ಮಹಾಸಭಾ ನೂತನ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಗಣೇಶ ಅವರಿಗೆ ಸನ್ಮಾನ

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ:

ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ನೇಮಕಗೊಂಡ ಎಸ್.ಎಸ್. ಗಣೇಶ ಅವರನ್ನು ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರು, ಚಿಗಟೇರಿ ಶ್ರೀ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷರು ಆದ ಅಣಬೇರು ರಾಜಣ್ಣ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ವೀರಶೈವ ಲಿಂಗಾಯತ ಧರ್ಮಕ್ಕೆ ಶಾಮನೂರು ಶಿವಶಂಕರಪ್ಪ ಅವರ ಅಪಾರವಾದ ಕೊಡುಗೆಯನ್ನು ಪ್ರಶಂಶಿಸಿ, ಅವರ ಕುಟುಂಬದ ಸದಸ್ಯರು ಮತ್ತು ಸುಪುತ್ರರಾದ ಎಸ್. ಎಸ್. ಗಣೇಶ ಅವರನ್ನು ಮಹಾಸಭಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ತುಂಬಾ ಶ್ಲಾಘನೀಯ ಎಂದರು.

ಗಣೇಶ ಅವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಲಭಿಸುವಂತಾಗಲಿ ಎಂದು ಅವರನ್ನು ಹಾರೈಸಿ, ಈ ನೇಮಕ ಮಾಡಿದ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಅವರಿಗೆ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಶಾಮನೂರು ಬಸಣ್ಣ ಮತ್ತು ಕೆ.ಬಿ. ಬಸವಲಿಂಗಪ್ಪ ಮಾತನಾಡಿದರು.

ಟ್ರಸ್ಟಿನ ಪದಾಧಿಕಾರಿಗಳಾದ ನಲ್ಕುದುರೆ ಶೇಖರಪ್ಪ, ಜಾತಪ್ಪ ಹುಣಿಸೇಹಳ್ಳಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಪಲ್ಲಾಗಟ್ಟೆ ನಾಗರಾಜ, ಮೆಳ್ಳೇಕಟ್ಟೆ ಶ್ರೀನಿವಾಸ, ಮೆಳ್ಳೇಕಟ್ಟೆ ಸಂತೋಷ, ಶಿವಮೂರ್ತಯ್ಯ ಹಿರೇಮೇಗಳಗೆರೆ, ಲಿಂಗರಾಜ ಅಗಸನಕಟ್ಟೆ, ಚೇತನ್ ಎಲೇಬೇತೂರ, ಮಂಡಲೂರ ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *