ಕಲಬುರಗಿಯಲ್ಲಿ ಆದಿ ಬಣಜಿಗ ಸಮಾಜಕ್ಕೆ 4 ಎಕರೆ ಜಮೀನು ಮಂಜೂರು

ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಬದ್ಧತೆಗೆ ಶ್ಲಾಘನೆ

ಕಲಬುರಗಿ :

ಬಹುದಿನಗಳ ಬೇಡಿಕೆಯಾಗಿದ್ದ ಜಿಲ್ಲಾ ಆದಿ ವೀರಶೈವ ಲಿಂಗಾಯತ ಬಣಜಿಗ ಸಮಾಜಕ್ಕೆ 4 ಎಕರೆ ಗೋಮಾಳ ಜಮೀನು ಮಂಜೂರಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಕಲಬುರಗಿ ಜಿಲ್ಲಾದ್ಯಂತ ಹರ್ಷ ವ್ಯಕ್ತವಾಗಿದೆ.

ಆದಿ ಬಣಜಿಗ ಸಮಾಜದ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ರಾಜ್ಯದ ಸಚಿವ ಸಂಪುಟಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಏತನ್ಮಧ್ಯೆ ಬಣಜಿಗ ಸಂಘಕ್ಕೆ ಶೈಕ್ಷಣಿಕ, ಸಾಮಾಜಿಕ ಕೆಲಸಗಳಿಗಾಗಿ ಭೂಮಿ ಮಂಜೂರು ಮಾಡುವ ಭರವಸೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲರು ಇತ್ತೀಚೆಗೆ ಸಮಾಜದ ಸಮಾರಂಭದಲ್ಲಿ ಪಾಲ್ಗೊಂಡಾಗ ಹೇಳಿದ್ದರು.

ಏತನ್ಮಧ್ಯೆ ಈ ಕುರಿತಂತೆ ತಮ್ಮದೇ ಆದ ಶೈಲಿಯಲ್ಲಿ ಕ್ರಮಗಳನ್ನು ಕೈಗೊಂಡು ಸರ್ಕಾರದ ಹಂತದಲ್ಲಿ ಅಗತ್ಯ ಕ್ರಮಗಳೊಂದಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಆದಿ ಬಣಜಿಗ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ಕಲ್ಪಿಸಲು ಸಮಾಜದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು.

ಸಚಿವರು, ಮಾಜಿ ಸಚಿವರು, ಶಾಸಕರು, ತೀರ್ಮಾನದೊಂದಿಗೆ 4 ಎಕರೆ ಗೋಮಾಳವನ್ನು ಸಾಮಾಜಕ್ಕೆ ಮಂಜೂರಾಗುವಂತೆ ನೋಡಿಕೊಂಡಿರೋದು ಇಡೀ ಆದಿ ಬಣಜಿಗ ಸಮಾಜದ ಗಮನ ಸೆಳೆದಿದೆ.

ಕಲಬುರಗಿ ತಾಲೂಕಿನ ಶರಣ ಸಿರಸಗಿ ಗ್ರಾಮದ ಸ.ನಂ. 243ರಲ್ಲಿ 4 ಎಕರೆ ಗೋಮಾಳ ಜಮೀನು ಮಂಜೂರು ಸಮಾಜಕ್ಕೆ ಬಹುದೊಡ್ಡ ಬಲ ಬಂದಂತಾಗಿದೆ ಎಂದು ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ‌ ಕೊನೇಕ್, ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ಬರಡೆ ಹಾಗೂ ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

ಆದಿ ವೀರಶೈವ ಬಣಜಿಗ ಸಮಾಜದ ಸಂಘಟನೆಗೆ ಪೂರಕವಾಗಿ ಸಮುದಾಯ ಭವನ, ಸಮಾಜದ ಮಕ್ಕಳಿಗೆ ವಸತಿ ನಿಲಯ, ಮಾಜಿ ಶಾಸಕರು, ಸಮಾಜದ ಗಣ್ಯರು ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *