ಗುಂಡ್ಲುಪೇಟೆ
ಸಾವಿರಾರು ಜನರ ಸಮ್ಮುಖದಲ್ಲಿ ಬಸವ ಜಯಂತಿ ಉತ್ಸವ ವಿಜೃಂಭಣೆಯಿಂದ ಪಟ್ಟಣದಲ್ಲಿ ಬುಧವಾರ ನೆರವೇರಿತು.
ಈ ಬಾರಿ ಪಕ್ಷಾತೀತವಾಗಿ ಜಯಂತಿ ಆಚರಣೆಗೆ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದರು.

ತಾಲೂಕಿನ ಎಲ್ಲ ಗ್ರಾಮಗಳಿಂದ ಬಸವ ಭಕ್ತರು ಸಾವಿರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಜೆಎಸ್ಎಸ್ ಕಾಲೇಜು ಆವರಣದಲ್ಲಿ ಅಲಂಕೃತ ವಾಹನದ ಮೇಲೆ ಮಂಟಪದ ಮೇಲಿರಿಸಿದ್ದ ಬಸವೇಶ್ವರರ ಕಂಚಿನ ಮೂರ್ತಿಗೆ ಹಲವಾರು ಪೂಜ್ಯರ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

ಮಡಹಳ್ಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಆಗಮಿಸಿದ ಮೆರವಣಿಗೆ ಅಶ್ವಾರೂಢ ಬಸವೇಶ್ವರರ ಕಂಚಿನ ಮೂರ್ತಿ ಜತೆಗೆ ನಂದಿಧ್ವಜ, ವೀರಗಾಸೆ, ಡೊಳ್ಳು, ನಗಾರಿ, ಮಂಗಳವಾದ್ಯ, ಕಂಸಾಳೆ ಮೊದಲಾದ ಜನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಹಳ್ಳಿಕಾರ್ ಸೇರಿದಂತೆ ನಾನಾ ತಳಿಯ ಹೋರಿಗಳನ್ನು ಅಲಂಕರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಯೊಂದಿಗೆ ಸಾಗಿದ ಸಾವಿರಾರು ಯುವಕರು ವಾದ್ಯಗಳ ಶಬ್ದಕ್ಕೆ ತಕ್ಕಂತೆ ಕುಣಿದರು.

ಮೆರವಣಿಗೆ ಸಾಗುತ್ತಿದ್ದಂತೆ ಸಣ್ಣದಾಗಿ ಬಿದ್ದ ಮಳೆಯ ಸಿಂಚನ ಬಿಸಿಲಿನ ತಾಪಕ್ಕೆ ಸ್ವಲ್ಪಮಟ್ಟಿಗೆ ತಂಪೆರೆಯಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಅಂಗಡಿ ಬೀದಿಯಲ್ಲಿ ವ್ಯಾಪಾರಿಗಳು ಮಜ್ಜಿಗೆ, ನೀರು ವಿತರಣೆ ಮಾಡಿದರು.
ವತಿಯಿಂದ ಪಟ್ಟಣದ ಸೋಮೇಶ್ವರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಾವಿರಾರು ಜನರಿಗೆ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಂದೋಬಸ್ತ್ ಆಯೋಜಿಸಲಾಗಿತ್ತು. ಮಹಾಸಭಾ
ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ಇತರ ಸಂಪರ್ಕ ರಸ್ತೆಗಳಲ್ಲಿ ಬಸವೇಶ್ವರ ಭಾವಚಿತ್ರವುಳ್ಳ ಮಹಾದ್ವಾರ ಮತ್ತು ಸ್ವಾಗತ ಕಮಾನು ನಿರ್ಮಿಸಲಾಗಿತ್ತು.

ರಸ್ತೆ ವಿಭಜಕಗಳಿಗೆ ಕೇಸರಿ ತೋರಣ ಮತ್ತು ಬಸವೇಶ್ವರ ದೊಡ್ಡ ಕಟೌಟ್ಗಳನ್ನು ಕಟ್ಟಲಾಗಿತ್ತು.
ಸಾರಿಗೆ ಬಸ್ ನಿಲ್ದಾಣದ ಎದುರು, ಬಸವೇಶ್ವರ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಬಸವೇಶ್ವರರು ಮತ್ತು ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ದೀಪಾಲಂಕಾರದ ಕಟೌಟ್ಗಳನ್ನು ಅಳವಡಿಸಲಾಗಿತ್ತು.

ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಕಂಗೊಳಿಸುವ ಸಾಲು ವಿದ್ಯುತ್ ದೀಪಗಳನ್ನು ಹಾಕಿದ್ದರಿಂದ ಕಳೆದ ಮೂರು ದಿನಗಳಿಂದ ಪಟ್ಟಣದ ರಸ್ತೆಗಳು ಝಗಮಗಿಸುತ್ತಿದ್ದವು.
ಉತ್ಸವದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿತ್ತು. ಮಹಾಸಭಾ ಸದಸ್ಯರು ಪ್ರತಿ ಗ್ರಾಮಗಳ ಮನೆ ಮನೆಗೂ ಕರಪತ್ರಗಳನ್ನು ತಲುಪಿಸಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು.
ಇದೇ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಾನಾ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ, ಅಂತಾರಾಷ್ಟ್ರೀಯ ಪ್ರಿಸ್ಟಿ ಕ್ರೀಡಾ ಸ್ಪರ್ಧಿ ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.

ಮಹಾಸಭಾದ ಗೌರವಾಧ್ಯಕ್ಷ ಸಿದ್ದಮಲ್ಲ ಸ್ವಾಮೀಜಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿಎಸ್.ನಿರಂಜನಕುಮಾರ್, ತಾಲೂಕಿನ ಪಡಗೂರು ಮಠದ ಶಿವಲಿಂಗೇಂದ್ರ ಸ್ವಾಮೀಜಿ, ಹಂಗಳದ ಜಡೇಸ್ವಾಮೀಜಿ, ಮೂಡಗೂರಿನ ಇಮ್ಮಡಿ ಉದ್ದಾ ಸ್ವಾಮೀಜಿ, ಗೋಪಾಲಪುರದ ಗಂಗಾಧರಸ್ವಾಮೀಜಿ, ಹಂಗಳದ ಷಡಕ್ಷರಸ್ವಾಮೀಜಿ, ಇಮ್ಮಡಿ ಮಹಾಂತಸ್ವಾಮೀಜಿ, ನಂಜುಂಡಸ್ವಾಮೀಜಿ, ಮಾದಾಪಟ್ಟಣದ ತೋಂಟದಾರ್ಯಸ್ವಾಮೀಜಿ, ಕಬ್ಬಹಳ್ಳಿಯ ಗುರುಸಿದ್ದಸ್ವಾಮೀಜಿ, ಚನ್ನವೀರಸ್ವಾಮೀಜಿ, ಇಮ್ಮಡಿ ಶಾಂತಮಲ್ಲಸ್ವಾಮೀಜಿ, ಬಸವಣ್ಣ ಸ್ವಾಮೀಜಿ, ಸಿದ್ದೇಶ್ವರಸ್ವಾಮಿ ಉಪಸ್ಥಿತರಿದ್ದರು.
ಅಖಿಲ ವೀರಶೈವ-ಲಿಂಗಾಯತ ಮಹಾಸಭಾ, ವಿವಿಧ ಲಿಂಗಾಯತ ಸಂಘಟನೆಗಳ ವತಿಯಿಂದ ಉತ್ಸವ ಹಮ್ಮಿಕೊಳ್ಳಲಾಗಿತ್ತು.
