ಲಿಂಗಾಯತ ಸಂಘಟನೆಯಿಂದ ಯೋಗ ದಿನಾಚರಣೆ

ಬೆಳಗಾವಿ:

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ಯೋಗ ದಿನಾಚರಣೆ, ವಚನ ವಿಶ್ಲೇಷಣೆ, ಪ್ರಾರ್ಥನೆ ಕಾರ್ಯಕ್ರಮ ನಡೆಯಿತು.

ಮಹದೇವ ಕೆಂಪಿಗೌಡರ, ಆನಂದ ಕರಕಿ, ಲಕ್ಷ್ಮೀ ಜೇವಣಿ, ಬಿ ಪಿ ಜೇವಣಿ, ಸುರೇಶ ನರಗುಂದ, ಲಕ್ಷೀಕಾಂತ ಗುರವ, ರುದ್ರಮ್ಮ ಅಕ್ಕನವರು, ಮಹಾಂತೇಶ ತೋರಣಗಟ್ಟಿ ಅವರುಗಳು ವಚನ ವಿಶ್ಲೇಷಣೆ ಮಾಡಿದರು.

ಯೋಗ ದಿನಾಚರಣೆ ಕುರಿತು ಸಿದ್ದಪ್ಪಣ್ಣ ಸಾರಾಪೂರೆ ಅವರು ತಿಳಿಸುತ್ತ, ಯೋಗವು ಮಾನಸಿಕ ಏಕಾಗ್ರತೆ ದೇಹ ಸದೃಢವಾಗಲೂ ದಿನಾಲೂ ಯೋಗ ಮಾಡಬೇಕು ಎಂದರು.

ದಿನಾಲು ಐದು ನಿಮಿಷ ಯೋಗ ಸಮಯ ಹೆಚ್ಚಿಸುತ್ತಾ ಹೋಗಿ, ಮನೆಯಲ್ಲಿ ತಪ್ಪದೇ ಮಾಡುತ್ತಾ ಸಾಗಿರಿ ಎಂದರು.

ಮಹಾಂತೇಶ ತೊರಣಗಟ್ಟಿ ಅವರು ವಚನ ಕಂಠಪಾಠ ಸ್ಪರ್ಧೆಯ ಮಹತ್ವ ತಿಳಿಸಿದರು. ಆನಂದ ಕರಕಿ ಅವರು ದಾಸೋಹ ಸೇವೆಗೈದರು.

ಶಿವಾನಂದ ನಾಯಕ, ಗುರುಸಿದ್ದಪ್ಪ ರೇವನ್ನವರ, ಶಿವಲೀಲಾ ಗೌಡರ, ಮಹಾದೇವಿ ಹಿರೇಮಠ, ಮಹಾಂತೇಶ ಮೆಣಸಿನಕಾಯಿ, ಎಂ ಬಿ ಕರಿಕಟ್ಟಿ, ಎಸ್ ಬಿ ಹಸಬಿ, ಶoಕ್ರಪ್ಪ ಮೆಣಸಗಿ, ಸೋಮಶೇಖರ ದೇಸಾಯಿ, ಸ ರಾ ಸುಳಕೂಡೆ, ಸದಾಶಿವ ದೇವರಮನಿ ಉಪಸ್ಥಿತರಿದ್ದರು.

ಇದೇ ಸoದಭ೯ದಲ್ಲಿ ಯೋಗಗುರುಗಳಾದ ಸಿದ್ದಪ್ಪಣ್ಣ ಸಾರಾಪೂರಿ ಅವರನ್ನು ಸತ್ಕರಿಸಲಾಯಿತು. ಹಾಗೂ ಆನoದ ಕರಕಿ ಅವರ 71ನೇ ಹುಟ್ಟುಹಬ್ಬ, ಲಕ್ಷ್ಮೀಕಾoತ ಗುರವ ಅವರ 57ನೇ ಹುಟ್ಟುಹಬ್ಬ ಆಚರಿಸಲಾಯಿತು.

ಪ್ರಾರಂಭದಲ್ಲಿ ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ಸ್ವಾಗತಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *