‘ಬಸವಣ್ಣನವರ ವಿರುದ್ಧ ಟೂಲ್ ಕಿಟ್ ಬಳಸುತ್ತಿರುವ ಸಂಘ ಪರಿವಾರ’

ಬಸವ ಮೀಡಿಯಾ
ಬಸವ ಮೀಡಿಯಾ

ಈ ದೇಶದಲ್ಲಿ ಲಿಂಗಾಯತರಿಗೆ ಧಾರ್ಮಿಕ ಸ್ವಾತಂತ್ರ್ಯ ಇದೆಯೋ ಇಲ್ಲವೋ?

ವಿಜಯಪುರ

ಬಿಜೆಪಿ ಜಿಲ್ಲಾದ್ಯಕ್ಷ ಮಹಾಲಿಂಗಪ್ಪ ಅಂಗಡಿ ಮತ್ತು ಬಿಜೆಪಿ ನಾಯಕ ಸುರೇಶ ಬಿರಾದಾರ ಇತ್ತೀಚೆಗೆ ನಗರದಲ್ಲಿ ಕನ್ನೇರಿ ಸ್ವಾಮಿ ಬೆಂಬಲಕ್ಕೆ ಬಂದು ಸುದ್ದಿಗೋಷ್ಠಿ ನಡೆಸಿದ್ದರು.

ಅದರಲ್ಲಿ 12ನೇ ಶತಮಾನದಲ್ಲಿ ಯಾರೂ ವಚನಗಳನ್ನು ಸುಟ್ಟೇ ಇಲ್ಲ, ಶರಣರ ಕಗ್ಗೋಲೆ ನಡೆದೇ ಇಲ್ಲ ಎಂದು ಆರೋಪಿಸಿದ್ದರು.

ಇಂದು ಜಿಲ್ಲೆಯ ಬಸವ ಹಾಗೂ ಪ್ರಗತಿಪರ ಸಂಘಟನೆಗಳ ಪ್ರಮುಖರು ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಶರಣರ ಕಗ್ಗೋಲೆಗೆ, ವಚನಗಳ ಸುಟ್ಟಿದ್ದಕ್ಕೆ ವಚನಗಳಲ್ಲಿ, ಶಾಸನಗಳಲ್ಲಿ, ಜಾನಪದದಲ್ಲಿ, ಪುಸ್ತಕಗಳಲ್ಲಿ ಗಟ್ಟಿಯಾದ ಸಾಕ್ಷಿಯಿದೆ. ಜಿಲ್ಲಾ ಬಿಜೆಪಿ ನಾಯಕರು ಸಂಘ ಪರಿವಾರ ಬರೆದಿರುವ ಸ್ಕ್ರಿಪ್ಟ್ ಓದದೇ, ಅಧ್ಯಯನ ಮಾಡಲಿ ಎಂದು ರಾಷ್ಟ್ರೀಯ ಬಸವ ಸೇನೆಯ ಮುಖಂಡರಾದ ರವಿಕುಮಾರ ಬಿರಾದಾರ ಸಲಹೆ ನೀಡಿದರು.

ಟೂಲ್ ಕಿಟ್

ಜಾಗತಿಕವಾಗಿ ಬೆಳೆಯುತ್ತಿರುವ ಬಸವ ತತ್ವ, ಬಸವಸಂಸ್ಕೃತಿ, ಲಿಂಗಾಯತ ಧರ್ಮವನ್ನು ಮುಗಿಸಲು ಸಂಘ ಪರಿವಾರ ಟೂಲ್ ಕಿಟ್ ಸಿದ್ದಪಡಿಸಿದ್ದಾರೆ.

ಈ ಟೂಲ್ ಕಿಟ್ ಮೂಲಕ ಬಸವಣ್ಣ ಯಾವುದೇ ಲಿಂಗಾಯತ ಧರ್ಮ ಸ್ಥಾಪಿಸಲಿಲ್ಲ, ಹಿಂದೂ ಧರ್ಮದ ಸುಧಾರಕ ಮಾತ್ರ, 12ನೇ ಶತಮಾನದಲ್ಲಿ ಯಾವುದೇ ಚಳುವಳಿ ನಡೆಯಲಿಲ್ಲ, ಶರಣರು ವಚನ ಬರೆಯಲಿಲ್ಲ, ವೇದ ಉಪನಿಷತ್ತಿನಲ್ಲಿರುವುದನ್ನೇ ಹೇಳಿದ್ದಾರೆ, ಬಸವ ತತ್ವ ಪ್ರಚಾರಕರು ತಾಲಿಬಾನಿಗಳು, ಕಮುನಿಸ್ಟರು ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ, ಎಂದು ಬಿರಾದಾರ ಹೇಳಿದರು.

ಶರಣರ ಶಕ್ತಿ ಚಲನಚಿತ್ರ, ವಚನದರ್ಶನ ಪುಸ್ತಕ, ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ,
ನಿರಂತರ ಪತ್ರಿಕೆಗಳಲ್ಲಿ ಸುಳ್ಳು ಲೇಖನಗಳನ್ನು ಪ್ರಕಟಿಸುವ ಮೂಲಕ ಈ ಟೂಲ್ ಕಿಟ್ಟನ್ನು ಪ್ರಚಾರ ಮಾಡಲಾಗುತ್ತಿದೆ.

ಇದೇ ಕೆಲಸಕ್ಕೆ ಸಂಘ ಪರಿವಾರದ ಪೂರ್ಣವಾಧಿ ಕಾರ್ಯಕರ್ತರನ್ನು, ಕನ್ನೇರಿ ಸ್ವಾಮಿಯಂತಹ ಕೆಲವು ಲಿಂಗಾಯತ ಮಠಾಧೀಶರನ್ನು ಬಳಸಲಾಗುತ್ತಿದೆ.

ಅವರ ಮೂಲಕ ಬಸವತತ್ವ ಪ್ರಚಾರ ಮಾಡುವ ರಾಜಕಾರಣಿಗಳನ್ನು, ಮಠಾಧೀಶರನ್ನು ನಿಂದಿಸಲಾಗುತ್ತಿದೆ.

ಬಸವ ಧರ್ಮ ಆಚರಿಸಲು ಕನ್ನೇರಿ ಸ್ವಾಮಿ ಅಪ್ಪಣೆ ಬೇಕೇ?

ಬಸವತತ್ವ ಪ್ರಚಾರ ಮಾಡುವುದು ಅಪರಾಧವೇ? ಈ ದೇಶದಲ್ಲಿ ಲಿಂಗಾಯತರಿಗೆ ಧಾರ್ಮಿಕ ಸ್ವಾತಂತ್ರ್ಯ ಇದೆಯೋ ಇಲ್ಲವೋ ಎಂದು ಪ್ರಶ್ನಿಸಿದರು.

ಬಸವಾದಿ ಶರಣರ ತತ್ವಗಳಾದ ಗುಡಿ ಸಂಸ್ಕೃತಿ ತಿರಸ್ಕಾರ, ಏಕದೇವೋಪಾಸನೆ, ಕಾಯಕ, ದಾಸೋಹ, ಕೋಮು ಸಾಮರಸ್ಯ, ಅಸ್ಪೃಶ್ಯ ನಿವಾರಣೆಯಂತಹ ವಿಷಯಗಳನ್ನು ಲಿಂಗಾಯತರಿಗೆ ತಿಳಿಸಲಾಗುತ್ತಿದೆ. ಲಿಂಗಾಯತ ಮಠಾಧೀಶರು ಯಾವುದೇ ವಿರಾಟ್ ಹಿಂದೂ ಸಮಾವೇಶದಲ್ಲಿ ಇದನ್ನು ಹೇಳುತ್ತಿಲ್ಲ, ಲಿಂಗಾಯತರಿಗೆ ಮಾತ್ರ ಹೇಳುತ್ತಿದ್ದಾರೆ.

ಲಿಂಗಾಯತರು ತಮ್ಮ ಬಸವ ಧರ್ಮವನ್ನು ಆಚರಿಸಲು ಈ ಕನ್ನೇರಿ ಸ್ವಾಮಿಯ ಅಪ್ಪಣೆ ಪಡೆಯಬೇಕೆ, ಎಂದು ಕೇಳಿದರು.

ಕನ್ನೇರಿ ಸ್ವಾಮಿ ಲಿಂಗಾಯತ ಮಠಗಳಲ್ಲಿ ಎಲ್ಲಾ ಜಾತಿಯವರಿಗೆ ಅವಕಾಶವಿಲ್ಲ ಎಂದು ಆಪಾದಿಸಿದ್ದಾರೆ, ಲಿಂಗಾಯತ ಮಠಗಳಲ್ಲಿ ದಲಿತ, ಲಂಬಾಣಿ, ಮುಸ್ಲಿಂ ಸಮುದಾಯದವರನ್ನೂ ಪೀಠಾದ್ಯಕ್ಷರನ್ನಾಗಿ ಮಾಡಲಾಗಿದೆ.

ನೂರಾರು ಲಿಂಗಾಯತ ಬಸವ ಪರಂಪರೆಯ ಮಠಗಳು ಜಾತಿ ಧರ್ಮ ಭೇದವಿಲ್ಲದೆ ಅನ್ನ, ಅಕ್ಷರ ದಾಸೋಹ ಮಾಡುತ್ತಾ ಬಂದಿವೆ.

ಮುಸ್ಲಿಂ ಟಾರ್ಗೆಟ್ ಮಾಡುವುದು ವೋಟ್ ಬ್ಯಾಂಕ್ ರಾಜಕೀಯ

ಕನ್ನೇರಿ ಸ್ವಾಮಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಅವರು ಹೇಳಿದ ಹಾಗೆ ಮುಸ್ಲಿಮರ ಜನಸಂಖ್ಯೆ ಏರುತ್ತಿಲ್ಲ. ಅದೆಲ್ಲ ಕೋಮುಸಾಮರಸ್ಯ ಹಾಳು ಮಾಡಿ ವೋಟ್ ಬ್ಯಾಂಕ್ ರಾಜಕೀಯ ಮಾಡುವ ಹುನ್ನಾರ.

ಹಲವಾರು ಮುಸ್ಲಿಮರು ತಮ್ಮ ಧರ್ಮ ಬಿಟ್ಟು ಅಥವಾ ಜೊತೆಗೆ ಲಿಂಗಾಯತ ಧರ್ಮವನ್ನು ಪಾಲಿಸುತ್ತಿದ್ದಾರೆ. ಕೆಲ ಮುಸ್ಲಿಂರು ಲಿಂಗದೀಕ್ಷೆ ಪಡೆದು ಲಿಂಗಾಯತ ಮಠಕ್ಕೆ ಸ್ವಾಮಿಗಳಾಗಿ ಬಸವ ತತ್ವ ಪ್ರಚಾರ ಮಾಡುತ್ತಿದ್ದಾರೆ.

ಧರ್ಮ ಆಚರಣೆ, ಪರಸ್ಪರ ಪ್ರೀತಿಸಿ ಮದುವೆಯಾಗುವುದು ವೈಯಕ್ತಿಕ ವಿಚಾರ. ಗದಗನಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಅಂತದರ್ಮೀಯ ವಿವಾಹವಾದವರ ಹೆಸರು ಹೇಳಿ ಕನ್ನೇರಿ ಸ್ವಾಮಿ ಆ ಕುಟುಂಬದವರಿಗೆ ನೋವುಂಟು ಮಾಡಿದ್ದಾರೆ.

ನಾವು ಬಸವಣ್ಣನವರನ್ನು ಬಿಸಿನೆಸ್ ಆಗಿ ಬಳಸಿಲ್ಲ. ಬಿಜೆಪಿಯವರು ಹಿಂದುತ್ವವನ್ನು, ರಾಮಮಂದಿರವನ್ನು ಬಿಸಿನೆಸ್ ಆಗಿ ಮಾಡಿಕೊಂಡಿದ್ದಾರೆ. ನಮ್ಮ ಅಸ್ತಿತ್ವಕ್ಕೆ ನಾವು ಹೊರಡುತ್ತಿದ್ದೇವೆ. ನಿಮ್ಮ ದಬ್ಬಾಳಿಕೆಯನ್ನು ಎದುರಿಸುತ್ತಿದ್ದೇವೆ.

ನಾವು ಕಮುನಿಸ್ಟರಲ್ಲ ,ನಾವು ಎಡನೂ ಅಲ್ಲ ಬಲನೂ ಅಲ್ಲ ನಮ್ಮದು ಬಸವಮಾರ್ಗ, ಎಂದು ಹೇಳಿದರು.

ಬಾಪುಗೌಡ ಮೇಟಿಯ ಚರಿತ್ರೆ ತೆಗೆಯುತ್ತೇವೆ

ದಲಿತ ಸಂಘಟನೆಯ ಅಡಿವೆಪ್ಪ ಸಾಲಗಲ್ಲ ಮಾತನಾಡಿ ವಿಭೂತಿ ತೆಗೆದು ಕುಂಕುಮ ಹಾಕಿರುವ ಕನ್ನೇರಿ ಸ್ವಾಮಿಯನ್ನು ಸ್ವಾಮಿಯೆಂದು ಕರೆಯಲಾಗುವುದಿಲ್ಲ, ಅವರ ಮೊದಲ ಹೆಸರಾದ ಬಾಪುಗೌಡ ಮೇಟಿ ಎಂದೇ ಕರೆಯುತ್ತೇನೆ ಎಂದು ಹೇಳಿದರು.

ಇನ್ನೊಬ್ಬರ ಚಾರಿತ್ರ್ಯ ಪ್ರಶ್ನಿಸುತ್ತಿರುವ ಬಾಪುಗೌಡ ಮೇಟಿಯ ಚರಿತ್ರೆಯನ್ನೂ ಆಚೆ ತೆಗೆಯುತ್ತೇವೆ. ಇವರು ಮಾಡಿರುವ ಆಸ್ತಿ, ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಜೊತೆಗಿರುವ ವ್ಯವಹಾರ, ರಾಜಕೀಯ ಸಂಬಂಧಗಳನ್ನೂ ಹೊರ ತೆಗೆಯುತ್ತೇವೆ, ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮುಖಂಡರಾದ ಪ್ರಭುಗೌಡ ಪಾಟೀಲ, ಚಂದ್ರಶೇಖರ ಗಂಟೆಪ್ಪಗೋಳ, ಮಹಾದೇವಿ ಗೋಕಾಕ, ರಾಷ್ಟ್ರೀಯ ಬಸವ ಸೇನೆ ಹಾಗೂ ಲಿಂಗಾಯತ ಮಹಾಸಭಾದ ಜಿಲ್ಲಾ ಮುಖಂಡರಾದ ರವಿಕುಮಾರ ಬಿರಾದಾರ, ದಲಿತ ಸಂಘಟನೆಯ ಅಡಿವೆಪ್ಪ ಸಾಲಗಲ್ಲ, ಚೆನ್ನು ಕಟ್ಟಿಮನಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
1 Comment
  • ಲಿಂಗಾಯತರು, ವೀರಶೈವರು, ವೀರಶೈವ ಲಿಂಗಾಯತರು, ವಿರಕ್ತ ಮಠಾಧೀಶರು, ಲಿಂಗಾಯತ ಮಠಾಧೀಶರು, ಗುರುವರ್ಗದವರು, ಬಸವಾದಿ ಶರಣರ ಅನುಯಾಯಿಗಳೆಲ್ಲರೂ ಒಗ್ಗೂಡಬೇಕಾದ ಅನಿವಾರ್ಯತೆ ಉಂಟಾಗಿದೆ. ಇಲ್ಲದಿದ್ದರೆ, ನಮ್ಮ ನಮ್ಮೊಳಗೆ ಕಚ್ಚಾಟ ಹಚ್ಚಿ, ಮಜಾ ಮಾಡಿ ನಗುವ ಪಟ್ಟಭದ್ರ ತಾಲಿಬಾನಿಗಳು ಹೆಚ್ಚಾಗುತ್ತಾರೆ.

Leave a Reply

Your email address will not be published. Required fields are marked *