ಕನಕಪುರ:
ಶ್ರೀ ದೇಗುಲಮಠದ ಹಿರಿಯ ಶ್ರೀಗಳಾದ ಪೂಜ್ಯ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರು (84 ವರ್ಷ) ಸೋಮವಾರ ಸಂಜೆ ಲಿಂಗೈಕ್ಯರಾಗಿರುತ್ತಾರೆ.
ಮಹಾಮಾತೃ ಹೃದಯಿಗಳೂ, ಸರಳತೆಯ ಸಾಕರಮೂರ್ತಿ, ಸಹಸ್ರಾರು ವಿದ್ಯಾರ್ಥಿಗಳ ದಿವ್ಯಜ್ಯೋತಿ ಆಗಿದ್ದವರು ಶ್ರೀಗಳು.

ಲಿಂಗೈಕ್ಯ ಪೂಜ್ಯರ ಅಂತಿಮ ವಿಧಿ ವಿಧಾನ ಕ್ರಿಯೆಗಳು ಇಂದು ಮಂಗಳವಾರ ಮಧ್ಯಾಹ್ನ 04 ಗಂಟೆಗೆ ನಾಡಿನ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಕನಕಪುರ ದೇಗುಲ ಮಠದಲ್ಲಿ ನೆರವೇರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
