ಇಂದು ‘ವಚನ ಅರಿವು’ ಗ್ರಂಥ ಲೋಕಾರ್ಪಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ವಿರಚಿತ ‘ವಚನ ಅರಿವು’ ಗ್ರಂಥ ಲೋಕಾರ್ಪಣೆ ಹಾಗೂ ಮೀನಾಕ್ಷಿ ಮತ್ತು ಬಸವರಾಜ ಮೊಳಕೀರೆ ಶರಣ ದಂಪತಿಗಳ 25ನೆಯ ವಿವಾಹ ವಾಷಿಕೋತ್ಸವ ಸಮಾರಂಭ ಹಾಗೂ ಅವರ ಮಕ್ಕಳಾದ ಅಭಿಷೇಕ ಹಾಗೂ ಆಶೀಷ್ ಅವರ ಶಾಲು ಹೊದಿಸುವ ಕಾರ್ಯಕ್ರಮ 7ರಂದು ಮಧ್ಯಾಹ್ನ 12-30 ಗಂಟೆಗೆ ಬೀದರ ನಗರದ ಇನ್ಸಪಾಯರ್‌ ರೆಸೋರ್ಟನಲ್ಲಿ ಹಮ್ಮಿಕೊಳ್ಳಲಾಗಿದೆ.

ಪೂಜ್ಯ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ‘ವಚನ ಅರಿವು’ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಮಹಾಲಿಂಗ ಸ್ವಾಮಿಗಳು, ಪೂಜ್ಯ ಬಸವಲಿಂಗ ಸ್ವಾಮಿಗಳು ಸಮ್ಮುಖ ವಹಿಸಿಕೊಳ್ಳಲಿದ್ದಾರೆ.

ಶಿವಗಂಗಾ ಮತ್ತು ಬಾಬುರಾವ ಮೊಳಕೀರೆ ಹಾಗೂ ಚಂದ್ರಕಲಾ ಮತ್ತು ಅಶೋಕ ಬಿರಾಜದಾರ ಅವರಿಂದ ಬಸವಗುರುಪೂಜೆ ನಡೆಯುವುದು. ಅಭಿಷೇಕ ಮೊಳಕೀರೆ ಸ್ವಾಗತ ಮಾಡಲಿದ್ದಾರೆ. ಆಶೀಷ ಮೊಳಕೀರೆ ಅವರು ಶರಣು ಸಮರ್ಪಣೆ ಮಾಡಲಿದ್ದಾರೆ.

ನವಲಿಂಗ ಪಾಟೀಲ ಅವರು ನಿರೂಪಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *