ಇಂದಿನ ಚರ್ಚೆಯ ಅತಿಥಿಗಳು: ಡಾ. ರಾಜೇಂದ್ರ ಚೆನ್ನಿ, ಬಸವ ಪಾಟೀಲ (ರಾತ್ರಿ 8 ಗಂಟೆ)
ಬೆಂಗಳೂರು
ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ.
ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ.
ಈ ಬೆಳವಣಿಗೆಗಳನ್ನು ವಿಶ್ಲೇಷಿಸಲು ಹೆಸರಾಂತ ಚಿಂತಕರಾದ ಡಾ. ರಾಜೇಂದ್ರ ಚೆನ್ನಿ, ಶಿವಮೊಗ್ಗ, ಹಾಗೂ ಬಸವ ಪಾಟೀಲ, ಲಂಡನ್, ಇಂದು ರಾತ್ರಿಯ ಬಸವಶಕ್ತಿ ಚರ್ಚೆಯಲ್ಲಿ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ.
ಡಾ. ರಾಜೇಂದ್ರ ಚೆನ್ನಿ ಅವರು ಪ್ರಾಧ್ಯಾಪಕರಾಗಿ, ಚಿಂತಕರಾಗಿ ಮತ್ತು ಬರಹಗಾರರಾಗಿ ಹೆಸರಾದವರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಾಗರಗಾಳಿ ಗ್ರಾಮದವರು, ಈಗ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಬಸವ ಪಾಟೀಲ, ಕೊಂಡಗೂಳಿಂವ ಅಂತ ಕವನ, ಬರಹ ಮತ್ತು ವಚನ ಬರೆಯುತ್ತಾರೆ. ಸಮಾಜದಲ್ಲಿ ಸಕಾರತ್ಮಕ ಬದಲಾವಣೆ, ಚಲನಶಿಲತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಸಂವೇದನೆಯುಳ್ಳ ಇವರು ವಿಜಯಪುರ ಜಿಲ್ಲೆಯ, ಕೊಂಡಗೂಳಿಯವರು. ಈಗ ಇಂಗ್ಲೆಂಡನಲ್ಲಿ ಆರೋಗ್ಯ ಆರೈಕೆಯ ಕಾಯಕದಲ್ಲಿ ನಿರತವಾಗಿದ್ದಾರೆ.
ದಿನಾಂಕ: ಜೂನ್ 3
ಸಮಯ: ರಾತ್ರಿ 8-9
ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/qur-quxi-jrh
ಈ ಕಾರ್ಯಕ್ರಮದಿಂದ ಬಸವಶಕ್ತಿ ಸರಣಿ ಉಪನ್ಯಾಸ, ಶಿಬಿರಗಳೂ ಶುರುವಾಗುತ್ತಿವೆ. ಬಸವ ಸಂಘಟನೆಗಳ, ಕಾರ್ಯಕರ್ತರ ರಾಜಕೀಯ ಪ್ರಜ್ಞೆ ಹಾಗೂ ಪ್ರಭಾವ ಬೆಳೆಸುವುದು ಬಸವಶಕ್ತಿ ಕಾರ್ಯಕ್ರಮದ ಮುಖ್ಯ ಉದ್ದೇಶ.
ಬಸವ ಮೀಡಿಯಾ ತಂಡದ ಎಚ್ ಎಂ ಸೋಮಶೇಖರಪ್ಪ ಹಾಗೂ ಅಪರ್ಣ ವಾಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಲ್ಲರಿಗೂ ಸ್ವಾಗತ.
ಚರ್ಚೆಯ ವಿಷಯ
ಸಿದ್ದರಾಮಯ್ಯ ಮತ್ತು ಲಿಂಗಾಯತ ಧರ್ಮ ಹೋರಾಟ
1) ಲಿಂಗಾಯತ ಧರ್ಮ ಹೋರಾಟಕ್ಕೆ ಸಿದ್ದರಾಮಯ್ಯನವರ ಕೊಡುಗೆ. ಅದರ ಮಹತ್ವ
– ಅತಿ ದೊಡ್ಡ ಕೊಡುಗೆಯೇನು, ಅದರ ಮಹತ್ವ
2) ಲಿಂಗಾಯತ ಧರ್ಮ ಹೋರಾಟದಲ್ಲಿ ಒಟ್ಟಾರೆ ಕಾಂಗ್ರೆಸ್ ಪಾತ್ರವೇನು
– ಇದನ್ನು ಸಿದ್ದರಾಮಯ್ಯನವರ ಪಾತ್ರದಿಂದ ಭಿನ್ನವಾಗಿ ನೋಡಬೇಕೆ
3) ಸಿದ್ದರಾಮಯ್ಯನವರ ರಾಜೀನಾಮೆಯಿಂದ ಲಿಂಗಾಯತ ಧರ್ಮ ಹೋರಾಟಕ್ಕೆ ಹಿನ್ನಡೆಯಾಗಿದೆಯೇ
4) ಮುಂದಿನ ಬೆಳವಣಿಗೆಗಳು, ಡಿ ಕೆ ಶಿವಕುಮಾರ್ ನಿಲುವು
– ಕಾಂಗ್ರೆಸ್ ನಿಲುವಿನ ಬಗ್ಗೆ ಶಿವಕುಮಾರ್ ಪಂಚಪೀಠಗಳಲ್ಲಿ ಕ್ಷಮಾಪಣೆ ಕೇಳಿದ್ದಾರೆ.
5) ಬಸವ ಸಂಘಟನೆಗಳ ಮುಂದಿನ ದಾರಿ
