂಬುವವರಿಗೆ ಬರೆದ ಪತ್ರ ಉಲ್ಲೇಖಿಸಿ ನಮ್ಮ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಆಗ ನಾನಿನ್ನೂ ತೋಂಟದಾರ್ಯ ಮಠಕ್ಕೆ ಬಂದಿರಲಿಲ್ಲ. ವಾಸ್ತವಿಕತೆಯನ್ನು ಅರಿಯದೆ ತಮ್ಮ ಮನಸ್ಸಿಗೆ ತೋಚಿದಂತೆ ಏನೇನೋ ಬರೆದುಕೊಂಡಿದ್ದಾರೆ.
ಅವರು ಬರೆದ ಪತ್ರಿಕಾ ಲೇಖನಕ್ಕೆ ಪ್ರತಿಯಾಗಿ ಬಸವರಾಜಶಾಸ್ತ್ರಿ ಎಂಬುವವರು ನಾವು ತೋಂಟದಾರ್ಯ ಮಠದ ಅಧಿಕಾರ ವಹಿಸಿಕೊಳ್ಳುವುದಕ್ಕೆ ಕಾರಣವಾದ ಹಿಂದಿನ ಶ್ರೀಗಳು ಬರೆದ ವುಯಿಲ್ನ್ನು ಪ್ರಶ್ನಿಸಿದ್ದಾರೆ. ಅವರಿಗೆ ಸಂದೇಹವಿದ್ದರೆ ಅವರು ಬಂದು ಅದನ್ನು ಪರಿಶೀಲನೆ ಮಾಡಬಹುದಿತ್ತು. ಹೀಗೆ ತಮ್ಮ ಧ್ವೇಷ, ಅಸೂಯೆ ಹಾಗೂ ಅಸಹನೆಗಳನ್ನು ವ್ಯಕ್ತಮಾಡುವುದಕ್ಕಾಗಿ ಪತ್ರಿಕೆಯನ್ನಾಗಲಿ, ಸಾಮಾಜಿಕ ಜಾಲತಾಣವನ್ನಾಗಲಿ ದುರುಪಯೋಗಪಡಿಸಿಕೊಳ್ಳುವುದು ಸರ್ವಥಾ ತಪ್ಪು.
ರವಿ ಹಂಜ್ ಇವರು ಬರೆದಂತೆ ನಾವು ಪಂಚಾಚಾರ್ಯರನ್ನಾಗಲಿ ಮತ್ತು ಇತರ ಯಾರನ್ನೇ ಆಗಲಿ ದ್ವೇಷಿಸಿಲ್ಲ. ಅವರ ಈ ಹೇಳಿಕೆ ವಾಸ್ತವಿಕತೆಗೆ ದೂರ. ಒಬ್ಬ ವ್ಯಕ್ತಿಯ ವಿಚಾರಗಳ ಬಗ್ಗೆ ಈ ರೀತಿ ಪ್ರತಿಕ್ರಿಯಿಸುವುದು ಸರಿಯಾದ ಕ್ರಮವಲ್ಲ. ತತ್ವ ಮತ್ತು ಸಿದ್ಧಾಂತಗಳನ್ನು ತಾರ್ಕಿಕ ನೆಲೆಯಲ್ಲಿ ಸಾಧಾರಪೂರ್ವಕ ಪ್ರಸ್ತುತಪಡಿಸಬೇಕೇ ಹೊರತು ಚಾರಿತ್ರ್ಯಹನನದ ಮೂಲಕ ಅಥವಾ ಅಸಹನೆಯಿಂದ ಅಲ್ಲ ಎಂದು ಶ್ರೀಗಳು ರವಿ ಹಂಜ್ ಹಾಗೂ ಬಸವರಾಜ ಶಾಸ್ತ್ರಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈಗ ನಡೆಯುವುದು ಮಾಚಿದೇವ ನಾಣ್ಯವೇ ಹೊರತು ಬಸವ ನಾಣ್ಯವಲ್ಲ… ಸಂಭಾವಿತ ಭಾಷೆ ದಪ್ಪ ಚರ್ಮಕ್ಕೆ ನಾಟುವುದಿಲ್ಲ!
Hanja, ಉದ್ಯೋಗ ಇಲ್ಲದೆ ಇರುವ ವ್ಯಕ್ತಿ. ಯಾರನ್ನೋ ಮೆಚ್ಚಿಸಲು ಆಧಾರ್ ಇಲ್ಲದೆ ಬರೆಯುತ್ತಾನೆ. ನಿಮ್ಮ ರೇಣುಕಾಚಾರ್ಯ ಜೈನರ ಊರಿನಲ್ಲಿ ಕಲ್ಲಿನಲ್ಲಿ ಏಕೆ ಹುಟ್ಟಿದ? ವೀರಶೈವರು ಊರಲ್ಲಿ ಯಾವ ಕಲ್ಲು ಸಿಗಲಿಲ್ಲವೇ? ಇದರ ಬಗ್ಗೆ ಸಂಶೋಧನೆ ಮಾಡು. ಕಾಲ್ಪನಿಕ ಲೇಖನ ಬರೆಯಬೇಡ
ಆಯೋಗ್ಯ ಹಾಗೂ ಸಂಗೀಗಳಿಗೆ ತಮ್ಮನ್ನು ಮಾರಿಕೊಂಡವರಿಗೆ ಇಂತಹ ಮೃದು ವಚನಗಳು ಕೆಲಸ ಮಾಡುವುದಿಲ್ಲ ಅಪ್ಪೋರೆ…ಆ ಮಕ್ಕಳು ಯಾರನ್ನೋ ಓಲೈಸಲು ಯಾರನ್ನೋ ದೂರುತಿದ್ದಾರೆ. ಆತ್ಮವಂಚನೆ ಮಾಡಿಕೊಂಡು ಬರೆಯುತ್ತಿರುವ ಇವರೆಲ್ಲ ಕನ್ನೇರಿಯ ಪಟಾಲಂ….
ಶರಣಾರ್ಥಿಗಳು ಅಪ್ಪೋರೇ..
ಶರಣರ ಪೂರ್ವಾಶ್ರಮದ ಸಂಗತಿಗಳು ಅನವಶ್ಯಕ. ಶರಣಮಾರ್ಗ ಹಿಡಿದ ಮೇಲೆ, ಪೂರ್ವಾಶ್ರಮದ ಸಂಗತಿಗಳನ್ನು ಮುಂದೆ ಮಾಡಿ: ಹಂಗಿಸಿ ಕುಹಕ ಮಾಡಿ ಬೀಗಿ ಬಡಿವಾರ ಮಾಡುವ ‘ಜಂತು’ಗಳಿಗೆ ನಿರ್ಲಕ್ಷಿಸುವುದೇ ದಿವ್ಯ ಮದ್ದು. ಅಪ್ಪ ಬಸವಾದಿ ಶರಣರ ತತ್ವ ಸಿದ್ಧಾಂತಗಳ ಆನೆಯ ಮೇಲೆ ಹೋಗುವವರ ಕಂಡು ಬೊಗಳುವ ಶ್ವಾನಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಶರಣರು ತಮ್ಮ ವಚನ ಸಂವಿಧಾನದಲ್ಲಿ ಹೇಳಿದ್ದಾರೆ. ಅದು ಮುಖ್ಯ ಆಗಲಿ. ಇದಕ್ಕೆ ಗಣಾಚಾರಿ ಪಡೆ ಉತ್ತರ ನೀಡುವ ವ್ಯವಸ್ಥೆ ಮಾಡಿಕೊಳ್ಳುವ ಅಗತ್ಯವಿದೆ.
ರವಿ ಹಂಜ ಒಬ್ಬ ನಾಲಯಕ ವ್ಯಕ್ತಿ, ಅಂತವನಿಗೆ ಅವಕಾಷ ಮಾಡಿಕೊಟ್ಟ ಹೆಗಡೆಯವರ ಬಗ್ಗೆ ಯೊಚನೆಯಾಗುತ್ತದೆ.
ಹಂಜ, ಭಟ್ಟ ಪ್ರತಿ ವಾರ ಕಕ್ಕುವ ವಿಷಕ್ಕೆ ಅದೇ ದಿನ ಉತ್ತರಕೊಡುವ ಒಂದು ತಂಡ ತಯಾರಾಗಬೇಕು. ಈ ಕೆಲಸ ಬಸವ ಮೀಡಿಯಾ ಮಾಡಲಿ
ಹಂಜವರು..ಕನ್ನೇರಿವರು.. ಬಾಗಲಕೋಟೆ ಹಿಂದೂ ಹುಲಿ.. ಇವರೆಲ್ಲ ಲಿಂಗಾಯತರಿಗೆ ಬಗಲಲ್ಲಿ ಇರುವ ಬೆಂಕಿ 🔥🔥 ಇವರಿಗೆಲ್ಲ ಅವಗಿಂದ ಆವಾಗಲೇ ಉತ್ತರ ಕೊಡಬೇಕು.. ಶರಣು ಶರಣಾರ್ಥಿಗಳು 🙏🙏
ರವಿ ಹುಂಜ ಬರವಣಿಗೆ ಬೆಟ್ಟವ ನೋಡಿ ನಾಯಿ ಬೊಗಳಿದಂತಿದೆ.